Tuesday, 9 September 2014

panchasheela (the five virtues)

ಪಂಚಶೀಲಗಳು
 ದುಶ್ಶೀಲನಾಗಿ, ಸಂಯಮಹೀನನಾಗಿ
ನೂರು ವರ್ಷ ಬದುಕುವುದಕ್ಕಿಂತ
ಒಂದೇ ಒಂದು ದಿನ ಶೀಲವಂತನಾಗಿ
ಧ್ಯಾನಿಯಾಗಿ ಬದುಕುವುದು ಮೇಲು (110)


                ಶೀಲವೆಂದರೆ ಪಾಪಗಳಿಂದ ದೂರವಾಗುವುದು, ವಿರತನಾಗುವುದು. ಇಚ್ಛಾಪೂರ್ವಕವಾಗಿ ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಪಾಪಮಾಡದಿರುವುದೇ ಆಗಿದೆ. ಹಾಗೆಯೇ ಶೀಲವೆಂದರೆ ಪುಣ್ಯವನ್ನು ಆಚರಿಸುವುದು. ಇಚ್ಛಾಪೂರ್ವಕವಾಗಿ ಒಳಿತನ್ನು ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಮಾಡುವುದೇ ಆಗಿದೆ. ಎಲ್ಲಾ ಸುಕರ್ಮಗಳು ಶೀಲವೆನಿಸುತ್ತದೆ. ಶೀಲವು ಅಗೌರವವನ್ನು ತೆಗೆದು ಶಾಂತತೆಯನ್ನು ನಿಮರ್ಾಣ ಮಾಡುತ್ತದೆ. ಪಾಪವಿರತೆಯ ಕಾರ್ಯ ಮಾಡುತ್ತದೆ. ಪರಿಶುದ್ಧತೆಯಿಂದ ಶೀಲವು ವ್ಯಕ್ತವಾಗುತ್ತದೆ.
                ಶೀಲದ ಅಭ್ಯಸಿಸುವಿಕೆಯಲ್ಲಿ ಎಲ್ಲಾ ಶೀಲಗಳನ್ನು ಅಚರಿಸಬೇಕಾಗುತ್ತದೆ. ಶೀಲದ ವೃದ್ಧಿಗೆ ಪಾಪಲಜ್ಜೆ ಹಾಗೂ ಪಾಪಭಯವು ತುಂಬಾ ಸಹಾಯ ಮಾಡುತ್ತದೆ, ಇದರಿಂದಾಗಿ ಸ್ವಲ್ಪ ತಪ್ಪು ಸಹಾ ನಡೆಯಲಾರದು, ಶೀಲದ ಅಭ್ಯಾಸದಿಂದ ಮಧ್ಯಮಮಾರ್ಗ ಪಾಲನೆಯಾಗುತ್ತದೆ ಹಾಗೂ ಜೀವನದಲ್ಲಿ ಸಂತೃಪ್ತಿಯಿರುತ್ತದೆ.
                ಶೀಲದ ಆಚರಣೆಯಿಂದಾಗಿ ವಿಸ್ಮೃತಿ, ಗೊಂದಲ, ಒತ್ತಡ, ಹತಾಶೆ, ಮಾನಸಿಕ ಅಸಮತೋಲನ, ಪಾಪ ಯೋಚನೆಗಳು, ಅಥವಾ ಮಾನಸಿಕ ಕಶ್ಮಲಗಳಿಗೆ ತಡೆಯುಂಟಾಗುತ್ತದೆ, ಶೀಲದಿಂದ ಸಮಾಧಿಗಳಾದ ಮೆತ್ತ, ಕರುಣ, ಮುದಿತ, ಇತ್ಯಾದಿಗಳು
ವೃದ್ಧಿಯಾಗುತ್ತದೆ,ಸಹನೆ,ತಾಳ್ಮೆ, ಸಮಚಿತ್ತತೆ ದೊರೆತು ಜೀವನಕ್ಕೆ ನಿಜ ಉದ್ದೇಶ ದೊರೆಯುತ್ತದೆ. ಶಿಲೆಗಳು ಭವನಕ್ಕೆ ಆಧಾರವಾಗಿರುವಂತೆ, ಶೀಲವು ನಿಜವಾದ ಉನ್ನತಿಗೆ ಆಧಾರವಾಗಿದೆ.
ಶೀಲದ ಲಾಭಗಳು;
1.            ಶೀಲವಂತನು ತನ್ನ ಜಾಗರೂಕತೆಯಿಂದಾಗಿ ಮಹಾ ಭಾಗ್ಯವನ್ನು ಪಡೆಯುತ್ತಾನೆ.
2.            ಆತನ ಸುಖ್ಯಾತಿಯು ಎಲ್ಲೆಡೆ ಹರಡುತ್ತದೆ.
3.            ಆತನು ಯಾವುದೇ ಸಭಾಂಗಣದಲ್ಲಿ ಪ್ರವೇಶಿಸಲು ಅಥವಾ ಅಲ್ಲಿರಲಿ, ಆತನು ಧೈರ್ಯದಿಂದ ಭಯರಹಿತತೆಯಿಂದ ಇರುತ್ತಾನೆ.
4.            ಶೀಲವಂತನು ದ್ವಂದ್ವಗಳಿಲ್ಲದೆ, ಕಳವಳವಿಲ್ಲದೆ, ಶಾಂತನಾಗಿ ಮೃತ್ಯುವನ್ನಪ್ಪುತ್ತಾನೆ.
5.            ಸಾವಿನ ನಂತರ ಆತನು ಸುಗತಿ ಪ್ರಾಪ್ತಿ ಮಾಡುತ್ತಾನೆ.
ಪಂಚಶೀಲಗಳ ವಿವರಣೆ ಹೀಗಿದೆ:
ಅದ್ಭುತವಾದ ಪಂಚಶೀಲಗಳು
-ಮೊದಲ ಶೀಲ-
{ಜೀವಕ್ಕಾಗಿ ಗೌರವ: ಕೊಲ್ಲದಿರುವುದು; ರಕ್ಷಿಸುವುದು}
                ನಾನು ಜೀವಹತ್ಯೆ ಮಾಡುವ ನೀಚಕೃತ್ಯದಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಛಾಪೂರ್ವಕವಾಗಿ ಪಾಲಿಸುತ್ತೇನೆ.
                [ಅದರಿಂದಾಗಿ ನಾನು ಕರುಣೆಯನ್ನು ಅಭ್ಯಸಿಸುತ್ತಾ, ಸರ್ವಜೀವಿಗಳನ್ನು ರಕ್ಷಿಸುತ್ತಾ, ಹಿತ ಲಾಭಗಳನ್ನು ಮಾಡುತ್ತೇನೆ]
                ಜೀವನಾಶದಿಂದ ಉಂಟಾಗುವ ದುಃಖದ ಅರಿವಿನಿಂದಾಗಿ, ನಾನು ಈ ಶೀಲವನ್ನು ಪಾಲಿಸುತ್ತಾ, ಕರುಣೆಯನ್ನು ವೃಧ್ಧಿಸುತ್ತಾ, ಮಾನವ, ಪ್ರಾಣಿ ಮತ್ತು ಸಸ್ಯಗಳ ರಕ್ಷಿಸಲು ನಾನು ಕೊಲ್ಲದಿರುವ, ಹಿಂಸಿಸದಿರುವ, ಪರರಿಗೂ ಹಾಗೇ ಪ್ರಚೋದಿಸದಿರುವ, ಮತ್ತು ಯಾವುದೆ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆಯನ್ನು ಬೆಂಬಲಿಸದಿರುವ ಹಾಗೆ ಇರುವಂತಹ, ಶೀಲಕ್ಕೆ ಬದ್ದನಾಗಿರುವಂತೆ ನಾನು ಧೃಢಸಂಕಲ್ಪ ಮಾಡುತ್ತೇನೆ.
-ಎರಡನೆಯ ಶೀಲ-
{ವ್ಯಕ್ತಿಯ ಆಸ್ತಿಗೆ ಗೌರವ: ಕದಿಯದಿರುವಿಕೆ; ದಾನಿಯಾಗಿರುವಿಕೆ}
                ನಾನು ಕೊಡದೆ ಇರುವುದನ್ನು ,ತೆಗೆದುಕೊಳ್ಳದಿರುವ ಸುಶಿಕ್ಷಣದ ನಿಯಮವನ್ನು ಇಚ್ಛಾಪೂರ್ವಕವಾಗಿ ಪಾಲಿಸುತ್ತೇನೆ.
                [ಅದರಿಂದಾಗಿ ನಾನು ದಾನವನ್ನು ಅಭ್ಯಸಿಸುತ್ತಾ, ನನ್ನಲ್ಲಿರುವ ಭೌತಿಕ & ಪರಮಾರ್ಥ ಐಶ್ವರ್ಯವನ್ನು ಹಂಚುತ್ತಾ ದಾನಮಾಡುವೆನು.]
                ಕಳವುನಿಂದ, ಸುಲಿಗೆಯಿಂದ, ಅನ್ಯಾಯದಿಂದ, ದರೋಡೆಯಿಂದ ಮತ್ತು ದಬ್ಬಾಳಿಕೆಯಿಂದ ಉಂಟಾಗುವ ದುಃಖದ ಅರಿವಿನಿಂದಾಗಿ ನಾನು ಈ ಶೀಲವನ್ನು ಪಾಲಿಸುತ್ತಾ, ಸರ್ವಮಾನವರ & ಪ್ರಾಣಿಗಳ ಮೇಲೆ ಮೈತ್ರಿಯನ್ನು ವಿಸ್ತರಿಸುತ್ತಾ, ನಾನು ಪ್ರಾಮಾಣಿಕತೆ, & ದಾನವನ್ನು ಅಭ್ಯಸಿಸುತ್ತ, ನನ್ನ ಐಶ್ವರ್ಯ,ಕಾಲ,ಶಕ್ತಿ,ಅನುಭೂತಿ,ಸ್ಪೂತರ್ಿ ಮತ್ತಿತರ ಸಂಪನ್ಮೂಲಗಳನ್ನು ನಾನು ಪರಹಿತಕ್ಕೆ ಬಳಸುತ್ತೇನೆ, ವಿಶೇಷವಾಗಿ ಅಗತ್ಯವುಳ್ಳವರಿಗೆ ಧಮ್ಮದಾನವನ್ನು ಮಾಡುತ್ತೇನೆ. ನಾನು ಪರರಿಗೆ ಸೇರಿದ ಯಾವುದನ್ನು ಹೊಂದದಿರುವ ಅಥವಾ ಕದಿಯದಿರುವ ಬಗ್ಗೆ ಧೃಢಸಂಕಲ್ಪ ಮಾಡುತ್ತೇನೆ. (ಸಮಯವನ್ನು ಸಹಾ ಕಳುವುಮಾಡದೆ-ನಿಧಾನ ಅಥವಾ ಕಾರ್ಯದಲ್ಲಿ ಬೇಜಾವ್ಧಾರಿ ಇಲ್ಲದಂತೆ ನಿರ್ವಹಿಸುತ್ತೇನೆ). ನಾನು ಪರರಿಗೆ ಸೇರಿದ ವ್ಯಯಕ್ತಿಕ ಅಥವಾ ಸಾರ್ವಜನಿಕ ಆಸ್ತಿಗೆ ಗೌರವಿಸುತ್ತೇನೆ ಮತ್ತು ಯಾವುದೇ ಜೀವಿಯ ದುಃಖದಿಂದ ಪರರೂ ಲಾಭಗಳಿಸದಂತೆ ತಡೆಯುತ್ತೇನೆ.
-ಮೂರನೆಯ ಶೀಲ-
{ವ್ಯಕ್ತಿಗತ ಭಾಂಧವ್ಯಗಳಿಗೆ ಗೌರವ; ಇಂದ್ರೀಯಭೋಗಗಳಲ್ಲಿ ತಲ್ಲಿನನಾಗದಿರುವಿಕೆ; ಸಂತೃಪ್ತನಾಗಿರುವಿಕೆ}
ನಾನು ಕಾಮುಕತೆಯ ಮಿಥ್ಯಾಚಾರಗಳಿಂದ & ಇಂದ್ರಿಯಸುಖಗಳ ವಿಷಯಗಳಲ್ಲಿ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
                [ನಾನು ಅನೈತಿಕ ಕಾಮುಕತೆಯಿಂದ ದೂರವಿದ್ದು, ನಾನು ಸಂತೃಪ್ತಿಯನ್ನು ಅಭ್ಯಸಿಸುತ್ತೇನೆ (ಭಿಕ್ಷುವಾಗಿದ್ದರೆ ಪೂರ್ಣ ಬ್ರಹ್ಮಚಾರ್ಯೆಯನ್ನು ಪಾಲಿಸುತ್ತ) ಮತ್ತು ನನ್ನ ಶಕ್ತಿ ಮತ್ತು ಕೇಂದ್ರಿಕರಣವನ್ನು ಪರಮಾರ್ಥದ ಅಭಿವೃಧ್ಧಿಗೆ ಹರಿಸುತ್ತೇನೆ]
                ಅನೈತಿಕತೆಯ ಕಾಮುಕತೆಯಿಂದ ಉಂಟಾಗುವ ದುಃಖದ ಅರಿವಿನಿಂದಾಗಿ, ಹೊಣೆಗಾರಿಕೆಯ ವೃಧ್ಧಿಗಾಗಿ, ವ್ಯಕ್ತಿಗಳ ಐಕ್ಯತೆಗಾಗಿ, ಜೋಡಿಯ, ಕುಟುಂಬದ ಮತ್ತು ಸಮಾಜದ ಋಜುತ್ವಕ್ಕಾಗಿ ಮತ್ತು ಸುರಕ್ಷತೆಗಾಗಿ ಈ ಶೀಲವನ್ನು ಪಾಲಿಸುತ್ತೇನೆ. ಪತಿ ಆಥವಾ ಸತಿಯ ಪ್ರೇಮದ ವಿನಃ ಬೇರಾರಲ್ಲೂ ಕಾಮುಕ ಸಂಬಂಧಗಳನ್ನು ಹೊಂದದೆ ಇರುವಂತಹ ಧೃಢಸಂಕಲ್ಫವನ್ನು ಮಾಡುತ್ತೇನೆ, ಹೊಣೆಗಾರಿಕೆ ಅರಿತು ಜೀವಿಸುತ್ತೇನೆ, ಮತ್ತು ದೀರ್ಘಕಾಲ ಇದೇ ರೀತಿಯ ಪವಿತ್ರತೆಯ ನಿಷ್ಟ ಜೀವನವನ್ನು ನಡೆಸುತ್ತೇನೆ.
                ನನ್ನ ಮತ್ತು ಪರರ ಸುಖದ ಸಂರಕ್ಷಣೆಗಾಗಿ, ನಾನು ಪರರ ವಚನಬದ್ಧತೆಗೆ ಗೌರವಿಸುತ್ತೇನೆ. ನಾನು ಅನೈತಿಕತೆಯ ಕಾಮುಕತೆಯ ಕಾರಣದಿಂದ ನಾಶವಾಗುತ್ತಿರುವ ಮಕ್ಕಳು, ದಂಪತಿಗಳು, ಮತ್ತು ಒಡಕಾಗುತ್ತಿರುವ ಕುಟುಂಬಗಳನ್ನು ನನ್ನ ಶಕ್ತಿಮೀರಿ ಶ್ರಮಿಸಿ ಕಾಪಾಡುತ್ತೇನೆ.
                ಇಂದ್ರಿಯ ಭೋಗಗಳಿಂದ ಉಂಟಾಗುವ ಈ ಎಲ್ಲಾ ದುಃಖಗಳ ಅರಿವಿನಿಂದಾಗಿ ನಾನು ನೋಟದಿಂದಾಗಲಿ, ಶಬ್ದದಿಂದಾಗಲಿ, ಸುವಾಸನೆಯಿಂದಾಗಲಿ, ರಸದಿಂದಾಗಲಿ, ಸ್ಪರ್ಶದಿಂದಾಗಲಿ ಮತ್ತು ಮನೋಚಿಂತನೆಯಿಂದಾಗಲಿ ನಾನು ಉದ್ವೇಗತಾಳದೆ, ನಾನು ಇಂದ್ರೀಯಗಳಲ್ಲಿ ಆನಂದಿಸದೆ ಸಂಯಮದಿಂದ ಇರುತ್ತೇನೆ, (ಅಂತಹ ಪ್ರದರ್ಶನಗಳಲ್ಲಿ, ಸಂಗೀತಗಳಲ್ಲಿ, ಇತ್ಯಾದಿ). ಹೀಗಿದ್ದು ನಾನು ಸ್ವ-ಅಭಿರುದ್ಧಿಯ ಪಥದಿಂದ ಚದುರಿ ಹೋಗುವಂತಹ ಅಂತಹುದರಲ್ಲಿ ತೊಡಗುವುದಿಲ್ಲ.
-ನಾಲ್ಕನೇಯ ಶೀಲ-
{ಸತ್ಯಕ್ಕಾಗಿ ಗೌರವ; ಸುಳ್ಳು ಹೇಳದಿರುವುದು: ಸತ್ಯಸಂಧನಾಗಿರುವುದು}
                ನಾನು ಸುಳ್ಳುನುಡಿ & ಮಿಥ್ಯ ಸಂಭಾಷಣೆಯಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
                [ಮತ್ತು ಅಕುಶಲತೆಯಿಂದ ಕೂಡಿರುವ ಮಾತುಕತೆಯಿಂದ ದೂರವಿದ್ದು ಸಕಾರಾತ್ಮಕವಾಗಿ ಸಂಭಾಷಣೆ ಮಾಡುತ್ತೇನೆ]
ಸ್ಮೃತಿಹೀನ ಮಾತುಗಳ & ಪರರ ಮಾತುಗಳನ್ನು ಆಲಿಸದ ಈ ಪ್ರವೃತ್ತಿಯಿಂದ ಆಗುವ ದುಃಖಗಳ ಅರಿವಿನಿಂದಾಗಿ ನಾನು ಈ ಶೀಲವನ್ನು ಪಾಲಿಸುತ್ತಾ, ಮೈತ್ರಿಯುತವಾಗಿ ಮಾತನಾಡುತ್ತಾ, ಪರರ ಮಾತುಗಳನ್ನು ಆಲಿಸುತ್ತಾ, ಪರರಿಗೆ ನನ್ನ ದ್ವನಿ ಹಾಗು ಜ್ಞಾನದಿಂದ ಆನಂದ & ಸುಖ ನೀಡಿ ಅವರ ದುಃಖವನ್ನು ಶಮನಗೋಳಿಸುತ್ತೇನೆ. ನಾನು ಸತ್ಯವನ್ನೆ ಆಡುತ್ತೇನೆ, ಸ್ಪೂತರ್ಿತುಂಬಿದ ಪದಗಳಿಂದ ಅವರ ಶ್ರದ್ಧೆಯನ್ನು ವಿಕಸಿಸುತ್ತೇನೆ, ಅವರಲ್ಲಿ ಆನಂದ & ಭರವಸೆ ಮೂಡಿಸುತ್ತೇನೆ, ಹಾಗೆಯೆ ನಾನು ಪರರಿಗೆ ಅಹಿತವನ್ನುಂಟು ಮಾಢುವಂತಹ ಸುದ್ಧಿಯನ್ನಾಗಲಿ, ಟೀಕೆಯನ್ನಾಗಲಿ,ಅಥವಾ ದೋಷಾರೋಪಣೆಯಾಗಲಿ ಮಾಡುವುದಿಲ್ಲ, ನನಗೆ ಗೊತ್ತಿಲ್ಲದಿರುವುದನ್ನು ತಿಳಿದಿದೆ ಎಂದು ಹೇಳುವುದಿಲ್ಲ. ನಾನು ಕುಟುಂಬಕ್ಕೆ, ಮಿತ್ರತ್ವಕ್ಕೆ ಅಥವಾ ಸಮಾಜಕ್ಕೆ ವಿಭಜನೆಯಾಗುವಂತಹ ಅಥವಾ ವೈಷಮ್ಯವುಂಟಾಗುವಂತಹ ಯಾವುದೇ ಪದಗಳನ್ನು ಸಹಾ ಆಡುವುದಿಲ್ಲ, ನಾನು ಪರರ ಚಿಕ್ಕ ಅಥವಾ ದೊಡ್ಡ ಘರ್ಷಣೆಗಳನ್ನು ಅಂತ್ಯಮಾಡಿ ಅವರಲಿ ್ಲಐಕ್ಯತೆ ಮೂಡಿಸಿ ಬೇಸುಗೆಯನ್ನುಂಟು ಮಾಡುತ್ತೇನೆ.
-ಐದನೇಯ ಶೀಲ-
{ದೈಹಿಕ & ಮಾನಸಿಕ ಸುಕ್ಷೇಮಕ್ಕೆ ಗೌರವ; ಯಾವುದೇ ಮಾದಕವಸ್ತುಗಳನ್ನು ತೆಗೆದುಕೊಳ್ಳದಿರುವಿಕೆ; ಸದಾ ಸ್ಮೃತಿಯಿಂದ ಇರುವಿಕೆ}
                ನಾನು ಮತ್ತನ್ನುಂಟು ಮಾಡುವ ಯಾವುದೇ ರೀತಿಯ ಮಾದಕ ಪಾನೀಯ ಅಥವಾ ವಸ್ತುಗಳಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
                [ಹೀಗಾಗಿ ನಾನು ಇನ್ನೂ ಹೆಚ್ಚು ಸ್ವಸ್ತಿವುಳ್ಳವನಾಗಿರುತ್ತೇನೆ & ಅದರ ಫಲವಾಗಿ ಸ್ಮೃತಿಯನ್ನು ಕಳೆದುಕೊಳ್ಳದೇ ಯಾವುದೇ ಶೀಲಗಳನ್ನು ಕಳೆದುಕೊಳ್ಳುವುದಿಲ್ಲ]


                ಸ್ಮೃತಿಹೀನತೆಯಿಂದ ಅಗುವ ನಾಶವನ್ನು, ದುಃಖವನ್ನು ಅರಿವಿನಲ್ಲಿಟ್ಟುಕೊಂಡು ನಾನು ಈ ಶೀಲವನ್ನು ಪಾಲಿಸುತ್ತಾ, ನನಗಾಗಿ, ನನ್ನ ಕುಟುಂಬಕ್ಕಾಗಿ, ಸಮಾಜದ ಹಿತಕ್ಕಾಗಿ, ಸ್ಮೃತಿಯಿಂದ ಕೂಡಿ ತಿನ್ನುತ್ತಾ, ಸೇವಿಸುತ್ತಾ, ಇತರ ಚಟುವಟಿಕೆಗಳಲ್ಲಿಯು ಸ್ಮೃತಿಯಿಂದ ಕೂಡಿ, ಉತ್ತಮವಾದ ಮಾನಸಿಕ & ದೈಹಿಕ ಸ್ವಾಸ್ತ್ಯವನ್ನು ವೃದ್ದಿಸುತ್ತೇನೆ ,ನಾನು ದೇಹದ & ಮನಸ್ಸಿನ ಆರೋಗ್ಯ, ಆನಂದ, ಶಾಂತಿಕಾರಕವನ್ನುಂಟು ಮಾಡುವಂತಹ ವಸ್ತುಗಳನ್ನೇ ಸ್ವೀಕರಿಸುತ್ತೇನೆ, ಮತ್ತು ನನ್ನ ಹಿತ, ನನ್ನ ಕುಟುಂಬದ ಗೌರವ ಹಾಗೂ ಹಿತ, ಮತ್ತು ಸಮಾಜದ ಹಿತಕ್ಕಾಗಿ ನಾನು ಯಾವುದೇ ರೀತಿಯ ಮಧ್ಯಪಾನ, ಮಾದಕವಸ್ತು, ಅಥವಾ ಇನ್ನಿತರ ಮತ್ತನ್ನುಂಟು ಮಾಡುವ ಯಾವುದೇ ನಕಾರಾತ್ಮಕ ವಸ್ತುಗಳನ್ನು ಸೇವಿಸುವುದಿಲ್ಲ, ಇದರಿಂದಾಗಿ ಉತ್ತಮವಾದ ಸ್ಮೃತಿ, ಯೋಗ್ಯಗಮನ, & ಸ್ಪಶ್ಟ ಗ್ರಹಿಕೆವುಂಟಾಗುತ್ತದೆ, ಈ ವಿಷಗಳಿಂದ ನನ್ನ ದೇಹ ಮತ್ತು ಮನಸ್ಸು ವಿಕೃತವಾಗಿ, ರೋಗಗ್ರಸ್ತವಾಗಿ, ನನ್ನ ಕುಟುಂಬ & ಸಮಾಜವು ಅವನತಿಗೀಡಾಗುತ್ತದೆ, ನಾನು ಯೋಗ್ಯ ಆಹಾರ & ಯೋಗ್ಯ ಯೋಚನೆಗಳಿಂದಾಗಿ ಸಮತೋಲನಗೈಯುತ್ತಾ, ನನ್ನಲ್ಲಿರುವ & ಸಮಾಜದಲ್ಲಿರುವ, ಹಿಂಸೆ, ಭಯ, ಕೋಪ,& ಗೋಂದಲಗಳನ್ನು ಇನ್ನಿಲ್ಲದಂತೆ ಪರಿವರ್ತನೆ ಮಾಡುವೆನು. ಯೋಗ್ಯವಾದ ಆಹಾರದಿಂದಲೇ ಸಕಾರಾತ್ಮಕ ಸ್ವ-ನಿಮರ್ಾಣ & ಸಮಾಜಿಕ ಪರಿವರ್ತನೆಯಾಗುತ್ತದೆ ಮತ್ತು ಮಾನಸಿಕ ಅಭಿರುದ್ಧಿಯ ಏಳಿಗೆಗೆ ಸಹಾಯವಾಗುತ್ತದೆ, ಎಂದು ನಾನು ಅರ್ಥಮಾಡಿಕೊಂಡಿದ್ದೆನೆ.

No comments:

Post a Comment