Friday, 31 October 2014

ಜ್ಞಾನಿಗಳ ಮತ್ತು ಮೂರ್ಖರ ಮೂರು ಲಕ್ಷಣಗಳೇನು?

   ಜ್ಞಾನಿಗಳ ಮತ್ತು ಮೂರ್ಖರ ಮೂರು ಲಕ್ಷಣಗಳೇನು? 
ನೀವು ಹೀಗೆ ಶಿಕ್ಷಣ ಪಡೆಯಿರಿ: ನಾವು ಮೂರ್ಖರಲ್ಲಿ ತಿಳಿಯಲ್ಪಡುವ ಮೂರು ವಿಷಯಗಳಿಂದ ಪಾರಾಗುವೆವು, ಜ್ಞಾನಿಗಳಲ್ಲಿ ಕಂಡುಬರುವ ಮೂರು ವಿಷಯಗಳನ್ನು ವೃದ್ಧಿಸುವೆವು.

                ಭಿಕ್ಷುಗಳೇ, ಮೂರ್ಖರು ತಮ್ಮ ಕಾರ್ಯಗಳಿಂದಲೇ ತಿಳಿಯಲ್ಪಡುವರು ಮತ್ತು ಜ್ಞಾನಿಗಳು ಸರಿಯಾದ ವೇಳೆಯಲ್ಲಿ ಪ್ರಕಾಶಿಸುವರು. ಭಿಕ್ಷುಗಳೇ, ಮೂರ್ಖರು ಮೂರು ವಿಷಯಗಳಿಂದ ತಿಳಿಯಲ್ಪಡುವರು, ಯಾವುವು ಆ ಮೂರು? ಶಾರೀರಿಕ ವರ್ತನೆಗಳಿಂದಾಗಿ, ಮಾತಿನ ವರ್ತನೆಗಳಿಂದಾಗಿ ಮತ್ತು ಮನಸ್ಸಿನ ವರ್ತನೆಗಳಿಂದಾಗಿ ಮೂರ್ಖರು ತಿಳಿಯಲ್ಪಡುವರು. ಭಿಕ್ಷುಗಳೇ, ಜ್ಞಾನಿಗಳು ಸಹಾ ಮೂರು ರೀತಿಯಲ್ಲಿ ತಿಳಿಯಲ್ಪಡುವರು, ಯಾವುದದು ಮೂರು? ಶಾರೀರಿಕ ವರ್ತನೆಗಳಿಂದಾಗಿ, ಮಾತಿನ ವರ್ತನೆಗಳಿಂದಾಗಿ ಮತ್ತು ಮನಸ್ಸಿನ ವರ್ತನೆಗಳಿಂದಾಗಿ ಜ್ಞಾನಿಗಳು ತಿಳಿಯಲ್ಪಡುವರು. ಆದ್ದರಿಂದ ಭಿಕ್ಷುಗಳೇ, ನೀವು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಿ: ನಾವು ಮೂರ್ಖರಂತೆ ಕಾಣಿಸಿಕೊಳ್ಳುವುದನ್ನು ತಡೆಯುವೆವು ಮತ್ತು ಜ್ಞಾನಿಗಳಂತೆ ಆಗುವ ರೀತಿಯಲ್ಲಿ ವೃದ್ಧಿಗೊಳಿಸಿಕೊಳ್ಳುವೆವು.
                ಭಿಕ್ಷುಗಳೇ, ಮೂರ್ಖರ ಮೂರು ಲಕ್ಷಣಗಳೇನು? ಭಿಕ್ಷುಗಳೇ, ಇಲ್ಲಿ ಮೂರ್ಖನು ತಪ್ಪಾಗಿ ಚಿಂತನೆ ಮಾಡುವನು, ತಪ್ಪಾಗಿ ಮಾತನಾಡುವನು ಮತ್ತು ತಪ್ಪಾಗಿ ಕಾರ್ಯ ಮಾಡುವನು. ಒಂದುವೇಳೆ ಮೂರ್ಖನು ತಪ್ಪಾಗಿ ಚಿಂತನೆ ಮಾಡದಿದ್ದರೆ, ಮಾತನಾಡದಿದ್ದರೆ ಮತ್ತು ಕ್ರಿಯೆ ಮಾಡದಿದ್ದರೆ ಆತನು ಮೂರ್ಖನೆಂದು ಜ್ಞಾನಿಗೆ ಹೇಗೆ ತಿಳಿಯಲ್ಪಡುತ್ತಿತ್ತು. ಜ್ಞಾನಿಗೆ ಆತನು ಮೂರ್ಖನು ಎಂದು ಗೊತ್ತು.
                ಭಿಕ್ಷುಗಳೇ, ಜ್ಞಾನಿಗಳ ಮೂರು ಲಕ್ಷಣಗಳೇನು? ಇಲ್ಲಿ ಭಿಕ್ಷುಗಳೇ ಜ್ಞಾನಿಯು ಸರಿಯಾಗಿ ಚಿಂತಿಸುವನು, ಸರಿಯಾಗಿ ಮಾತನಾಡುವನು ಮತ್ತು ಸರಿಯಾಗಿ ವತರ್ಿಸುವನು. ಒಂದುವೇಳೆ ಜ್ಞಾನಿಯು ಸರಿಯಾಗಿ ಚಿಂತನೆ ಮಾಡದಿದ್ದರೆ, ಮಾತನಾಡದಿದ್ದರೆ ಮತ್ತು ಕ್ರಿಯೆ ಮಾಡದಿದ್ದರೆ, ಜ್ಞಾನಿಗೆ ಈತನು ಜ್ಞಾನಿಯೆಂದು ಹೇಗೆ ಗೊತ್ತಾಗುತ್ತಿತ್ತು? ಆತನು ಸರಿಯಾಗಿ ಚಿಂತನೆ, ಸರಿಯಾದ ಸಂಭಾಷಣೆ ಮತ್ತು ಸರಿಯಾದ ವರ್ತನೆ ಮಾಡುವುದರಿಂದಲೇ ಜ್ಞಾನಿಗೆ ಈತನು ಸಹಾ ಜ್ಞಾನಿಯೆಂದು ಗೊತ್ತಾಗುತ್ತದೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿದ್ದರೆ ಆತನು ಮೂರ್ಖನು ಎಂದು ತಿಳಿಯಲ್ಪಡುತ್ತದೆ, ಯಾವುದದು ಮೂರು? ತಪ್ಪನ್ನು ತಪ್ಪೆಂದು ತಿಳಿಯದಿರುವಿಕೆ, ತಪ್ಪೆಂದು ತಿಳಿದ ಮೇಲೂ ಧಮ್ಮದ ಪ್ರಕಾರ ಕ್ಷಮೆ ಯಾಚಿಸದಿರುವಿಕೆ, ಬೇರೆಯವರು ಕ್ಷಮೆ ಯಾಚಿಸಿದ ಮೇಲೂ ಧಮ್ಮದ ಪ್ರಕಾರ ಕ್ಷಮೆ ನೀಡದಿರುವಿಕೆ. ಭಿಕ್ಷುಗಳೇ ಈ ಮೂರು ವಿಷಯಗಳಿಂದ ಮೂರ್ಖನೆಂದು ತಿಳಿಯಲ್ಪಡುತ್ತಾನೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿದ್ದಾಗ ಆತನು ಜ್ಞಾನಿಯೆಂದು ತಿಳಿಯಲ್ಪಡುತ್ತಾನೆ, ಯಾವುದವು ಮೂರು? ತಪ್ಪನ್ನು ತಪ್ಪೆಂದು ತಿಳಿಯುವಿಕೆ, ತಪ್ಪೆಂದು ತಿಳಿದಾಗ, ತನ್ನ ತಪ್ಪಿಗೆ ಕ್ಷಮೆ ಯಾಚಿಸುವಿಕೆ ಮತ್ತು ಪರರು ಅವರ ತಪ್ಪಿಗೆ ಕ್ಷಮೆ ಯಾಚಿಸಿದಾಗ, ಅವರನ್ನು ಕ್ಷಮಿಸುವಿಕೆ, ಈ ಮೂರು ವಿಷಯಗಳಿಂದ ಜ್ಞಾನಿಯೆಂದು ತಿಳಿಯಲ್ಪಡುತ್ತಾನೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿದ್ದಾಗ ಮೂರ್ಖನೆಂದು ತಿಳಿಯಲ್ಪಡುತ್ತಾನೆ, ಯಾವುದದು ಮೂರು? ಆತನು ಜ್ಞಾನೋಚಿತವಾಗಿ ಚಿಂತನೆ ಮಾಡದೆ ಪ್ರಶ್ನೆಯನ್ನು ವಿಕಸಿತ ಮಾಡುತ್ತಾನೆ. ಜ್ಞಾನೋಚಿತವಾಗಿ ಚಿಂತನೆ ಮಾಡದೆ ಪ್ರಶ್ನೆಗೆ ವಿವರಿಸಲು ತೊಡಗುತ್ತಾನೆ, ಬೇರೊಬ್ಬನು ಪ್ರಶ್ನೆಗೆ ಜ್ಞಾನೋಚಿತವಾಗಿ ಚಿಂತನೆ ಮಾಡಿ, ಉತ್ತಮ ಪದ ಹಾಗು ಅಕ್ಷರಗಳಿಂದ ಸುಂದರವಾಗಿ ವಿವರಿಸಿದಾಗ ಅದನ್ನು ಒಪ್ಪುವುದಿಲ್ಲ. ಭಿಕ್ಷುಗಳೇ, ಹೀಗೆ ಈ ಮೂರು ವಿಷಯಗಳಿಂದ ಮೂರ್ಖನು ತಿಳಿಯಲ್ಪಡುತ್ತಾನೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿದ್ದಾಗ, ಜ್ಞಾನಿಯೆಂದು ತಿಳಿಯಲ್ಪಡುತ್ತಾನೆ. ಯಾವುವವು? ಜ್ಞಾನೋಚಿತವಾಗಿ ಚಿಂತನೆ ಮಾಡಿ ಪ್ರಶ್ನೆಯನ್ನು ವಿಕಸಿತ ಮಾಡುತ್ತಾನೆ. ಜ್ಞಾನೋಚಿತವಾಗಿ ಚಿಂತನೆ ಮಾಡಿ ಪ್ರಶ್ನೆಗೆ ವಿವರಿಸುತ್ತಾನೆ. ಬೇರೊಬ್ಬನು ಪ್ರಶ್ನೆಗೆ ಜ್ಞಾನೋಚಿತವಾಗಿ ಚಿಂತನೆ ಮಾಡಿ, ಉತ್ತಮ ಪದ ಹಾಗು ಅಕ್ಷರಗಳಿಂದ ಸುಂದರವಾಗಿ ವಿವರಿಸಿದಾಗ ಆತನು ಅದನ್ನು ಒಪ್ಪುತ್ತಾನೆ. ಭಿಕ್ಷುಗಳೇ, ಜ್ಞಾನಿಯು ಹೀಗೆ ಮೂರು ಲಕ್ಷಣಗಳಿಂದ ಕೂಡಿರುತ್ತಾನೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಮೂರ್ಖನು ತಿಳಿಯಲ್ಪಡುತ್ತಾನೆ. ಯಾವುವವು? ಶಾರೀರಿಕ ಪಾಪಗಳಿಂದ, ಮಾತಿನ ಪಾಪಗಳಿಂದ ಮತ್ತು ಮಾನಸಿಕ ಪಾಪಗಳಿಂದಾಗಿ ಹೇಗೆ ಈ ಮೂರರಿಂದಾಗಿ ಮೂರ್ಖನೆಂದು ತಿಳಿಯಲ್ಪಡುತ್ತಾನೆ.
                ಹಾಗೆಯೇ ಭಿಕ್ಷುಗಳೇ, ಮೂರು ವಿಷಯಗಳಿಂದಾಗಿ ಜ್ಞಾನಿಯು ತಿಳಿಯಲ್ಪಡುತ್ತಾನೆ. ಯಾವುವವು? ಶಾರೀರಿಕ ಪುಣ್ಯಕರ್ಮಗಳಿಂದಾಗಿ, ಮಾತಿನ ಪುಣ್ಯ ಕರ್ಮಗಳಿಂದಾಗಿ ಮತ್ತು ಮನಸ್ಸಿನ ಪುಣ್ಯಕರ್ಮಗಳಿಂದಾಗಿ ಜ್ಞಾನಿಯೆಂದು ತಿಳಿಯಲ್ಪಡುತ್ತಾನೆ.
                ಆದ್ದರಿಂದಾಗಿ ಭಿಕ್ಷುಗಳೇ, ನಿಮ್ಮನ್ನು ನೀವು ಹೇಗೆ ಸುಶಿಕ್ಷಿತಗೊಳಿಸಿಕೊಳ್ಳಿ: ನಾವು ಮೂರ್ಖರೆಂದು ತಿಳಿಯಲ್ಪಡುವ ವಿಷಯಗಳನ್ನು ತಡೆಯುವೆವು, ಜ್ಞಾನಿಗಳೆಂದು ತಿಳಿಯಲ್ಪಡುವ ವಿಷಯಗಳನ್ನು ವಿಕಸಿಸುವೆವು.
                ಭಿಕ್ಷುಗಳೇ, ಮೂರು ವಿಷಯಗಳಿಂದ ಮೂರ್ಖರೆಂದು ತಿಳಿಯಲ್ಪಡುವರು, ಯಾವುದವು ಮೂರು? ನಿಂದನೀಯ ಶಾರೀರಿಕ ಕರ್ಮಗಳಿಂದಾಗಿ, ನಿಂದನೀಯ ಮಾತಿನ ಕರ್ಮಗಳಿಂದಾಗಿ ಮತ್ತು ನಿಂದನೀಯ ಮಾನಸಿಕ ಕರ್ಮಗಳಿಂದಾಗಿ ಮೂರ್ಖರೆಂದು ತಿಳಿಯಲ್ಪಡುವರು.
                ಭಿಕ್ಷುಗಳೇ, ಮೂರು ವಿಷಯಗಳಿಂದಾಗಿ ಜ್ಞಾನಿಗಳೆಂದು ತಿಳಿಯಲ್ಪಡುವರು, ಯಾವುದವು ಮೂರು? ನಿಂದನೀಯವಲ್ಲದ (ಪ್ರಶಂಸಾರ್ಹ) ಶಾರೀರಿಕ ಕರ್ಮಗಳಿಂದಾಗಿ, ನಿಂದನೀಯವಲ್ಲದ ಮಾತಿನ ಕರ್ಮಗಳಿಂದಾಗಿ ಮತ್ತು ನಿಂದನೀಯವಲ್ಲದ ಮಾನಸಿಕ ಕರ್ಮಗಳಿಂದಾಗಿ ಜ್ಞಾನಿಗಳೆಂದು ತಿಳಿಯಲ್ಪಡುವರು.
                ಭಿಕ್ಷುಗಳೇ, ಮೂರು ವಿಷಯಗಳಿಂದ ಮೂರ್ಖನೆಂದು ತಿಳಿಯಲ್ಪಡುತ್ತಾನೆ. ಯಾವುವವು ಮೂರು? ತೊಂದರೆಯ ಶಾರೀರಿಕ ಕರ್ಮಗಳಿಂದಾಗಿ, ತೊಂದರೆಯ ಮಾತಿನ ಕರ್ಮಗಳಿಂದಾಗಿ ಮತ್ತು ತೊಂದರೆ ಮನಸ್ಸಿನ ಕರ್ಮಗಳಿಂದಾಗಿ ಮೂರ್ಖನೆಂದು ತಿಳಿಯಲ್ಪಡುವನು.
                ಭಿಕ್ಷುಗಳೇ, ಮೂರು ವಿಷಯಗಳಿಂದಾಗಿ ಜ್ಞಾನಿಯೆಂದು ತಿಳಿಯಲ್ಪಡುತ್ತಾನೆ ಯಾವುವವು ಮೂರು? ತೊಂದರೆಯಲ್ಲದ ಶಾರೀರಿಕ ಕರ್ಮಗಳಿಂದಾಗಿ, ತೊಂದರೆಯಲ್ಲದ ಮಾತಿನ ಕರ್ಮಗಳಿಂದಾಗಿ ಮತ್ತು ತೊಂದರೆಯಲ್ಲದ ಮನಸ್ಸಿನ ಕರ್ಮಗಳಿಂದಾಗಿ ಜ್ಞಾನಿಯೆಂದು ತಿಳಿಯಲ್ಪಡುವನು.
                ಭಿಕ್ಷುಗಳೇ, ಆದ್ದರಿಂದಾಗಿ ನೀವು ಹೀಗೆ ಸುಶಿಕ್ಷಣಗೊಳಿಸಿಕೊಳ್ಳಬೇಕು: ಮೂರ್ಖರೆಂದು ತಿಳಿಯಲ್ಪಡುವಂತಹ ಮೂರು ವಿಷಯಗಳನ್ನು ನಾವು ತಡೆಯುವೆವು ಮತ್ತು ಜ್ಞಾನಿಗಳೆಂದು ತಿಳಿಯಲ್ಪಡುವಂತಹ ಮೂರು ವಿಷಯಗಳನ್ನು ನಾವು ವಿಕಸಿತಗೊಳಿಸುವೆವು.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿರುವ ಮೂರ್ಖನು ತನ್ನನ್ನೇ ನಾಶಗೊಳಿಸಿಕೊಂಡು, ನಿಂದೆಗೆ ಒಳಪಡುತ್ತಾನೆ, ಜ್ಞಾನಿಗಳಿಂದ ನಿಂದೆಗೆ ಒಳಪಟ್ಟು ಅಪಾರ ಪಾಪಗಳಿಕೆ ಮಾಡಿಕೊಳ್ಳುತ್ತಾನೆ, ಯಾವುದವು ಮೂರು? ಶಾರೀರಿಕ ದುರ್ವರ್ತನೆ, ಮಾತಿನ ದುರ್ವತನೆ ಮತ್ತು ಮನಸ್ಸಿನ ದುರ್ವರ್ತನೆ.
                ಭಿಕ್ಷುಗಳೇ, ಮೂರು ವಿಷಯಗಳಿಂದ ಕೂಡಿರುವ ಜ್ಞಾನಿಯು ತನ್ನನ್ನು ನಾಶಗೊಳಿಸುವುದಿಲ್ಲ ಮತ್ತು ನಿಂದೆಗೂ ಒಳಪಡುವುದಿಲ್ಲ. ಜ್ಞಾನಿಗಳಿಂದ ನಿಂದೆಗೆ ಈಡಾಗದೆ ಅಪಾರ ಪುಣ್ಯ ಗಳಿಸುತ್ತಾನೆ, ಯಾವುವವು ಮೂರು? ಶಾರೀರಿಕ ಸುವರ್ತನೆ, ಮಾತಿನ ಸುವರ್ತನೆ ಮತ್ತು ಮನಸ್ಸಿನ ಸುವರ್ತನೆ.
                ಭಿಕ್ಷುಗಳೇ, ಮೂರು ದೂಷ್ಯವನ್ನು ದೂರೀಕರಿಸಿ ಅಂತಹ ದೋಷಾತೀತ ಮಾರ್ಗದಶರ್ಿತದಲ್ಲೇ ಸಾಗಿದರೆ, ಒಬ್ಬನು ಸುಗತಿ ಸೇರುವನು, ಯಾವುದವು ದೂರೀಕರಿಸಿದ ಮೂರು? ಶೀಲವಂತನಾಗುವುದು ಹಾಗು ಪಾಪರಹಿತನಾಗಿರುವುದು, ಅಸೂಯಾ ರಹಿತನಾಗಿರುವುದು ಹಾಗು ಅಸೂಯಾ ಕಲೆಗಳಿಂದ ರಹಿತನಾಗಿರುವುದು ಮತ್ತು ನಿಸ್ವಾಥರ್ಿಯಾಗಿರುವುದು ಹಾಗು ಸ್ವಾರ್ಥದ ಕಲೆಗಳಿಂದ ಮುಕ್ತನಾಗಿರುವುದು, ಮೂರು ದೂಷ್ಯಗಳಿಂದ ತೊರೆದವನಾಗಿ, ಆ ರೀತಿಯಲ್ಲೇ ಮಾರ್ಗದಶರ್ಿತನಾಗಿ ಒಬ್ಬನು ಸುಗತಿ ಸೇರುತ್ತಾನೆ

Saturday, 25 October 2014

ಮಿಥ್ಯಾದೃಷ್ಟಿಯ ಭೀಕರತೆ( the dangers of wrong views )

ಮಿಥ್ಯಾದೃಷ್ಟಿಯ ಭೀಕರತೆ
                ಒಮ್ಮೆ ಭಗವಾನರು ಭಿಕ್ಷುಗಳಿಗೆ ಹೀಗೆ ಬೋಧನೆ ನೀಡಿದರು :
                ಓ ಭಿಕ್ಷುಗಳೇ, ಇಲ್ಲದಿದ್ದ ಅಕುಶಲ ಯೋಚನೆಗಳನ್ನು, ಪಾಪಗಳನ್ನು, ಉದಯಿಸುವಂತೆ ಆಗಲು ಮತ್ತು ಈಗಾಗಲೇ ಇರುವ ಅಕುಶಲ ಪಾಪಯುತ ಯೋಚನೆಗಳು ಬೆಳವಣಿಗೆ ಮಾಡಲು, ವೃದ್ಧಿಸಲು ಬೇರ್ಯಾವ ವಿಷಯಕ್ಕಿಂತ, ಪ್ರಬಲವಾದುದು ಯಾವುದಾದರೂ ಒಂದು ವಿಷಯವಿದ್ದರೆ ಅದು ಮಿಥ್ಯಾ ದೃಷ್ಟಿಯೇ ಆಗಿದೆ. ಮಿಥ್ಯಾದೃಷ್ಟಿಯಿಂದ ಇಲ್ಲದಿದ್ದ ಅಕುಶಲಗಳನ್ನು ಉದಯಿಸುವಂತೆ ಮಾಡಲ್ಪಡುತ್ತಾನೆ. ಹಾಗೆಯೇ ಇರುವಂತಹ ಅಕುಶಲವನ್ನು ಬೆಳವಣಿಗೆ ಮಾಡುತ್ತಾನೆ.

                .... ಭಿಕ್ಷುಗಳೇ, ಯಾವುದಾದರೂ ಒಂದು ವಿಷಯದಿಂದಾಗಿ ಉದಯಿಸದಿದ್ದ ಅಕುಶಲಗಳು ವೃದ್ಧಿಸಿ ಹಾಗು ಉದಯಿಸಿ ಈಗಾಗಲೇ ಇದ್ದ ಕುಶಲ ಯೋಚನೆಗಳು ಮರೆಯಾಗುತ್ತವೋ ಆ ಒಂದು ವಿಷಯ ಮಿಥ್ಯಾದೃಷ್ಟಿಯೇ ಆಗಿದೆ.
                ಭಿಕ್ಷುಗಳೇ, ಯಾವ ಒಂದು ವಿಷಯದಿಂದಾಗಿ ಉದಯಿಸದ ಅಕುಶಲಗಳು ಉದಯಿಸುತ್ತದೋ ಮತ್ತು ಉದಯಿಸಿದ ಮಿಥ್ಯಾದೃಷ್ಟಿಯು ಅಪ್ರಾಜ್ಞರ ಯೋಚನೆಯಂತೆ ಬೆಳವಣಿಗೆ ಹೊಂದುವುದೋ ಆ ಮಿಥ್ಯಾದೃಷ್ಟಿಯಿಂದಾಗಿ ಭಿಕ್ಷುಗಳೇ ಅಪ್ರಾಜ್ಞರ ರೀತಿ ಯೋಚಿಸಲು ಆರಂಭಿಸಿ ಇತರ ಮಿಥ್ಯಾದೃಷ್ಟಿಗಳು ಉದಯಿಸಿ ವೃದ್ಧಿಯಾಗುವುವು.
                ... ಭಿಕ್ಷುಗಳೇ, ಯಾವುದಾದರೂ ವಿಷಯದಿಂದಾಗಿ ವ್ಯಕ್ತಿಯು ದುರ್ಗತಿಯಲ್ಲಿ ಹುಟ್ಟಿ, ನರಕದಲ್ಲಿ ಸಿಲುಕುವಂತೆ ಆಗಿರುವಂತಿದ್ದರೆ ಅದು ಮಿಥ್ಯಾದೃಷ್ಟಿಯೇ ಆಗಿದೆ. ಮಿಥ್ಯಾದೃಷ್ಟಿ ಹೊಂದಿರುವ ವ್ಯಕ್ತಿ ಅದನ್ನು ಹೊಂದಿಯೇ ಮರಣಿಸಿದರೆ ಆತನು ದುರ್ಗತಿಗಳಲ್ಲಿ ಹುಟ್ಟುವನು.
                ಭಿಕ್ಷುಗಳೇ, ಒಬ್ಬ ವ್ಯಕ್ತಿಯ ಎಲ್ಲಾ ಮಾನಸಿಕ, ದೈಹಿಕ ಮತ್ತು ವಾಚದ ಕ್ರಿಯೆಗಳೆಲ್ಲಾ ನಿದರ್ೆಶಿತವಾಗುವುದು ಆತನ ದೃಷ್ಟಿಕೋನದಿಂದಲೇ ಆಗಿದೆ. ಅದರಿಂದಾಗಿಯೇ ಆತನ ಇಚ್ಛೆಗಳು, ಬಯಕೆಗಳು, ಹಾರೈಕೆಗಳು, ನಿಧರ್ಾರಗಳು ಅಸ್ತಿತ್ವಕ್ಕೆ ಬರುತ್ತದೆ. ಅವೆಲ್ಲವೂ ಅಯೋಗ್ಯವಾಗಿದ್ದರೆ, ಒಪ್ಪಲಾಗದಂತಹುದು ಆಗಿದ್ದರೆ ಮತ್ತು ಅಸುಖಕಾರಿಯಾಗಿದ್ದರೆ ಅದಕ್ಕೆ ಕಾರಣವೇನು? ಆ ಕಾರಣವೇ ಮಿಥ್ಯಾದೃಷ್ಟಿಯಾಗಿದೆ. ಭಿಕ್ಷುಗಳೇ ಹೇಗೆ ಬೇವಿನ ಬೀಜವಾಗಲಿ ಅಥವಾ ನಿಂಬೆ ಬೀಜವಾಗಲಿ ಅಥವಾ ಕೊಸಟಕಿ ಬೀಜ ಅಥವಾ ಕಹಿ ಹಣ್ಣಿನ ಬೀಜವಾಗಲಿ ಒದ್ದೆ ಮಣ್ಣಿನಲ್ಲಿ ಇದ್ದಾಗ ಬೀಜದ ಸುತ್ತಲಿನ ಮಣ್ಣು, ನೀರು, ಇನ್ನಿತರ ಸಾರವೆಲ್ಲಾ ಕಹಿಯಾಗಿಬಿಡುತ್ತದೆ. ಅದೇರೀತಿಯಾಗಿ ವ್ಯಕ್ತಿಯಲ್ಲಿ ಮಿಥ್ಯಾದೃಷ್ಟಿಯು ಇದ್ದರೆ ಅದು ಅಯೋಗ್ಯವಾಗಿ, ನಿರಾಕರಣೆಯುತವಾಗಿ, ಅಸುಖದಿಂದ ಕೂಡಿದ್ದು, ಅಂತಹ ದೃಷ್ಟಿಯ ಮೂಲದಿಂದಾಗಿ ಆತನ ಇಚ್ಛೆಗಳಲ್ಲಿ, ಬಯಕೆಗಳಲ್ಲಿ ನಿಧರ್ಾರ ಇನ್ನಿತರ ಮಾನಸಿಕ ಕಾರ್ಯಗಳಲ್ಲಿ ಹಾಗೆಯೇ ಮಾತಿನಲ್ಲಿ ಮತ್ತು ದೈಹಿಕ ಕಾರ್ಯಗಳಲ್ಲಿ ಆ ಮಿಥ್ಯಾದೃಷ್ಟಿಯ ಪ್ರಭಾವ ಹರಡುತ್ತದೆ.
                ಭಿಕ್ಷುಗಳೇ, ಒಬ್ಬ ಮನುಷ್ಯನು ಲೋಕದ ಹಾನಿಗೆ ದುರಾದೃಷ್ಟಕ್ಕೆ (ಅಹಿತಕ್ಕೆ), ದೇವತೆಗಳ ಮತ್ತು ಮಾನವರ ಅಹಿತಕ್ಕೆ, ಅಸುಖಕ್ಕೆ ಕಾರಣನಾಗುತ್ತಾನೆ, ಯಾರು ಆ ವ್ಯಕ್ತಿ? ಆತನೇ ಮಿಥ್ಯಾ ದೃಷ್ಟಿಯಿಂದ (ಪಾಪದೃಷ್ಟಿ) ಕೂಡಿರುವವನು. ಆತನು ಸಮ್ಮಾದೃಷ್ಟಿ ಹೊಂದಿದ್ದ ಹಲವರನ್ನು ಎಳೆದು ಮಿಥ್ಯಾದೃಷ್ಟಿಯ ದುಮರ್ಾರ್ಗದಲ್ಲಿ ಸ್ಥಾಪನೆ ಮಾಡುತ್ತಾನೆ. ಆತನು ಲೋಕದ ಹಾನಿಗೆ ದೇವತೆಗಳ ಮತ್ತು ಮಾನವರ ದುರಾದೃಷ್ಟಕ್ಕೆ, ಅಹಿತಕ್ಕೆ ಮತ್ತು ಅಸುಖಕ್ಕೆ ಕಾರಣಕರ್ತನಾಗುತ್ತಾನೆ.
                ಭಿಕ್ಷುಗಳೇ, ಮಿಥ್ಯಾದೃಷ್ಟಿಯಂತಹ ಅತಿಘೋರ ನೀಚವಾದುದು ನಾನು ಕಂಡೇ ಇಲ್ಲ, ಕೆಟ್ಟದ್ದರಲ್ಲಿ ಅತಿ ನೀಚ ನಿಕೃಷ್ಟವಾದುದು ಮಿಥ್ಯಾದೃಷ್ಟಿಯಾಗಿದೆ.
                ಭಿಕ್ಷುಗಳೇ, ಮಿಥ್ಯಾದೃಷ್ಟಿಯನ್ನು ಹೊಂದಿರುವ ವ್ಯಕ್ತಿಯಿಂದ ಆಗುವ ಹಾನಿ, ಬೇರ್ಯಾವ ವ್ಯಕ್ತಿಯಿಂದಲೂ ಆಗುವುದಿಲ್ಲ. ಅದರಿಂದಾಗಿ, ಬಹು ದೇವತೆಗಳಲ್ಲಿ ಮತ್ತು ಮಾನವರಲ್ಲಿ ಹಾನಿ, ಅಸುಖ ಮತ್ತು ಪಾಪವು ಆಗುತ್ತದೆ. ಉದಾಹರಿಸುವುದಾದರೆ: ಮಕ್ಖಲಿ, ಹೇಗೆ ನದಿಯು ಮುಖದಲ್ಲಿ ಬಲೆಯನ್ನು ಕಟ್ಟಿದಾಗ ಹೇಗೆ ಹಲವಾರು ಮೀನುಗಳಿಗೆ ಹಾನಿಯಾಗುವುದೋ ಹಾಗೆಯೇ ಮಿಥ್ಯಾದೃಷ್ಟಿ ಉಳ್ಳವರು ಬಹುಜನ ಅಹಿತಕ್ಕೆ, ಬಹುಜನ ಅಸುಖಕ್ಕೆ, ದೇವತೆಗಳ ಮತ್ತು ಮಾನವರ ದೌಭರ್ಾಗ್ಯಕ್ಕೆ ಕಾರಣ ಉಳ್ಳವರು ಆಗುತ್ತಾರೆ.
                ಭಿಕ್ಷುಗಳೇ, ಧಮ್ಮ ಮತ್ತು ವಿನಯವನ್ನು ತಪ್ಪಾಗಿ ವಿವರಿಸಿದರೆ, ವ್ಯಾಖ್ಯಾನಿಸಿದರೆ ಅದು ವಿವರಿಸುವವನಿಗೂ ಹಾಗು ಕೇಳಿ ಅನುಸರಿಸುವವರಿಗೂ ಅಪಾರ ಪಾಪವಾಗಿ, ಹಾನಿಯಾಗುತ್ತದೆ.
                ಭಿಕ್ಷುಗಳೇ, ಯಾವಾಗ ಧಮ್ಮ ವಿನಯವು ತಪ್ಪಾಗಿ ವ್ಯಾಖ್ಯಾನಿಸಲ್ಪಟ್ಟಾಗ, ಗುರುವು ಅಳತೆಯನ್ನು ಅರಿಯಲೇಬೇಕು ಮತ್ತು ಕೇಳುಗನಲ್ಲ. ಏಕೆಂದರೆ ತಪ್ಪಾಗಿ ಧಮ್ಮ ವಿವರಿಸಲಾಗುತ್ತಿದೆ.
                ಭಿಕ್ಷುಗಳೇ, ಯಾವಾಗ ಧಮ್ಮ ವಿನಯವು ತಪ್ಪಾಗಿ ವ್ಯಾಖ್ಯಾನಿಸುವದೋ, ಒಬ್ಬನು ಅಸುಖಕ್ಕೆ ಬದ್ಧನಾಗಲು ಯತ್ನಿಸುತ್ತಾನೆ. ಏಕೆಂದರೆ ತಪ್ಪಾದ ಧಮ್ಮ ವಿವರಣೆಯಿಂದಾಗಿ.
                ಭಿಕ್ಷುಗಳೇ, ಅತಿ ಅಲ್ಪ ಮಲವು ಸಹಾ ದುನರ್ಾತ ಬೀರುತ್ತದೆ ಮತ್ತು ಅದರಿಂದ ಪ್ರಜ್ಞಾವಂತರು ಮಿಥ್ಯಾದೃಷ್ಟಿಯಿಂದ ವಿಮೋಚನೆ ಹೊಂದಲಿ, ನಾನು ಕ್ಷಣಾರ್ಧದಲ್ಲೂ ಅದಕ್ಕೆ ಸ್ಪಷ್ಟೀಕರಣ ಯೋಚಿಸುವುದಿಲ್ಲ.
                ಭಿಕ್ಷುಗಳೇ, ಹೇಗೆ ಅಲ್ಪ ಮೂತ್ರವೂ... ಲಾಲರಸವು... ರಕ್ತ, ಕೀವು... ದುನರ್ಾತ ಬೀರುವುದೋ ಮತ್ತು ಅದರಿಂದ ಪ್ರಜ್ಞಾವಂತರು ಮಿಥ್ಯಾದೃಷ್ಟಿಯಿಂದ ವಿಮೋಚನೆ ಹೊಂದಲಿ, ತಡಮಾಡದೆ ಕ್ಷಣಾರ್ಧದಲ್ಲಿ ಪಾರಾಗಲಿ.
                ಭಿಕ್ಷುಗಳೇ... ಕೆಲವರು ಮಾತ್ರ ಮಾನವರಾಗಿ ಹುಟ್ಟುವರು ಮತ್ತು ಬಹಳಷ್ಟು ಇನ್ನಿತರರು ಮಾನವರಿಗಿಂತ ದುರ್ಗತಿಯಲ್ಲಿ ಹುಟ್ಟುವರು.
                ಭಿಕ್ಷುಗಳೇ, ಕೆಲವರು ಮಾತ್ರ ಬುದ್ಧರನ್ನು ದಶರ್ಿಸುವ ಅದೃಷ್ಟವನ್ನು ಪಡೆದಿರುತ್ತಾರೆ, ಉಳಿದವರು ಅಂತಹ ಅದೃಷ್ಟವಂತರಲ್ಲ.
                ಹಾಗೆಯೇ ಭಿಕ್ಷುಗಳೇ, ಕೆಲವರಿಗೆ ಮಾತ್ರ ಧಮ್ಮವನ್ನು ಆಲಿಸುವ ಸೌಭಾಗ್ಯ ಸಿಕ್ಕಿರುತ್ತದೆ, ಹಾಗು ನೆನಪಿನಲ್ಲಿಡುತ್ತಾರೆ. ಉಳಿದವರು ಮರೆಯುತ್ತಾರೆ.
                ಭಿಕ್ಷುಗಳೇ ಕೆಲವರು ಮಾತ್ರ ಧಮ್ಮವನ್ನು ಲಕ್ಷಕೊಟ್ಟು ಕೇಳುತ್ತಾರೆ. ಉಳಿದವರಿಗೆ ಏನೆಂದು ಕೇಳಿದ್ದೇವೆ ಎಂದು ಯೋಚಿಸಲು ಸಹಾ ಆಗುವುದಿಲ್ಲ.
                ಭಿಕ್ಷುಗಳೇ, ಕೆಲವರು ಮಾತ್ರ ಬೋಧನೆಯನ್ನು ಕಲಿಯುವರು ಮತ್ತು ಅದರಂತೆ ಜೀವಿಸಲು ಪ್ರಾರಂಭಿಸುವರು. ಉಳಿದವರು ಅದನ್ನು ಲೆಕ್ಕಿಸುವುದೇ ಇಲ್ಲ.
                ಭಿಕ್ಷುಗಳೇ, ಕೆಲವರು ಸನ್ನಿವೇಶಗಳಲ್ಲಿ ಧಮ್ಮ ಉದ್ವೇಗ ತಾಳುತ್ತಾರೆ. ಉಳಿದವರು  ಎಂತಹ ಸನ್ನಿವೇಶವೇ ಇರಲಿ ಅಲುಗಾಡುವುದಿಲ್ಲ.
                ಭಿಕ್ಷುಗಳೇ, ಕೆಲವರು ಧಮ್ಮ ಉದ್ವೇಗದಿಂದಾಗಿ ದುಃಖಗಳನ್ನು ದಾಟಲು ಪ್ರಯತ್ನಿಸುತ್ತಾರೆ, ಉಳಿದವರು ಏನೂ ಮಾಡುವುದಿಲ್ಲ.
                ಭಿಕ್ಷುಗಳೇ, ಕೆಲವರು ತಮ್ಮ ಧ್ಯಾನದ ವಿಷಯ ಬದಲಿಸಿ ಸಮಾಧಿ ಪ್ರಾಪ್ತಿಮಾಡುತ್ತಾರೆ. ಉಳಿದವರು ಧ್ಯಾನ ವಿಷಯ ಬದಲಾಯಿಸಿದಾಗ ಸಮಾಧಿ ಹೊಂದಲಾರರು.
                ಭಿಕ್ಷುಗಳೇ, ಹೇಗೆ ಕೆಲವರು ಉನ್ನತ ಆಹಾರವನ್ನು ತಿನ್ನುವರೋ ಮತ್ತು ಉಳಿದವರು ಸಿಕ್ಕಿದ ತುಣುಕುಗಳನ್ನು ತಿನ್ನುವರು ಹಾಗೆಯೇ ಕೆಲವರು ಮಾತ್ರ ಧಮ್ಮದ ಅರ್ಥ ಅಥರ್ೈಸಿಕೊಂಡು ವಿಮುಕ್ತಿಯ ಆನಂದ ಹೊಂದುವರು. ಉಳಿದವರು ವಿಮುಕ್ತಿಯ ಅನುಭವ ಪಡೆಯಲಾರರು. ಆದ್ದರಿಂದ ಭಿಕ್ಷುಗಳೇ ನೀವು ಧಮ್ಮದ ಅರ್ಥ ಅಥರ್ೈಸಿಕೊಂಡು ಸಾಧಿಸಿ ವಿಮುಕ್ತಿಯ ಆನಂದ ಪಡೆಯಿರಿ.
                ಭಿಕ್ಷುಗಳೇ, ಜಂಬು ದ್ವೀಪದಲ್ಲಿ ಹಲವಾರು ಹಣ್ಣು ತೋಟಗಳಿವೆ, ಕಾಡುಗಳಿವೆ. ಮಿತಿಮೀರಿದ ಭೂ ಪ್ರದೇಶಗಳಾಗಿವೆ. ವಿಶಾಲವಾಗಿ ನೀರು ಹರಿಯುವುದು. ಆದರೆ ಪ್ರತಿಬಂಧಕಗಳಿಂದ ಕೂಡಿರುವ ಅವ್ಯವಸ್ಥಿತ ಭೂಭಾಗಗಳು ಇವೆ. ನದಿಗಳು ಸಹಾ ಅತ್ಯುನ್ನತವಾಗಿ ಹರಿದು, ವಿಷಮ ಆಕಾರದ ಭೂಭಾಗಗಳು ಏಪರ್ಾಟಾಗುತ್ತದೆ. ಅದೇರೀತಿಯಲ್ಲಿ ಕೆಲವು ಮಾನವರು ತಮ್ಮ ಸಾವಿನ ನಂತರ ಪ್ರೇತಗಳಾಗಿ, ಪ್ರಾಣಿಗಳಾಗಿ ಮತ್ತು ನಿರಯಗಳಲ್ಲಿ ಹುಟ್ಟುವರು.
                ಅದೇರೀತಿಯಲ್ಲಿ ಕೆಲವರು ಮಾತ್ರ ದೇವತೆಗಳಾಗಿ, ಮಾನವರಾಗಿ ಹುಟ್ಟುವರು, ಉಳಿದವರೆಲ್ಲಾ ಪ್ರೇತಗಳಾಗಿ, ಪ್ರಾಣಿಗಳಾಗಿ, ನರಕಜೀವಿಗಳಾಗಿ ಹುಟ್ಟುವರು.
                ಭಿಕ್ಷುಗಳೇ, ಮಿಥ್ಯಾದೃಷ್ಟಿಯುಳ್ಳವರು ದುರ್ಗತಿಗಳಾದ ನರಕ ಅಥವಾ ಪ್ರಾಣಿಗಳ ಲೋಕಗಳಲ್ಲಿ ಹುಟ್ಟುವುದು ಖಚಿತವೆಂದು ನಿರೀಕ್ಷಿಸಬಹುದು.
ಎರಡು ಬಗೆಯ ಮೂರ್ಖರು
                ಭಿಕ್ಷುಗಳೇ, ಎರಡು ಬಗೆಯ ಮೂರ್ಖರಿರುವರು. ಯಾರವರು? ಭವಿಷ್ಯದ ಬಾರವನ್ನು ಸಹಿಸುವವರು ಮತ್ತು ವರ್ತಮಾನದ ಭಾರವನ್ನು ಸಹಿಸಲಾರದವರು.
                ಭಿಕ್ಷುಗಳೇ, ಎರಡುಬಗೆಯ ಮೂರ್ಖರಿರುವರು, ಯಾರವರು? ಸರಿಯಿರುವುದರಲ್ಲಿ ಸರಿಯಿಲ್ಲ ಎಂದು ಗ್ರಹಿಸುವವರು ಮತ್ತು ಸರಿಯಿಲ್ಲದುದರಲ್ಲಿ ಸರಿ ಎಂದು ಗ್ರಹಿಸುವವರು.
                ಭಿಕ್ಷುಗಳೇ, ಎರಡು ಬಗೆಯ ಮೂರ್ಖರಿರುವರು, ಯಾರವರು? ತಪ್ಪನ್ನು ತಪ್ಪಲ್ಲವೆಂದು ಗ್ರಹಿಸುವವರು ಮತ್ತು ತಪ್ಪಿಲ್ಲದುದರಲ್ಲಿ ತಪ್ಪು ಎಂದು ಗ್ರಹಿಸುವವರು.
                ಭಿಕ್ಷುಗಳೇ, ಎರಡು ಬಗೆಯ ಮೂರ್ಖರಿರುವರು, ಯಾರವರು? ಪಾಪಗಳನ್ನು ಸರಿ ಎಂದು ಗ್ರಹಿಸುವವರು ಮತ್ತು ಶೀಲಗಳನ್ನು ತಪ್ಪು ಎಂದು ಗ್ರಹಿಸುವವರು.

                ಭಿಕ್ಷುಗಳೇ, ಎರಡುಬಗೆಯ ಮೂರ್ಖರಿರುವರು, ಯಾರವರು? ವಿನಯ (ಶಿಸ್ತು)ಗಳು ಇಲ್ಲದೆಡೆ, ವಿನಯವೆಂದು ಗ್ರಹಿಸುವರು, ವಿನಯವಿರುವೆಡೆ ವಿನಯವಿಲ್ಲ ಎಂದು ಗ್ರಹಿಸುವವರು.

Tuesday, 9 September 2014

panchasheela (the five virtues)

ಪಂಚಶೀಲಗಳು
 ದುಶ್ಶೀಲನಾಗಿ, ಸಂಯಮಹೀನನಾಗಿ
ನೂರು ವರ್ಷ ಬದುಕುವುದಕ್ಕಿಂತ
ಒಂದೇ ಒಂದು ದಿನ ಶೀಲವಂತನಾಗಿ
ಧ್ಯಾನಿಯಾಗಿ ಬದುಕುವುದು ಮೇಲು (110)


                ಶೀಲವೆಂದರೆ ಪಾಪಗಳಿಂದ ದೂರವಾಗುವುದು, ವಿರತನಾಗುವುದು. ಇಚ್ಛಾಪೂರ್ವಕವಾಗಿ ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಪಾಪಮಾಡದಿರುವುದೇ ಆಗಿದೆ. ಹಾಗೆಯೇ ಶೀಲವೆಂದರೆ ಪುಣ್ಯವನ್ನು ಆಚರಿಸುವುದು. ಇಚ್ಛಾಪೂರ್ವಕವಾಗಿ ಒಳಿತನ್ನು ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಮಾಡುವುದೇ ಆಗಿದೆ. ಎಲ್ಲಾ ಸುಕರ್ಮಗಳು ಶೀಲವೆನಿಸುತ್ತದೆ. ಶೀಲವು ಅಗೌರವವನ್ನು ತೆಗೆದು ಶಾಂತತೆಯನ್ನು ನಿಮರ್ಾಣ ಮಾಡುತ್ತದೆ. ಪಾಪವಿರತೆಯ ಕಾರ್ಯ ಮಾಡುತ್ತದೆ. ಪರಿಶುದ್ಧತೆಯಿಂದ ಶೀಲವು ವ್ಯಕ್ತವಾಗುತ್ತದೆ.
                ಶೀಲದ ಅಭ್ಯಸಿಸುವಿಕೆಯಲ್ಲಿ ಎಲ್ಲಾ ಶೀಲಗಳನ್ನು ಅಚರಿಸಬೇಕಾಗುತ್ತದೆ. ಶೀಲದ ವೃದ್ಧಿಗೆ ಪಾಪಲಜ್ಜೆ ಹಾಗೂ ಪಾಪಭಯವು ತುಂಬಾ ಸಹಾಯ ಮಾಡುತ್ತದೆ, ಇದರಿಂದಾಗಿ ಸ್ವಲ್ಪ ತಪ್ಪು ಸಹಾ ನಡೆಯಲಾರದು, ಶೀಲದ ಅಭ್ಯಾಸದಿಂದ ಮಧ್ಯಮಮಾರ್ಗ ಪಾಲನೆಯಾಗುತ್ತದೆ ಹಾಗೂ ಜೀವನದಲ್ಲಿ ಸಂತೃಪ್ತಿಯಿರುತ್ತದೆ.
                ಶೀಲದ ಆಚರಣೆಯಿಂದಾಗಿ ವಿಸ್ಮೃತಿ, ಗೊಂದಲ, ಒತ್ತಡ, ಹತಾಶೆ, ಮಾನಸಿಕ ಅಸಮತೋಲನ, ಪಾಪ ಯೋಚನೆಗಳು, ಅಥವಾ ಮಾನಸಿಕ ಕಶ್ಮಲಗಳಿಗೆ ತಡೆಯುಂಟಾಗುತ್ತದೆ, ಶೀಲದಿಂದ ಸಮಾಧಿಗಳಾದ ಮೆತ್ತ, ಕರುಣ, ಮುದಿತ, ಇತ್ಯಾದಿಗಳು
ವೃದ್ಧಿಯಾಗುತ್ತದೆ,ಸಹನೆ,ತಾಳ್ಮೆ, ಸಮಚಿತ್ತತೆ ದೊರೆತು ಜೀವನಕ್ಕೆ ನಿಜ ಉದ್ದೇಶ ದೊರೆಯುತ್ತದೆ. ಶಿಲೆಗಳು ಭವನಕ್ಕೆ ಆಧಾರವಾಗಿರುವಂತೆ, ಶೀಲವು ನಿಜವಾದ ಉನ್ನತಿಗೆ ಆಧಾರವಾಗಿದೆ.
ಶೀಲದ ಲಾಭಗಳು;
1.            ಶೀಲವಂತನು ತನ್ನ ಜಾಗರೂಕತೆಯಿಂದಾಗಿ ಮಹಾ ಭಾಗ್ಯವನ್ನು ಪಡೆಯುತ್ತಾನೆ.
2.            ಆತನ ಸುಖ್ಯಾತಿಯು ಎಲ್ಲೆಡೆ ಹರಡುತ್ತದೆ.
3.            ಆತನು ಯಾವುದೇ ಸಭಾಂಗಣದಲ್ಲಿ ಪ್ರವೇಶಿಸಲು ಅಥವಾ ಅಲ್ಲಿರಲಿ, ಆತನು ಧೈರ್ಯದಿಂದ ಭಯರಹಿತತೆಯಿಂದ ಇರುತ್ತಾನೆ.
4.            ಶೀಲವಂತನು ದ್ವಂದ್ವಗಳಿಲ್ಲದೆ, ಕಳವಳವಿಲ್ಲದೆ, ಶಾಂತನಾಗಿ ಮೃತ್ಯುವನ್ನಪ್ಪುತ್ತಾನೆ.
5.            ಸಾವಿನ ನಂತರ ಆತನು ಸುಗತಿ ಪ್ರಾಪ್ತಿ ಮಾಡುತ್ತಾನೆ.
ಪಂಚಶೀಲಗಳ ವಿವರಣೆ ಹೀಗಿದೆ:
ಅದ್ಭುತವಾದ ಪಂಚಶೀಲಗಳು
-ಮೊದಲ ಶೀಲ-
{ಜೀವಕ್ಕಾಗಿ ಗೌರವ: ಕೊಲ್ಲದಿರುವುದು; ರಕ್ಷಿಸುವುದು}
                ನಾನು ಜೀವಹತ್ಯೆ ಮಾಡುವ ನೀಚಕೃತ್ಯದಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಛಾಪೂರ್ವಕವಾಗಿ ಪಾಲಿಸುತ್ತೇನೆ.
                [ಅದರಿಂದಾಗಿ ನಾನು ಕರುಣೆಯನ್ನು ಅಭ್ಯಸಿಸುತ್ತಾ, ಸರ್ವಜೀವಿಗಳನ್ನು ರಕ್ಷಿಸುತ್ತಾ, ಹಿತ ಲಾಭಗಳನ್ನು ಮಾಡುತ್ತೇನೆ]
                ಜೀವನಾಶದಿಂದ ಉಂಟಾಗುವ ದುಃಖದ ಅರಿವಿನಿಂದಾಗಿ, ನಾನು ಈ ಶೀಲವನ್ನು ಪಾಲಿಸುತ್ತಾ, ಕರುಣೆಯನ್ನು ವೃಧ್ಧಿಸುತ್ತಾ, ಮಾನವ, ಪ್ರಾಣಿ ಮತ್ತು ಸಸ್ಯಗಳ ರಕ್ಷಿಸಲು ನಾನು ಕೊಲ್ಲದಿರುವ, ಹಿಂಸಿಸದಿರುವ, ಪರರಿಗೂ ಹಾಗೇ ಪ್ರಚೋದಿಸದಿರುವ, ಮತ್ತು ಯಾವುದೆ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆಯನ್ನು ಬೆಂಬಲಿಸದಿರುವ ಹಾಗೆ ಇರುವಂತಹ, ಶೀಲಕ್ಕೆ ಬದ್ದನಾಗಿರುವಂತೆ ನಾನು ಧೃಢಸಂಕಲ್ಪ ಮಾಡುತ್ತೇನೆ.
-ಎರಡನೆಯ ಶೀಲ-
{ವ್ಯಕ್ತಿಯ ಆಸ್ತಿಗೆ ಗೌರವ: ಕದಿಯದಿರುವಿಕೆ; ದಾನಿಯಾಗಿರುವಿಕೆ}
                ನಾನು ಕೊಡದೆ ಇರುವುದನ್ನು ,ತೆಗೆದುಕೊಳ್ಳದಿರುವ ಸುಶಿಕ್ಷಣದ ನಿಯಮವನ್ನು ಇಚ್ಛಾಪೂರ್ವಕವಾಗಿ ಪಾಲಿಸುತ್ತೇನೆ.
                [ಅದರಿಂದಾಗಿ ನಾನು ದಾನವನ್ನು ಅಭ್ಯಸಿಸುತ್ತಾ, ನನ್ನಲ್ಲಿರುವ ಭೌತಿಕ & ಪರಮಾರ್ಥ ಐಶ್ವರ್ಯವನ್ನು ಹಂಚುತ್ತಾ ದಾನಮಾಡುವೆನು.]
                ಕಳವುನಿಂದ, ಸುಲಿಗೆಯಿಂದ, ಅನ್ಯಾಯದಿಂದ, ದರೋಡೆಯಿಂದ ಮತ್ತು ದಬ್ಬಾಳಿಕೆಯಿಂದ ಉಂಟಾಗುವ ದುಃಖದ ಅರಿವಿನಿಂದಾಗಿ ನಾನು ಈ ಶೀಲವನ್ನು ಪಾಲಿಸುತ್ತಾ, ಸರ್ವಮಾನವರ & ಪ್ರಾಣಿಗಳ ಮೇಲೆ ಮೈತ್ರಿಯನ್ನು ವಿಸ್ತರಿಸುತ್ತಾ, ನಾನು ಪ್ರಾಮಾಣಿಕತೆ, & ದಾನವನ್ನು ಅಭ್ಯಸಿಸುತ್ತ, ನನ್ನ ಐಶ್ವರ್ಯ,ಕಾಲ,ಶಕ್ತಿ,ಅನುಭೂತಿ,ಸ್ಪೂತರ್ಿ ಮತ್ತಿತರ ಸಂಪನ್ಮೂಲಗಳನ್ನು ನಾನು ಪರಹಿತಕ್ಕೆ ಬಳಸುತ್ತೇನೆ, ವಿಶೇಷವಾಗಿ ಅಗತ್ಯವುಳ್ಳವರಿಗೆ ಧಮ್ಮದಾನವನ್ನು ಮಾಡುತ್ತೇನೆ. ನಾನು ಪರರಿಗೆ ಸೇರಿದ ಯಾವುದನ್ನು ಹೊಂದದಿರುವ ಅಥವಾ ಕದಿಯದಿರುವ ಬಗ್ಗೆ ಧೃಢಸಂಕಲ್ಪ ಮಾಡುತ್ತೇನೆ. (ಸಮಯವನ್ನು ಸಹಾ ಕಳುವುಮಾಡದೆ-ನಿಧಾನ ಅಥವಾ ಕಾರ್ಯದಲ್ಲಿ ಬೇಜಾವ್ಧಾರಿ ಇಲ್ಲದಂತೆ ನಿರ್ವಹಿಸುತ್ತೇನೆ). ನಾನು ಪರರಿಗೆ ಸೇರಿದ ವ್ಯಯಕ್ತಿಕ ಅಥವಾ ಸಾರ್ವಜನಿಕ ಆಸ್ತಿಗೆ ಗೌರವಿಸುತ್ತೇನೆ ಮತ್ತು ಯಾವುದೇ ಜೀವಿಯ ದುಃಖದಿಂದ ಪರರೂ ಲಾಭಗಳಿಸದಂತೆ ತಡೆಯುತ್ತೇನೆ.
-ಮೂರನೆಯ ಶೀಲ-
{ವ್ಯಕ್ತಿಗತ ಭಾಂಧವ್ಯಗಳಿಗೆ ಗೌರವ; ಇಂದ್ರೀಯಭೋಗಗಳಲ್ಲಿ ತಲ್ಲಿನನಾಗದಿರುವಿಕೆ; ಸಂತೃಪ್ತನಾಗಿರುವಿಕೆ}
ನಾನು ಕಾಮುಕತೆಯ ಮಿಥ್ಯಾಚಾರಗಳಿಂದ & ಇಂದ್ರಿಯಸುಖಗಳ ವಿಷಯಗಳಲ್ಲಿ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
                [ನಾನು ಅನೈತಿಕ ಕಾಮುಕತೆಯಿಂದ ದೂರವಿದ್ದು, ನಾನು ಸಂತೃಪ್ತಿಯನ್ನು ಅಭ್ಯಸಿಸುತ್ತೇನೆ (ಭಿಕ್ಷುವಾಗಿದ್ದರೆ ಪೂರ್ಣ ಬ್ರಹ್ಮಚಾರ್ಯೆಯನ್ನು ಪಾಲಿಸುತ್ತ) ಮತ್ತು ನನ್ನ ಶಕ್ತಿ ಮತ್ತು ಕೇಂದ್ರಿಕರಣವನ್ನು ಪರಮಾರ್ಥದ ಅಭಿವೃಧ್ಧಿಗೆ ಹರಿಸುತ್ತೇನೆ]
                ಅನೈತಿಕತೆಯ ಕಾಮುಕತೆಯಿಂದ ಉಂಟಾಗುವ ದುಃಖದ ಅರಿವಿನಿಂದಾಗಿ, ಹೊಣೆಗಾರಿಕೆಯ ವೃಧ್ಧಿಗಾಗಿ, ವ್ಯಕ್ತಿಗಳ ಐಕ್ಯತೆಗಾಗಿ, ಜೋಡಿಯ, ಕುಟುಂಬದ ಮತ್ತು ಸಮಾಜದ ಋಜುತ್ವಕ್ಕಾಗಿ ಮತ್ತು ಸುರಕ್ಷತೆಗಾಗಿ ಈ ಶೀಲವನ್ನು ಪಾಲಿಸುತ್ತೇನೆ. ಪತಿ ಆಥವಾ ಸತಿಯ ಪ್ರೇಮದ ವಿನಃ ಬೇರಾರಲ್ಲೂ ಕಾಮುಕ ಸಂಬಂಧಗಳನ್ನು ಹೊಂದದೆ ಇರುವಂತಹ ಧೃಢಸಂಕಲ್ಫವನ್ನು ಮಾಡುತ್ತೇನೆ, ಹೊಣೆಗಾರಿಕೆ ಅರಿತು ಜೀವಿಸುತ್ತೇನೆ, ಮತ್ತು ದೀರ್ಘಕಾಲ ಇದೇ ರೀತಿಯ ಪವಿತ್ರತೆಯ ನಿಷ್ಟ ಜೀವನವನ್ನು ನಡೆಸುತ್ತೇನೆ.
                ನನ್ನ ಮತ್ತು ಪರರ ಸುಖದ ಸಂರಕ್ಷಣೆಗಾಗಿ, ನಾನು ಪರರ ವಚನಬದ್ಧತೆಗೆ ಗೌರವಿಸುತ್ತೇನೆ. ನಾನು ಅನೈತಿಕತೆಯ ಕಾಮುಕತೆಯ ಕಾರಣದಿಂದ ನಾಶವಾಗುತ್ತಿರುವ ಮಕ್ಕಳು, ದಂಪತಿಗಳು, ಮತ್ತು ಒಡಕಾಗುತ್ತಿರುವ ಕುಟುಂಬಗಳನ್ನು ನನ್ನ ಶಕ್ತಿಮೀರಿ ಶ್ರಮಿಸಿ ಕಾಪಾಡುತ್ತೇನೆ.
                ಇಂದ್ರಿಯ ಭೋಗಗಳಿಂದ ಉಂಟಾಗುವ ಈ ಎಲ್ಲಾ ದುಃಖಗಳ ಅರಿವಿನಿಂದಾಗಿ ನಾನು ನೋಟದಿಂದಾಗಲಿ, ಶಬ್ದದಿಂದಾಗಲಿ, ಸುವಾಸನೆಯಿಂದಾಗಲಿ, ರಸದಿಂದಾಗಲಿ, ಸ್ಪರ್ಶದಿಂದಾಗಲಿ ಮತ್ತು ಮನೋಚಿಂತನೆಯಿಂದಾಗಲಿ ನಾನು ಉದ್ವೇಗತಾಳದೆ, ನಾನು ಇಂದ್ರೀಯಗಳಲ್ಲಿ ಆನಂದಿಸದೆ ಸಂಯಮದಿಂದ ಇರುತ್ತೇನೆ, (ಅಂತಹ ಪ್ರದರ್ಶನಗಳಲ್ಲಿ, ಸಂಗೀತಗಳಲ್ಲಿ, ಇತ್ಯಾದಿ). ಹೀಗಿದ್ದು ನಾನು ಸ್ವ-ಅಭಿರುದ್ಧಿಯ ಪಥದಿಂದ ಚದುರಿ ಹೋಗುವಂತಹ ಅಂತಹುದರಲ್ಲಿ ತೊಡಗುವುದಿಲ್ಲ.
-ನಾಲ್ಕನೇಯ ಶೀಲ-
{ಸತ್ಯಕ್ಕಾಗಿ ಗೌರವ; ಸುಳ್ಳು ಹೇಳದಿರುವುದು: ಸತ್ಯಸಂಧನಾಗಿರುವುದು}
                ನಾನು ಸುಳ್ಳುನುಡಿ & ಮಿಥ್ಯ ಸಂಭಾಷಣೆಯಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
                [ಮತ್ತು ಅಕುಶಲತೆಯಿಂದ ಕೂಡಿರುವ ಮಾತುಕತೆಯಿಂದ ದೂರವಿದ್ದು ಸಕಾರಾತ್ಮಕವಾಗಿ ಸಂಭಾಷಣೆ ಮಾಡುತ್ತೇನೆ]
ಸ್ಮೃತಿಹೀನ ಮಾತುಗಳ & ಪರರ ಮಾತುಗಳನ್ನು ಆಲಿಸದ ಈ ಪ್ರವೃತ್ತಿಯಿಂದ ಆಗುವ ದುಃಖಗಳ ಅರಿವಿನಿಂದಾಗಿ ನಾನು ಈ ಶೀಲವನ್ನು ಪಾಲಿಸುತ್ತಾ, ಮೈತ್ರಿಯುತವಾಗಿ ಮಾತನಾಡುತ್ತಾ, ಪರರ ಮಾತುಗಳನ್ನು ಆಲಿಸುತ್ತಾ, ಪರರಿಗೆ ನನ್ನ ದ್ವನಿ ಹಾಗು ಜ್ಞಾನದಿಂದ ಆನಂದ & ಸುಖ ನೀಡಿ ಅವರ ದುಃಖವನ್ನು ಶಮನಗೋಳಿಸುತ್ತೇನೆ. ನಾನು ಸತ್ಯವನ್ನೆ ಆಡುತ್ತೇನೆ, ಸ್ಪೂತರ್ಿತುಂಬಿದ ಪದಗಳಿಂದ ಅವರ ಶ್ರದ್ಧೆಯನ್ನು ವಿಕಸಿಸುತ್ತೇನೆ, ಅವರಲ್ಲಿ ಆನಂದ & ಭರವಸೆ ಮೂಡಿಸುತ್ತೇನೆ, ಹಾಗೆಯೆ ನಾನು ಪರರಿಗೆ ಅಹಿತವನ್ನುಂಟು ಮಾಢುವಂತಹ ಸುದ್ಧಿಯನ್ನಾಗಲಿ, ಟೀಕೆಯನ್ನಾಗಲಿ,ಅಥವಾ ದೋಷಾರೋಪಣೆಯಾಗಲಿ ಮಾಡುವುದಿಲ್ಲ, ನನಗೆ ಗೊತ್ತಿಲ್ಲದಿರುವುದನ್ನು ತಿಳಿದಿದೆ ಎಂದು ಹೇಳುವುದಿಲ್ಲ. ನಾನು ಕುಟುಂಬಕ್ಕೆ, ಮಿತ್ರತ್ವಕ್ಕೆ ಅಥವಾ ಸಮಾಜಕ್ಕೆ ವಿಭಜನೆಯಾಗುವಂತಹ ಅಥವಾ ವೈಷಮ್ಯವುಂಟಾಗುವಂತಹ ಯಾವುದೇ ಪದಗಳನ್ನು ಸಹಾ ಆಡುವುದಿಲ್ಲ, ನಾನು ಪರರ ಚಿಕ್ಕ ಅಥವಾ ದೊಡ್ಡ ಘರ್ಷಣೆಗಳನ್ನು ಅಂತ್ಯಮಾಡಿ ಅವರಲಿ ್ಲಐಕ್ಯತೆ ಮೂಡಿಸಿ ಬೇಸುಗೆಯನ್ನುಂಟು ಮಾಡುತ್ತೇನೆ.
-ಐದನೇಯ ಶೀಲ-
{ದೈಹಿಕ & ಮಾನಸಿಕ ಸುಕ್ಷೇಮಕ್ಕೆ ಗೌರವ; ಯಾವುದೇ ಮಾದಕವಸ್ತುಗಳನ್ನು ತೆಗೆದುಕೊಳ್ಳದಿರುವಿಕೆ; ಸದಾ ಸ್ಮೃತಿಯಿಂದ ಇರುವಿಕೆ}
                ನಾನು ಮತ್ತನ್ನುಂಟು ಮಾಡುವ ಯಾವುದೇ ರೀತಿಯ ಮಾದಕ ಪಾನೀಯ ಅಥವಾ ವಸ್ತುಗಳಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
                [ಹೀಗಾಗಿ ನಾನು ಇನ್ನೂ ಹೆಚ್ಚು ಸ್ವಸ್ತಿವುಳ್ಳವನಾಗಿರುತ್ತೇನೆ & ಅದರ ಫಲವಾಗಿ ಸ್ಮೃತಿಯನ್ನು ಕಳೆದುಕೊಳ್ಳದೇ ಯಾವುದೇ ಶೀಲಗಳನ್ನು ಕಳೆದುಕೊಳ್ಳುವುದಿಲ್ಲ]


                ಸ್ಮೃತಿಹೀನತೆಯಿಂದ ಅಗುವ ನಾಶವನ್ನು, ದುಃಖವನ್ನು ಅರಿವಿನಲ್ಲಿಟ್ಟುಕೊಂಡು ನಾನು ಈ ಶೀಲವನ್ನು ಪಾಲಿಸುತ್ತಾ, ನನಗಾಗಿ, ನನ್ನ ಕುಟುಂಬಕ್ಕಾಗಿ, ಸಮಾಜದ ಹಿತಕ್ಕಾಗಿ, ಸ್ಮೃತಿಯಿಂದ ಕೂಡಿ ತಿನ್ನುತ್ತಾ, ಸೇವಿಸುತ್ತಾ, ಇತರ ಚಟುವಟಿಕೆಗಳಲ್ಲಿಯು ಸ್ಮೃತಿಯಿಂದ ಕೂಡಿ, ಉತ್ತಮವಾದ ಮಾನಸಿಕ & ದೈಹಿಕ ಸ್ವಾಸ್ತ್ಯವನ್ನು ವೃದ್ದಿಸುತ್ತೇನೆ ,ನಾನು ದೇಹದ & ಮನಸ್ಸಿನ ಆರೋಗ್ಯ, ಆನಂದ, ಶಾಂತಿಕಾರಕವನ್ನುಂಟು ಮಾಡುವಂತಹ ವಸ್ತುಗಳನ್ನೇ ಸ್ವೀಕರಿಸುತ್ತೇನೆ, ಮತ್ತು ನನ್ನ ಹಿತ, ನನ್ನ ಕುಟುಂಬದ ಗೌರವ ಹಾಗೂ ಹಿತ, ಮತ್ತು ಸಮಾಜದ ಹಿತಕ್ಕಾಗಿ ನಾನು ಯಾವುದೇ ರೀತಿಯ ಮಧ್ಯಪಾನ, ಮಾದಕವಸ್ತು, ಅಥವಾ ಇನ್ನಿತರ ಮತ್ತನ್ನುಂಟು ಮಾಡುವ ಯಾವುದೇ ನಕಾರಾತ್ಮಕ ವಸ್ತುಗಳನ್ನು ಸೇವಿಸುವುದಿಲ್ಲ, ಇದರಿಂದಾಗಿ ಉತ್ತಮವಾದ ಸ್ಮೃತಿ, ಯೋಗ್ಯಗಮನ, & ಸ್ಪಶ್ಟ ಗ್ರಹಿಕೆವುಂಟಾಗುತ್ತದೆ, ಈ ವಿಷಗಳಿಂದ ನನ್ನ ದೇಹ ಮತ್ತು ಮನಸ್ಸು ವಿಕೃತವಾಗಿ, ರೋಗಗ್ರಸ್ತವಾಗಿ, ನನ್ನ ಕುಟುಂಬ & ಸಮಾಜವು ಅವನತಿಗೀಡಾಗುತ್ತದೆ, ನಾನು ಯೋಗ್ಯ ಆಹಾರ & ಯೋಗ್ಯ ಯೋಚನೆಗಳಿಂದಾಗಿ ಸಮತೋಲನಗೈಯುತ್ತಾ, ನನ್ನಲ್ಲಿರುವ & ಸಮಾಜದಲ್ಲಿರುವ, ಹಿಂಸೆ, ಭಯ, ಕೋಪ,& ಗೋಂದಲಗಳನ್ನು ಇನ್ನಿಲ್ಲದಂತೆ ಪರಿವರ್ತನೆ ಮಾಡುವೆನು. ಯೋಗ್ಯವಾದ ಆಹಾರದಿಂದಲೇ ಸಕಾರಾತ್ಮಕ ಸ್ವ-ನಿಮರ್ಾಣ & ಸಮಾಜಿಕ ಪರಿವರ್ತನೆಯಾಗುತ್ತದೆ ಮತ್ತು ಮಾನಸಿಕ ಅಭಿರುದ್ಧಿಯ ಏಳಿಗೆಗೆ ಸಹಾಯವಾಗುತ್ತದೆ, ಎಂದು ನಾನು ಅರ್ಥಮಾಡಿಕೊಂಡಿದ್ದೆನೆ.