Tuesday, 9 September 2014

panchasheela (the five virtues)

ಪಂಚಶೀಲಗಳು
 ದುಶ್ಶೀಲನಾಗಿ, ಸಂಯಮಹೀನನಾಗಿ
ನೂರು ವರ್ಷ ಬದುಕುವುದಕ್ಕಿಂತ
ಒಂದೇ ಒಂದು ದಿನ ಶೀಲವಂತನಾಗಿ
ಧ್ಯಾನಿಯಾಗಿ ಬದುಕುವುದು ಮೇಲು (110)


                ಶೀಲವೆಂದರೆ ಪಾಪಗಳಿಂದ ದೂರವಾಗುವುದು, ವಿರತನಾಗುವುದು. ಇಚ್ಛಾಪೂರ್ವಕವಾಗಿ ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಪಾಪಮಾಡದಿರುವುದೇ ಆಗಿದೆ. ಹಾಗೆಯೇ ಶೀಲವೆಂದರೆ ಪುಣ್ಯವನ್ನು ಆಚರಿಸುವುದು. ಇಚ್ಛಾಪೂರ್ವಕವಾಗಿ ಒಳಿತನ್ನು ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಮಾಡುವುದೇ ಆಗಿದೆ. ಎಲ್ಲಾ ಸುಕರ್ಮಗಳು ಶೀಲವೆನಿಸುತ್ತದೆ. ಶೀಲವು ಅಗೌರವವನ್ನು ತೆಗೆದು ಶಾಂತತೆಯನ್ನು ನಿಮರ್ಾಣ ಮಾಡುತ್ತದೆ. ಪಾಪವಿರತೆಯ ಕಾರ್ಯ ಮಾಡುತ್ತದೆ. ಪರಿಶುದ್ಧತೆಯಿಂದ ಶೀಲವು ವ್ಯಕ್ತವಾಗುತ್ತದೆ.
                ಶೀಲದ ಅಭ್ಯಸಿಸುವಿಕೆಯಲ್ಲಿ ಎಲ್ಲಾ ಶೀಲಗಳನ್ನು ಅಚರಿಸಬೇಕಾಗುತ್ತದೆ. ಶೀಲದ ವೃದ್ಧಿಗೆ ಪಾಪಲಜ್ಜೆ ಹಾಗೂ ಪಾಪಭಯವು ತುಂಬಾ ಸಹಾಯ ಮಾಡುತ್ತದೆ, ಇದರಿಂದಾಗಿ ಸ್ವಲ್ಪ ತಪ್ಪು ಸಹಾ ನಡೆಯಲಾರದು, ಶೀಲದ ಅಭ್ಯಾಸದಿಂದ ಮಧ್ಯಮಮಾರ್ಗ ಪಾಲನೆಯಾಗುತ್ತದೆ ಹಾಗೂ ಜೀವನದಲ್ಲಿ ಸಂತೃಪ್ತಿಯಿರುತ್ತದೆ.
                ಶೀಲದ ಆಚರಣೆಯಿಂದಾಗಿ ವಿಸ್ಮೃತಿ, ಗೊಂದಲ, ಒತ್ತಡ, ಹತಾಶೆ, ಮಾನಸಿಕ ಅಸಮತೋಲನ, ಪಾಪ ಯೋಚನೆಗಳು, ಅಥವಾ ಮಾನಸಿಕ ಕಶ್ಮಲಗಳಿಗೆ ತಡೆಯುಂಟಾಗುತ್ತದೆ, ಶೀಲದಿಂದ ಸಮಾಧಿಗಳಾದ ಮೆತ್ತ, ಕರುಣ, ಮುದಿತ, ಇತ್ಯಾದಿಗಳು
ವೃದ್ಧಿಯಾಗುತ್ತದೆ,ಸಹನೆ,ತಾಳ್ಮೆ, ಸಮಚಿತ್ತತೆ ದೊರೆತು ಜೀವನಕ್ಕೆ ನಿಜ ಉದ್ದೇಶ ದೊರೆಯುತ್ತದೆ. ಶಿಲೆಗಳು ಭವನಕ್ಕೆ ಆಧಾರವಾಗಿರುವಂತೆ, ಶೀಲವು ನಿಜವಾದ ಉನ್ನತಿಗೆ ಆಧಾರವಾಗಿದೆ.
ಶೀಲದ ಲಾಭಗಳು;
1.            ಶೀಲವಂತನು ತನ್ನ ಜಾಗರೂಕತೆಯಿಂದಾಗಿ ಮಹಾ ಭಾಗ್ಯವನ್ನು ಪಡೆಯುತ್ತಾನೆ.
2.            ಆತನ ಸುಖ್ಯಾತಿಯು ಎಲ್ಲೆಡೆ ಹರಡುತ್ತದೆ.
3.            ಆತನು ಯಾವುದೇ ಸಭಾಂಗಣದಲ್ಲಿ ಪ್ರವೇಶಿಸಲು ಅಥವಾ ಅಲ್ಲಿರಲಿ, ಆತನು ಧೈರ್ಯದಿಂದ ಭಯರಹಿತತೆಯಿಂದ ಇರುತ್ತಾನೆ.
4.            ಶೀಲವಂತನು ದ್ವಂದ್ವಗಳಿಲ್ಲದೆ, ಕಳವಳವಿಲ್ಲದೆ, ಶಾಂತನಾಗಿ ಮೃತ್ಯುವನ್ನಪ್ಪುತ್ತಾನೆ.
5.            ಸಾವಿನ ನಂತರ ಆತನು ಸುಗತಿ ಪ್ರಾಪ್ತಿ ಮಾಡುತ್ತಾನೆ.
ಪಂಚಶೀಲಗಳ ವಿವರಣೆ ಹೀಗಿದೆ:
ಅದ್ಭುತವಾದ ಪಂಚಶೀಲಗಳು
-ಮೊದಲ ಶೀಲ-
{ಜೀವಕ್ಕಾಗಿ ಗೌರವ: ಕೊಲ್ಲದಿರುವುದು; ರಕ್ಷಿಸುವುದು}
                ನಾನು ಜೀವಹತ್ಯೆ ಮಾಡುವ ನೀಚಕೃತ್ಯದಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಛಾಪೂರ್ವಕವಾಗಿ ಪಾಲಿಸುತ್ತೇನೆ.
                [ಅದರಿಂದಾಗಿ ನಾನು ಕರುಣೆಯನ್ನು ಅಭ್ಯಸಿಸುತ್ತಾ, ಸರ್ವಜೀವಿಗಳನ್ನು ರಕ್ಷಿಸುತ್ತಾ, ಹಿತ ಲಾಭಗಳನ್ನು ಮಾಡುತ್ತೇನೆ]
                ಜೀವನಾಶದಿಂದ ಉಂಟಾಗುವ ದುಃಖದ ಅರಿವಿನಿಂದಾಗಿ, ನಾನು ಈ ಶೀಲವನ್ನು ಪಾಲಿಸುತ್ತಾ, ಕರುಣೆಯನ್ನು ವೃಧ್ಧಿಸುತ್ತಾ, ಮಾನವ, ಪ್ರಾಣಿ ಮತ್ತು ಸಸ್ಯಗಳ ರಕ್ಷಿಸಲು ನಾನು ಕೊಲ್ಲದಿರುವ, ಹಿಂಸಿಸದಿರುವ, ಪರರಿಗೂ ಹಾಗೇ ಪ್ರಚೋದಿಸದಿರುವ, ಮತ್ತು ಯಾವುದೆ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆಯನ್ನು ಬೆಂಬಲಿಸದಿರುವ ಹಾಗೆ ಇರುವಂತಹ, ಶೀಲಕ್ಕೆ ಬದ್ದನಾಗಿರುವಂತೆ ನಾನು ಧೃಢಸಂಕಲ್ಪ ಮಾಡುತ್ತೇನೆ.
-ಎರಡನೆಯ ಶೀಲ-
{ವ್ಯಕ್ತಿಯ ಆಸ್ತಿಗೆ ಗೌರವ: ಕದಿಯದಿರುವಿಕೆ; ದಾನಿಯಾಗಿರುವಿಕೆ}
                ನಾನು ಕೊಡದೆ ಇರುವುದನ್ನು ,ತೆಗೆದುಕೊಳ್ಳದಿರುವ ಸುಶಿಕ್ಷಣದ ನಿಯಮವನ್ನು ಇಚ್ಛಾಪೂರ್ವಕವಾಗಿ ಪಾಲಿಸುತ್ತೇನೆ.
                [ಅದರಿಂದಾಗಿ ನಾನು ದಾನವನ್ನು ಅಭ್ಯಸಿಸುತ್ತಾ, ನನ್ನಲ್ಲಿರುವ ಭೌತಿಕ & ಪರಮಾರ್ಥ ಐಶ್ವರ್ಯವನ್ನು ಹಂಚುತ್ತಾ ದಾನಮಾಡುವೆನು.]
                ಕಳವುನಿಂದ, ಸುಲಿಗೆಯಿಂದ, ಅನ್ಯಾಯದಿಂದ, ದರೋಡೆಯಿಂದ ಮತ್ತು ದಬ್ಬಾಳಿಕೆಯಿಂದ ಉಂಟಾಗುವ ದುಃಖದ ಅರಿವಿನಿಂದಾಗಿ ನಾನು ಈ ಶೀಲವನ್ನು ಪಾಲಿಸುತ್ತಾ, ಸರ್ವಮಾನವರ & ಪ್ರಾಣಿಗಳ ಮೇಲೆ ಮೈತ್ರಿಯನ್ನು ವಿಸ್ತರಿಸುತ್ತಾ, ನಾನು ಪ್ರಾಮಾಣಿಕತೆ, & ದಾನವನ್ನು ಅಭ್ಯಸಿಸುತ್ತ, ನನ್ನ ಐಶ್ವರ್ಯ,ಕಾಲ,ಶಕ್ತಿ,ಅನುಭೂತಿ,ಸ್ಪೂತರ್ಿ ಮತ್ತಿತರ ಸಂಪನ್ಮೂಲಗಳನ್ನು ನಾನು ಪರಹಿತಕ್ಕೆ ಬಳಸುತ್ತೇನೆ, ವಿಶೇಷವಾಗಿ ಅಗತ್ಯವುಳ್ಳವರಿಗೆ ಧಮ್ಮದಾನವನ್ನು ಮಾಡುತ್ತೇನೆ. ನಾನು ಪರರಿಗೆ ಸೇರಿದ ಯಾವುದನ್ನು ಹೊಂದದಿರುವ ಅಥವಾ ಕದಿಯದಿರುವ ಬಗ್ಗೆ ಧೃಢಸಂಕಲ್ಪ ಮಾಡುತ್ತೇನೆ. (ಸಮಯವನ್ನು ಸಹಾ ಕಳುವುಮಾಡದೆ-ನಿಧಾನ ಅಥವಾ ಕಾರ್ಯದಲ್ಲಿ ಬೇಜಾವ್ಧಾರಿ ಇಲ್ಲದಂತೆ ನಿರ್ವಹಿಸುತ್ತೇನೆ). ನಾನು ಪರರಿಗೆ ಸೇರಿದ ವ್ಯಯಕ್ತಿಕ ಅಥವಾ ಸಾರ್ವಜನಿಕ ಆಸ್ತಿಗೆ ಗೌರವಿಸುತ್ತೇನೆ ಮತ್ತು ಯಾವುದೇ ಜೀವಿಯ ದುಃಖದಿಂದ ಪರರೂ ಲಾಭಗಳಿಸದಂತೆ ತಡೆಯುತ್ತೇನೆ.
-ಮೂರನೆಯ ಶೀಲ-
{ವ್ಯಕ್ತಿಗತ ಭಾಂಧವ್ಯಗಳಿಗೆ ಗೌರವ; ಇಂದ್ರೀಯಭೋಗಗಳಲ್ಲಿ ತಲ್ಲಿನನಾಗದಿರುವಿಕೆ; ಸಂತೃಪ್ತನಾಗಿರುವಿಕೆ}
ನಾನು ಕಾಮುಕತೆಯ ಮಿಥ್ಯಾಚಾರಗಳಿಂದ & ಇಂದ್ರಿಯಸುಖಗಳ ವಿಷಯಗಳಲ್ಲಿ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
                [ನಾನು ಅನೈತಿಕ ಕಾಮುಕತೆಯಿಂದ ದೂರವಿದ್ದು, ನಾನು ಸಂತೃಪ್ತಿಯನ್ನು ಅಭ್ಯಸಿಸುತ್ತೇನೆ (ಭಿಕ್ಷುವಾಗಿದ್ದರೆ ಪೂರ್ಣ ಬ್ರಹ್ಮಚಾರ್ಯೆಯನ್ನು ಪಾಲಿಸುತ್ತ) ಮತ್ತು ನನ್ನ ಶಕ್ತಿ ಮತ್ತು ಕೇಂದ್ರಿಕರಣವನ್ನು ಪರಮಾರ್ಥದ ಅಭಿವೃಧ್ಧಿಗೆ ಹರಿಸುತ್ತೇನೆ]
                ಅನೈತಿಕತೆಯ ಕಾಮುಕತೆಯಿಂದ ಉಂಟಾಗುವ ದುಃಖದ ಅರಿವಿನಿಂದಾಗಿ, ಹೊಣೆಗಾರಿಕೆಯ ವೃಧ್ಧಿಗಾಗಿ, ವ್ಯಕ್ತಿಗಳ ಐಕ್ಯತೆಗಾಗಿ, ಜೋಡಿಯ, ಕುಟುಂಬದ ಮತ್ತು ಸಮಾಜದ ಋಜುತ್ವಕ್ಕಾಗಿ ಮತ್ತು ಸುರಕ್ಷತೆಗಾಗಿ ಈ ಶೀಲವನ್ನು ಪಾಲಿಸುತ್ತೇನೆ. ಪತಿ ಆಥವಾ ಸತಿಯ ಪ್ರೇಮದ ವಿನಃ ಬೇರಾರಲ್ಲೂ ಕಾಮುಕ ಸಂಬಂಧಗಳನ್ನು ಹೊಂದದೆ ಇರುವಂತಹ ಧೃಢಸಂಕಲ್ಫವನ್ನು ಮಾಡುತ್ತೇನೆ, ಹೊಣೆಗಾರಿಕೆ ಅರಿತು ಜೀವಿಸುತ್ತೇನೆ, ಮತ್ತು ದೀರ್ಘಕಾಲ ಇದೇ ರೀತಿಯ ಪವಿತ್ರತೆಯ ನಿಷ್ಟ ಜೀವನವನ್ನು ನಡೆಸುತ್ತೇನೆ.
                ನನ್ನ ಮತ್ತು ಪರರ ಸುಖದ ಸಂರಕ್ಷಣೆಗಾಗಿ, ನಾನು ಪರರ ವಚನಬದ್ಧತೆಗೆ ಗೌರವಿಸುತ್ತೇನೆ. ನಾನು ಅನೈತಿಕತೆಯ ಕಾಮುಕತೆಯ ಕಾರಣದಿಂದ ನಾಶವಾಗುತ್ತಿರುವ ಮಕ್ಕಳು, ದಂಪತಿಗಳು, ಮತ್ತು ಒಡಕಾಗುತ್ತಿರುವ ಕುಟುಂಬಗಳನ್ನು ನನ್ನ ಶಕ್ತಿಮೀರಿ ಶ್ರಮಿಸಿ ಕಾಪಾಡುತ್ತೇನೆ.
                ಇಂದ್ರಿಯ ಭೋಗಗಳಿಂದ ಉಂಟಾಗುವ ಈ ಎಲ್ಲಾ ದುಃಖಗಳ ಅರಿವಿನಿಂದಾಗಿ ನಾನು ನೋಟದಿಂದಾಗಲಿ, ಶಬ್ದದಿಂದಾಗಲಿ, ಸುವಾಸನೆಯಿಂದಾಗಲಿ, ರಸದಿಂದಾಗಲಿ, ಸ್ಪರ್ಶದಿಂದಾಗಲಿ ಮತ್ತು ಮನೋಚಿಂತನೆಯಿಂದಾಗಲಿ ನಾನು ಉದ್ವೇಗತಾಳದೆ, ನಾನು ಇಂದ್ರೀಯಗಳಲ್ಲಿ ಆನಂದಿಸದೆ ಸಂಯಮದಿಂದ ಇರುತ್ತೇನೆ, (ಅಂತಹ ಪ್ರದರ್ಶನಗಳಲ್ಲಿ, ಸಂಗೀತಗಳಲ್ಲಿ, ಇತ್ಯಾದಿ). ಹೀಗಿದ್ದು ನಾನು ಸ್ವ-ಅಭಿರುದ್ಧಿಯ ಪಥದಿಂದ ಚದುರಿ ಹೋಗುವಂತಹ ಅಂತಹುದರಲ್ಲಿ ತೊಡಗುವುದಿಲ್ಲ.
-ನಾಲ್ಕನೇಯ ಶೀಲ-
{ಸತ್ಯಕ್ಕಾಗಿ ಗೌರವ; ಸುಳ್ಳು ಹೇಳದಿರುವುದು: ಸತ್ಯಸಂಧನಾಗಿರುವುದು}
                ನಾನು ಸುಳ್ಳುನುಡಿ & ಮಿಥ್ಯ ಸಂಭಾಷಣೆಯಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
                [ಮತ್ತು ಅಕುಶಲತೆಯಿಂದ ಕೂಡಿರುವ ಮಾತುಕತೆಯಿಂದ ದೂರವಿದ್ದು ಸಕಾರಾತ್ಮಕವಾಗಿ ಸಂಭಾಷಣೆ ಮಾಡುತ್ತೇನೆ]
ಸ್ಮೃತಿಹೀನ ಮಾತುಗಳ & ಪರರ ಮಾತುಗಳನ್ನು ಆಲಿಸದ ಈ ಪ್ರವೃತ್ತಿಯಿಂದ ಆಗುವ ದುಃಖಗಳ ಅರಿವಿನಿಂದಾಗಿ ನಾನು ಈ ಶೀಲವನ್ನು ಪಾಲಿಸುತ್ತಾ, ಮೈತ್ರಿಯುತವಾಗಿ ಮಾತನಾಡುತ್ತಾ, ಪರರ ಮಾತುಗಳನ್ನು ಆಲಿಸುತ್ತಾ, ಪರರಿಗೆ ನನ್ನ ದ್ವನಿ ಹಾಗು ಜ್ಞಾನದಿಂದ ಆನಂದ & ಸುಖ ನೀಡಿ ಅವರ ದುಃಖವನ್ನು ಶಮನಗೋಳಿಸುತ್ತೇನೆ. ನಾನು ಸತ್ಯವನ್ನೆ ಆಡುತ್ತೇನೆ, ಸ್ಪೂತರ್ಿತುಂಬಿದ ಪದಗಳಿಂದ ಅವರ ಶ್ರದ್ಧೆಯನ್ನು ವಿಕಸಿಸುತ್ತೇನೆ, ಅವರಲ್ಲಿ ಆನಂದ & ಭರವಸೆ ಮೂಡಿಸುತ್ತೇನೆ, ಹಾಗೆಯೆ ನಾನು ಪರರಿಗೆ ಅಹಿತವನ್ನುಂಟು ಮಾಢುವಂತಹ ಸುದ್ಧಿಯನ್ನಾಗಲಿ, ಟೀಕೆಯನ್ನಾಗಲಿ,ಅಥವಾ ದೋಷಾರೋಪಣೆಯಾಗಲಿ ಮಾಡುವುದಿಲ್ಲ, ನನಗೆ ಗೊತ್ತಿಲ್ಲದಿರುವುದನ್ನು ತಿಳಿದಿದೆ ಎಂದು ಹೇಳುವುದಿಲ್ಲ. ನಾನು ಕುಟುಂಬಕ್ಕೆ, ಮಿತ್ರತ್ವಕ್ಕೆ ಅಥವಾ ಸಮಾಜಕ್ಕೆ ವಿಭಜನೆಯಾಗುವಂತಹ ಅಥವಾ ವೈಷಮ್ಯವುಂಟಾಗುವಂತಹ ಯಾವುದೇ ಪದಗಳನ್ನು ಸಹಾ ಆಡುವುದಿಲ್ಲ, ನಾನು ಪರರ ಚಿಕ್ಕ ಅಥವಾ ದೊಡ್ಡ ಘರ್ಷಣೆಗಳನ್ನು ಅಂತ್ಯಮಾಡಿ ಅವರಲಿ ್ಲಐಕ್ಯತೆ ಮೂಡಿಸಿ ಬೇಸುಗೆಯನ್ನುಂಟು ಮಾಡುತ್ತೇನೆ.
-ಐದನೇಯ ಶೀಲ-
{ದೈಹಿಕ & ಮಾನಸಿಕ ಸುಕ್ಷೇಮಕ್ಕೆ ಗೌರವ; ಯಾವುದೇ ಮಾದಕವಸ್ತುಗಳನ್ನು ತೆಗೆದುಕೊಳ್ಳದಿರುವಿಕೆ; ಸದಾ ಸ್ಮೃತಿಯಿಂದ ಇರುವಿಕೆ}
                ನಾನು ಮತ್ತನ್ನುಂಟು ಮಾಡುವ ಯಾವುದೇ ರೀತಿಯ ಮಾದಕ ಪಾನೀಯ ಅಥವಾ ವಸ್ತುಗಳಿಂದ ದೂರವಿರುವ ಸುಶಿಕ್ಷಣದ ನಿಯಮವನ್ನು ಇಚ್ಚಾಪೂರ್ವಕವಾಗಿ ಪಾಲಿಸುತ್ತೇನೆ
                [ಹೀಗಾಗಿ ನಾನು ಇನ್ನೂ ಹೆಚ್ಚು ಸ್ವಸ್ತಿವುಳ್ಳವನಾಗಿರುತ್ತೇನೆ & ಅದರ ಫಲವಾಗಿ ಸ್ಮೃತಿಯನ್ನು ಕಳೆದುಕೊಳ್ಳದೇ ಯಾವುದೇ ಶೀಲಗಳನ್ನು ಕಳೆದುಕೊಳ್ಳುವುದಿಲ್ಲ]


                ಸ್ಮೃತಿಹೀನತೆಯಿಂದ ಅಗುವ ನಾಶವನ್ನು, ದುಃಖವನ್ನು ಅರಿವಿನಲ್ಲಿಟ್ಟುಕೊಂಡು ನಾನು ಈ ಶೀಲವನ್ನು ಪಾಲಿಸುತ್ತಾ, ನನಗಾಗಿ, ನನ್ನ ಕುಟುಂಬಕ್ಕಾಗಿ, ಸಮಾಜದ ಹಿತಕ್ಕಾಗಿ, ಸ್ಮೃತಿಯಿಂದ ಕೂಡಿ ತಿನ್ನುತ್ತಾ, ಸೇವಿಸುತ್ತಾ, ಇತರ ಚಟುವಟಿಕೆಗಳಲ್ಲಿಯು ಸ್ಮೃತಿಯಿಂದ ಕೂಡಿ, ಉತ್ತಮವಾದ ಮಾನಸಿಕ & ದೈಹಿಕ ಸ್ವಾಸ್ತ್ಯವನ್ನು ವೃದ್ದಿಸುತ್ತೇನೆ ,ನಾನು ದೇಹದ & ಮನಸ್ಸಿನ ಆರೋಗ್ಯ, ಆನಂದ, ಶಾಂತಿಕಾರಕವನ್ನುಂಟು ಮಾಡುವಂತಹ ವಸ್ತುಗಳನ್ನೇ ಸ್ವೀಕರಿಸುತ್ತೇನೆ, ಮತ್ತು ನನ್ನ ಹಿತ, ನನ್ನ ಕುಟುಂಬದ ಗೌರವ ಹಾಗೂ ಹಿತ, ಮತ್ತು ಸಮಾಜದ ಹಿತಕ್ಕಾಗಿ ನಾನು ಯಾವುದೇ ರೀತಿಯ ಮಧ್ಯಪಾನ, ಮಾದಕವಸ್ತು, ಅಥವಾ ಇನ್ನಿತರ ಮತ್ತನ್ನುಂಟು ಮಾಡುವ ಯಾವುದೇ ನಕಾರಾತ್ಮಕ ವಸ್ತುಗಳನ್ನು ಸೇವಿಸುವುದಿಲ್ಲ, ಇದರಿಂದಾಗಿ ಉತ್ತಮವಾದ ಸ್ಮೃತಿ, ಯೋಗ್ಯಗಮನ, & ಸ್ಪಶ್ಟ ಗ್ರಹಿಕೆವುಂಟಾಗುತ್ತದೆ, ಈ ವಿಷಗಳಿಂದ ನನ್ನ ದೇಹ ಮತ್ತು ಮನಸ್ಸು ವಿಕೃತವಾಗಿ, ರೋಗಗ್ರಸ್ತವಾಗಿ, ನನ್ನ ಕುಟುಂಬ & ಸಮಾಜವು ಅವನತಿಗೀಡಾಗುತ್ತದೆ, ನಾನು ಯೋಗ್ಯ ಆಹಾರ & ಯೋಗ್ಯ ಯೋಚನೆಗಳಿಂದಾಗಿ ಸಮತೋಲನಗೈಯುತ್ತಾ, ನನ್ನಲ್ಲಿರುವ & ಸಮಾಜದಲ್ಲಿರುವ, ಹಿಂಸೆ, ಭಯ, ಕೋಪ,& ಗೋಂದಲಗಳನ್ನು ಇನ್ನಿಲ್ಲದಂತೆ ಪರಿವರ್ತನೆ ಮಾಡುವೆನು. ಯೋಗ್ಯವಾದ ಆಹಾರದಿಂದಲೇ ಸಕಾರಾತ್ಮಕ ಸ್ವ-ನಿಮರ್ಾಣ & ಸಮಾಜಿಕ ಪರಿವರ್ತನೆಯಾಗುತ್ತದೆ ಮತ್ತು ಮಾನಸಿಕ ಅಭಿರುದ್ಧಿಯ ಏಳಿಗೆಗೆ ಸಹಾಯವಾಗುತ್ತದೆ, ಎಂದು ನಾನು ಅರ್ಥಮಾಡಿಕೊಂಡಿದ್ದೆನೆ.

Friday, 15 August 2014

the great power of thinking in kannada

ಚಿಂತನೆಯೆಂಬ  ಮಹಾಶಕ್ತಿ -ಅನೀಶ್ ಬೋಧ್

"ನಾವು ಏನಾಗಿರುವೆವೊ ಅದೆಲ್ಲಾ ನಮ್ಮ ಯೋಚನೆಗಳ ಫಲವಾಗಿದೆ. ,ಹಿಂದಿನ ಯೋಚನೆಗಳ ಪಲಿತಾಂಶವೇ ಇಂದಿನ ನಾವು, ಈಗಿನ ಯೋಚನೆಗಳಂತೆ ಮುಂದಿನ ಭವಿಷ್ಯವಿರುವುದು. ಪ್ರದುಷ್ಟ ಯೋಚನೆಗಳಿಂದ ದುಃಖವು ಸಿಕ್ಕರೆ, ಕುಶಲ ಪ್ರಸನ್ನ ಯೋಚನೆಗಳಿಂದಲೇ ಸುಖವು ಲಭಿಸುವುದು, ಈಗಿನ ಸ್ಥಿತಿಗತಿಗಳಿಗೆ ಈ ಹಿಂದಿನ ಆಯ್ಕೆಗಳೇ ಕಾರಣವಾಗಿದ್ದವು, ನಮ್ಮ ಭವಿಷ್ಯ ಉನ್ನತವಾಗಿರಲೆಂದು  ಆಶಿಸಿದರೆ ಈಗಿನ ಯೋಚನೆ-ಯೋಜನೆ,  ನಿಧರ್ಾರ ಹಾಗು ಕಾರ್ಯಗಳು ಉತ್ತಮವಾಗಿರಬೇಕಾಗಿದೆ, ಯೋಚನೆಗಳಿಂದಲೇ ನಮ್ಮ ಉದ್ಭವ ,ಯೋಚನೆಗಳಿಂದಲೇ ನಾವು ಜಗತ್ತನ್ನು ಸಹಾ ನಿಮರ್ಿಸುತ್ತೇವೆ."                                                                               --ಬುದ್ಧ ಭಗವಾನರು.
       ಚಿಂತನೆ
ಚಿಂತನೆಯು ಮಾನಸಿಕ ಪ್ರಕ್ರಿಯೆಯಾಗಿದ್ದು, ಚಿಂತನೆಯು  ಯೋಚನೆಗಳ ಸಮೂಹದಿಂದಾಗುತ್ತವೆ, ಹಾಗೇಯೆ ಚಿಂತನೆಯು ಯೋಚನೆಗಳ ಮಹಾಸಮೂಹವನ್ನು ಉತ್ಪನ್ನುಗೊಳಿಸುತ್ತದೆ, ನಾವು ಪ್ರತಿ ಕ್ಷಣವೂ ಯಾಂತ್ರಿಕವಾಗಿ ಅಥವಾ ಐಚ್ಚಿಕವಾಗಿ  ಯೋಚಿಸುತ್ತಲೆ ಇರುತ್ತೇವೆ, ಆಳ ನಿದ್ರೆಯ ಹೊರತು ಸ್ವಪ್ನವಸ್ಥೆಯಲ್ಲಿಯೂ ಸಹಾ ನಮ್ಮ ಯೋಚನೆಗಳು ಮನಸ್ಸಿಗೆ ತಾಕುತ್ತಲೇ ಇರುವುದು. ವಿಜ್ಞಾನಿಗಳ ಪ್ರಕಾರ ನಿಮಿಷಕ್ಕೆ ಸಾವಿರಗಳ ಸಂಖ್ಯೆಯಲ್ಲಿ ಪದಗಳು ಯೋಚನೆಗಳಲ್ಲಿ ಹರಿದಾಡುತ್ತಿರುತ್ತವೆ. ಭಾವವೇಶದ ಯೋಚನೆಗಳನ್ನು ಚಿಂತನೆ ಎನ್ನಲಾಗದು, ಹಾಗೆಯೆ ನಮ್ಮ ನಿಯಂತ್ರಣವಿಲ್ಲದೆ ಉಂಟಾಗುತ್ತಿರುವ ಯೋಚನೆಗಳನ್ನು ಚಿಂತನೆ ಎನ್ನಲಾಗದು.ಇದು ಐಚ್ಚಿಕ ಪರಿಣಾಮಾತ್ಮಕ ಕ್ರಿಯೆಯಾಗಿದೆ.
ಚಿಂತನಾ ಪ್ರಕ್ರಿಯೆ
  ಮನಸ್ಸು ಹಾಗು ಮಾನಸಿಕ (ಚಿಂತನೆಯ)ವಿಷಯ ಇವಿಷ್ಟೇ ಅಲ್ಲಿ ಭಾಗವಿಸುವವು ಜೋತೆಗೆ ಅದಕ್ಕೆ ಸಂಬಂದಪಟ್ಟ ಎಲ್ಲಾ ವಿಷಯಗಳು ಅಥವಾ ದತ್ತಾಂಶಗಳು ಅಲ್ಲಿ ನೆರೆಯುತ್ತವೆ.  ಜೋತೆಗೆ ನಮ್ಮ ನೆನಪು ಇದ್ದಷ್ಟು, ಇನ್ನಷ್ಟು    ವಿಶಾಲವಾಗಿ ನಾವು ಹೆಚ್ಚು ಹೆಚ್ಚಾಗಿ ಚಿಂತನೆ ಮಾಡಬಹುದು.ಇಲ್ಲಿ ಭಾಷೆಯು ಪ್ರಮುಖ ಪಾತ್ರವಹಿಸುತ್ತದೆ,  ಚಿಂತನೆಯು ಸ್ವ-ಭಾಷಣದಂತೆ ಶಾಬ್ದಿಕವಾಗಿ,  ವಾಕ್ಯಗಳಂತೆ ೆೆ ಹಾಗೆಯೆ  ಮನೋಭಾವನೆಗಳಂತೆ , ಕಲ್ಪಿತ ಚಿತ್ರಗಳಂತೆ, ಆಕಾರಗಳಂತೆ, ನಕ್ಷೆಗಳಂತೆ,  ಅಂತರಿಕದಲ್ಲಿ  ಹರಿದಾಡುತ್ತಲೆ ಇರುವುದು ,ಹೀಗೆ ವಿಷಯಗಳ ಸಂಕಲನ, ಸಂಬಂಧಪಡದ ವಿಷಯಗಳು ಅಲ್ಲಿಂದ ನಿರ್ಗಮಿಸಿ  ತರ್ಕದ ವ್ಯವಕಲನವು ನಡೆಯುತ್ತವೆ, ವಿಷಯಗಳ ವಿಶ್ಲೇಷಣೆ ನಡೆಯುತ್ತಾ ಭಾಗಕಾರದಂತೆ ವಿಭಜಿಸುತ್ತಾ  ವಗರ್ೀಕರಣವೂ ನಡೆಯುವುದು ,ಚಿಂತನೆಗೆ ವಿಷಯ ಹಾಗು ಪ್ರಶ್ನೆಗಳೆ ಪ್ರಮುಖ ಅಧಾರವಾಗಿದೆ, ಪ್ರಶ್ನೆಗಳಿಂದ ಚಿಂತನೆಯು ಗುಣಾಕಾರದಂತೆ ಅಸಂಖ್ಯಪಟ್ಟು ವೃದ್ಧಿಯಾಗುವುದು.  ಚಿಂತನೆ ತಿಳಿದೊ ಅಥವಾ ತಿಳಿಯದೆಯೋ ತರ್ಕದ ಹಾದಿಯಲ್ಲಿ ಸಾಗುವುದು, ಈ ಪ್ರಕ್ರಿಯೆಯ   ಹಾದಿಯು ವಿಶ್ಲೇಷಣೆಯಿಂದ ಹಿಡಿದು, ಉಪಾಯ, ನಿಧರ್ಾರ, ಮನೋಭಾವ, ಜ್ಞಾನ ,ಅಥವಾ ಸಮಸ್ಯೆಯ ಪರಿಹಾರದವರೆಗೂ  ಸಾಗುವುದು.  ಇನ್ನು ಅದರಾಚೆಗೂ ಸಾಗುವುದು .ಚಿಂತನೆಗೆ ತರ್ಕವೇ ಮಾರ್ಗದರ್ಶಕ , ನಮ್ಮ ಚಿಂತನೆ ತರ್ಕಬದ್ದವಾದಷ್ಟು  ನಾವು ಇನ್ನು ಅತ್ಯುತ್ತಮವಾಗಿ ಚಿಂತನೆ ನಡೆಸಬಲ್ಲೆವು. ಪರಿಣಾಮವಶಾತ್ ಉತ್ತಮ  ಜ್ಞಾನವು ದೊರೆಯುವುದು.
 ಚಿಂತನೆಯು ಒಂದು ಕಲೆಯಾಗಿದೆ, ಯಾವುದೆ ಕಾರ್ಯದಂತೆ ವ್ವವಸ್ಥಿತವಾಗಿ ಚಿಂತನೆಮಾಡಬಹುದಾಗಿದೆ, ಚಿಂತನೆಯಿಂದಲೇ ನಿಜವಾದ ಕಲಿಕೆಯು ಆರಂಭವಾಗುವುದು, ಚಿಂತನೆಯು ನಂಬಲಾಗದಷ್ಟು ಪಲಿತಾಂಶವನ್ನು ನೀಡುವುದು, ಮಾನವನ ವಿಮುಕ್ತಿಯ ಮಾರ್ಗವು ಚಿಂತನೆಯಿಂದಲೆ ಆರಂಭವಾಗುವುದು, ಚಿಂತನೆಗೂ ಹಾಗು ನಿಧರ್ಾರಗಳಿಗೂ ಪರರನ್ನು ಅವಲಂಬಿಸುವುದು ದಾಸ್ಯತ್ವದ ಪರಮಾವಧಿಯೆ ಸರಿ. ಭಗವಾನ್ ಬುದ್ಧರು, ಸಾಕ್ರಟೀಸ್, ಜಿದ್ದು ಕೃಷ್ಣಮೂತರ್ಿ ರಂತಹ ಮಹನೀಯರು ಮಾತ್ರ ಸ್ವಯಂ ಚಿಂತನೆಮಾಡಿ ಅಭಿವೃದ್ಧಿಯಾಗಬೇಕೆಂದು ಪ್ರೇರೆಪಿಸಿದರು, ಸ್ವಯಂ ಆಗಿ ಚಿಂತಿಸುವವನೇ ಮೊದಲ ಶ್ರೇಣಿಯ ಮಾನವ ಎಂದು ಜಿದ್ದು ಕೃಷ್ಣಮೂತರ್ಿಯ ಪ್ರಧಾನ ಬೋಧನೆಯಾಗಿತ್ತು.    24 ಗಂಟೆಗಳ ನಿಂತುಕೊಂಡೇ ತಕರ್ಿಸುತ್ತ  ತನ್ನ ಪ್ರಶ್ನೆಗಳಿಗೆ ತಾನೇ ಪರಿಹಾರ ಸಿಗುವವರೆವಿಗೂ ಉತ್ತರ ಪಡೆಯುತ್ತಿದ್ದ ಸಾಕ್ರಟೀಸ್ ತುಂಬ ಖ್ಯಾತಿಗಳಿಸಿದ್ದನು. ಬುದ್ಧಭಗವಾನರು  49 ದಿನಗಳ ಕಾಲ ಸ್ವಯಂ ಆಗಿಯೆ ಯಾರ ಸಹಾಯವು ಇಲ್ಲದೆ ಸಂಯಕ್ ಸಂಬೋಧಿಯ ಶ್ರೇಷ್ಟ ಜ್ಙಾನವನ್ನು  ಗಳಿಸಿದರು ,ಪರರು ಸಹಾ ಇದೇ ರೀತಿ ಪ್ರಯತ್ನ ಪಟ್ಟರೆ ತನ್ನಂತೆ ಆಗಬಹುದು ಎಂದು ಹೇಳಿದರು..
ಚಿಂತನೆ ಏತಕ್ಕಾಗಿ
ಅವಶ್ಯಕತೆಯೆ ಚಿಂತನೆಗೆ ಮೂಲವಾಗಿದೆ. ಆ ಅವಶ್ಯಕತೆಯು  ಕುತೂಹಲವಾಗಿರಬಹುದು, ಸಮಸ್ಯೆಯಾಗಿರಬಹುದು, ಸತ್ಯಶೋಧನಾಸಕ್ತಿಯಾಗಿರಬಹುದು. ಇನ್ನೂ ಉನ್ನತ ಸುಖದ ಹುಡುಕಾಟವಾಗಿರಬಹುದು. ಅಥವಾ ಅಕಸ್ಮಿಕ ಘಟನೆಯು ಆಗಿರಬಹುದು, ಉಧಾಹರಿಸುವುದಾದರೆ  ನೂಟನ್ನನು ಆಫಲ್ ಮರದಕೆಳಗಿದ್ದಾಗ ಆಫಲ್ ಕೆಳಗೆ ಬಿದ್ದಾಗ ಆತ ನಡೆಸಿದ ಯೋಗ್ಯ ಚಿಂತನೆಯಿಂದ ಶ್ರೇಷ್ಠ ಗುರುತ್ವಾಕರ್ಷಣೆಯ ಸತ್ಯ ಹೋರಹೊಮ್ಮಲಿಲ್ಲ್ಲವೆ ? ಚಿಂತನೆಯಿಂದಲೇ ಸತ್ಯ ಹೋರಹೊಮ್ಮವುದು ಬೇರೆ ಮಾರ್ಗವೆ ಇಲ್ಲ. ಅಕರ್ಿಮಿಡಿಸ್ ನು ತೇಲುವ ತತ್ವವನ್ನು ಕಂಡುಹಿಡಿಯುವಾಗ ಸ್ನಾನದ ಕೋಠಡಿಯಿಂದ 'ಯುರೆಕಾ" ಎಂದು ಆನಂದದೋದ್ಗಾರ ಮಾಡುತ್ತಾ ಹೊರ ಬಂದಿದ್ದು  ಎಲ್ಲರಿಗೂ ಗೋತ್ತೆ ಇದೆ. ಈಗಂತು  ಉದ್ದೇಶಪೂರ್ವಕವಾಗಿಯು ಚಿಂತನೆ ನಡೆಸಿ ಅನೇಕನೇಕ ಸಂಶೋಧನೆಗಳನ್ನು ಈಗ ಹೂರಹಾಕುತಿದ್ದಾರೆ. ವೈಜ್ಞಾನಿಕ ಚಿಂತನೆಯಿಂದ ಮಹಾ ಸೇತುವೆಗಳು ನಿಮರ್ಾಣವಾದರೆ, ತಾತ್ವಿಕ ಚಿಂತನೆಯಿಂದ ಜೀವನದ ಮಾರ್ಗಗಳೇ ರೂಪಿತಗೊಂಡಿವೆ, ವೈಜ್ಞಾನಿಕ ಚಿಂತನೆಗಳಿಂದ ಬಲ್ಪುಗಳು ಅನ್ವéೇಷಿಸ್ಪಟ್ಟರೆ,  ತಾತ್ವಿಕ ಚಿಂತನೆಯಿಂದ ಜಗತ್ತಿಗೆ ಮಹಾ ಬೆಳಕು ನೀಡಲ್ಪಟ್ಟಿದೆ, ವೈಜ್ಞಾನಿಕ ಚಿಂತನೆಯಿಂದ ನ್ಯೂಕ್ಲಿಯರ್ ಪ್ಲಾಂಟ್ ಗಳು ನಿಮರ್ಾಣಗೊಂಡರೇ ತಾತ್ವಿಕ ಚಿಂತನೆಯಿಂದಾಗಿ ಜೀವಿಸಲು , ಉನ್ನತರಾಗಲು, ಮಾನಸಿಕ ಬಲಿಷ್ಟತೆ ಪಡೆಯುವಂತಾಯಿತು, ಚಿಂತನೆಗಳು ಕೇವಲ ವಿಜ್ಞಾನಿಗಳಿಗೆ  ಅಥವಾ   ತಾತ್ವಿಕರಿಗೆ ಮಾತ್ರವಲ್ಲ ,ಮಾತ್ರವಲ್ಲ  ಜನಸಮಾನ್ಯರು ಮಾಡಲೇ   ಬೇಕಾಗಿರುವಂತಹದ್ದಾಗಿದೆ. ಎಕೆಂದರೆ ಸಮಾನ್ಯ ಜೀವನದಲ್ಲು ಸಹಾ ಯೋಗ್ಯ ದೃಷ್ಟಿಕೋನಕ್ಕೆ ವಿಮಷರ್ೆಯು, ವೃತ್ತಿಯ ಅಭಿರುದ್ಧಿಗೆ ಸೃಜನಾತ್ಮಕತೆಯು, ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಾತ್ಮಕ ಚಿಂತನೆಯು ಅತ್ಯವಶ್ಯಕವಾಗಿದೆ. ಅಸಾಧರಣ ವ್ಯಕ್ತಿಗಳು ಸಮಸ್ಯೆಗಳ ಪರಿಹಾರಕ್ಕೆ ಚಿಂತನೆಯನ್ನೆ ಅವಲಂಬಿಸುತ್ತಾರೆ, ಹಾಗು ಅದರಲ್ಲೆ ಅಪಾರ ಶಕ್ತಿ ಪಡೆಯುತ್ತಾರೆ. ಬಲಿಷ್ಟ ವ್ಯಕ್ತಿತ್ವದ ನಿಮರ್ಾಣಕ್ಕೆ ಚಿಂತನೆ ಅತ್ಯವಶ್ಯಕವಾಗಿದೆ.
     ಕೆಲವೊಮ್ಮೆ  ದೃಶ್ಯಗಳು ಸಹಾ ಚಿಂತನೆಗೆ ಮಹಾ ಪ್ರೇರಣೆಯಾಗಬಲ್ಲದು. ಉದಾಹರಿಸುವುದಾದರೆ ಬುದ್ಧಭಗವಾನರು ರಾಜಕುಮಾರರಾಗಿದ್ದಾಗ ಅವರು ಕಂಡಂತಹ ರೋಗಿ, ವೃದ್ಧ, ಶವ ಹಾಗು ಸಂನ್ಯಾಸಿಯ ದೃಶ್ಯವು ಅವರಲ್ಲಿ ಅಪಾರ ವೈರಾಗ್ಯವನ್ನುಂಟು ಮಾಡಿ ಮುಂದೆ ಸಂಭೋದಿಪ್ರಾಪ್ತಿಗೆ ಕಾರಣವಾಯಿತು.
       "ನಿಮಿಷಮಾತ್ರದಲ್ಲಿ ಜೀವನವನ್ನು ಬಲಾಯಿಸುವುದು ಹೇಗೆ ?" ಎಂದು ಅಂಗ್ಲ ಲೇಖಕನೊಬ್ಬನು ಬರದಿದ್ದಾನೆ.ಚಿಂತನೆಯು ಜೀವನವನ್ನು ಹೇಗೆ ಮಾರ್ಪಡಿಸಬಲ್ಲದು ಎಂಬುದಕ್ಕೆ ಈ  ಪುಸ್ತಕದ ಹೆಸರು ಸಹಾ ಸ್ಪೂತರ್ಿಯಾಗಬಲ್ಲದಲ್ಲವೆ ? ಯಾವುದೇ ವ್ಯಕ್ತಿಯು ಯಾವುದೆ ರಂಗದಲ್ಲಿ ಯಶಸ್ಸು ಸಾಧಿಸಿದ್ದಾನೆ ಎಂದರೆ ಅತನ ವ್ಯಕ್ತಿತ್ವವು ಅಷ್ಟರ ಮಟ್ಟಿಗೆ ವಿಕಸಿತವಾಗಿದೆ ಎಂದೆ ಅರ್ಥವಾಗುವುದು, ಎಕೆಂದರೆ ಉನ್ನತ ಮನೋಭಾವವಿಲ್ಲದೆ ಉನ್ನತ ಶಿಖರವೇರಲು ಸಾಧ್ಯವಿಲ್ಲ, ಹಾಗೆಯೇ ಉನ್ನತ ಚಿಂತನೆಯಿಲ್ಲದೆ ಉನ್ನತ ಮನೋಭಾವವು ಸಹಾ  ಉಂಟಾಗಲಾರದು ಒಬ್ಬನು ಯೋಗ್ಯವಾಗಿ ನಿಸ್ಪಕ್ಷಪಾತವಾಗಿ ಚಿಂತನೆ ಮಾಡಿದಾಗ ಆತನಲ್ಲಿ ಸಂದೇಹ, ದಂದ್ವ ಹಾಗು ಮೌಡ್ಯತೆಗಳು ಅಳಿದು ಯೋಗ್ಯ ದೃಷ್ಟಿಕೋನ ಉಂಟಾಗುತ್ತದೆ, ನಂತರ ಯೋಗ್ಯ ದೃಷ್ಟಿಕೋನದಿಂದಾಗಿ ಆತನು ಯೋಗ್ಯ ನಿಧರ್ಾರ ತೆಗೆದುಕೊಳ್ಳುತ್ತಾನೆ, ಯೋಗ್ಯ ನಿಧರ್ಾರದಿಂದಾಗಿ ಆತನ ಕಾರ್ಯಗಳು ಹಾಗು ಮಾತುಗಳು ಸರಿಯಾಗಿರುತ್ತವೆ, ಅದರ ಪಲಿತಾಂಶವಾಗಿ ಎಲ್ಲವೂ ಒಳಿತೆ ಅಗುವುದು. ಹೀಗಾಗಿ ಯೋಗ್ಯ ಚಿಂತನೆಯು ಪರಮ ಪ್ರಾಧಾನ್ಯತೆಯನ್ನು ಪಡೆಯುತ್ತದೆ.
        ಚಿಂತನೆಯಿಂದ ನಮಗೆ ನಿಧರ್ಾರಶಕ್ತಿ ಸಿಗುತ್ತದೆ, ಕೆಲವಮ್ಮೆ ನಾವು ನಿಧರ್ಾರ ತಗೆದುಕೊಳ್ಳಲು ಆಗದೆ ಪರರಲ್ಲು ಆಶ್ರಯ ಪಡೆಯಲು ಹೋಗುತ್ತೇವೆ, ಅಲ್ಲಿ ಯೋಗ್ಯ ಸಲಹೆ ಸಿಕ್ಕರೆ ಪರವಾಗಿಲ್ಲ ಬದಲಾಗಿ ಇನ್ನಷ್ಟು ಹಾನಿಯಾಗುವಂತಹ ಮಿಥ್ಯ ಸಲಹೆ ಸಿಕ್ಕಿದಾಗ ಅನಾಹುತ ತಪ್ಪಿದ್ದಲ್ಲ, ನಮ್ಮ ಚಿಂತನೆ ತರ್ಕಬದ್ದವಾದಷ್ಟು  ನಾವು ಇನ್ನು ಅತ್ಯುತ್ತಮವಾಗಿ ಚಿಂತನೆ ನಡೆಸಬಲ್ಲೆವು. ಪರಿಣಾಮವಶಾತ್ ನಾವು ಉತ್ತಮ ನಿಧರ್ಾರ ಕೈಗೊಳ್ಳಬಹುದು, , ಅದರಿಂದಾಗಿ ಉತ್ತಮ ಜೀವನ ನಡೆಸಬಹುದಾಗಿದೆ. ಅದರೆ ಯೋಗ್ಯ ಚಿಂತನೆಯಿಂದ, ಹಾಗು ತರ್ಕಭರಿತ ಸೂತ್ರಗಳ ಆಧಾರಿತವಾಗಿ ಚಿಂತನೆ ಸಾಗಿದಾಗ ಅಗ ಖಂಡಿತವಾಗಿಯು ಯೋಗ್ಯ ನಿಧರ್ಾರದ ಉತ್ಪನ್ನವು ಸಿಕ್ಕೆಸಿಗುವುದು.
       ಪ್ರತಿ ಮಾನವನು ಕಡ್ಡಾಯವಾಗಿ ಚಿಂತನೆ ಮಾಡಬೇಕಾಗಿರುವ ವಿಷಯಗಳಿವೆ. ಅದೇಂದರೆ ತನ್ನ ಆರೋಗ್ಯದ ಬಗ್ಗೆ ,ಮಾನಸಿಕ ನೆಮ್ಮದಿಯ ಬಗ್ಗೆ ,ತನ್ನ ಕುಟುಂಬದ ಬಗ್ಗೆ ,ತನ್ನ ವೃತ್ತಿಯ ವೃದ್ಧಿಯ ಬಗ್ಗೆ, ಸಮಾಜದ ಬಗ್ಗೆ, ತನ್ನ ಬೌದ್ಧಿಕ ವಿಕಾಸದ ಬಗ್ಗೆ, ಹಾಗು ತನ್ನ ಮಾನಸಿಕ ವಿಕಾಸದ ಬಗ್ಗೆ , ತನ್ನ ನಡವಳಿಕೆಯ ಬಗ್ಗೆ, ಒಟ್ಟಾರೆ ವ್ಯಕ್ತಿತ್ವದ ವಿಕಾಸದ ಬಗ್ಗೆ ಆತನು ಚಿಂತನೆ ಮಾಡಲೇಬೇಕು ಇಲ್ಲದಿದ್ದರೆ ಆತನ ಅಭಿರುದ್ಧಿಯು ಆಗಲಾರದು.
ಚಿಂತನೆಯ ವೈವಿಧ್ಯತೆಗಳು
ಚಿಂತನೆಗಳಲ್ಲಿ ಹಲವಾರು ವೈವಿಧ್ಯತೆಗಳಿವೆ, ಅದರೆ ಇಲ್ಲಿ  ನಾನು ಕೇವಲ 3 ಬಗೆಯ ಚಿಂತನೆಗಳ ಬಗ್ಗೆ ಮಾತ್ರ ತಿಳಿಸಲು ಹೋಗಿದ್ದೇನೆ.
ಸೃಜನಾತ್ಮಕ ಚಿಂತನೆ:ಈ ಬಗೆಯ ಚಿಂತನೆಯಿಂದಲೇ ಮಾನವನು ಇಡೀ ಸೃಷ್ಟಿ ನಿಮರ್ಿಸಿದ್ದಾನೆ.ಅದು ಆಹಾರವಾಗಿರಬಹುದು, ಉಡುವ ಸುಂದರ ವಸ್ತ್ರವಾಗಿರಬಹುದು, ಇರುವ ಮನೆ,ಬಂಗಲೆಗಳಾಗಿರಬಹುದು,  ಔಷಧಿಯಾಗಿರಬಹುದು ಅಥವಾ ಇಂದ್ರೀಯಗಳನ್ನು  ತೃಪ್ತಿಗೊಳಿಸುವ ಟಿ.ವಿ., ರೇಡಿಯೊ,ಸಿನಿಮಾ,ಡಿ.ವಿ.ಡಿ., ಇತ್ಯಾದಿಗಳಾಗಿರಬಹುದು, ಯಾವುದೆ ವಾಹನವಾಗಿರಬಹುದು.ವಿಜ್ಞಾನಿಗಳಂತು ತಮ್ಮ ಸೃಜನಾತ್ಮಕ ಚಿಂತನೆಗಳಿಂದಾಗಿ  ನಿತ್ಯವೂ ನವನವೀನ ಸಂಶೋದನೆಗಳು  ಅಥವಾ ಆವéಿಷ್ಕಾರಗಳನ್ನು ಮಾಡುತ್ತಲೇ ಇದ್ದಾರೆ. ಸೃಜನಾತ್ಮಕ ಚಿಂತನೆಗಳಿಂದ ವಿಜ್ಞಾನಿಗಳಷ್ಟೇ ಅಲ್ಲದೆ ಸಾಹಿತಿಗಳು,ಕಲೆಕಾರರು, ಶಿಲ್ಪಿಗಳು ವೃತ್ತಿಪರರು,ನಿದರ್ೇಶಕರು ಇನ್ನಿತರರು ತಿಳಿದೊ ತಿಳಿಯದೆಯೊ ಹೊಸತನ್ನು ನೀಡುತ್ತಿದ್ದಾರೆ, ಈ ಬಗೆಯ ಚಿಂತನೆಗಳಿಗೆ ಅಪಾರ ಕಲ್ಪನಾಶಕ್ತಿ ಬೇಕಾಗುತ್ತದೆ ಅಥವಾ ವೃದ್ಧಿಸಬೇಕಾಗುತ್ತದೆ. ಎಡಿಸನ್ನನು ವಿಧ್ಯುತ್ ದೀಪವನ್ನು ಕಂಡು ಹಿಡಿದಿದ್ದುದು ಹೀಗೆಯೆ ಅಲ್ಲವೆ ? ಚಿಂತನೆಗಳಿಂದ ಕೇವಲ ಆವಿಷ್ಕಾರಗಳು ಹಾಗು ಸಂಶೋಧನೆಗಳಷ್ಟೆ  ಅಲ್ಲದೆ ಕಲೆ, ಸಾಹಿತ್ಯ, ಸಂಗೀತ ಇತ್ಯಾದಿ ಕ್ಷೇತ್ರಗಳು ಸಹಾ ಅಭಿವೃದ್ಧಿಗೊಂಡಿದೆ.
ಸೃಜನಾತ್ಮಕ ಆವಿಷ್ಕಾರಗಳು  ಪೂರ್ಣವಾಗಿ ನವೀನವಾಗಿರಬಹುದು, ಅಥವಾ ಹೂಸ ಬಗೆಯಲ್ಲಿ ನಿರೂಪಿಸಿರಬಹುದು. ಈ ಬಗೆಯ ಚಿಂತನೆಯಲ್ಲಿ ಹಲವಾರು ಬಗೆಯಲ್ಲಿ ಪರಿಹಾರ ಶೋಧಿಸುತ್ತಾರೆ, ಇದಕ್ಕಾಗಿ ತರ್ಕಯುತವಾಗಿ ಅಥವಾ ಅಸಂಬದ್ಧವಾದ ವಿಧದಲ್ಲಿಯು ಸಂಶೋಧನೆ ಹಾಗು ಆವಿಷ್ಕಾರ ಮಾಡಲಾಗುತ್ತದೆ. ಈ ವಿಧದ ಚಿಂತನೆಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೆ ನಿಯಮತೀತರಾಗುತ್ತಾರೆ, ಈ ಬಗೆಯ ಚಿಂತನೆಯಲ್ಲಿ ಕಲ್ಪನೆಯು ಯತೇಚ್ಚವಾಗಿ ಬಳಕೆಯಾಗುತ್ತದೆ, ಕೆಲವೋಮ್ಮೆ  ಇಲ್ಲಿ  ಇರುವಂತಹ 2 ಆಥವಾ 3ರನ್ನು ಸಂಯೋಜಿಸಿ ಹೂಸತನ್ನು ಸೃಷ್ಟಿಸುತ್ತಾರೆ, ಅಥವಾ ಎರ್ರಬಿರ್ರಿಯಾಗಿ ಜೋಡಿಸಿ ಹೋಸತನ್ನು ಸೃಷ್ಟಿಸುತ್ತಾರೆ, ಅಥವಾ ಇರುವುದರಲ್ಲಿ ಕೆಲವೂಂದನ್ನು ಕತ್ತರಿಸಿ ಹೋಸತು ಸೃಷ್ಟಿಸುತ್ತಾರೆ, ಅಥವಾ ಪರ್ಯಾಯ ಚಿಂತನೆಯ ಬಳಕೆಯಿಂದಲೂ  ಹೋಸತನವನ್ನುಂಟು ಮಾಡುತ್ತಾರೆ ,ಅಥವಾ ತೀರ ವಿರುದ್ಧವಾಗಿ ಚಿಂತನೆ ಮಾಡಿ ಹೋಸತನ ಪ್ರದ್ರಶರ್ಿಸುತ್ತಾರೆ, ಅಥವಾ ವಿಸ್ತರಿಸಿ ,ವ್ಯಾಖ್ಯಾನಿಸಿ ಸೃಜನಾತ್ಮಕತೆಯನ್ನು ಪ್ರದಶರ್ೀಸುತ್ತಾರೆ.
2.ವಿಮಶರ್ಾತ್ಮಕ ಚಿಂತನೆ:  ವಿಚಾರಶೀಲರು,ಸತ್ಯಾನ್ವೇಷೀಗಳು, ಪತ್ತೇದಾರರು, ಟೀಕಕಾರರು, ವೈಜ್ಞಾನಿಕ ಮನೋಭಾವದವರು ಇನ್ನಿತರರು  ಈ ಬಗೆಯ ಚಿಂತನೆಯನ್ನು ಹೆಚ್ಚಾಗಿ ಮಾಡುವರು. ಈ ಬಗೆಯ ಚಿಂತನೆಯಿಂದಾಗಿ ಸತ್ಯ ಹೊರಹೊಮ್ಮುವುದರಿಂದಾಗಿ ಮನುಕುಲಕ್ಕೆ ಆಪಾರ ಒಳಿತಾಗುತ್ತಾ ಇದೆ. ಇಲ್ಲಿ ಸತ್ಯವನ್ನು ಮಿಥ್ಯದಿಂದ  ಬೇರ್ಪಡಿಸುತ್ತಾರೆ, ನಿಜಕ್ಕೂ ಬಹಳಷ್ಟು ಜನರು ನಿಸ್ಪಕ್ಷಪಾತಿಗಳಾಗಿರುವುದಿಲ್ಲ, ಅವರು ತಾವು ನೋಡಿದ್ದನ್ನು, ಕೇಳಿದ್ದನ್ನು, ಯೋಚಿಸಿದನ್ನು , ಹಾಗು ನಂಬಿದ್ದನ್ನೇ ನಿಜವೆಂದು ಸಾಧಿಸಲು ಹೋಗುತ್ತಾರೆ, ಅಂತಹವರು ಎಂದಿಗೂ ವಿಮಶರ್ಾತ್ಮಕ ಚಿಂತಕರಾಗಲು ಸಾಧ್ಯವಿಲ್ಲ, ಎಕೆಂದರೆ ಅವರು ತೆರೆದ ಮನಸ್ಕರಾಗಿರುವುದಿಲ್ಲ, ಅವರು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ, ಅಷ್ಟೇ ಏಕೆ ಪರರ ಚಿಂತನೆಗೆ ಗೌರವವೂ ನೀಡುವುದಿಲ್ಲ, ತಾವು ಕಲ್ಪಿಸಿದ್ದೇ ಅಥವಾ ನಂಬಿರುವುದೆ ಸತ್ಯ ಹೊರತು ಅನ್ಯಥಾ ಸಾಧ್ಯವಿಲ್ಲ ಎಂದು  ಭಾವಿಸುತ್ತಾರೆ, ಅದರೆ ಸತ್ಯವು ಸುಂದರವಾಗಿರಬೇಕೇಂದೇನೂ ಇಲ್ಲ, ಅದು ಕುರೂಪವೂ ಅಗಿರುತ್ತದೆ, ಸತ್ಯವೂ ಶುಭವಾಗಿರಬೇಕೆಂದೇನೂ ಇಲ್ಲ, ಅದು ಅಶುಭವೂ ಅಗಿರಬಲ್ಲದು, ಸತ್ಯವೂ ಸಿಹಿಯಾಗಿರ ಬೇಕೆಂದೇನೂ ಇಲ್ಲ, ಅದು ಕಹಿಯಾಗಿರಬಹುದು, ಹೀಗೆ ಸರಿಯಾಗಿ ಪರೀಕ್ಷೀಸಿತ್ತಾ, ಸಂಶೋಧಿಸುತ್ತಾ, ವಿಮಶರ್ಾವಾದಿಗಳು ಮಿಥ್ಯದಿಂದ ಸತ್ಯವನ್ನು ಬೇರ್ಪಡಿಸುತ್ತಾರೆ.ಹೀಗಾಗಿ ಸತ್ಯವೆಂದರೆ ತೋರಿಕೆಗೆ ಕಾಣಿಸುವದಷ್ಟೇ ಅಲ್ಲ ,ಅದರಾಚೇಗೂ ಅ(ನಾ)ವರಣ ಜ್ಞಾನವಿದೆ, ಎಂದು ವಿಮರ್ಶಕರು ಪರೀಕ್ಷೀಸಿ ,ವಗರ್ೀಕರಿಸಿ, ವಿಭಾಜಿಸಿ ಸತ್ಯವನ್ನು ನೀಡುತ್ತಾರೆ.
ವಿಮಷಾತ್ಮಕ ಚಿಂತಕರು ತೆರೆದ ಮನಸ್ಕರಾಗಿರ ಬೇಕಾಗುತ್ತದೆ, ಅವರು ಬೌದ್ಧಿಕವಾಗಿ ಸ್ವತಂತ್ರರಾಗಿರ ಬೇಕಾಗುತ್ತದೆ, ಅವರಲ್ಲಿ ಪ್ರಶ್ನಿಸುವ ಸಾಮರ್ಥವಿರಬೇಕಾಗುತ್ತದೆ, ಸಾಕ್ಷೀಯನ್ನು ಪರಿಗಣಿಸಿ ನಿರ್ಣಯಗಳನ್ನು ತಗೆದುಕೊಳ್ಳ ಬೇಕಾಗುತ್ತದೆ, ಅವರು ವಿಷಯಗಳಲ್ಲಿ ಸಂಪರ್ಕವನ್ನು ಅಥವಾ ಸಂಪರ್ಕರಹಿತತೆಯನ್ನು ಸ್ಪಷ್ಟವಾಗಿ ತಿಳಿಯ ಬೇಕಾಗುತ್ತದೆ, ಅವರು ಬಹುಷಃ ಇದೇ ಹಾಗು ನಿಖರವಾಗಿ ಇದೇ ಎಂಬಂತಹದರಲ್ಲಿ  ವ್ಯತ್ಯಾಸ ತಿಳಿಯುವ ಸಾಮಾರ್ಥವಂತರಾಗಬೇಕಾಗುತ್ತದೆ, ಅವರು ವಾಸ್ತವಗಳಿಂದ ಅಭಿಪ್ರಾಯಗಳನ್ನು ನಿದರ್ಾಕ್ಷೀಣ್ಯವಾಗಿ ತೆಗೆಯುವಂತಹವರಾಗಿರಬೇಕು, ಅವರಲ್ಲಿ ಹೇರಳವಾದ ಶಬ್ದಭಂಡಾರವಿದ್ದರೆ ಒಳಿತು, ಅವರು ವಾಗ್ಮಿಗಳಾಗಿದ್ದರೆ ಚೆನ್ನ. ಈ ಬಗೆಯ ಗುಣಗಳಿದ್ದವರು ವಿಮಷಾತ್ಮಕ ಚಿಂತಕರಾಗುತ್ತಾರೆ.
3. ಪರಿಣಾಮಾತ್ಮಕ ಚಿಂತನೆ: ಈ ಬಗೆಯ ಚಿಂತನೆಯನ್ನು  ಸಮಸ್ಯೆಗಳ ಪರಿಹರಿಸಲು ಬಳಸುತ್ತಾರೆ, ಈ ಬಗೆಯ ಚಿಂತನೆಯನ್ನು ಹೆಚ್ಚಾಗಿ ವೈದ್ಯಕೀಯದಲ್ಲಿ, ತರ್ಕನೈಪುಣ್ಯತೆಯಲ್ಲಿ,ಗಣಿತದಲ್ಲಿ,ಹಾಗು ವೈಜ್ಞಾನಿಕ ಸಂಶೋಧನೆಯಲ್ಲಿ ಬಳಸುತ್ತಾರೆ. ಈ ಚಿಂತನೆಯು ನಿಖರಿತ ತರ್ಕ ಆಧಾರಿತವಾಗಿರುತ್ತದೆ, ಉದಾಹರಿಸುವುದಾದರೆ ಚೀನಾದ ಲೆಖ್ಖಿಗನೊಬ್ಬನು ಸೂರ್ಯನಿಂದಾಗುವ ನೆರಳನ್ನು ಗಮನಿಸಿ ಆ ಆಧಾರದಿಂದಲೇ ರೇಖಗಣಿತದ ಸೂತ್ರಗಳ ಮೂಲಕವೇ ಆತನು ಸೂರ್ಯ ಹಾಗು ಭೂಮಿಯ ಅಂತರವನ್ನು ತಿಳಿಸಿದ್ದನು. ವೈದ್ಯ ವಿಜ್ಞಾನಿಗಳು ರೋಗ ಲಕ್ಷಣ, ರೋಗಕ್ಕೆ ಕಾರಣ, ಆರೋಗ್ಯ, ಹಾಗು ಔಷಧಿಗಳ ಬಗ್ಗೆ ಪ್ರಯೋಗಿಕ ಚಿಂತನೆಯನ್ನು ತರ್ಕಬದ್ಧವಾಗಿ ನಡೆಸಿ ರೋಗವನ್ನು ಪರಿಣಾಮಾತ್ಮಕವಾಗಿ ಹೋಗಲಾಡಿಸುತ್ತಿರುವರು. ಪರಿಣಾಮಾತ್ಮಕ ಚಿಂತನೆಯಲ್ಲಿ ಒಂದು ಸಮಸ್ಯೆಗೆ ಹಲವಾರು ರೀತಿಯಲ್ಲಿ ಪರಿಹಾರಗಳನ್ನು ನೀಡಿ ಅದರಲ್ಲಿ ಅತ್ಯುತ್ತಮವಾದುದ್ದನ್ನೆ ಆಯ್ಕೆ ಮಾಡುತ್ತಾರೆ. ಈ ಬಗೆಯ ಚಿಂತನೆಯಲ್ಲಿ ಸಮಸ್ಯೆಗೆ ಹಲವಾರು ಕಾರಣಗಳನ್ನು ಕಂಡುಹಿಡಿಯಬೇಕಾಗುತ್ತದೆ, ಹಾಗೆಯೆ ಸಮಸ್ಯೆಗೆ ಹಲವಾರು ವಿಧದ ಪರಿಹಾರ ಮಾರ್ಗಗಳನ್ನು ಕಂಡಿಹಿಡಿಯಬೇಕಾಗುತ್ತದೆ.
ಒಂದೇ ವಿಷಯವಸ್ತು , ಅದರೆ  ಚಿಂತನೆಯ ವೈವಿಧ್ಯತೆ ಅನೇಕ
ಒಂದೇ ಚಿಂತನೆಯ ವಿಷಯವು ವಿವಿದ ಬಗೆಯ ಚಿಂತಕರಲ್ಲಿ ವೈವಿಧ್ಯಮಯ ಚಿಂತನೆಗೆ  ದಾರಿ ಮಾಡಿಕೊಡುತ್ತದೆ, ಉದಾಹರಿಸುವುದಾದರೆ
 1. ಒಬ್ಬ ಪಾಪಿಗೆ ದೀಪವೂ ದ್ವಂಸಕಾರಿ  ಯೋಚನೆಗಳನ್ನು ತರಿಸಬಹುದು
 2. ಅದೇ ಸಮಾನ್ಯ ದೀಪವು ಎಡಿಸನ್ನನಿಗೆ ವಿದ್ಯುತ್ ದೀಪ ಕಂಡು ಹಿಡಿಯಲು ಸಹಕಾರಿಯಾದರೆ,
 3. ಐನ್ ಸ್ಟೈನ್ ನಂತಹ ವಿಜ್ಞಾನಿಗೆ ದೀಪವು ಬೆಳಕಿನ ಸ್ವರೂಪದ ಬಗ್ಗೆ ಚಿಂತಿಸಲು ಪ್ರೇರೆಪಣೆ ನೀಡಿ ಬೆಳಕು 'ಕಣ' ಮಾತ್ರವಲ್ಲ ಅದು 'ಅಲ ೆಯು' ಸಹಾ ಎಂದು ಪ್ರತಿಪಾದಿಸಿದನು
,4. ಒಬ್ಬ ಯೋಗಿಗೆ ದೀಪವು ಧ್ಯಾನದ ವಸ್ತುವಾಗಿ ಕೇವಲ ಎಕಾಗ್ರತೆಯನ್ನು ವೃದ್ಧ್ಧಿಸಿ ದಿವ್ಯ ದೃಷ್ಟಿಗೆ ಸಹಾಯಕಾರಿಯಾಯಿತು,
 5. ಮಗುವನ್ನು ಕಳೆದುಕೊಂಡತಹ  ಕಿಸಗೋತಮಿಯು ಬುದ್ದರ ಬಳಿಗೆ ಬಂದಾಗ ಬುದ್ಧರು ಆಕೆಗೆ ಸಾಸುವೆಯನ್ನು ಕೇಳಿ ಆಕೆಯ ಮನವನ್ನು ಶಾಂತಗೊಳಿಸಿದ್ದು ಎಲ್ಲರಿಗೂ ತಿಳಿದೆ ಇದೆ, ಅದರೆ ಇದೇ ಕಿಸಾಗೋತಮಿಯು ಒಮ್ಮೆ ದೀಪಗಳನ್ನು ನೋಡುತ್ತಾ ಹೀಗೆ  ಧ್ಯಾನಿಸಿದಳು "ಈ ದೀಪಗಳಂತೆ ಲೋಕದಲ್ಲಿರುವ ಜೀವಿಗಳು ಸಹಾ; ಹೇಗೆಂದರೆ ಕೇಲವೊಂದು ಪ್ರಜ್ವಲಿಸಿ ಉರಿಯುತ್ತಿರುತ್ತವೆ, ಕೆಲವು ಮಿಣಕುಮಿಣೆನ್ನುತ್ತಾ ಉರಿಯುತ್ತವೆ, ಅದರೆ ನಿಬ್ಬಾಣವನ್ನು ಸಾಧಿಸಿರುವವರು ಎಂದಿಗೂ ಕಾಣಲಾರರು. ಅಂತಹ ಅಮರತ್ವವನ್ನು ಅರಿಯುವ ಏಕ ದಿನವೂ ಪರರ ನೂರು ವರ್ಷದ ಜೀವನಕ್ಕಿಂತ ಉತ್ತಮವಾದದು..." ಎಂದು ಚಿಂತನೆ ಮಾಡುತ್ತಾ ಆಕೆಯು ಜ್ಞಾನೋದಯ ಪ್ರಾಪ್ತಿಗಳಿಸಿ ಪರಮಾರ್ಥವನ್ನು ಸಾಧಿಸಿದಳು.
6.ಮಹಾನ್ ಭವಿಷ್ಯಕಾರ ನಾಷ್ಟ್ರೋಡಮಸ್ ದೀಪವನ್ನು ವೀಕ್ಷಿಸುತ್ತಲೇ ಅಪಾರ ಭವಿಷ್ಯವಾಣಿಗಳನ್ನು ಕಂಡು ಅದನ್ನು ರಚಿಸಿ ಸುಖ್ಯಾತನಾದನು.
7.ಚಿತ್ರಕಾರನಿಗೆ ದೀಪವು ರಚಿಸುವುದಕ್ಕಾಗಿ ಉತ್ತಮ ಕಲಾಕೃತಿಯ ವಸ್ತುವಾಗಿರುತ್ತದೆ.
8.ವ್ಯಾಪಾರಿಗೆ ದೀಪವು ವಿಕ್ರಯದ ಸಾಮಾಗ್ರಿಯಾಗಿ ಕಂಡು ಅದರ ಕುರಿತು ಲಾಭ ನಷ್ಟಗಳನ್ನು ಚಿಂತಿಸಬಹುದು.
9.   ವಿಮರ್ಷಕರು ಬೆಳಕು ಅಥವಾ ಅಗ್ನಿಯನ್ನು ದೇವರಲ್ಲ ಎಂದು ಚಿಂತಿಸಬಹುದು.
10. ಸೃಜನಾತ್ಮಕ ವೈಜ್ಙಾನಿಕರು ಹೂಸ ಹೂಸ ರೀತಿಯಲ್ಲಿ ಬೆಳಕನ್ನು ಉತ್ಪಾದಿಸುವುದು ಹೇಗೆ ಎಂದು ಚಿಂತನೆ ನಡೆಸಬಹುದು. ಹೀಗೆಯೇ ಇನ್ನು ಅನೇಕ ರೀತಿಯ ಚಿಂತಕರು ತಮ್ಮ ಶೈಲಿಯಲ್ಲಿ ವೈವಿದ್ಯಮಯವಾಗಿ ಚಿಂತನೆಮಾಡಬಹುದು.
ಚಿಂತನೆ ಹೇಗೆ ?
  ಚಿಂತನೆಯನ್ನು ಸ್ವ-ಅವಲೋಕನದಿಂದ ಆರಂಭಿಸೋಣ.
ಸ್ವ-ಅವಲೋಕನ:ಅಂದರೆ ವಿಮರ್ಷತ್ಮಾಕವಾಗಿ  ಸ್ವ-ಕಾರ್ಯಗಳನ್ನು , ಸ್ವ-ವಾಚವನ್ನು ಮತ್ತು   ವಿಶೇಷವಾಗಿ  ಸ್ವ-ಯೋಚನೆಗಳನ್ನು ವೀಕ್ಷಿಸಿವುದು. ಸ್ವ-ಅವಲೋಕನವು ಸುಲಭವಾದುದು, ಅದರೆ ಅನುಷ್ಠಾನವೇ ಕಠಿಣವಾದುದು, ಇದರ ಬಗ್ಗೆ  ಬುದ್ಧ ಭಗವಾನರು ರಾಹುಲನಿಗೆ ಹೇಳಿದ ಸುತ್ತದಲ್ಲಿ ಹೀಗಿದೆ:
ಬುದ್ಧಭಗವಾನರು: ರಾಹುಲ ದರ್ಪಣವು   ಏತಕ್ಕಾಗಿ ?
ರಾಹುಲ:  ಭಗವಾನ್ ಪ್ರತಿಬಿಂಬಿಸಿವುದಕ್ಕಾಗಿ ..
ಭಗವಾನರು:   ಅದೇ ರೀತಿ ರಾಹುಲ ದೇಹದಿಂದಾಗುವ ಕಾರ್ಯಗಳ ಬಗ್ಗೆ, ಮಾತಿನ ಚಟುವಟಿಕೆಯ ಬಗ್ಗೆ, ಹಾಗು ಮನಸ್ಸಿನ ಪ್ರಕ್ರಿಯೆಯ ಬಗ್ಗೆ ಪುನರಾವತರ್ಿತವಾಗಿ ಪ್ರತಿಬಿಂಬಿಸಬೇಕು. ಹೇಗೆಂದರೇ ಯಾವುದಾದರೂ ಕಾರ್ಯ ಮಾಡುವ/ಮಾತನಾಡುವ/ಯೋಚಿಸುವ ಮುನ್ನ  ಹೀಗೆ ಯೋಚಿಸಬೇಕು: "ಈ ನನ್ನ ಶಾರೀರಿಕ ಕಾರ್ಯ ದಿಂದ/ಮಾತಿನಿಂದ /ಯೋಚನೆಯಿಂದ  ನನಗೆ ಅಹಿತವಾಗುವುದೇ ಅಥವಾ ಪರರಿಗೆ ನೋವಾಗುವುದೇ ? ಹಾಗೇನಾದರೂ ಕಂಡು ಬಂದರೆ ಆ ಕೃತ್ಯವಾಗಲಿ, ಮಾತಾಗಲಿ ಅಥವಾ ಯೋಚನೆಯಾಗಲಿ ವಜರ್ಿಸಬೇಕು...ಹಾಗಲ್ಲದೆ ಒಳಿತಾಗುತ್ತಿದ್ದರೆ ಮುಂದುವರೆಸಬಹುದು."
ಹಾಗೇಯೆ ಯಾವುದಾದರೂ  ಕಾರ್ಯ ಮಾಡುತ್ತಿರುವಾಗ/ಮಾತನಾಡುತ್ತಿರುವಾಗ/ಯೋಚಿಸುತ್ತಿರುವಾಗ ಹೀಗೆಯೆ ಯೋಚಿಸಬೇಕು: "ಈ ನನ್ನ ಶಾರೀರಿಕ ಕಾರ್ಯ ದಿಂದ/ಮಾತಿನಿಂದ /ಯೋಚನೆಯಿಂದ  ನನಗೆ ಅಹಿತವಾಗುತ್ತಿದೆಯೆ ಅಥವಾ ಪರರಿಗೆ ನೋವಾಗುತ್ತಿದೆಯೆ ?   ಹಾಗೇನಾದರೂ ಕಂಡು ಬಂದರೆ ಆ ಕೃತ್ಯವಾಗಲಿ, ಮಾತಾಗಲಿ ಅಥವಾ ಯೋಚನೆಯಾಗಲಿ ವಜರ್ಿಸಬೇಕು... ಹಾಗಲ್ಲದೆ ಒಳಿತಾಗುತ್ತಿದ್ದರೆ ಮುಂದುವರೆಸಬಹುದು."
ಹಾಗೇಯೆ ಯಾವುದಾದರೂ ಕಾರ್ಯ ಮಾಡಿದ ನಂತರ ್ನ  ಹೀಗೆ ಯೋಚಿಸಬೇಕು: "ಈ ನನ್ನ ಶಾರೀರಿಕ ಕಾರ್ಯ ದಿಂದ/ಮಾತಿನಿಂದ /ಯೋಚನೆಯಿಂದ  ನನಗೆ ಅಹಿತವಾಯಿತೆ ಅಥವಾ ಪರರಿಗೆ ನೋವಾಯಿತೆ ?   ಹಾಗೇನಾದರೂ ಕಂಡು ಬಂದರೆ ಆ ಕೃತ್ಯವಾಗಲಿ, ಮಾತಾಗಲಿ ಅಥವಾ ಯೋಚನೆಯಾಗಲಿ ವಜರ್ಿಸಬೇಕು... ಹಾಗಲ್ಲದೆ ಒಳಿತಾಗುತ್ತಿದ್ದರೆ ಮುಂದುವರೆಸಬಹುದು."
"ರಾಹುಲ ಹೀಗೆ ನೀನು ಸುಶಿಕ್ಷೀತನಾಗಿ  ಸಂಕಲ್ಪಿಸಿಕೊಳ್ಳಬೇಕು  'ನಾನು ನಿರಂತರ ಶಾರೀರಿಕವಾಗಿ , ವಾಚಿಕವಾಗಿ ಹಾಗು ಯೋಚನೆಗಳಲ್ಲು ಪುನರಾವತರ್ಿತ  ಪ್ರತಿಬಿಂಬಿಸುವಿಕೆಯಿಂದ ಪರಿಶುದ್ಧಿ ಮಾಡಿಕೋಳ್ಳುತ್ತಿರುವೆನು.' ಹೀಗೆ ನೀನು ಸುಶಿಕ್ಷಿತನಾಗಬೇಕು.".
ಅದನ್ನು ಅಲಿಸಿದಂತಹ ರಾಹುಲ ಆನಂದಯುತ ಧನ್ಯತೆಯ ಭಾವ ವ್ಯಕ್ತಪಡಿಸಿದನು.
ವ್ಯಕ್ತಿತ್ವ ವಿಕಾಸದ ಚಿಂತನೆಗಳನ್ನು ಹೀಗೂ ಮಾಡಬಹುದು:
"ಸಮಾನ್ಯವಾಗಿ ನನ್ನ ಬಗ್ಗೆ ನನಗೆ ಏನು ತಿಳಿದಿದೆ ?"
"ಯಾವುದಕ್ಕಾಗಿ ನಾನು ಪ್ರಾಧಾನ್ಯತೆ ನೀಡುತ್ತಿದ್ದೇನೆ ?ಅವು ಬೆಲೆಬಾಳುವಂತಹುದೇ ? ಮೌಲ್ಯಯುತವಾದುದೆ ಅಥವಾ ಮೌಲ್ಯರಹಿತವಾದುದುರಲ್ಲಿ   ತಲ್ಲಿನನಾಗಿರುವನೇ ?"
"ನಾನು ಎಷ್ಟರಮಟ್ಟಿಗೆ ಬುದ್ದಿವಂತ ? ನಾನು ಯಾವ ಯಾವ ರಂಗಗಳಲ್ಲಿ ಅಜ್ಞಾನಿಯಾಗಿರುವೆನು ?"
"ನನ್ನ ಸಮಸ್ಯೆಗಳಿಗೆ ಕಾರಣಗಳೇನು ?"
"ಸಮಸ್ಯೆಗಳನ್ನು  ಎಷ್ಟು ವಿಧಗಳಿಂದ ದೂರಿಕರಿಸಬಹುದು ?"
"ನನಗಿರುವ ದೌರ್ಬಲ್ಯಗಳೇನು ?"
"ನನ್ನಲ್ಲಿರುವ ಶಕ್ತಿ ಸಮಾಥ್ರ್ಯಗಳಾವುವು ?"
"ನನಗೆ ನಾನೇ ಶತ್ರುವಾಗಿರುವೇನೆ ?ಹೇಗೆ ?"
"ನನ್ನ ಅವನತಿಗೆ ಪರರಿಗಿಂತ ನಾನೇ ಹೇಗೆ ಅಡ್ಡಿ ಯಾಗಿರುವೆನು ?"
"ನನ್ನ ಬಗ್ಗೆ ನನಗೆ ಎಷ್ಟು ನಂಬಿಕೆಯಿದೆ ?"
"ನನ್ನಲ್ಲಿ  ಪ್ರಯತ್ನಶೀಲತೆಯ ಗರಿಷ್ಠತೆ ಎಷ್ಟೀದೆ ?"
"ನನ್ನಲ್ಲಿ ಅಲಕ್ಷತೆಗೆ ಮೀರಿದ ಜಾಗೂರಕತೆ ಇದೆಯೆ ?"
"ನಾನು ಯಾವ ಯಾವ ವಿಷಯಗಳಲ್ಲಿ ಎಕಾಗ್ರತೆ ಸಹಜವಾಗಿ ಹೊಂದುತ್ತೇನೆ ? ಹಾಗು ಒಂದೇ ವಿಷಯದಲ್ಲಿ ಎಷ್ಟು ಕಾಲ ಎಕಾಗ್ರತೆಯಲ್ಲಿ ಇರುತ್ತೇನೆ ?ಎಷ್ಟು ವೇಗವಾಗಿ ಏಕಾಗ್ರತೆ ಹೂಂದುತ್ತೇನೆ ?"
"ನಾನು ಎಷ್ಟು ಸರಿಯಾಗಿ ಸತ್ಯಗಳನ್ನು ಅರ್ಥಮಾಡಿಕೋಳ್ಳುತ್ತೇನೆ ? ನನ್ನಲ್ಲಿ ವಿಮಶರ್ೆಮಾಡಿಕೊಳ್ಳುವ ಮನಸ್ಥಿತಿಯು ಉತ್ತಮವಾಗಿದೆಯೆ ?"
ಹೀಗೆಯೆ ಹಲವಾರು ವಿಧಗಳಿಂದ ಚಿಂತನೆ ಮಾಡುತ್ತಾ ಚಿಂತನಾ ಶಕ್ತಿಯನ್ನು ವೃದ್ಧಿಗೋಳಿಸ ಬೇಕು. ಅದೇ ರೀತಿ ಅರೋಗ್ಯದ ಬಗ್ಗೆ, ಐಶ್ವರ್ಯದ ಬಗ ್ಗೆ , ಮನಶ್ಶಾಂತಿಯ ಬಗ್ಗೆ ,ಸಮಾಜದ ಬಗ್ಗೆಯು  ಚಿಂತಿಸ ಬೇಕು.ಹೀಗೆ ಚಿಂತಿಸಿದಾಗ , ನಮ್ಮ ಯಶಸ್ಸಿನ ಶಕ್ತಿ ಹಾಗು ಸೋಲಿಗೆ ಇರುವ ದೌರ್ಬಲ್ಯಗಳು ಗೋತ್ತಾಗುವವು. ಹಾಗೆಯೆ ನಮ್ಮ ಲಾಭ-ನಷ್ಟಗಳಿಗೇ ಕಾರಣ ಮತ್ತು ಪರಿಹಾರ ದೊರೆಯುವುದು. ಆಗ ನಿಂದಾತೀತವಾದ ಜೀವನ ಆಚರಿಸಿ ಸುಖಯುತ ಜೀವನ  ನಡೆಸುವೆವು. ವೃತ್ತಿಪರರು ತಮ್ಮ ವೃತ್ತಿಯಲ್ಲಿ  ಹಾಗು ಸಂಶೋಧನೆಯಲ್ಲಿ ಚಿಂತನೆ ತೀವ್ರಗೊಳಿಸಿದಾಗ ಬಹಳಷ್ಟು ಫಲವನ್ನು ಪಡೆಯಬಹುದು.
ಚಿಂತನೆಗೆ ಸಹಾಯ ಮಾಡುವಂತಹುವು ಯಾವುವು ?
     ಗಮನ ಹರಿಸುವಿಕೆ, ನೆನಪು, ನಿರಂತರ ಎಕಾಗ್ರತೆ, ವಿಷ್ಲೇಶಿತವಾಗಿ,ವಿಶಾಲವಾಗಿ ಹೋಗುವಿಕೆ, ಹಲವು ಬಗೆಯಲ್ಲಿ ಪ್ರಶ್ನಿಸುವಿಕೆ, ಸಂಬಂಧಪಡುವ ಪ್ರತಿ ಮಾಹಿತಿಯ ಬಗ್ಗೆ ಯೋಚಿಸುವಿಕೆ, ಹೊಸತನ, ಕಲ್ಪನಶಕ್ತಿಯ ಬಳಕೆ ಅಂದರೆ   ಚಿತ್ರಗಳ, ಚಲನಚಿತ್ರಗಳ, ರೇಖಾಚಿತ್ರಗಳ, ನಕ್ಷೇಯ  ,ವರ್ಣಗಳ ಸಮ್ಮಿಲನ ಇತ್ಯಾದಿಗಳು ಚಿಂತನೆಗೆ ಸಹಾಯ ಮಾಡುವವು.
ಪರಿಣಾಮಾತ್ಮಕ   ಚಿಂತನೆೆಯಲ್ಲಿ  ಸಮಸ್ಯೇಯ ಮೂಲಕ್ಕೆ ಹೋಗುವುದು ಹಾಗು ಕಾರಣಗಳನ್ನು ಕಂಡುಹಿಡಿದು , ಚಿಂತನೆಯಲ್ಲಿ ಹೇಗೆ ಸಮಸ್ಯೆ ಪರಿಹರಿಸಬಹುದು ಎಂದು ಅನೇಕ ರೀತಿಯಲ್ಲಿ ಯೋಚಿಸಬೇಕು ತರ್ಕಬದ್ದವಾಗಿ ಯೋಚಿಸದಂತೆಲ್ಲಾ ಹಾಗು ಪರಿಸ್ಥಿತಿಯ ಪಲಿತಾಂಶವನ್ನು ಲೆಕ್ಕಚಾರ ಹಾಕಿದಂತೆಲ್ಲಾ ಯೋಗ್ಯ ನಿಧರ್ಾರ ಸಿಗುವುದು,ಹಾಗೇಯೇ ಯಾರು ? ಯಾರಿಗೆ ? ಯಾರದ್ದು ? ಏನು ? ಏಕೆ? ಏಕಿಲ್ಲ ? ಯಾವಾಗ ?ಎಲ್ಲಿ ? ಹೇಗೆ ?ಎಷ್ಟು ? ಇತ್ಯಾದಿ ಪ್ರಶ್ನೆಗಳಿಂದ ಚಿಂತನೆಯು ವಿಕಾಸವಾಗುವುದು.ಇಡೀ ಮಾಹಿತಿ ವ್ಯವಸ್ಥಿತವಾಗಿ  ಕಲೆಹಾಕಿದಾಗ ಹಾಗು ಹೊಸ ,ಹೊಸ  ಐಡಿಯಾಗಳಿಂದಾಗಿ  ಪ್ರಕ್ರಿಯೆಯು ಇನ್ನು ಚೆನ್ನಾಗಿ ಮೂಡಿಬರುವುದು.
ಯಾವ ಯೋಚನೆಗಳನ್ನು ಮಾಡಬೇಕು ಹಾಗು ಯಾವ ಯೋಚನೆಗಳನ್ನು ಮಾಡಬಾರದು ?
ಸ್ವಾರ್ಥಯುತ, ಕೋಪದ, ಅಸೂಯೆಯ, ಕ್ರೌರ್ಯದ, ಸಂಶಯದ,ಸೋಮಾರಿತನದ,ಚಿಂತೆಯ, ಭಯದ,    ಮೌಡ್ಯಭರಿತ ,ಈ ರೀತಿಯ ಯೋಚನೆಗಳನ್ನು  ಮಾಡಲೇಬಾರದು. ಎಕೆಂದರೇ ಈ ರೀತಿಯ ಯೋಚನೆಗಳು ಮಾನಸಿಕ ಕಲ್ಮಶಗಳನ್ನು ಹೆಚ್ಚಿಸಿ ಮಾನಸಿಕ ಒತ್ತಡಕ್ಕೆ ಗುರಿ ಮಾಡುವುದಷ್ಟೇ ಅಲ್ಲದೆ, ಸಾಮಾಜಿಕವಾಗಿ ದುಃಖದ ಸನ್ನಿವೇಶವನ್ನು ತರಿಸುತ್ತದೆ, ಒಟ್ಟಾರೆ ಮಾನಸಿಕವಾಗಿಯು ದುರ್ಬಲನನ್ನಾಗಿ ಮಾಡಿ ಪರರಿಗೂ ಹಾಗು ತನಗೂ ಹಾನಿ ಮಾಡುತ್ತದೆ ಹೀಗಾಗಿ ಅವನ್ನು ಮಿಥ್ಯ ಚಿಂತನೆ ಎನ್ನುವರು.
ಈ ರೀತಿಯಲ್ಲದ, ಸಕಾರಾತ್ಮಕ ಯೋಚನೆಗಳಾದ ನಿಸ್ವಾರ್ಥಯುತ ಪರಿಶುದ್ಧ ಪ್ರೀತಿ, ಕೋಪವಿಲ್ಲದ ಸ್ನೇಹದ, ಅಭಿನಂದತ್ಮಾಕ ಪ್ರೀತಿಯ, ದಯೆಯ, ನಂಬಿಕೆಯ, ಪ್ರಯತ್ನಶೀಲತೆಗೆ ಪ್ರಚೋದಾತ್ಮಾಕ ಯೋಚನೆ, ಚಿಂತಾರಹಿತ ಶಾಂತತೆಯ ಯೋಚನೆ, ಭಯರಹಿತ ಧೈರ್ಯದ, ಜ್ಞಾನಭರಿತ ಯೋಚನೆಗಳನ್ನು ಮಾಡಿದಾಗ ಅವುಗಳಿದಾಗಿ ನಮಗೂ ಹಾಗು ಪರರಿಗೂ ಎಲ್ಲಾ  ರೀತಿಯ  ಮಂಗಳವಾಗುತ್ತದೆ.ಹೀಗಾಗಿ ಇವನ್ನು ಸಂಯಕ್ ಚಿಂತನೆ ಎನ್ನುತ್ತಾರೆ.
ಹೇಗೆ ಯೋಚಿಸುವರೊ ಹಾಗೆಯೇ ಆಗುವಿರಿ
ನಮ್ಮ ಯೋಚನೆಗಳಿಗೆ ಅದ್ಬುತವಾದ ಶಕ್ತಿಯಿದೆ, ನಮ್ಮ ಹಿಂದಿನ ಯೋಚನೆಗಳ ಪಲಿತಾಂಶವೇ ಇಂದಿನ ನಾವಿಗಿದ್ದೇವೆ, ಇಂದಿನ ಯೋಚನೆಗಳ ಪರಿಣಾಮವೇ ಮುಂದಿನ ನಾವು ಹಾಗು ನಮ್ಮ ಭವಿಷ್ಯವು ರಚಿತವಾಗುವುದು. ಅದ್ದರಿಂದ ನಮ್ಮ ಯೋಚನೆಗಳ ಬಗ್ಗೆ ಅಸಡ್ಡೆ ಬೇಡ, ಅಲಕ್ಷ ಬೇಡವೆ ಬೇಡ.ನಮ್ಮ ಯೋಚನೆಗಳಿಂದಾಗಿ ಮನೋಭಾವವು ನಿಮರ್ಾಣವಾಗುತ್ತದೆ, ಮನೋಬಾವದ ಆಧಾರದ ಮೇಲೆಯೇ ಸರ್ವ ಕಾರ್ಯವೂ ನಿಂತಿರುತ್ತದೆ. ನೀವು ಸೋಲುತ್ತಿರಿ ಎಂದು ಭಾವಿಸಿದರೆ ಖಂಡಿತವಾಗಿ ಸೋಲುವಿರಿ, ಜಯಿಸುತ್ತೇವೆ ಎಂಬ ಮನೋಭಾವವಿದ್ದರೆ ಖಂಡಿತವಾಗಿ ಜಯಕ್ಕೆ ಸಹಕಾರಿಯಾಗಬಲ್ಲದು, ಹಾಗೆಯೇ ಮನೋಬಾವದಿಂದಲೇ ಜಗತ್ತು ಸುಂದರವಾಗಿಯು ಅಥವಾ ಕುರೂಪವಾಗಿಯು ಕಾಣುವುದು, ಇಡೀ ಜಗತ್ತೇ ನಮ್ಮ ಮನಸ್ಸಿನಲ್ಲಿದೆ.ಯಾರು ಸದಾ ತನ್ನನ್ನು ಬಲಹೀನ ಎಂದು ಭಾವಿಸುತ್ತಾನೋ ಆತನು ಎಂದಿಗೂ ಬಲಿಷ್ಟನಾಗಲಾರ, ಅದರೆ ಯಾರಿಗೆ ತಾನು ಬಲಿಷ್ಟನೇಂದು ತಿಳಿದಿದೆಯೋ ಆತನು ಬಂಧನಗಳನ್ನು ಕತ್ತರಿಸಿ ಹಾಕುತ್ತಾನೆ, ಸ್ವತಂತ್ರನಾಗಿರುತ್ತಾನೆ. ಶಕ್ತಿಯೇ ಜೀವನದ ,ಭರವಸೆಯ, ಆರೋಗ್ಯದ ಹಾಗು ಬಿಡುಗಡೆಯ ಚಿನ್ಹೆಯಾಗಿದೆ, ಅದ್ದರಿಂದ ಶಕ್ತಿಯುತ ಯೋಚನೆಗಳಿಂದ ತುಂಬಿರೋಣ.ನಕಾರಾತ್ಮಕ ಯೋಚನೆಗಳನ್ನು ಉಂಟು ಮಾಡದೆ ಇರೋಣ .ನಾವು ನಮ್ಮ  ಆದರ್ಶ ವ್ಯಕ್ತಿಗಳಂತೆಯೇ ಯೋಚಿಸಿದರೆ, ಅವರಂತೆಯೇ ಮನೋಭಾವವನ್ನು ವೃದ್ಧಿಸಿದರೆ, ಅವರಂತೆಯೇ ಕಾರ್ಯ ಮಾಡಿದರೆ ಖಂಡಿತವಾಗಿ  ಅವರಂತೆಯೇೆ ಆಗುವೆವು. ಇದಕ್ಕೆ ಸಂಬಂದಿಸಿದಂತೆ ಒಂದು ಘಟನೆಯು ಹೀಗೆ ಇದೆ:
 ಶ್ರ್ರಾವಸ್ಥಿಯಲ್ಲಿ ಪಂಡಿತನೆಂಬ ಬಾಲಕನೊಬ್ಬನು ಬಿಕ್ಷುವಾಗಿದ್ದನು, ಅತನು ದೀಕ್ಷೆ ತೆಗೆದುಕೊಂಡ 8ನೇ ದಿನದಂದು ಹಿರಿಯ ಭಿಕ್ಷುಗಳೊಂದಿಗೆ ದಾರಿಯಲ್ಲಿ ಹೋಗುತ್ತಿರುವಾಗ , ದಾರಿಯಲ್ಲಿ  ಕೃಷಿಕರು ನೀರಿಗೆ ಹಾದಿಗಳನ್ನು ನಿಮರ್ಿಸುತ್ತಿದ್ದುದನ್ನು  ನೋಡಿದನು, ನಂತರ ಸ್ವಲ್ಪ ದೂರದಲ್ಲಿ ಕೆಲವು ಬಡಗಿಗಳು ಮರದತುಂಡುಗಳಿಂದ ತಮಗೆ ಬೇಕಾದ ರೀತಿಯಲ್ಲಿ  ಆಕಾರ ನೀಡಿ ರಚಿಸುತ್ತಿದ್ದುದನ್ನು  ಕಂಡನು, ಹಾಗೇಯೆ ಬಾಣ ನಿಮರ್ಿತಕಾರರು ಲೋಹದಿಂದ ಬಾಣಗಳನ್ನು ನೇರವಾಗಿ ನಿಮರ್ಿಸುತ್ತಿದ್ದುದ್ದನ್ನು ವೀಕ್ಷಿಸಿದನು. ನಂತರ ಆತನು ಈ ರೀತಿಯಾಗಿ ಚಿಂತನೆ ಮಾಡತೋಡಗಿದನು: " ಈ ನೀರನ್ನು ನಮ್ಮ ಇಚ್ಚೆಯ ದಾರಿಗೆ ಅನುಗುಣವಾಗಿ ಹಾಯಿಸಬಹುದಾಗಿದೆ, ಅದೇ ರೀತಿ ಮರದ ತುಂಡುಗಳನ್ನು ನಮ್ಮ ಇಚ್ಚೆಗೆ ಅನುಗುಣವಾಗಿ ,ಬೇಕಾದ ರೀತಿಯಲ್ಲಿ  ರಚನೆ ಮಾಡಬಹುದಾಗಿದೆ, ಹಾಗೆಯೇ ಲೋಹದಿಂದಲೂ ನಮಗೆ ಬೇಕಾದ ಆಕಾರ ಪಡೆಯಬಹುದಾಗಿದೆ, ಇವೆಲ್ಲಾ  ನಿಜರ್ೀವ ವಸ್ತುಗಳಾಗಿದ್ದರೂ ಸಹಾ ಅವನ್ನು ದಮಿಸಬಹುದಾಗಿದೆ, ಅದರೆ ಚೈತನ್ಯಮಯವಾಗಿರುವ ನನ್ನ ಮನಸ್ಸನ್ನು  ಏಕೆ ನಾನು ಇಚ್ಚಿಸಿದಂತೆ ಪಳಗಿಸಬಾರದು ?" ಎಂದು  ಆತನು ಯೋಚಿಸಲಾರಂಬಿಸಿದನು..   ಆಗ ಬುದ್ಧ ಭಗವಾನರು ಆತನ ಮನಸ್ಸನ್ನು ಅರಿತು ಹೀಗೆ ಅತನಿಗೆ ಸ್ಫೂತರ್ಿಯುತವಾಗಿ ಈ ಗಾಥೆಯನ್ನು  ನುಡಿದರು:
" ನೀರು ಹಾಯಿಸುವವರು ನೀರಿಗೆ ಮಾರ್ಗದರ್ಶನ ನೀಡುವರು,
ಬಾಣನಿಮರ್ಾತಕಾರರು  ಬಾಣಗಳನ್ನು  ನೇರ ಮಾಡುವರು,
ಬಡಗಿಗಾರರು ಮರದತುಂಡುಗಳನ್ನು ಬಾಗಿಸುವರು,
ಅದೇ ರೀತಿಯಲ್ಲಿ ಜ್ಞಾನಿಗಳು ತಮ್ಮನ್ನು ದಮಿಸಿಕೋಳ್ಳುತ್ತಾರೆ."
ಅದನ್ನು ಆಲಿಸಿದ ಬಾಲಕನಿಗೆ ಜ್ಞಾನೋದಯವಾಗಿ ಅತನು ಅಹೋ ರಾತ್ರಿ ಶ್ರಮಿಸಿ ತನ್ನ ಮನಸ್ಸನ್ನು ಗೆದ್ದನು, ಹಾಗು

ಶೋಕರಹಿತರಾಗಿರುವವರಲ್ಲಿ ಒಬ್ಬನಾದನು.
ಹೀಗೆ ಚಿಂತನೆಯಲ್ಲಿನ ಮಹಾಶಕ್ತಿಯನ್ನು ಕಂಡು  ವಿವೇಕಿಗಳು ಹೇಗೆ ವ್ಯಾಯಾಮಶಾಲೆಯಲ್ಲಿ ತಮ್ಮ ಶರೀರವನ್ನು ಬೇಕಾದ ರೀತಿಯಲ್ಲಿ ರೂಪಿಸುವರೋ ಹಾಗೆಯೇ ತಮ್ಮ ಯೋಚನೆಗಳನ್ನು  ಅಭಿವೃದ್ಧಿಯ  ಪಥದಲ್ಲಿ ಸಾಗಿಸುತ್ತಾರೆ, ತಮ್ಮ ವ್ಯಕ್ತಿತ್ವ ವನ್ನು  ಬಲಿಷ್ಠವನ್ನಾಗಿ ರೂಪಿಸಿ, ತಮ್ಮ ಬೌದ್ಧಿಕತೆಯನ್ನು ಹರಿತಗೊಳಿಸಿಕೊಳ್ಳುತ್ತಾರೆ. ತಮಗೂ ಹಾಗು ಪರರಿಗೂ ಸುಖ-ಹಿತಗಳನ್ನುಂಟು ಮಾಡಿಕೊಳ್ಳುತ್ತಾರೆ.





the enemies of giving


ದಾನಕ್ಕೆ ಶತ್ರುಗಳು


ದಾನಕ್ಕೆ ಶತ್ರುಗಳು ಯಾರು ?
ದಾನಕ್ಕೆ ಶತ್ರುಗಳೇ ?!
ದಾವು ನಮ್ಮ ಮನಸ್ಸಿನಲ್ಲಿರುವ ಒಂದು ಗುಣವಾಗಿದೆ. ಅಂದರೆ ಚೇತಸಿಕಾವಾಗಿದೆ. ಅಲೋಭ ಚೇತಸಿಕಾವನ್ನು ದಾನವಾಗಿಯು ಮತ್ತು ವಿರಾಗ (ವೈರಾಗ್ಯ)ವಾಗಿಯು ವಿಂಗಡಿಸುತ್ತಾರೆ. ಹೇಗೆ ಕಮಲದ ದಳದಲ್ಲಿ ನೀರು ನಿಲ್ಲಲಾರದೋ, ಅಂಟಲಾರದೋ ಅದೇರೀತಿಯಲ್ಲಿ ಇಂದ್ರಿಯ ವಿಷಯಗಳಲ್ಲಿ ಅಂಟದಿರುವಿಕೆಯೇ ಅಲೋಭದ ಲಕ್ಷಣವಾಗಿದೆ. ಇದರ ಕ್ರಿಯೆ ಏನೆಂದರೆ ಇಂದ್ರಿಯ ವಿಷಯದಲ್ಲಿ ಅಂಟದಿರುವಿಕೆ. ಇದು ಅಂಟದೆ ಇರುವುದರಿಂದಾಗಿ ವ್ಯಕ್ತವಾಗುತ್ತದೆ. ಆದರೆ ಅಲೋಭವನ್ನು ನಾವು ಕೇವಲ ಲೋಭ ಅಭಾವ (ರಾಹಿತ್ಯತೆ) ಎಂದಷ್ಟೇ ಅರ್ಥಮಾಡಿಕೊಳ್ಳಬಾರದು. ಅದು ದಾನವಾಗಿಯೂ ಪರಿವತರ್ಿತವಾಗುತ್ತದೆ. ಹಾಗು ವಿರಾಗವಾಗಿಯು ವಿಕಾಸಿಸುತ್ತದೆ. ಆದರೆ ದಾನದ ಲಕ್ಷಣವೇನೆಂದರೆ ತ್ಯಾಗ ಮಾಡುವಿಕೆ. ದಾನದ ಕ್ರಿಯೆಯೇನೆಂದರೆ ಲೋಭವನ್ನು ದೂರೀಕರಿಸುವುದು. ಇದು ವಿರಾಗದಿಂದ (ಅಂಟದೆ ಇರುವುದರಿಂದಾಗಿ) ಸ್ಥಾಪನೆಯಾಗುತ್ತದೆ. ಇದರ ತತ್ಕ್ಷಣದ ಕಾರಣವೇನೆಂದರೆ ವಸ್ತುಗಳ ಇರುವಿಕೆ ಮತ್ತು ಅಂತಹ ಸನ್ನಿವೇಶ. ಆದರೆ ಮೂಲಕಾರಣ ಕರುಣೆಯಾಗಿದೆ. ದಾನ ಅಥವಾ ಅಲೋಭವು ಮೂರು ಕುಶಲ ಮೂಲಗಳಲ್ಲಿ ಒಂದಾಗಿದೆ. ಈ ದಾನಕ್ಕೆ ಶತ್ರುಗಳೆಂದರೆ : ಲೋಭ, ದ್ವೇಷ, ಭಯ, ಮಿಥ್ಯದಿಟ್ಟಿ ಮತ್ತು ಮೋಹವಾಗಿದೆ.
ಲೋಭ: ಲೋಭವು ಅಕುಶಲ ಮೂಲಗಳಲ್ಲಿ ಒಂದಾಗಿದೆ. ಇದು ಎಲ್ಲಾ ಸ್ವಾರ್ಥ ಬಯಕೆಗಳ, ತೀವ್ರ ಲಾಲಸೆಗಳ, ಅಂಟುವಿಕೆಗಳ, ಅಹಂಕಾರಗಳ ಮೂಲವಾಗಿದೆ. ಇಂದ್ರಿಯ ವಿಷಯಗಳಲ್ಲಿ ಅಂಟುವಿಕೆಯೇ ಇದರ ಲಕ್ಷಣವಾಗಿದೆ. ಇದರ ಕ್ರಿಯೆ ಏನೆಂದರೆ ಪ್ರಬಲವಾಗಿ ಅಂಟುವಿಕೆಯಾಗಿದೆ. ಅಂಟಿರುವುದನ್ನು ತೊರೆಯದಿರುವಿಕೆಯಿಂದ ಇದು ವ್ಯಕ್ತವಾಗುತ್ತದೆ. ಇವುಗಳ ತತ್ಕ್ಷಣದ ಕಾರಣವೇನೆಂದರೆ ಇಂದ್ರಿಯ ವಿಷಯಗಳ ಸಾಮೀಪ್ಯವಾಗಿದೆ. ಮೂಲಕಾರಣ ಅಜ್ಞಾನವಾಗಿದೆ.
ಲೋಭವು ಮಿಥ್ಯಾದೃಷ್ಟಿಯಿಂದ ಕೂಡಿದಾಗ ಅಹಂಕಾರವು ಜನಿಸುವುದು. ಅಹಂಕಾರದಿಂದಾಗಿ ಮಿಥ್ಯಾ ಸ್ವಪ್ರತಿಷ್ಠೆ ಸ್ಥಾಪಿತವಾಗುತ್ತದೆ. ಆಗ ತನ್ನ ಹೊರತು ಪರರ ಬಗ್ಗೆ ಮನಸ್ಸು ಚಿಂತಿಸಲಾರದು. ಇದರಿಂದಾಗಿ ಸ್ವಾರ್ಥವು ಉಂಟಾಗುತ್ತದೆ. ಮನಸ್ಸು ತನ್ನದು ಎಂಬ ವಿಕಾರದಿಂದ ಉದ್ರೇಕಗೊಳ್ಳುತ್ತದೆ. ಹೀಗಾಗಿ ತಾನು ತನ್ನದನ್ನು ಪರರಲ್ಲಿ ಹಂಚಲು ಮನಸ್ಸು ಸಿದ್ಧವಾಗದು. ಹೀಗಾಗಿ ಹಂಚುವುದರಿಂದ ಮನಸ್ಸು ವಿಮುಖವಾಗುವುದು. ನಂತರ ಕೇವಲ ತನ್ನ ಹಾಗು ತನ್ನದರ (ನನ್ನದು) ಹೊರತಾಗಿ ಪರರ ಬಗ್ಗೆ ಯೋಚಿಸದು.
ಈ ರೀತಿಯಾಗಿ ಅಹಂಕಾರಿಯು ಕೇವಲ ತನ್ನ ಬಗ್ಗೆ ಯೋಚಿಸುತ್ತಾನೆ, ಪರರ ಬಗ್ಗೆಯಲ್ಲ. ಅದೇರೀತಿಯಲ್ಲಿ ಸ್ವಾಥರ್ಿಯು ತನ್ನದರ ಬಗ್ಗೆ ಮಾತ್ರ ಯೋಚಿಸುತ್ತಾನೆ. ಪರರ ಬಗ್ಗೆಯಲ್ಲ, ಅನಿತ್ಯದ ಚಿಂತನೆಯ ಅಭಾವದಿಂದಾಗಿ ಪಂಚಖಂದಗಳಲ್ಲಿ ದೇಹ ಮತ್ತು ಮನಸ್ಸು ಒಂದನ್ನು ಅಥವಾ ಎಲ್ಲವನ್ನೂ ತಾನು (ನಾನು) ಎಂದು ಭಾವಿಸುತ್ತಾನೆ. ಹಾಗೆಯೇ ಪಂಚಖಂದಗಳನ್ನು ತನ್ನದು ಎಂದು ಭಾವಿಸುತ್ತಾನೆ. ಅಷ್ಟೇ ಅಲ್ಲ, ಇಂದ್ರಿಯ ಗೋಚರ ಜಗತ್ತಿನ ಸರ್ವವನ್ನು ತನ್ನದು ಎಂದು ಭ್ರಮಿಸುತ್ತಾನೆ. ನನ್ನ ಪತ್ನಿ, ನನ್ನ ಮಕ್ಕಳು, ನನ್ನ ಐಶ್ವರ್ಯ, ನನ್ನ ರಾಜ್ಯ, ನನ್ನ ಭಾಷೆ, ನನ್ನ ಜನಾಂಗ, ನನ್ನ ಧರ್ಮ, ನನ್ನ ದೇಶ, ಇತ್ಯಾದಿ ಎಂದೆಲ್ಲಾ ಭ್ರಮಿಸಿ ಅಂಟುತ್ತಲೇ ಹೋಗುತ್ತಾನೆ. ಈ ರೀತಿಯಲ್ಲಿ ತಾನು ಮತ್ತು ತನ್ನದು ಎಂಬ ಸೀಮಿತ ಬುದ್ಧಿಯಲ್ಲಿ ಸಿಲುಕಿ ಆತನು ಅಲೋಭದ ಬಗ್ಗೆಯಾಗಲಿ, ವಿರಾಗದ ಬಗ್ಗೆಯಾಗಲಿ ಅಥವಾ ದಾನದ ಬಗ್ಗೆಯಾಗಲಿ ಚಿಂತಿಸಲಾರ. ಪರರ ಬಗ್ಗೆ ಕಾಳಜಿ ಹೊಂದಲಾರನು. ಈ ರೀತಿಯಲ್ಲಿ ಅಹಂಕಾರ (ನಾನು) ಮತ್ತು ಸ್ವಾರ್ಥ (ನನ್ನದು) ಇವೆರಡು ಲೋಭದ ಕೂಸುಗಳಾಗಿವೆ. ಹಾಗು ದಾನಕ್ಕೆ ಶತ್ರುಗಳಾಗಿವೆ. ಇವು ಇರುವವರೆಗೂ ಮನಸ್ಸು ತ್ಯಾಗದ ಬಗ್ಗೆ ಯೋಚಿಸಲಾರದು, ಅಂಟದೆ ಹೋಗದು, ವಿರಾಗ ಸ್ಥಾಪನೆಯಾಗದು, ಕರುಣೆಗೆ ಬೆಲೆಯು ಇರದು.
ದ್ವೇಷ : ಅದೇರೀತಿಯಲ್ಲಿ ದ್ವೇಷವೂ ಸಹಾ ದಾನದ ಶತ್ರುವಾಗಿದೆ. ಹೇಗೆಂದರೆ  ದ್ವೇಷವು ಅಕುಶಲ ಮೂಲಗಳಲ್ಲಿ ಒಂದಾಗಿದೆ. ಇದರಿಂದಲೇ ಎಲ್ಲಾಬಗೆಯ ಕೋಪ, ಕ್ರೋಧ, ಅಸಹನೆ, ಬೇಸರ, ಅಸಹ್ಯತೆ, ಕ್ರೂರತೆ, ಅಸೂಯೆ, ಸೇಡು ಇತ್ಯಾದಿಗಳು ಜನಿಸುವುವು. ದ್ವೇಷದ ಲಕ್ಷಣವೇನೆಂದರೆ ಕ್ರೂರತೆ, ಇದರ ಕ್ರಿಯೆ ಏನೆಂದರೆ ಆಧಾರವಾಗಿರುವುದನ್ನು ಸಹಾ ಸುಡುತ್ತಾ ಹೋಗುವುದು. ಅಂದರೆ ದೇಹ ಮನಸ್ಸಿನ ಸ್ವಸ್ತಿಯನ್ನೇ ಹಾಳುಮಾಡುವುದು. ಹಿಂಸಿಸುವುದರಿಂದಾಗಿ ಇದು ವ್ಯಕ್ತವಾಗುವುದು. ಇದಕ್ಕೆ ತತ್ಕ್ಷಣದ ಕಾರಣವೇನೆಂದರೆ ಅಸಹನೀಯ ಸನ್ನಿವೇಶ ಅಥವಾ ವ್ಯಕ್ತಿಗಳು. ಮೂಲಕಾರಣ ಅಜ್ಞಾನವಾಗಿದೆ. ಹೀಗಾಗಿ ಯಾವ ಮನಸ್ಸು ಪರರನ್ನು ದ್ವೇಷಿಸುವುದೋ ಅದು ಅವರ ಕಲ್ಯಾಣವನ್ನು ಬಯಸದು. ಅವರಿಗಾಗಿ ತ್ಯಾಗ ಮಾಡಲು ಸಿದ್ಧವಾಗದು. ಹೀಗಾಗಿ ದ್ವೇಷವು ದಾನದ ಶತ್ರುವಾಗಿದೆ.
ಭಯ : ಪರರಿಗೆ ಹಿತಮಾಡುವಾಗ, ಅನ್ಯ ವ್ಯಕ್ತಿಗಳು ಏನೆಂದು ಭಾವಿಸುವರೋ, ಏನೆಂದು ಹೇಳುವರೋ ಅಥವಾ ತನಗೆ ಅಡ್ಡಿ ಎಲ್ಲಿ ಮಾಡಿಬಿಡುವರೋ ಎಂಬ ಭಯದಿಂದ ದಾನಿಯು ಪರರಿಗೆ ದಾನ ಅಥವಾ ಸಹಾಯ ಮಾಡದೆ ಹೋಗುತ್ತಾನೆ. ಅಥವಾ ಪರರಿಗೆ ದಾನ ಮಾಡುವಾಗ ತನ್ನದೆನ್ನುವ ಐಶ್ವರ್ಯ ಎಲ್ಲಿ ಕ್ಷೀಣಿಸಿಹೋಗುವುದೋ ಅಥವಾ ತನ್ನವರು ತನ್ನಿಂದ ಎಲ್ಲಿ ದೂರ ಹೋಗಿಬಿಡುವರೋ ಅಥವಾ ತನ್ನ ದೇಹಕ್ಕೆ ಎಲ್ಲಿ ಅಪಾಯವಾಗಿ ಹೋಗುವುದೋ ಎಂದು ಭೀತಿಪಟ್ಟು ದಾನಿಯು ಪೂರ್ಣವಾಗಿ ವಿಕಸಿತನಾಗದೆ ದಾನ ಅಥವಾ ಸಹಾಯದಿಂದಾಗಿ ಹಿಂಜರಿಯುತ್ತಾನೆ. ಅದಕ್ಕೆ ಕಾರಣ ಸಂಕೋಚ ಮತ್ತು ಭಯವೇ ಆಗಿದೆ.
ಮಿಥ್ಯಾದೃಷ್ಟಿ: ದಾನಕ್ಕೆ ಅತ್ಯಂತ ದೊಡ್ಡ ಶತ್ರುವೆಂದರೆ ಮಿಥ್ಯಾದೃಷ್ಟಿಗಳೇ ಆಗಿದೆ. ಆ ಮಿಥ್ಯಾದೃಷ್ಟಿಗಾವುವು ಎಂದರೆ:
1. ಕರ್ಮಫಲವೇ ಇಲ್ಲ, ಆದ್ದರಿಂದಾಗಿ ದಾನಕ್ಕಾಗಲಿ ಅಥವಾ ಪಾಪಕ್ಕಾಗಲಿ ಫಲವೇ ಇಲ್ಲ ಎನ್ನುವ ಅಕ್ರಿಯಾ ಮಿಥ್ಯಾದೃಷ್ಟಿ.
2. ಸುಖ-ದುಃಖಗಳಿಗಾಗಲಿ ಅಥವಾ ಜೀವಿಗಳ ಹುಟ್ಟುಸಾವುಗಳಿಗಾಗಲಿ ಅಥವಾ ಪರಿಶುದ್ಧತೆ-ಕಲುಶತೆಗಾಗಲಿ ಅಥವಾ ಉನ್ನತಿ ಅವನತಿಗಾಗಲಿ ಕಾರಣಗಳೇ ಇಲ್ಲ ಎನ್ನುವ ಅಹೇತು ಮಿಥ್ಯಾದೃಷ್ಟಿ.
3. ಪಾಪ ಪುಣ್ಯಗಳಿಗೆ ಫಲವೇ ಇಲ್ಲ. ಪರಲೋಕವೂ ಇಲ್ಲ, ಪೂರ್ವಜನ್ಮವಿಲ್ಲ, ಹಾಗೆಯೇ ಪುನರ್ಜನ್ಮವಿಲ್ಲ, ಸಾವೇ ಮಾನವನ ಮೋಕ್ಷ ಎನ್ನುವ ನಾಸ್ತಿಕ ಮಿಥ್ಯಾದೃಷ್ಟಿ.
4. ದೇವರೇ ಎಲ್ಲದಕ್ಕೂ ಕಾರಣ. ಆತನ ಪೂಜೆಯೇ ಪರಿಹಾರ ಮಾರ್ಗ ಎಂಬ ಇಸ್ಸರ ನಿಮರ್ಾಣ ಹೇತು ಮಿಥ್ಯಾದೃಷ್ಟಿ.
5. ಹಿಂದಿನ ಜನ್ಮದಿಂದಲೇ ಸುಖ-ದುಃಖ ಪ್ರಾಪ್ತಿ ಆದ್ದರಿಂದಾಗಿ ಈಗಿನ ದಾನದಿಂದ ಪ್ರಯೋಜನವಿಲ್ಲ ಎಂಬ ಪುಟ್ಟಕಥಾ ಹೇತು ಮಿಥ್ಯಾದೃಷ್ಟಿ.
6. ಆತ್ಮವು ಸ್ವಯಂ ಪರಿಶುದ್ಧ ಹಾಗು ಪರಿಪೂರ್ಣವಾಗಿರುವುದರಿಂದ ದಾನದ ಅಗತ್ಯವಿಲ್ಲ ಎಂಬ ಶಾಶ್ವತ ಮಿಥ್ಯಾದೃಷ್ಟಿ.
7. ಸಾವೇ ಜೀವನದ ಕೊನೆ, ಆದ್ದರಿಂದ ದಾನದಿಂದ ಪ್ರಯೋಜನವಿಲ್ಲ. ಆದ್ದರಿಂದ ಇರುವಷ್ಟು ದಿನ ಸಾಲ ಮಾಡಿಯಾದರೂ ಸುಖವಾಗಿರಬೇಕು ಎಂಬ ಉಚ್ಛೇದ ಮಿಥ್ಯಾದೃಷ್ಟಿ.
ಈ ಎಲ್ಲಾ ಮಿಥ್ಯಾದೃಷ್ಟಿಯಿಂದ ಯಾರೂ ದಾನಿಗಳಾಗುವುದಿಲ್ಲ. ಬದಲಾಗಿ ಸ್ವಾಥರ್ಿಗಳಾಗುತ್ತಾರೆ. ಹಾಗು ಸೇವೆಗೆ ಅಲಕ್ಷಿಸುತ್ತಾರೆ.
ಮೋಹ : ಮೋಹವು ಸಹಾ ಅಕುಶಲ ಮೂಲಗಳಲ್ಲಿ ಒಂದಾಗಿದೆ. ಮೋಹವು ಅವಿದ್ಯೆ ಅಥವಾ ಅಜ್ಞಾನದ ಸಮಾನಾರ್ಥಕ ಪದವಾಗಿದೆ. ಇದರ ಲಕ್ಷಣವೇನೆಂದರೆ ಮನಸ್ಸನ್ನೇ ಅಂಧನನ್ನಾಗಿಸುವುದು ಅಥವಾ ಜ್ಞಾನವನ್ನು ಅರಿಯದಿರುವುದು. ವಿಷಯಗಳ ನೈಜ್ಯತೆಯನ್ನು ಕುಶಾಗ್ರತೆಯ ಬುದ್ಧಿಯಿಂದ ಅರಿಯಲಾರನು. ವಿಮೋಚನೆರಹಿತ ನಾಗಿರುತ್ತಾನೆ. ಇದು ಸಮ್ಯಕ್ ದೃಷ್ಟಿಕೋನದ ಅಭಾವದಿಂದ ವ್ಯಕ್ತವಾಗುತ್ತದೆ ಅಥವಾ ಮಾನಸಿಕ ಅಂಧಕಾರದಿಂದ ವ್ಯಕ್ತವಾಗುತ್ತದೆ. ಈ ಮೋಹವು ಅಯೋಗ್ಯ ಗಮನಿಸುವಿಕೆಯಿಂದಾಗಿ ಆರಂಭವಾಗುತ್ತದೆ. ಹಾಗು ಇದೇ ಎಲ್ಲಾ ಅಕುಶಲ ಮೂಲಗಳ ಮೂಲ ಬೇರಾಗಿದೆ.
8.2 ಮೂರ್ಖರು ದಾನದಲ್ಲಿ ಆನಂದಿಸಲಾರರು
ಒಮ್ಮೆ ಮಹಾರಾಜ ಪಸೇನದಿಯು ಬುದ್ಧ ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ವಿಜೃಂಭಣೆಯಿಂದ ದಾನ ಮಾಡಿದನು. ಆದರೆ ಅದಕ್ಕೆ ಪ್ರತಿದ್ವಂದಿ ಸ್ಪಧರ್ಿ ಎಂಬಂತೆ ರಾಜನ ಅಧೀನದಲ್ಲಿರುವವನೊಬ್ಬ ಅದಕ್ಕಿಂತಲೂ ಚೆನ್ನಾಗಿ ದಾನವನ್ನು ಏರ್ಪಡಿಸಿದನು. ಇದರಿಂದಾಗಿ ರಾಜನಿಗೆ ಪಶ್ಚಾತ್ತಾಪವುಂಟಾಯಿತು. ಆದರೆ ರಾಣಿ ಮಲ್ಲಿಕಾಳು ಇದಕ್ಕಾಗಿ ಉಪಾಯವೊಂದನ್ನು ರಾಜನಿಗೆ ಹೇಳಿದಳು. ಅದರಂತೆಯೇ ರಾಜನು ಈ ಬಾರಿ ಸರಿಸಾಟಿಯಿಲ್ಲದ ದಾನಕ್ಕೆ ಏಪರ್ಾಟು ಮಾಡಿದನು. ಅದಕ್ಕಾಗಿ ಬೃಹತ್ತಾದ ಗುಡಾರವನ್ನು ಹಾಕಿಸಿದನು. ನಂತರ ಅಲ್ಲಿಗೆ ಬರುವ ಭಿಕ್ಷುಗಳಿಗೆ ಗೌರವ ಸೂಚಿಸಲು 500 ಆನೆಗಳು 500 ಶ್ವೇತ ಛತ್ರಿಗಳನ್ನು ಹಿಡಿದಿದ್ದವು. ಗುಡಾರದ ಮಧ್ಯೆ ಹತ್ತು ದೋಣಿಗಳು ಇದ್ದವು. ಅವುಗಳ ತುಂಬಾ ಸುಗಂಧ ದ್ರವ್ಯಗಳನ್ನು ತುಂಬಿಸಲಾಗಿತ್ತು. ಅಲ್ಲಿ ಬಡಿಸಲು ರಾಜಕುಮಾರಿಯರ ಗುಂಪೇ ಬರುತ್ತಿತ್ತು. ಎಲ್ಲಾ ಸಿದ್ಧತೆಗಳಾದ ಮೇಲೆ ಆಹಾರವನ್ನು ಬಡಿಸಲಾಯಿತು. ನಂತರ ರಾಜ ಉಳಿದ ರೀತಿಯಲ್ಲೂ ದಾನ ಮಾಡಿದನು. ಈ ರೀತಿ ರಾಜನು ಒಂದೇ ದಿನದಲ್ಲಿ 14 ದಶಲಕ್ಷ ಖಚರ್ು ಮಾಡಿ ಮಹಾನ್ ದಾನವನ್ನು ಏಪರ್ಾಟು ಮಾಡಿದ್ದನು.
ರಾಜನ ಬಳಿಯಲ್ಲಿ ಆಗ ಇಬ್ಬರು ಮಂತ್ರಿಗಳು ಸಹಾ ಇದ್ದರು. ಅವರೇ ಜನ್ಹ ಮತ್ತು ಕಾಲ. ಜನ್ಹನು ಈ ದಾನದಿಂದ ಅತ್ಯಂತ ಸಂಭ್ರಮಪಟ್ಟನು ಮತ್ತು ಆನಂದವೂ ಪಟ್ಟನು. ಆತನು ರಾಜನಿಗೆ ಇದು ಸರಿಸಾಟಿಯಿಲ್ಲದ ದಾನವಾಗಿದೆ ಮಹಾರಾಜ, ಯೋಗ್ಯ ದಾನವಾಗಿದೆ ಎಂದು ಪ್ರಶಂಸಿಸಿದನು. ಆದರೆ ಮಂತ್ರಿ ಕಾಲನಿಗೆ ಇದರಿಂದ ಸಂತೋಷವಾಗಲಿಲ್ಲ, ಆನಂದವೂ ಆಗಲಿಲ್ಲ. ಆತನು ಹೀಗೆ ಯೋಚಿಸಿದನು: ಈ ರಾಜನು ವ್ಯರ್ಥವಾಗಿ ಹಣವನ್ನು ಪೋಲು ಮಾಡುತ್ತಿದ್ದಾನೆ, ಈ ಭಿಕ್ಷುಗಳಿಗೇನು ತಿನ್ನುತ್ತಾರೆ ನಂತರ ವಿಹಾರಕ್ಕೆ ಹೋಗಿ ಮಲಗಿಬಿಡಬಹುದು.
ಭಗವಾನರು ಆಹಾರ ದಾನದ ನಂತರ ಅನುಮೋದನೆಯನ್ನು ಮಾಡಿ ಕಿರಿದಾದ ಧಮ್ಮೋಪದೇಶವನ್ನು ಮಾಡಿ ಅಲ್ಲಿಂದ ವಿಹಾರಕ್ಕೆ ಮರಳಿದರು.
ರಾಜನಿಗೆ ಆಶ್ಚರ್ಯವಾಯಿತು. ಇಂತಹ ಸರಿಸಾರಿಯಿಲ್ಲದ ದಾನವನ್ನು ಏಪರ್ಾಟು ಮಾಡಿದ್ದರೂ ಸಹಾ ಭಗವಾನರು ಕಿರಿದಾದ ಧಮ್ಮ ಬೋಧನೆಯನ್ನು ಏಕೆ ಮಾಡಿದರು? ನನ್ನಿಂದ ಏನಾದರೂ ಅಪಚಾರವು ಆಗಿಹೋಯಿತೆ? ಎಂದು ಚಿಂತಿಸುತ್ತಾ ಆತನು ವಿಹಾರಕ್ಕೆ ಪ್ರವೇಶಿಸಿ ಭಗವಾನರನ್ನು ಸಂದಶರ್ಿಸಿದನು. ಆಗ ಭಗವಾನರು ಆತನಿಗೆ ಹೀಗೆ ಹೇಳಿದರು:
ಓ ಮಹಾರಾಜ, ಸರಿಸಾಟಿಯಿಲ್ಲದ ದಾನವನ್ನು (ಅಸದಿನದಾನ) ಮಾಡಿದ್ದರೂ ಸಹಾ ಏಕೆ ತುಸು ಮಂಕಾಗಿರುವಿರಿ. ಈ ಮಹತ್ತರ ದಾನಕ್ಕಾಗಿ ನೀವು ಅಪಾರ ಆನಂದಪಡಬೇಕಿತ್ತು. ಈ ಬಗೆಯ ದಾನವು ಪ್ರತಿ ಬುದ್ಧರ ಆಗಮನದಲ್ಲಿ ಒಮ್ಮೆ ಮಾತ್ರ ಸಂಭವಿಸುತ್ತದೆ. ನಾನು ಕಿರು ಧಮ್ಮೋಪದೇಶ ನೀಡಿದ್ದಕ್ಕೆ ಕಾರಣವಿದೆ ಮಹಾರಾಜ, ನಿನ್ನ ಮಂತ್ರಿಗಳಲ್ಲಿ ಒಬ್ಬನು ದಾನವನ್ನೇ ವ್ಯರ್ಥವಾದುದು ಮತ್ತು ನಷ್ಟಕಾರಿ ಎಂದು ಭಾವಿಸುತ್ತಾನೆ. ಅದರಿಂದ ನನ್ನ ಬೋಧನೆ ಆಲಿಸುತ್ತಿದ್ದಂತೆ ಅವನಲ್ಲಿ ದ್ವೇಷವು ಹೆಚ್ಚಾಗುತ್ತಿತ್ತು. ಆ ದ್ವೇಷವು ಇನ್ನಷ್ಟು ಹೆಚ್ಚಾದರೆ, ಆ ಕುಕಮ್ಮ ಫಲದಂತೆ ಆತನಿಗೆ ಮುಂದೆ ಅಪಾರ ದುಃಖದ ಸ್ಥಿತಿಯು ಸಿಗುತ್ತಿತ್ತು. ಆದ್ದರಿಂದಾಗಿ ನಾನು ಬೋಧನೆಯನ್ನು ಅಲ್ಪವಾಗಿ ಬೋಧಿಸಿದೆನು. ನಂತರ ಹೀಗೆ ಮುಂದುವರೆಸಿದರು: ಓ ಮಹಾರಾಜ! ಮೂರ್ಖರು ದಾನದಲ್ಲಿ ಆನಂದಿಸುವುದಿಲ್ಲ, ಹೀಗಾಗಿ ದುರ್ಗತಿಗೆ ಹೋಗುವರು. ಆದರೆ ಜ್ಞಾನಿಗಳು ದಾನದಲ್ಲೇ ಆನಂದಿಸುವವರಾಗಿ ಸುಗತಿ ತಲುಪುವರು ಎಂದು ಹೇಳಿ ಈ ಗಾಥೆಯನ್ನು ನುಡಿದರು:
ಜಿಪುಣರು ದೇವಲೋಕವನ್ನು ತಲುಪಲಾರರು
ಮೂರ್ಖರು ದಾನವನ್ನು ಪ್ರಶಂಸಿಸಲಾರರು,
ಧೀರರಾದ ಜ್ಞಾನಿಗಳು ಮಾತ್ರ ದಾನದಲ್ಲಿ ಆನಂದಿತರಾಗಿ
ಪರಲೋಕದಲ್ಲಿ ಸುಖಿಸುವರು. (177)
8.3 ಜಿಪುಣತನದ ಮುಂದಿನ ಗತಿ (ಪುನರ್ಜನ್ಮದ ಕಥೆ)
ಶ್ರಾವಸ್ತಿಯಲ್ಲಿ ಆನಂದನೆಂಬ ಜಿಪುಣಾಗ್ರೇಸರನಿದ್ದನು. ಆತನು ಬಹಳ ಶ್ರೀಮಂತನಾದರೂ ದಾನಿಯಾಗಿರಲಿಲ್ಲ. ಆತನ ಮಗನಾದ ಮೂಲಸಿರಿಗೆ ಆತನು ಆಗಾಗ್ಗೆ ಈ ರೀತಿ ಹೇಳುತ್ತಿದ್ದನು. ನಾವು ಶ್ರೀಮಂತರೆಂದು ಯೋಚಿಸಲೇಬಾರದು, ನಾವು ಖಚರ್ು ಮಾಡಬಾರದು, ನಾವು ಸದಾ ಐಶ್ವರ್ಯವನ್ನು ಸಂಗ್ರಹ ಮಾಡುತ್ತಿರಬೇಕು, ಇಲ್ಲದೆ ಹೋದರೆ ನಮ್ಮ ಐಶ್ವರ್ಯವೇ ಕ್ಷಯಿಸಿಹೋಗುತ್ತದೆ. ಈ ಶ್ರೀಮಂತ ಆನಂದನು 5 ಬಿಂದಿಗೆಗಳಷ್ಟು ಚಿನ್ನವನ್ನು ತನ್ನ ಮನೆಯಲ್ಲಿ ಹೂತಿಟ್ಟು ಅದನ್ನು ಯಾರಿಗೂ ತಿಳಿಸದೆ ಸತ್ತುಹೋದನು.
ನಂತರ ಆತನು ಶ್ರಾವಸ್ತಿಯ ಸಮೀಪದ ಹಳ್ಳಿಯಲ್ಲಿ ಭಿಕ್ಷುಕರ ಮನೆಯಲ್ಲಿ ಹುಟ್ಟಿದನು. ಆತನು ತಾಯಿಯ ಗರ್ಭದಲ್ಲಿರುವಾಗ ಭಿಕ್ಷುಕರ ಆದಾಯವೇ ಕ್ಷೀಣಿಸಿತು. ಆಗ ಅವರಿಗೆ ತಮ್ಮಲ್ಲಿ ಯಾರು ದುರಾದೃಷ್ಟವಂತರಿದ್ದಾರೆ ಎನಿಸಿತು. ಅವರು ತಮ್ಮಲ್ಲೇ ವಿಭಾಗಿಸುತ್ತ ಪರೀಕ್ಷಿಸಿದಾಗ ಗಭರ್ಿಣಿ ಸ್ತ್ರೀಯ ದುರಾದೃಷ್ಟವಂತೆ ಎಂದು ಲೆಕ್ಕಾಚಾರ ಹಾಕಿದನು. ಹೀಗಾಗಿ ಆಕೆಯನ್ನು ಹಳ್ಳಿಯಿಂದ ದೂರ ಅಟ್ಟಿದರು. ಕೊನೆಗೆ ಆಕೆ ಕುರೂಪಿ ಅಸಹ್ಯಕರ ಮಗನನ್ನು ಹೆತ್ತಳು. ಆಕೆ ಒಂಟಿಯಾಗಿ ಆಹಾರಕ್ಕಾಗಿ ಭಿಕ್ಷೆಗೆ ಹೋದರೆ ಆಕೆಗೆ ಮೊದಲಿನಷ್ಟೇ ಸಿಗುತ್ತಿತ್ತು. ಒಂದುವೇಳೆ ಆತನನ್ನು ಕರೆದುಕೊಂಡು ಭಿಕ್ಷೆಗೆ ಹೋದರೆ ಆಕೆಗೆ ಏನೂ ಸಿಗುತ್ತಿರಲಿಲ್ಲ. ಹೀಗಾಗಿ ಆ ಹುಡುಗ ಸ್ವಲ್ಪ ದೊಡ್ಡವನಾದ ಮೇಲೆ ಆತನನ್ನು ಒಂಟಿಯಾಗಿಯೇ ಭಿಕ್ಷೆಗೆ ಕಳುಹಿಸುತ್ತಿದ್ದಳು. ಹೀಗಿರಲು ಆತನು ಸುತ್ತಾಡುತ್ತಾ ಒಂದುದಿನ ಶ್ರಾವಸ್ತಿಯ ಹಳೆಯ ಮನೆಗೆ ಬಂದನು. ತನ್ನ ಹಳೆಯ ನೆನಪಿನಿಂದ ಆತನು ಮನೆಯೊಳಗೆ ಪ್ರವೇಶಿಸಿದನು. ಆಗ ಮೂಲಸಿರಿಯ ಮಕ್ಕಳು ಆತನನ್ನು ಕಂಡು ಹೆದರಿ ಸೇವಕರಿಂದ ಆಚೆಗೆ ದಬ್ಬಿಸಿದರು.
ಅದೇವೇಳೆಯಲ್ಲಿ ಭಗವಾನರು ಈ ಘಟನೆ ನೋಡಿದನು. ಅವರು ಮೂಲಸಿರಿಯನ್ನು ಕರೆಯಿಸಿದರು. ನಂತರ ಆತನಿಗೆ ಆ ಭಿಕ್ಷುಕ ಅವರ ಸ್ವತಃ ತಂದೆ ಬೇರಾರು ಅಲ್ಲ ಎಂದು ಹೇಳಿದರು. ಆದರೆ ಆತನು ನಂಬಲಿಲ್ಲ. ನಂತರ ಭಗವಾನರು ಭಿಕ್ಷುಕನಿಗೆ ಕರೆಸಿ ಆತನು ಹಿಂದಿನ ಜನ್ಮದಲ್ಲಿ ಎಲ್ಲೆಲ್ಲಿ ನಿಧಿ ಅಡಗಿಸಿರುವನು ತೋರಿಸು ಎಂದಾಗ ಆತನು ತೋರಿಸಿದ ಕಡೆ ಚಿನ್ನವು ದೊರೆಯಿತು. ಆಗ ಮೂಲಸಿರಿಯು ಭಿಕ್ಷುಕನನ್ನು ತನ್ನ ತಂದೆ ಎಂದು ಒಪ್ಪಿದನು. ನಂತರ ಅವರು ಭಗವಾನರ ಉಪಾಸಕರಾದರು. ಆ ವೇಳೆಯಲ್ಲಿ ಭಗವಾನರು ಈ ಗಾಥೆಯನ್ನು ನುಡಿದರು:
ನನಗೆ ಪುತ್ರರಿರುವರು, ನನ್ನಲ್ಲಿ ಧನವು ಇರುವುದು ಎಂದು ಮೂರ್ಖರು ಚಿಂತೆಪಡುವರು. ತಾನೇ ತನ್ನವಲ್ಲ ಎಂದಮೇಲೆ ಎಲ್ಲಿಯ ಪುತ್ರರು, ಎಲ್ಲಿಯ ಧನ.
8.4 ಕೋಸಿಯಾ ಕೃಪಣನ ಕಸಿವಿಸಿ
ರಾಜಗೃಹದ ಸಮೀಪ ಸಕ್ಕಾರವೆಂಬ ಹಳ್ಳಿಯಿತ್ತು. ಅಲ್ಲಿ ಕೋಸಿಯನೆಂಬ ಶ್ರೀಮಂತ ಕೃಪಣನಿದ್ದನು. ಆತನು ಯಾರಿಗೂ ಏನನ್ನೂ ಸ್ವಲ್ಪವೂ ದಾನ ನೀಡುತ್ತಿರಲಿಲ್ಲ. ಒಂದುದಿನ ಆತನಿಗೆ ಒಬ್ಬಟ್ಟಿನಂತಹ ತಿಂಡಿ ತಿನ್ನುವ ಬಯಕೆಯಾಯಿತು. ಆದರೆ ಪರರಲ್ಲಿ ಹಂಚಿ ತಿನ್ನುವ ಪ್ರವೃತ್ತಿ ಆತನಲ್ಲಿ ಇಲ್ಲದ ಕಾರಣ ಆತನು ತನ್ನ ಪತ್ನಿಯೊಂದಿಗೆ ಮಹಡಿಯ ಎತ್ತರದ ಅಂತಸ್ತಿನಲ್ಲಿ ಕುಳಿತು ಅಲ್ಲಿ ಯಾರೂ ಕಾಣಲಾರರು ಎಂಬ ನಿರಾಳ ಹೊಂದಿ ಇಬ್ಬರೂ ಒಬ್ಬಟ್ಟು ತಯಾರಿಸಲಾರಂಭಿಸಿದರು.
ಅಂದು ಮುಂಜಾನೆಯೇ ಭಗವಾನರು ತಮ್ಮ ದಿವ್ಯದೃಷ್ಟಿಯಿಂದಾಗಿ ಈ ಇಬ್ಬರು ದಂಪತಿಗಳು ಸೋತಪನ್ನರಾಗುತ್ತಾರೆ ಎಂದು ತಿಳಿಸಿದರು. ಆದ್ದರಿಂದ ಅವರು ಋದ್ದಿಶಕ್ತಿ ಪ್ರವೀಣ ಮಹಾ ಮೊಗ್ಗಲಾನರನ್ನು ಕರೆಸಿ ಆ ಶ್ರೀಮಂತ ದಂಪತಿಯನ್ನು ಮಧ್ಯಾಹ್ನದ ಹೊತ್ತಿಗೆ ಕರೆತರಬೇಕೆಂದು ತಿಳಿಸಿದರು. ಇದ್ದಿಬಲಗಳನ್ನು ಹೊಂದಿದ್ದ ಮೊಗ್ಗಲಾನರು ತಕ್ಷಣ ಅಲ್ಲಿಂದ ಮರೆಯಾಗಿ ಕೋಸಿಯನ ಉಪ್ಪರಿಗೆಯ ಕಿಟಕಿ ಬಳಿ ನಿಂತರು.
ಕೋಸಿಯ ಮೊಗ್ಗಲಾನರನ್ನು ನೋಡಿದ. ಅಲ್ಲಿಂದ ಹೊರಹೋಗುವಂತೆ ಕೂಗಾಡಿದ. ಆದರೆ ಮೊಗ್ಗಲಾನರು ಏನನ್ನು ನುಡಿಯದೆ ನಿಶ್ಶಬ್ದದಿಂದಿದ್ದರು. ಕೊನೆಗೆ ಕೋಸಿಯನೆ ಸೋತು ಹೆಂಡತಿಯೊಡನೆ ಹೀಗೆ ಹೇಳಿದನು ಚೂರು ಒಬ್ಬಟ್ಟು ಮಾಡಿ ಆ ಭಿಕ್ಷುವಿಗೆ ನೀಡು ಆಕೆ ಅದರಂತೆ ಮಾಡಿದಳು. ಆದರೆ ಆಶ್ಚರ್ಯ! ಅದು ಇಡೀ ಬಾಣಲಿಯನ್ನೇ ತುಂಬಿಸಿತು. ಕೋಸಿಯನಿಗೆ ಹೆಂಡತಿ ಹೆಚ್ಚು ಹಾಕಿರಬಹುದೆಂದು ಆಕೆಯನ್ನು ಬಯ್ದು ತಾನೇ ಚೂರು ಒಬ್ಬಟ್ಟನ್ನು ಬಾಣಲಿಗೆ ಹಾಕಿದ. ಅದೂ ಸಹ ಇಡೀ ಬಾಣಲಿಯನ್ನು ತುಂಬಿಸಿತು. ಆತ ಎಷ್ಟೇ ಚಿಕ್ಕ ಚೂರು ಬಾಣಲಿಗೆ ಹಾಕಿದರೂ ಅದು ಇಡೀ ಬಾಣಲಿಯಷ್ಟು ದಪ್ಪವಾಗಿ ಉಬ್ಬುತ್ತಿತ್ತು. ಕೊನೆಗೆ ಕೋಸಿಯನು ಹೆಂಡತಿಗೆ ಒಂದು ಒಬ್ಬಟ್ಟನ್ನು ಮೊಗ್ಗಲಾನರಿಗೆ ಕೊಟ್ಟು ಕಳುಹಿಸು ಎಂದನು. ಆಕೆ ಹಾಗೇ ಮಾಡಲು ಹೋದಾಗ ಎಲ್ಲಾ ಒಬ್ಬಟ್ಟುಗಳು ಅಂಟಿಕೊಂಡಿದ್ದವು. ಆಕೆಗೆ ಒಂದನ್ನು ಪ್ರತ್ಯೇಕಿಸಲು ಆಗಲಿಲ್ಲ. ಕೊನೆಗೆ ಕೋಸಿಯನೇ ಬೇರ್ಪಡಿಸಲು ಪ್ರಯತ್ನಿಸಿದನು. ಆದರೆ ಅದು ಸಾಧ್ಯವಾಗದೆ ನಿರಾಶೆಯಾಗಿ ಆತನ ಅಭಿಲಾಶೆ ಮತ್ತು ಹಸಿವು ಕಳೆದುಕೊಂಡನು. ಎಲ್ಲವನ್ನೂ ಈ ಭಿಕ್ಷುವಿಗೆ ನೀಡು ಎಂದನು. ಅದನ್ನು ಸ್ವೀಕರಿಸಿದ ಮೊಗ್ಗಲಾನರು ದಾನದ ಬಗ್ಗೆ ಪ್ರವಚನವೊಂದನ್ನು ನುಡಿದರು. ನಂತರ ಅವರಿಗೆ ಅವರಿಗಾಗಿ ಬುದ್ಧರು ಮತ್ತು ಸಂಘವು ಕಾಯುತ್ತಿದೆ ಎಂದು ಹೇಳಿದರು. ಶ್ರಾವಸ್ತಿಯ ಜೇತವನವು ಅಲ್ಲಿ 45 ಯೋಜನ ದೂರವಿತ್ತು. ಆದರೆ ಮಹಾ ಮೊಗ್ಗಲಾನರವರ ತಮ್ಮ ಅತೀಂದ್ರೀಯ ಶಕ್ತಿಯಿಂದಾಗಿ ಕೋಸಿಯ, ಆತನ ಪತ್ನಿ ಮತ್ತು ಒಬ್ಬಟ್ಟುಗಳ ಬುಟ್ಟಿಯ ಸಮೇತ ಬುದ್ಧರ ಮುಂದೆ ಪ್ರತ್ಯಕ್ಷರಾದರು. ಆ ಒಬ್ಬಟ್ಟುಗಳನ್ನು 500 ಭಿಕ್ಷುಗಳಿಗೆ ದಾನ ನೀಡಿದರು. ಆ ಒಬ್ಬಟ್ಟಿನ ಬುಟ್ಟಿಯು ಸರಿಯಾಗಿ 500 ಭಿಕ್ಷುಗಳಿಗೆ ಸರಿಹೋಯಿತು. ನಂತರ ಭಗವಾನರು ನೀಡಿದ ಉಪದೇಶದಿಂದ ಅವರು ಸೋತಪತ್ತಿಫಲ ಪಡೆದರು.
ಸಂಜೆ ಭಿಕ್ಷುಗಳು ಮಹಾಮೊಗ್ಗಲಾನರ ಪ್ರತಾಪವನ್ನು ಮೆಚ್ಚಿ ಆ ವಿಷಯವನ್ನು ಚಚರ್ಿಸುವಾಗ ಭಗವಾನರು ಅಲ್ಲಿ ಬಂದರು ಮತ್ತು ಹೀಗೆ ಹೇಳಿದರು ಭಿಕ್ಷುಗಳೇ, ನೀವು ಸಹಾ ಮೊಗ್ಗಲಾನರ ತರಹ ಜೀವಿಸಬೇಕು. ಗ್ರಾಮದವರಿಂದ ಆಹಾರ ಪಡೆಯುವಾಗ ಅವರ ಶ್ರದ್ಧೆಗೆ ಮತ್ತು ಐಶ್ವರ್ಯಕ್ಕೆ ಯಾವುದೇ ಹಾನಿಯಾಗದಂತೆ ಸಂಚರಿಸಬೇಕು ಎಂದರು. ಆಗ ಭಗವಾನರು ಈ ಗಾಥೆಯನ್ನು ನುಡಿದರು:
ಹೇಗೆ ಭ್ರಮರವು ಪುಷ್ಪಕ್ಕೆ ಅಥವಾ ಅದರ ವರ್ಣಕ್ಕೆ ಅಥವಾ ಗಂಧಕ್ಕೆ ಹಾನಿಮಾಡದೆ ಕೇವಲ ರಸವನ್ನು ತೆಗೆದುಕೊಳ್ಳವ ಹಾಗೆ ಮುನಿಗಳು ಗ್ರಾಮಗಳಲ್ಲಿ ಚಲಿಸುತ್ತಾರೆ.
8.5 ಅವನತಿಗೆ ಕಾರಣ
ಯಾರು ಶ್ರೀಮಂತರಾಗಿದ್ದರೂ ಸಹಾ ವೃದ್ಧಾವಸ್ಥೆಯಲ್ಲಿರುವ ತಮ್ಮ ತಂದೆ-ತಾಯಿಗಳನ್ನು ಸಲುಹುವುದಿಲ್ಲವೋ ಅದು ನಿಜಕ್ಕೂ ಆತನ ಅವನತಿಗೆ ಕಾರಣವಾಗಿದೆ.(8)
ಯಾರು ಅಪಾರ ಸಿರಿಯನ್ನು ಹೊಂದಿದ್ದರೂ, ಚಿನ್ನದಿಂದ ಮತ್ತು ಅಪಾರ ಆಹಾರದಿಂದ ತುಂಬಿ ಹೋಗಿದ್ದರೂ ಸಹಾ ಒಂಟಿಯಾಗಿಯೇ ಅವನ್ನೆಲ್ಲಾ ಭೋಗಿಸಲು ಸಿದ್ಧನಾಗಿರುವನೋ ಅದು ನಿಜಕ್ಕೂ ಆತನ ಅವನತಿಗೆ ಕಾರಣವಾಗಿದೆ. (12)
ಯಾರು ತನ್ನ ಜನ್ಮದ ಕಾರಣದಿಂದಾಗಿ, ಅಥವಾ ಐಶ್ವರ್ಯದ ಕಾರಣದಿಂದಾಗಿ ಅಥವಾ ವಂಶದ ಕಾರಣದಿಂದಾಗಿ ಅಹಂಕಾರಪಡುತ್ತಿರುವನೋ ಮತ್ತು ತನ್ನ ಬಂಧು ಬಾಂಧವರನ್ನು ಕೀಳಾಗಿ ಕಾಣುವನೋ ಅದು ನಿಜಕ್ಕೂ ಆತನ ಅವನತಿಗೆ ಕಾರಣವಾಗಿದೆ (14) - ಪರಾಭವ ಸುತ 

Thursday, 24 July 2014

Daana hrudaya vikasana pdf

DAANADA UDDESHA-the purpose of giving

 ದಾನದ ಉದ್ದೇಶ
ದಾನಕ್ಕೆ ಹಲವಾರು ಉದ್ದೇಶಗಳಿವೆ :


  • ಪರರಲ್ಲಿ ಬಾಂಧವ್ಯ ಗಳಿಸಲು ಮತ್ತು ವೃದ್ಧಿಸಲು ದಾನಭ್ಯಾಸ.
  • ಸುಖ್ಯಾತಿ ಹೊಂದಲು ಮತ್ತು ವೃದ್ಧಿಸಲು ದಾನಭ್ಯಾಸ.
  • ಸಂಕಷ್ಟಗಳಿಂದ ದೂರಾಗಲು ದಾನಭ್ಯಾಸ.
  • ಧಮ್ಮಪಥದಲ್ಲಿ ಮುಂದುವರೆಯಲು ದಾನಭ್ಯಾಸ.
  •       ಉತ್ತಮ ಮಾನವನಾಗಲು ದಾನಭ್ಯಾಸ.
  • ಮುಂದಿನ ಜನ್ಮದಲ್ಲಿ ಸುಂದರವಾಗಿ, ಸುಖಿಯಾಗಿ ಯಶಸ್ವಿಯಾಗಲು ದಾನಭ್ಯಾಸ.
  • ಮುಂದಿನ ಜನ್ಮದಲ್ಲಿ ಶ್ರೀಮಂತರಾಗಿ ಹುಟ್ಟಲು ದಾನಭ್ಯಾಸ.
  • ಶ್ರೇಷ್ಠವಾದ ಆನಂದ ಪಡೆಯಲು ದಾನಭ್ಯಾಸ.
  • ಪರೋಕ್ಷವಾಗಿ ಸಮಾಧಿ ಪಡೆಯಲು ದಾನಭ್ಯಾಸ.
  • ತೀವ್ರಲಾಲಸೆ ಮತ್ತು ಅಂಟುವಿಕೆಯಿಂದ ಮುಕ್ತರಾಗಲು ದಾನಭ್ಯಾಸ.
  • ಜೀವನದಲ್ಲಿ ಕುಗ್ಗದೆ, ವಿಶ್ವಾಸದಿಂದ ಜೀವಿಸಲು ದಾನಭ್ಯಾಸ.
  • ಪ್ರಶಾಂತ ಮರಣ ಪಡೆಯಲು ದಾನಭ್ಯಾಸ.
  • ಮುಂದಿನ ಜನ್ಮದಲ್ಲೂ ಸುಖಿಯಾಗಿರಲು ದಾನಭ್ಯಾಸ.
  • ಮತ್ತೆ ಮಾನವರಾಗಲು ದಾನಭ್ಯಾಸ.
  • ಸುಗತಿ ಪಡೆಯಲು ದಾನಭ್ಯಾಸ.
  • ದೇವ ದೇವತೆಗಳಾಗಲು ದಾನಭ್ಯಾಸ.
  • ಇಂದ್ರನಾಗಲು ದಾನಭ್ಯಾಸ.
  • ಬ್ರಹ್ಮಲೋಕಗಾಮಿಯಾಗಲು ದಾನಭ್ಯಾಸ.
  • ತಾನು ತನ್ನದೆಂಬ ಬಂಧನ ಮೀರಿಹೋಗಲು ದಾನಭ್ಯಾಸ.
  • ಬಹುಜನರಿಗೆ, ಬಹುಜೀವಿಗಳಿಗೆ ಹಿತಸುಖ ಕ್ಷೇಮ ತರಲು ದಾನಭ್ಯಾಸ.
  • ಪಾರಮಿಗಳು ಪರಿಪೂರ್ಣಗೊಳಿಸಲು ದಾನಭ್ಯಾಸ.
  • ವಿಶುದ್ಧರಾಗಲು, ವಿಮುಕ್ತಿ ಪಡೆಯಲು, ಬೋಧಿ ಪಡೆಯಲು ದಾನಭ್ಯಾಸ.
  • ಅಂತಿಮ ಗುರಿಯಾದ ನಿಬ್ಬಾಣ ಸಾಧಿಸಲು ದಾನಭ್ಯಾಸ.
  • ಬೋಧಿಸತ್ತರಾಗಲು ದಾನಭ್ಯಾಸ.
  • ಅನುತ್ತರವಾದ ಸಮ್ಮಾಸಂಬೋಧಿ ಪಡೆಯಲು ದಾನಭ್ಯಾಸ.
  • ಸರ್ವರಿಗೆ ದುಃಖದಿಂದ ವಿಮುಕ್ತರನ್ನಾಗಿಸಲು ದಾನಭ್ಯಾಸ.

3.2 ದಾನಕ್ಕೆ ಚಾಲನ ಬಲಗಳು
ಯಾವುದೇ ವಸ್ತುವನ್ನು ತಳ್ಳದೆ (ಬಾಹ್ಯದ ಬಲಪ್ರಯೋಗವಿಲ್ಲದೆ) ತಾನಾಗಿಯೇ ಚಲಿಸುವುದಿಲ್ಲ ಎಂದು ವಿಜ್ಞಾನಿ ನ್ಯೂಟನ್ನನ ನುಡಿಯಾಗಿದೆ.
ಭಗವಾನರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ
ಕಾರಣವಿಲ್ಲದೆ ದುಃಖವಿಲ್ಲ
ಇಚ್ಛೆಯಿಲ್ಲದೆ ಕರ್ಮವಿಲ್ಲ
ದಾನವಿಲ್ಲದೆ ಸುಖವಿಲ್ಲ ಇತ್ಯಾದಿ ಶ್ರೇಷ್ಠ ಸತ್ಯಗಳನ್ನು ಶತಮಾನಗಳ ಹಿಂದೆಯೇ ನುಡಿದಿದ್ದಾರೆ. ಹಾಗಿರಬೇಕಾದರೆ ಈ ದಾನಕ್ಕೂ ಪ್ರೇರಣಾಬಲಗಳು ಇರಲೇಬೇಕು ಅವು ಹೀಗಿದೆ.
ಭಗವಾನರು ಅಂಗುತ್ತರ ನಿಕಯದಲ್ಲಿ ಎಂಟು ಚಾಲನ (ಪ್ರೇರಣ) ಬಲಗಳನ್ನು ನೀಡಿದ್ದಾರೆ, ಅವು ಹೀಗಿದೆ.
1. ದ್ವೇಷಬಲ : ಪರರಿಗೆ ಅಪಮಾನಗೊಳಿಸಲು ದಾನವನ್ನು ನೀಡುತ್ತಾರೆ, ಇಲ್ಲಿ ದ್ವೇಷವೇ ಮೂಲವಾಗಿದೆ.
2. ಭಯಬಲ : ಕೆಲವು ಜನರ ಭಯದಿಂದ ಅಥವಾ ದುರ್ಗತಿ ಭಯದಿಂದ, ಅಥವಾ ನಿಂದಾ ಭಯದಿಂದ ದಾನ ಮಾಡುವರು.
3. ಕೃತಜ್ಞತಾಬಲ : ಹಿಂದೆ ನನಗೆ ಈತನು ಸಹಾಯ ಮಾಡಿದ್ದಾನೆ. ನಾನು ಸಹಾ ಈತನಿಗೆ ಸಹಾಯ ಮಾಡಬೇಕು ಎಂಬ ಕೃತಜ್ಞತಾ ಬಲದಿಂದ ದಾನ ಮಾಡುವುದು.
4. ಆಶಾಬಲ : ಮುಂದೆ ನಮಗೆ ಒಳ್ಳೆಯದಾಗಬಹುದೆಂದು ನಂಬಿ, ಪುಣ್ಯ ಫಲಕ್ಕಾಗಿ ನಂಬಿ, ದಾನ ಮಾಡುವರು.
5. ಸಾಧುಬಲ : ದಾನ ಒಳ್ಳೆಯದು. ಆದ್ದರಿಂದ ದಾನ ಮಾಡುವೆ ಎಂದು. ಒಳ್ಳೆಯದು ಎಂಬ (ಸಾಧು) ಭಾವದಲ್ಲಿ ದಾನ ಮಾಡುತ್ತಾರೆ.
6. ಕರುಣಾಬಲ: ನಾನು ಸುಸ್ಥಿತಿಯಲ್ಲಿಹೆನು, ಪರರು ಕಷ್ಟದಲ್ಲಿದ್ದಾರೆ. ನಾನು ಆಹಾರ ಪಡೆದಿಹೆನು, ಪರರು ಪಡೆದಿಲ್ಲ. ಆದ್ದರಿಂದಾಗಿ ದಾನ ಮಾಡುವೆ ಎಂಬ ಕರುಣಾ ಬಲದಿಂದಾಗಿ ದಾನ ಮಾಡುತ್ತಾರೆ.
7. ಕೀತರ್ಿಬಲ : ದಾನ ನೀಡುವುದರಿಂದ ನನ್ನ ಖ್ಯಾತಿಯು ಹಬ್ಬುವುದು ಎಂದು ದಾನ ಮಾಡುತ್ತಾರೆ.
8. ಚಿತ್ತ ನಿಮರ್ಾಣ ಬಲ : ಚಿತ್ತ (ಮನಸ್ಸನ್ನು) ಸುಂದರವಾಗಿ, ವಿಶುದ್ಧವಾಗಿ, ನಿಮರ್ಿಸಲು, ವ್ಯಕ್ತಿತ್ವ ವಿಕಸಿಸಲು ದಾನ ಮಾಡುತ್ತಾರೆ.
3.3 ದಾನವು ಹೇಗಿರಬೇಕು?
1. ಸ್ವಚ್ಛವಾದ, ಶುದ್ಧವಾದ ವಸ್ತುಗಳನ್ನು ನೀಡಬೇಕು.
2. ಉತ್ತಮ ಆಯ್ಕೆಯ ವಸ್ತುಗಳನ್ನು ನೀಡಬೇಕು.
3. ಸಕಾಲಿಕವಾಗಿಯೇ ದಾನ ನೀಡಬೇಕು.
4. ಯೋಗ್ಯವಾದುದನ್ನೇ ದಾನ ನೀಡಬೇಕು.
5. ವಿವೇಚನಾಯುಕ್ತವಾಗಿಯೇ ದಾನ ನೀಡಬೇಕು.
6. ನಿತ್ಯವೂ ಅಥವಾ ನಿರಂತರ ದಾನ ನೀಡಬೇಕು.
7. ದಾನದ ನಂತರ ಆನಂದವಾಗಿರಬೇಕು.
3.4 ದಾನ ನೀಡುವ ಸಂದರ್ಭದಲ್ಲಿ ದಾನಿ ಹೇಗಿರಬೇಕು?
ಆನಂದದಲ್ಲಿ ಮೂರು ಬಗೆಗಳಿವೆ:
ದಾನ ನೀಡುವ ಮುನ್ನ ಆನಂದದಿಂದ ಕೂಡಿರಬೇಕು. ದಾನ ನೀಡುವಾಗ ಸಂತೃಪ್ತಿಯಿಂದ ಇರಬೇಕು ಮತ್ತು ದಾನ ನೀಡಿದ ನಂತರ ಆ ಸ್ಮರಣೆಯಿಂದ ಆನಂದ ಉಕ್ಕುತ್ತಿರಬೇಕು.
ದಾನ ಮಾಡುವ ಸಂದರ್ಭದಲ್ಲಿ ಇಚ್ಛಾಶಕ್ತಿಯಿರಬೇಕು. ಅಂದರೆ ಇಚ್ಛೆಯಿಂದ ಕೂಡಿರಬೇಕು ಮತ್ತು ಧಮ್ಮ ನಿಯಮದ ಬಗ್ಗೆ ಅಪಾರ ಶ್ರದ್ಧೆ ಹೊಂದಿರಬೇಕು.
ಇಚ್ಛೆಯಲ್ಲಿ ಮೂರು ವಿಧಗಳಿವೆ
1. ಪುಬ್ಬಚೇತನ (ಪೂರ್ವ ಇಚ್ಛೆ): ಅಂದರೆ ದಾನ ನೀಡುವ ಮುಂಚೆಯೇ ಇಚ್ಛೆ ಹೊಂದಿರುವಿಕೆ.
2. ಮುಂಚಚೇತನ (ವರ್ತಮಾನ ಇಚ್ಛೆ) : ಅಂದರೆ ದಾನ ನೀಡುತ್ತಿರುವಾಗ ಇಚ್ಛೆಯನ್ನು ಪಠಿಸುವಿಕೆ.
3. ಅಪರಚೇತನ (ನಂತರದ ಇಚ್ಛೆ): ಅಂದರೆ ದಾನ ನೀಡಿದ ನಂತರ ಇಚ್ಛೆಯನ್ನು ದೃಢೀಕರಿಸಿ ಶ್ರದ್ಧೆ ಹೊಂದಿ ಆನಂದಿಸುವಿಕೆ.
ಮತ್ತು ದಾನಿಯು ಶೀಲವಂತನಾಗಿದ್ದರೆ ಅಂತಹ ದಾನಕ್ಕೆ ಮಹತ್ಫಲ ಸಿಗುವುದು.
3.5 ಸರಿಯಾಗಿ ದಾನ ಮಾಡುವುದು ಹೇಗೆ ?

  • ಇಲ್ಲಿ ದಾನಿಯು ಪರಿಶುದ್ಧವಾದ ವಸ್ತುಗಳನ್ನು ನೀಡುತ್ತಾನೆ.
  • ಇಲ್ಲಿ ದಾನಿಯು ಉತ್ಕೃಷ್ಟವಾದುದನ್ನೇ ನೀಡುತ್ತಾನೆ.
  • ಇಲ್ಲಿ ದಾನಿಯು ಸಕಾಲದಲ್ಲಿ ದಾನ ಮಾಡುತ್ತಾನೆ.
  • ಇಲ್ಲಿ ದಾನಿಯು ಭಿಕ್ಷುಗಳಿಗೆ ಯೋಗ್ಯವಾದುದನ್ನು ಅಥವಾ ಸ್ವೀಕೃತರಿಗೆ ಯೋಗ್ಯವಾದುದನ್ನೇ ನೀಡುತ್ತಾನೆ.
  • ಇಲ್ಲಿ ದಾನಿಯು ಜೋಪಾನವಾಗಿ ನೀಡುತ್ತಾನೆ.
  • ಇಲ್ಲಿ ದಾನಿಯು ಆಗಾಗ್ಗೆ ದಾನವನ್ನು ಮಾಡುತ್ತಲೇ ಇರುತ್ತಾನೆ.
  • ಇಲ್ಲಿ ದಾನಿಯು ದಾನವನ್ನು ನೀಡುತ್ತಾ ಶಾಂತತೆ ಮತ್ತು ಆನಂದವನ್ನು ವೃದ್ಧಿಸುತ್ತಾನೆ.
  • ಇಲ್ಲಿ ದಾನಿಯು ದಾನದ ನಂತರ ಅತ್ಯಂತ ಆನಂದ ತಾಳುತ್ತಾನೆ.

ದಾನವನ್ನು ಅತ್ಯಂತ ಗೌರವಯುತವಾಗಿ ನೀಡಬೇಕೇ ಹೊರತು, ಎಸೆಯುವುದಾಗಲಿ, ಬೇಕಾಬಿಟ್ಟಿಯಾಗಿ ನೀಡುವುದಾಗಲಿ, ಅಹಂಕಾರದಿಂದ ನೀಡುವುದಾಗಲಿ ಮಾಡಕೂಡದು. ವಿನಮ್ರನಾಗಿ, ಮುಗುಳ್ನಗುತ್ತಾ, ಆನಂದಭರಿತನಾಗಿ ನೀಡಬೇಕು. ಮೈತ್ರಿಭರಿತವಾಗಿ ದಾನ ಮಾಡಬೇಕು. ಅತಿಥಿಗಳು ಭಿಕ್ಷುಗಳಾಗಿದ್ದರೆ ಭಕ್ತಿಯಿಂದ, ಗೌರವದಿಂದ ದಾನ ಮಾಡಬೇಕು. ಅತಿಥಿಗಳು ಬಡವರಾಗಿದ್ದರೆ, ರೋಗಿಗಳಾಗಿದ್ದರೆ ಕರುಣೆಯಿಂದ, ದಯೆಯಿಂದ ದಾನ ಮಾಡಬೇಕು. ಅತಿಥಿಗಳು ಮಿತ್ರರಾಗಿದ್ದರೆ ಮೈತ್ರಿಯಿಂದ, ಮುದಿತಾದಿಂದ (ಆನಂದದಿಂದ) ದಾನ ನೀಡಬೇಕು. ನೀವು ಬೇರೊಬ್ಬರನ್ನು ದಾನಕ್ಕೆ ನೇಮಿಸಿದರೂ ಸಹಾ ನೀವೂ ದಾನ ಕ್ರಿಯೆಯಲ್ಲಿ ಪಾಲ್ಗೊಂಡು ನಿಮ್ಮ ಕೈಯಾರೆ ದಾನ ಮಾಡಬೇಕು. ಮಕ್ಕಳಿಗೆ ದಾನ ನೀಡುವಾಗ ವಾತ್ಸಲ್ಯವು ನಿಮ್ಮಲ್ಲಿ ಇರಬೇಕು. ನೀವು ಸದಾ ಇರುವುದರಲ್ಲಿ ಉತ್ತಮವಾದುದನ್ನೇ ದಾನ ಮಾಡಬೇಕೇ ಹೊರತು ಬಿಸಾಡುವ ಬದಲು ದಾನ ಎಂಬ ಧೋರಣೆ ಇರಬಾರದು. ಉಪಯುಕ್ತವಾದುದನ್ನು ಆನಂದಭರಿತವಾಗಿ ನೀಡಬೇಕು.
3.6 ದಾನದ ನಂತರ ನೀವು ಹೇಗಿರಬೇಕು ?
ನೀವು ದಾನ ನೀಡಿದ ನಂತರೂ ಅದರ ಸ್ಮರಣೆಯಿಂದ ಆನಂದ ತಾಳುತ್ತಲೇ ಇರಬಹುದು. ಕೆಲವರು ಈ ಆನಂದದ ಕಾರಣದಿಂದಲೇ ಸಮಾಧಿಯನ್ನು ಹೊಂದಿರುವಂತಹ ಘಟನೆಗಳಿವೆ ಅಥವಾ ಆ ಘಟನೆಯನ್ನು ಮರೆತು ಮತ್ತೆ ಮುಂದಿನ ದಾನದ ಬಗ್ಗೆ ಯೋಚಿಸಿ, ಮತ್ತೆ ದಾನಕ್ಕೆ ಸಿದ್ಧರಾಗಬಹುದು.
ದಾನಿಗೆ ಎಷ್ಟು ದಾನ ಮಾಡಿದರೂ ತೃಪ್ತಿಯಾಗದು ಎಂಬುದು ಬೋಧಿಸತ್ವರ ಹೇಳಿಕೆಯಾಗಿದೆ. ಕೆಲವರು ತಾವು ನೀಡಿದ ದಾನದಿಂದಾಗಿ ಹಾಗು ಆ ದಾನ ಸ್ಮರಣೆಯಿಂದಾಗಿ ಮುಂದೆ ಸುಗತಿಯನ್ನು ಹೊಂದಿರುವಂತಹ ಘಟನೆಗಳು ಅಪಾರವಾಗಿ ನಮಗೆ ತಿಪಿಟಕ ಸಾಹಿತ್ಯದಲ್ಲಿ ಸಿಗುತ್ತದೆ. ಆ ಘಟನೆಯ ಪ್ರಕಾರ ದಾನಿಯು ತಾನು ಮರಣಾವಸ್ಥೆಯಲ್ಲಿರುವಾಗ ತಾನು ಮಾಡಿದ ದಾನದ ಸ್ಮರಣೆ ತಂದುಕೊಂಡು, ಆನಂದಭರಿತನಾಗಿ ಪಚ್ಚಾತ್ತಾಪವಿಲ್ಲದೆ ಸುಗತಿ ತಂದುಕೊಳ್ಳುತ್ತಾನೆ.
ದಾನದ ನಂತರ ಪಶ್ಚಾತ್ತಾಪ ಎಂದಿಗೂ ಕೂಡದು. ದಾನದ ನಂತರ ಆಯ್ಯೋ ಇಷ್ಟು ಹಣ ಪೋಲಾಯಿತಲ್ಲ, ಇದನ್ನು ನಾನೇ ಅಥವಾ ನನ್ನ ಕುಟುಂಬದವರು ಅನುಭವಿಸಬಹುದಿತ್ತಲ್ಲ ಎಂದು ಪಶ್ಚಾತ್ತಾಪಪಡಬಾರದು. ಇದರಿಂದಾಗಿ ನಿಮಗೆ ಮುಂದೆ ದಾನದ ಫಲ ಸಿಕ್ಕರೂ, ನೀವು ಅದನ್ನು ಅನುಭವಿಸಲಾರಿರಿ.
ದಾನದ ನಂತರ, ನೀವು ದಾನ ಮಾಡಿದ ವ್ಯಕ್ತಿಗಳನ್ನು ನಿಮ್ಮ ಋಣಿಗಳೆಂದು ಎಂದಿಗೂ ಭಾವಿಸಬಾರದು. ಬದಲಾಗಿ ನೀವೇ ಅವರಿಗೆ ಋಣಿಗಳಾಗಿದ್ದೀರಿ. ಏಕೆಂದರೆ ನಿಮಗೆ ಪುಣ್ಯದ ಅವಕಾಶ ಅವರು ನಿಮಗೆ ನೀಡಿದ್ದಾರೆ. ಆದ್ದರಿಂದಾಗಿ ನೀವು ಅವರನ್ನು ಆ ದೃಷ್ಟಿಯಿಂದ ನೋಡಬಾರದು. ಆ ರೀತಿ ವತರ್ಿಸಬಾರದು. ಅಹಂಕಾರದ, ದರ್ಪದ ವರ್ತನೆ ಮಾಡಕೂಡದು. ಅಷ್ಟೇ ಅಲ್ಲ, ಅವರಿಂದ ಪ್ರತಿಯಾಗಿ ದಾನದ ಅಪೇಕ್ಷೆ, ಸಹಾಯದ ಬಯಕೆಯನ್ನು ನೀವು ಇಟ್ಟುಕೊಳ್ಳಬಾರದು.
3.7 ದಾನ ನೀಡಿದ ನಂತರ ಆ ವಸ್ತುಗಳೆಲ್ಲ ಅವರದೆಯೇ?
ದಾನದ ನಂತರ ಆ ವಸ್ತುಗಳೆಲ್ಲವೂ ಖಂಡಿತವಾಗಿ ಅವರದೇ ಆಗುತ್ತದೆ. ಅದರಿಂದಾಗಿ ಆ ವಸ್ತುಗಳ ಸ್ಮರಣೆ ಸಹಾ ಪುನಃ ಮಾಡಕೂಡದು, ನಿಮ್ಮದೆಂದು ನೀವು ಎಂದಿಗೂ ಭಾವಿಸಬಾರದು. ಅವರು ಆ ವಸ್ತುಗಳನ್ನು ಸದ್ಭಳಕೆ ಮಾಡಬಹುದು. ಅಥವಾ ಇನ್ನೊಬ್ಬರಿಗೆ ನೀಡಬಹುದು ಅಥವಾ ಬಳಕೆಯೇ ಮಾಡದಿರಬಹುದು. ಅದನ್ನು ಕುರಿತು ನೀವು ಯೋಚಿಸಬಾರದು. ಒಮ್ಮೆ ದಾನ ನೀಡಿದ ಬಳಿಕ ನೀವು ಅದನ್ನೆಲ್ಲಾ ಯೋಚಿಸಬಾರದು. ಅವರು ಹೀಗೆಯೇ ಬಳಸಲಿ ಅಥವಾ ಹೀಗೆ ಬಳಸದಿರಲಿ ಅಥವಾ ನನ್ನ ಜ್ಞಾಪಕವಾಗಿ ಇಟ್ಟುಕೊಳ್ಳಲಿ ಎಂದು ಭಾವಿಸಬಾರದು. ಅವರಿಗೆ ಅದನ್ನು ತಮ್ಮ ಇಷ್ಟದಂತೆ ಬಳಸಿಕೊಳ್ಳಲು ಪೂರ್ಣವಾದ ಅಧಿಕಾರವಿರುತ್ತದೆ. ದಾನದ ಸಮಯದಲ್ಲಿ ಕರಾರು ಅಥವಾ ಒಪ್ಪಂದ ಹಾಕಿ ದಾನ ನೀಡಬಾರದು. ಮೊದಲೇ ಯೋಚಿಸಿ ದಾನ ಮಡಿ, ನಂತರ ಅವರು ಅದನ್ನು ಏನೇ ಮಾಡಲಿ, ಅವನ್ನೆಲ್ಲಾ ಚಿಂತಿಸಬಾರದು.
ದಾನ ಸ್ವೀಕಾರ ಮಾಡಿದವರು ನಿಮ್ಮ ಸೇವಕರಲ್ಲ ಅಥವಾ ಋಣಿಗಳೂ ಅಲ್ಲ. ಇದನ್ನು ಸದಾ ನೀವು ನೆನಪಿಟ್ಟುಕೊಂಡು ಅಹಂಕಾರ ತ್ಯಜಿಸಬೇಕು. ನನ್ನದು ಎಂಬ ಭಾವ ಬಿಡಬೇಕು. ಏಕೆಂದರೆ ದಾನದ ಉದ್ದೇಶವೇ ನಾನು ಮತ್ತು ನನ್ನದು ಎಂಬ ಅಹಂಕಾರ ಮತ್ತು ಸ್ವಾರ್ಥವನ್ನು ತ್ಯಜಿಸುವುದಾಗಿದೆ. ಆಗಲೇ ಅದರಿಂದಾಗಿ ನೀವು ದುಃಖದಿಂದ, ಜನ್ಮದಿಂದ ಮುಕ್ತರಾಗುವಿರಿ.
3.8 ದಾನ ಎಷ್ಟು ನೀಡಬೇಕು ?
ದಾನವನ್ನು ಇಷ್ಟೇ ನೀಡಬೇಕು ಅಥವಾ ಇಷ್ಟು ನೀಡಬಾರದು ಎಂಬ ನಿಯಮವೇನಿಲ್ಲ. ಅದು ನಿಮ್ಮ ದಾನ ಹೃದಯ ವಿಶಾಲತೆ, ನಿಮ್ಮ ಸಾಮಥ್ರ್ಯ, ನಿಮ್ಮಲ್ಲಿನ ವಸ್ತುಗಳನ್ನು ಅವಲಂಬಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಪರಿಸ್ಥಿತಿಯನ್ನು ಅವಲಂಬಿಸಿದೆ. ನಿಮ್ಮಲ್ಲಿ ನೀಡಲು ಏನೂ ಇರದಿದ್ದರೂ ಸಹಾ ದಾನದ ಇಚ್ಛೆ ನಿಮ್ಮಲ್ಲಿರಬೇಕು. ಅದುವೇ ದಾನದಲ್ಲಿ ಮಹತ್ತರ ಪಾತ್ರ ವಹಿಸುವಂತಹದ್ದಾಗಿದೆ.
ನಿಮ್ಮಲ್ಲಿ ಅಪಾರ ಐಶ್ವರ್ಯ ತುಂಬಿ ತುಳುಕಾಡುತ್ತಿದ್ದರೂ, ನಿಮ್ಮಲ್ಲಿ ದಾನದ ಇಚ್ಛೆ ಇಲ್ಲದಿದ್ದರೆ ನಿಮ್ಮ ದಾನ ಗುಣ ಶೂನ್ಯವಾಗಿರುತ್ತದೆ. ಹಾಗೆಯೇ ನಿಮ್ಮಲ್ಲಿ ಪುಡಿಗಾಸು ಇಲ್ಲದಿದ್ದರೂ ದಾನ ಇಚ್ಛೆಯು ಸೇವಾ ಮನೋಭಾವವು ಇದ್ದಾಗ, ನೀವು ಬಹಳಷ್ಟು ಖಂಡಿತ ಮಾಡುವಿರಿ. ನೀವು ಅವರ ಕುರಿತು ಸ್ವಲ್ಪ ಯೋಚಿಸಬೇಕಷ್ಟೆ.
ದಾನದಿಂದಾಗಿ ನಿಮ್ಮ ಹಾನಿಯು ಆಗಬಾರದು, ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮ ಇಚ್ಛೆಗೆ ಅನುಗುಣವಾಗಿ ನೀವು ದಾನ ಮಾಡಬಹುದು. ಇಲ್ಲಿ ಯಾವುದೂ ನಿಗಧಿತತೆಯಿಲ್ಲ. ಇಲ್ಲಿ ನೀವು ಸುಖವಾಗಿ ಇರಬೇಕು ಹಾಗೆಯೇ ಪರರು ಸುಖಿಯಾಗಿ ಇರಬೇಕು. ಒಟ್ಟರೆ ಸರ್ವರ ಹಿತವಾಗಬೇಕು, ಹಾಗಲ್ಲದಿದ್ದರೂ ಬಹುಜನ ಹಿತಾಯ, ಬಹುಜನ ಸುಖಾಯ ಆಗಲೇಬೇಕು.
3.9 ದಾನದಲ್ಲಿ ಇಚ್ಛೆಯ (ಚೇತನಾ) ಪಾತ್ರ
ಇಚ್ಛೆಯೇ ಕರ್ಮ ಎಂದು ಬುದ್ಧ ಭಗವಾನರು ಹೇಳಿದ್ದಾರೆ. ಇಚ್ಛೆಯಿಲ್ಲದೆ ದೇಹದಿಂದಾಗುವ ಯಾವುದೇ ಕಾರ್ಯವಾಗಲಿ, ಯಾವುದೇ ಯೋಚನಾ ಸಮೂಹವಾಗಲಿ ಅಥವಾ ಮಾತುಗಳಾಗಲಿ ಚಲಿಸಲಾರವು. ಈ ಇಚ್ಛೆಯನ್ನೇ ಆರ್ಯ ಅಷ್ಠಾಂಗಮಾರ್ಗದ ಎರಡನೆಯ ಅಂಗವಾದ ಸಮ್ಮಾಸಂಕಪ್ಪ ಅಥವಾ ಯೋಗ್ಯವಾದ ಸಂಕಲ್ಪ ಎಂದು ಹೇಳಿರುತ್ತಾರೆ.
ನಿಮಗೆ ದಾನದ ಇಚ್ಛೆ ಬರಬೇಕಾದರೆ ನಿಮಗೆ ದಾನದ ಬಗ್ಗೆ ಯೋಗ್ಯ ದೃಷ್ಟಿಕೋನ ಇರಬೇಕು ಅಥವಾ ಯೋಗ್ಯ ದೃಷ್ಟಿಕೋನ ಉಂಟಾಗಬೇಕು. ಅದು ಸಾಧ್ಯವಾಗುವುದು ಯಾವಾಗ ಎಂದರೆ ದಾನದಿಂದಾಗುವ ಲಾಭವನ್ನು ನೀವು ನೋಡಬೇಕು ಅಥವಾ ಕೇಳಬೇಕು ಅಥವಾ ಅನುಭವಿಸಬೇಕು ಅಥವಾ ಅದರ ಬಗ್ಗೆ ಚಿಂತನೆ ಮಾಡಬೇಕು ಅಥವಾ ಬುದ್ಧವಚನವನ್ನು ಅಭ್ಯಸಿಸಬೇಕು ಅಥವಾ ಕೇಳಬೇಕು. ಹಾಗೆ ಮಾಡಿದಾಗ ನಿಮಗೆ ದಾನದ ಮೌಲ್ಯ ಅರಿವಾಗಿ, ಲೋಭದ ದುಷ್ಪರಿಣಾಮ ಅರಿವಾಗಿ ನೀವು ದಾನದ ಬಗ್ಗೆ ಸಂಕಲ್ಪಿಸುವಿರಿ.
ದಾನದಲ್ಲಿ ಸಂಕಲ್ಪವು ಮೂರು ವಿಧದ್ದಾಗಿದೆ.
1. ಪೂರ್ವ ಇಚ್ಛೆ : ಅಂದರೆ ದಾನದ ಹಿಂದೆಯೇ ದಾನ ಮಾಡಬೇಕೆಂದು ಸಂಕಲ್ಪ ಮತ್ತು ಆ ದಾನಕ್ಕೆ ಇಂತಹುದೇ ಫಲ ಸಿಗಬೇಕೆಂದು ನೀವು ಸಂಕಲ್ಪಿಸಿರಬೇಕು. ಹಾಗು ನೀಡಲು ಹಾತೊರೆದು ಆನಂದಿಸಬೇಕು. ಅದಕ್ಕಾಗಿ ಯೋಜನೆ ಹಾಗು ಸಿದ್ಧತೆ ನಡೆಸಬೇಕು.
2. ದಾನ ಮಾಡುವಾಗ ಇಚ್ಛೆ : ಅಂದರೆ ನೀವು ದಾನ ಮಾಡುವಾಗ ಆನಂದಿಸುತ್ತಾ, ಆ ದಾನ ಫಲದ ಇಚ್ಛೆಯನ್ನು ಮನದಲ್ಲಿಯೇ ಪಠಿಸಬೇಕು. ಅಥವಾ ಭಿಕ್ಷುಗಳ ಮುಂದೆ ಅದನ್ನು ವ್ಯಕ್ತಪಡಿಸಬೇಕು. ಆಗ ಅವರು ಹಾಗೇ ಆಗಲಿ, ತಥಾಸ್ತು ಎಂದು ಹಾರೈಸುತ್ತಾರೆ.
3. ದಾನದ ನಂತರ ಇಚ್ಛೆ : ದಾನ ನೀಡಿದ ನಂತರ ನೀವು ಒಂದು ಪ್ರಶಾಂತ ಸ್ಥಳದಲ್ಲಿ ಕುಳಿತುಕೊಂಡು ಧ್ಯಾನಸ್ಥರಾಗಿ, ದಾನದ ಮಧ್ಯದಲ್ಲಿ ಅಥವಾ ಅಂತ್ಯದಲ್ಲಿ ದಾನದ ಸ್ಮರಣೆ ಮಾಡಿ ಅದಕ್ಕೆ ಈ ಬಗೆಯಲ್ಲೇ ಫಲ ದೊರೆಯಲಿ ಎಂದು ಇಚ್ಛೆ ವ್ಯಕ್ತಪಡಿಸಬೇಕು. ಹಾಗು ಆ ಸಂಕಲ್ಪದ ಬಗ್ಗೆ ಅಪಾರ ಶ್ರದ್ಧೆವುಳ್ಳವರಾಗಿರಬೇಕು.
ಈ ರೀತಿಯ ಇಚ್ಛಾಸಹಿತ ದಾನವು ಮಹತ್ಫಲವನ್ನು ನೀಡುವುದೇ ವಿನಃ ಸುಮ್ಮನೆ ದಾನ ಮಾಡಿಬಿಟ್ಟರೆ ಅಷ್ಟಾಗಿ ಫಲಸಿಗಲಾರದು. ಇಚ್ಛಾಸಹಿತ ದಾನಕ್ಕೆ ಪ್ರಜ್ಞೆಯೊಂದಿಗೆ ಕೂಡಿದ ದಾನ ಅಥವಾ ಉಪಾಯ ಕೌಶಲ್ಯ ಭರಿತ ದಾನ ಎನ್ನುತ್ತಾರೆ.
3.10 ದಾನ ಎಲ್ಲಿ ನೀಡಬೇಕು ?
ಒಂದು ವಿಧದಲ್ಲಿ ಯೋಚಿಸಿದರೆ ಪ್ರತಿಯೊಂದು ಸ್ಥಳವೂ ಪವಿತ್ರವೇ ಆಗಿದೆ. ನಾವು ದಾನ ಮಾಡುವ ಸ್ಥಳ ನಮ್ಮ ಮನೆಯೂ ಆಗಬಹುದು, ವಿಹಾರಗಳಲ್ಲಿಯೂ ದಾನ ಮಾಡಬಹುದು, ಆಸ್ಪತ್ರೆಯಲ್ಲಿ ಹೋಗಿ ರಕ್ತದಾನ ಮಾಡಬಹುದು. ಮಕ್ಕಳಿಗೆ ಉಚಿತ ಶಿಕ್ಷಣ ನಿದರ್ಿಷ್ಟ ಸ್ಥಳದಲ್ಲಿ ಮಾಡಬಹುದು ಅಥವಾ ಅದಕ್ಕೆ ಆಥರ್ಿಕ ಸಹಾಯ ಮಾಡಬಹುದು. ಒಟ್ಟಾರೆ ಹೇಳಬೇಕೆಂದರೆ ಎಲ್ಲೆಲ್ಲಿ ಸಹಾಯದ ಕೊರತೆಯಿದೆಯೋ, ಸುಖದ ಅಭಾವವಿದೆಯೋ, ಎಲ್ಲೆಲ್ಲಿ ದುಃಖಿತರು ಇರುವರೋ ಅಲ್ಲೆಲ್ಲಾ ನಿಮ್ಮ ದಾನದ, ಸಹಾಯದ ಅವಶ್ಯಕತೆ ಇದ್ದೇ ಇದೆ. ಅದೆಲ್ಲವೂ ನಿಮ್ಮ ಕಾರ್ಯಕ್ಷೇತ್ರವಾಗುತ್ತದೆ.
3.11 ದಾನ ಯಾವಾಗ ನೀಡಬೇಕು?
ಪ್ರತಿಯೊಂದು ದಿನವೂ ಉತ್ತಮವಾದ ದಿನವೇ ಆಗಿದೆ.
ದಾನಕ್ಕೆ ಇಂತಹುದೇ ದಿನ ನೀಡಬೇಕೆಂದು ನಿಗಧಿತತೆ ಇಲ್ಲ. ಆದರೂ ಬಹಳಷ್ಟು ಜನರು ಯಾವಾಗಲಾದರೂ ನೀಡಬಹುದೆಂದು ದಾನವನ್ನು ಮುಂದೂಡುತ್ತಲೇ ಇರುತ್ತಾರೆ. ಈ ಮುಂದೂಡಿಕೆಯನ್ನು ತಪ್ಪಿಸಲು ದಾನಿಗಳು ನಿಗದಿತತೆ ಅಥವಾ ನಿಧರ್ಿಷ್ಟ ಸಮಯ, ಅಥವಾ ನಿಧರ್ಿಷ್ಟ ದಿನ ಅಥವಾ ದಿನಾಂಕ ಇಟ್ಟುಕೊಳ್ಳುವುದು ಹಿತವಾದುದು ಆಗಿದೆ. ಕೆಲವರು ಪ್ರತಿನಿತ್ಯ ಬೌದ್ಧ ಭಿಕ್ಖುಗಳಿಗೆ ಆಹಾರ ದಾನ ಮಾಡುತ್ತಾರೆ. ಹಾಗೆಯೇ ಪೌರ್ಣಮಿಗಳಲ್ಲಿಯೂ ಕೆಲವರು ದಾನದ ಆಚರಣೆ ಇಟ್ಟುಕೊಳ್ಳುತ್ತಾರೆ. ಅವರವರ ಸಾಮಥ್ರ್ಯ, ಕಾಲದ ಬಿಡುವು ಹಾಗು ದಾನದ ಅಭಿಲಾಷೆಯಂತೆ ಕಾರ್ಯ ನಡೆಯುತ್ತದೆ. ಆದರೂ ನಾವು ಪ್ರತಿವರ್ಷ, ಪ್ರತಿತಿಂಗಳು, ಪ್ರತಿವಾರ ಪ್ರತಿದಿನ ಯಾರಿಗಾದರೂ ಯಾವುದೇ ರೀತಿಯಲ್ಲೂ ಸಹಾಯ ಮಾಡುತ್ತಿದ್ದರೆ ಅದು ದಿವ್ಯವಾದ ಆನಂದ ಸವಿಯಲು ಆಧಾರವಾಗುತ್ತದೆ.
3.12 ಶ್ರದ್ಧೆಯ ಮೂರು ಲಕ್ಷಣಗಳು
ಯಾವುದಾದರೂ ಉಪಾಸಕನು ಮಹಾ ಶ್ರದ್ಧೆಯುಳ್ಳವ ಎಂದು ಕೇಳುತ್ತೇವೆ. ಆದರೆ ಅಂತಹವನು ನಿಜಕ್ಕೂ ಮಹಾ ಶ್ರದ್ಧೆಯುಳ್ಳವನೇ ಎಂದು ನಾವು ಪರೀಕ್ಷಿಸಿ ತಿಳಿಯಬಹುದು. ಅದರ ತಾಳೆ ಹೀಗಿದೆ.
ಆತನು ಶೀಲವಂತನನ್ನು ನೋಡಲು ಇಚ್ಛಿಸುತ್ತಾನೆ. ಆತನು ಸಧಮ್ಮವನ್ನು ಆಲಿಸಲು ಇಚ್ಛಿಸುತ್ತಾನೆ. ಆತನ ಹೃದಯವು ಲೋಭದಿಂದ ಮುಕ್ತವಾಗಿರುತ್ತದೆ. ಆತನು ಮನೆಯಲ್ಲಿರುವಾಗ, ಸಹೃದಯ ದಾನಿಯಾಗಿರುತ್ತಾನೆ, ಶುದ್ಧಹಸ್ತದವನಾಗಿರುತ್ತಾನೆ, ನಿಸ್ವಾರ್ಥತೆಯಲ್ಲಿ ಆನಂದಿಸುತ್ತಾನೆ. ಸಹಾಯ ಯಾಚಿಸಿದರೆ ಸಾಕು, ಉಡುಗೊರೆಗಳನ್ನು ಪರರಲ್ಲಿ ಹಂಚಿಕೊಳ್ಳಲು ಆನಂದಿಸುತ್ತಾನೆ. ಈ ಮೂರು ಲಕ್ಷಣಗಳಿಂದ ಒಬ್ಬನ ಶ್ರದ್ಧೆಯನ್ನು ಗುರುತಿಸಬಹುದು.
ಸಿರಿವಂತಿಕೆಯು ಮೂರ್ಖನಿಗೆ ಮಾತ್ರ ಹಾನಿ ಮಾಡುವುದು
3.13 ದಾನದ ನಂತರ ಆನಂದಿಸಿ
ಒಮ್ಮೆ ಭಗವಾನರು ಜೇತವನದ ವಿಹಾರದಲ್ಲಿ ತಂಗಿದ್ದರು. ಆಗ ರಾಜ ಪಸೇನದಿಯು ಭಗವಾನರಿಗೆ ವಂದಿಸಲು ಬಂದನು. ಆತನು ನಿಧಾನವಾಗಿ ಬಂದುದಕ್ಕೆ ಹೀಗೆ ಕಾರಣವನ್ನು ವಿವರಿಸಿದನು. ಶ್ರಾವಸ್ತಿಯಲ್ಲಿ ಶ್ರೀಮಂತನೊಬ್ಬನಿದ್ದನು. ಆದರೆ ಆತನಿಗೆ ಮಕ್ಕಳು ಯಾರೂ ಇಲ್ಲದ ಕಾರಣ, ರಾಜನು ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡನು. ಅದು ದೇಶದ ಆಸ್ತಿಯಾಯಿತು. ಆತನು ಅಗರ್ಭ ಶ್ರೀಮಂತನಾಗಿದ್ದರೂ ಸಹಾ ಯಾರಿಗೂ ದಾನ ನೀಡುತ್ತಿರಲಿಲ್ಲ, ಅಪಾರ ಜಿಪುಣನಾಗಿದ್ದನು. ಅಷ್ಟೇ ಅಲ್ಲ, ಆತನು ಸಹಾ ಜೀವನವಿಡೀ ಯಾವ ಸುಖವನ್ನೂ ಅನುಭವಿಸಲಿಲ್ಲ. ಕೇವಲ ದುಡ್ಡು ನೋಡಿಯೇ ಆನಂದಿಸುತ್ತಿದ್ದನು. ಆತನು ಉಡುತ್ತಿದ್ದ ವಸ್ತ್ರಗಳಾಗಲಿ, ಬಳಸುತ್ತಿದ್ದ ವಸ್ತುಗಳಾಗಲಿ ಅವೆಲ್ಲವೂ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದವು. ಆತನೇ ಬಿಕಾರಿಯಂತಿದ್ದನು. ಈತನ ಈ ದುರ್ಗತಿಗೆ ಕಾರಣವೇನೆಂಬುದು ರಾಜನು ಭಗವಾನರಲ್ಲಿ ಕೇಳಿಕೊಂಡನು.
ಆಗ ಭಗವಾನರು ಆ ಶ್ರೀಮಂತ ಪೂರ್ವ ವೃತ್ತಾಂತವನ್ನು ಹೇಳಿದರು. ಆತನು ಹಿಂದಿನ ಜನ್ಮದಲ್ಲಿಯೂ ಶ್ರೀಮಂತನಾಗಿದ್ದನು. ಒಂದುದಿನ ಆತನು ಮನೆಯಲ್ಲಿರುವಾಗ ಪಚ್ಚೇಕ ಬುದ್ಧರು ಆಹಾರಕ್ಕಾಗಿ ಬಾಗಿಲ ಬಳಿ ನಿಂತುದ್ದನ್ನು ಕಂಡನು. ಆತನು ತನ್ನ ಪತ್ನಿಗೆ ದಾನ ನೀಡಲು ಅನುಮತಿ ನೀಡಿದನು. ಆಕೆಯು ಆ ಪಚ್ಛೇಕ ಬುದ್ಧರಿಗೆ ಪಿಂಡಪಾತ್ರೆಯನ್ನು ತುಂಬುವ ಹಾಗೆ ಉತ್ತಮ ಭೋಜ್ಯವನ್ನು ನೀಡಿದಳು. ನಂತರ ಶ್ರೀಮಂತನು ಪಚ್ಛೇಕ ಬುದ್ಧರನ್ನು ನೋಡಿದನು. ಹಾಗೆಯೇ ಅವರ ಪಿಂಡಪಾತ್ರೆಯನ್ನು ನೋಡಿದನು. ಆಗ ಕಸಿವಿಸಿಗೊಂಡ ಆತನು ಈ ಬಗೆಯಲ್ಲಿ ಆಲೋಚಿಸಿದನು: ಓಹ್ ಈ ಭಿಕ್ಷುವು ಈ ಆಹಾರ ಸೇವಿಸಿ ಮಲಗಿ ನಿದ್ರಿಸಬಹುದು. ಇದರ ಬದಲು ನನ್ನ ಸೇವಕರಿಗೆ ಆಹಾರ ನೀಡಿದ್ದರೆ, ಅವರು ಉತ್ತಮವಾಗಿ ಕೆಲಸವನ್ನಾದರೂ ಮಾಡುತ್ತಿದ್ದರು.
ಹೀಗೆ ಆತನು ದಾನದ ನಂತರ ಆನಂದಿಸದ ಕಾರಣದಿಂದಾಗಿ ಆತನು ದಾನವು ಫಲವಾಗಿ ಶ್ರೀಮಂತನಾಗಿ ಹುಟ್ಟಿದ್ದರೂ ಸಹಾ, ದಾನದ ನಂತರ ಆನಂದಿಸದ ಕಾರಣವಾಗಿ ಆತನು ಯಾವ ಸುಖ-ಭೋಗವನ್ನು ಅನುಭವಿಸಲಿಲ್ಲ. ಕಡುಬಡವನಂತೆಯೇ ಜೀವನವನ್ನು ನಡೆಸಿದನು.
ಆತನಿಗೆ ಮಕ್ಕಳಾಗದ್ದಕ್ಕೂ ಕಾರಣವಿತ್ತು. ಅದೇನೆಂದರೆ ಆತನು ಆ ಹಿಂದಿನ ಜನ್ಮದಲ್ಲಿಯೇ ಆಸ್ತಿಗಾಗಿ ತನ್ನ ಸೋದರನ ಮಗನನ್ನು ಕೊಂದಿದ್ದನು. ಇದರ ಪರಿಣಾಮವಾಗಿ ಮುಂದಿನ ಏಳು ಜನ್ಮದಲ್ಲಿ ನರಕದಲ್ಲಿ ಹುಟ್ಟಿದನು. ನಂತರದ ಜನ್ಮದಲ್ಲಿ ಮಾನವನಾಗಿ ಹುಟ್ಟಿದರೂ ಸಹಾ ಹೀಗೆ ಯಾವ ಪುಣ್ಯಕರ್ಮ ಮಾಡಲಿಲ್ಲ. ಹೀಗೆ ಶ್ರೀಮಂತನಿಗೆ ಐಶ್ವರ್ಯಗಳು ಸಿಕ್ಕಿದರೂ ಸಹಾ ಅದು ಆತನ ಹಾನಿಗಾಗಿಯೇ ಸಹಾಯವಾಗುತ್ತದೆ. ಈತನ ವೃತ್ತಾಂತ ತಿಳಿಸಿ ಭಗವಾನರು ಈ ಗಾಥೆಯನ್ನು ನುಡಿದರು:
ಸಿರಿವಂತಿಕೆಯು ದುಮರ್ೆಧದವನಿಗೆ (ಮೂರ್ಖ)
ಹಾಳು ಮಾಡುವುದು, ಹೊರತು
ಆಚೆಯ ದಡವನ್ನು (ನಿಬ್ಬಾಣದ) ಅನ್ವೇಷಿಸುವವನಿಗಲ್ಲ,
ಐಶ್ವರ್ಯಕ್ಕೆ ಹಾತೊರೆಯುತ್ತ ಮೂರ್ಖನು
ಪರರನ್ನು ಹಾಳು ಮಾಡುವಂತೆ, ತನ್ನನ್ನೇ ನಾಶಗೊಳಿಸಿಕೊಳ್ಳುತ್ತಾನೆ.
ಭೂತಗಳು ವಾಸಿಸುವಂತಹ ಸ್ಥಳಗಳಲ್ಲಿರುವ
ನೀರಿನಂತೆ ಅಯೋಗ್ಯ ವ್ಯಕ್ತಿಯಲ್ಲಿ ಸಂಗ್ರಹವಾಗಿರುವ
ಐಶ್ವರ್ಯವು ವ್ಯರ್ಥವೇ ಸರಿ.
ಅದರಿಂದಾಗಿ ತನಗಾಗಲಿ ಲಾಭವಿಲ್ಲ,
ಪರರಿಗೂ ಲಾಭವಿಲ್ಲ.
ಆದರೆ ಯೋಗ್ಯ ವ್ಯಕ್ತಿಯಲ್ಲಿ
ಸಂಗ್ರಹವಾಗಿರುವ ಐಶ್ವರ್ಯವು
ಪರಮ ಲಾಭಕಾರಿ
ಅದರಿಂದಾಗಿ ತಾನು ನಿಂದಾತೀತನಾಗಿ ಸುಗತಿ
ಪ್ರಾಪ್ತಿಮಾಡಿ ಪರರಿಗೂ ಆಧಾರವಾಗಿ
ಕರ್ತವ್ಯನಿಷ್ಠನಾಗಿರುತ್ತಾನೆ.

3.14 ದಾನಿಯು ಪ್ರಜ್ಞಾವಂತನಾಗಿರಬೇಕು ಹೊರತು ಮೂರ್ಖನಾಗಬಾರದು

ದಾನ ನೀಡುವುದೇ ಪರಹಿತಕ್ಕಾಗಿಯೇ. ಹಾಗಿರುವಾಗ ನಾವು ಆ ದಿಕ್ಕಿನಲ್ಲಿ ಜೀವಿಸುವಾಗ, ಪ್ರಜ್ಞಾಶೀಲತೆ ಬಳಸಿ ಸಾಧ್ಯವಾದಷ್ಟು ಪರರಿಗೆ ಹಿತವಾಗುವ ರೀತಿಯಲ್ಲಿ ಜೀವಿಸಬೇಕಾಗುತ್ತದೆ. ದಾನದಲ್ಲಿ ಅಥವಾ ಸಹಾಯದಲ್ಲಿ ಪ್ರಜ್ಞಾ ಇಲ್ಲದಿದ್ದರೆ ಅದು ಅಪಾಯಕ್ಕೂ ಎಡೆಮಾಡಿಕೊಡಬಹುದು. ಅದಕ್ಕಾಗಿ ಈ ಜಾತಕವೇ ಸಾಕ್ಷಿಯಾಗಿದೆ.
ಬಹುಕಾಲದ ಹಿಂದೆ ಬೋಧಿಸತ್ತರು ಕಾಶಿಯ ಪಕ್ಕದಲ್ಲಿನ ಹಳ್ಳಿಯಲ್ಲಿ ಬಡಗಿಗಳ ಮನೆಯಲ್ಲಿ ತಂಗಿದ್ದರು. ಆ ಮನೆಯಲ್ಲಿ ವೃದ್ಧ ಬಡಗಿಯವನು ಮರವನ್ನು ಕೊಯ್ಯುತ್ತಿದ್ದನು. ಆತನಿಗೆ ತಲೆಯಲ್ಲಿ ಕೂದಲು ಇಲ್ಲದೆ ಬೊಕ್ಕತಲೆಯವನಾಗಿದ್ದನು. ಆತನ ತಲೆಯ ಮೇಲೆ ಸೊಳ್ಳೆಯೊಂದು ಹಾರುತ್ತ ಬಂದು ಬಂದು ಕೊಂಡಿಯಿಂದ ಚುಚ್ಚುತ್ತಿತ್ತು. ಆತನು ಹತ್ತಿರದಲ್ಲಿದ್ದ ಮಗನನ್ನು ಸೊಳ್ಳೆಯನ್ನು ಹೊಡೆದು ಓಡಿಸು ಎಂದು ಆಜ್ಞಾಪಿಸಿದನು. ಪಿತೃವಾಕ್ಯ ಪಾಲನೆಗಾಗಿ ಆ ಮಗನು ತಂದೆಯ ಹಿಂದೆ ನಿಂತು ಓಡಿಸಲು ಮುಂದಾದ. ಅದು ಪುನಃ ತಪ್ಪಿಸಿಕೊಂಡು ತಲೆಯ ಬಳಿ ಕುಳಿತು ಪುನಃ ಕಚ್ಚಿತು. ಇದರಿಂದ ಕ್ರೋಧಗೊಂಡ ಮಗನು ಕೊಡಲಿಯನ್ನು ಎತ್ತಿಕೊಂಡು ಸೊಳ್ಳೆಯನ್ನು ಒಡೆಯಲೆಂದು ಜೋರಾಗಿ ಬೀಸಿ ಒಡೆದ. ಆ ಏಟಿಗೆ ವೃದ್ಧ ತಂದೆಯ ತಲೆಯನ್ನೇ ಎರಡು ಹೋಳು ಮಾಡಿಬಿಟ್ಟನು. ಅಲ್ಲಿ ಶೋಕ ಪ್ರಲಾಪಗಳು ಉಂಟಾಯಿತು.
ಅದನ್ನು ಗಮನಿಸಿದ ಬೋಧಿಸತ್ವರು ಹೀಗೆ ಯೋಚಿಸಿದರು: ಬುದ್ಧಿವಂತನಾದ ಶತ್ರುವು, ಮೂರ್ಖ ಮಿತ್ರನಿಗಿಂತ ಸಾವಿರ ಪಾಲು ಮೇಲು. ಆತನು ಹೀಗೆ ಪ್ರಾಣಾಪಾಯ ತರುವುದಿಲ್ಲ. ಸಹಾಯ ಮಾಡುವ ಮನಸ್ಸಿದ್ದರೆ ಸಾಲದು, ವಿವೇಕಿಯಾಗಿರಬೇಕು, ಇಲ್ಲದಿದ್ದರೆ ಹೀಗೆ ಸಹಾಯದ ಬದಲು ಅನರ್ಥ ಅಪಾಯಗಳೇ ಸಂಭವಿಸುವುದು.

3.15 ದಾನವು ಎಷ್ಟೇ ಚಿಕ್ಕದಾಗಿರಲಿ ಅದನ್ನು ಅಲ್ಪವೆಂದು ಎಣಿಸಬೇಡಿ

ಒಮ್ಮೆ ಶ್ರಾವಸ್ತಿಯ ವ್ಯಕ್ತಿಯೊಬ್ಬನು ಭಗವಾನರ ಬೋಧನೆಯನ್ನು ಆಲಿಸಿ ಅಪಾರವಾಗಿ ಉತ್ತೇಜಿತನಾದನು. ಆತನು ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ದಾನ ನೀಡಲು ನಿರ್ಧರಿಸಿದನು. ಆದರೆ ಈ ದಾನ ಕಾರ್ಯದಲ್ಲಿ ಪರರು ಸಹಾಯ ಮಾಡಿದರೆ ಅವರೆಲ್ಲರಿಗೂ ಸಹಾ ಪುಣ್ಯದಲ್ಲಿ ಫಲ ಸಿಗುವುದೆಂದು ಯೋಚಿಸಿ, ಆತನು ಜೇತವನದಲ್ಲಿದ್ದ ಬುದ್ಧರಿಗೆ ಮತ್ತು ಸಂಘಕ್ಕೆ ಮಾರನೆಯದಿನ ಊಟಕ್ಕೆ ಆಹ್ವಾನಿಸಿದನು. ನಂತರ ಆತನು ತಾನು ವಾಸವಾಗಿದ್ದ ಸುತ್ತಮುತ್ತಲಿನ ಎಲ್ಲಾ ಮನೆಯವರಿಂದ ದಾನಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸಿದನು. ಅವರಿಗೆಲ್ಲಾ ದಾನದ ಮಹತ್ವತೆ ಸಾರಿದನು. ಅವರೆಲ್ಲರೂ ಸಹಾ ಆಹಾರಕ್ಕೆ ಬೇಕಾಗುವ ಸಾಮಗ್ರಿಗಳನ್ನು ತಮ್ಮ ಕೈಲಾದಷ್ಟು ನೀಡುತ್ತಿದ್ದರು. ಅದೇ ಬೀದಿಯಲ್ಲಿ ಒಬ್ಬ ಜಿಪುಣ ಶ್ರೀಮಂತನಿದ್ದನು. ಆತನೇ ಬಿಲಾಲಪದಾಕ. ಈ ಬಿಲಾಲಪದಾಕನಿಗೆ ಈ ದಾನಿಯ ನಡವಳಿಕೆ ಇಷ್ಟವಾಗಲಿಲ್ಲ. ಆ ದಾನಿಯ ಬಗ್ಗೆ ಹೀಗೆ ಗೊಣಗಿಕೊಂಡನು. ಈ ನೀಚ ಮನುಷ್ಯನು ದಾನವನ್ನು ಮಾಡುವುದಾದರೆ ತಾನೇ ಮಾಡಬೇಕು, ಏತಕ್ಕಾಗಿ ಹೀಗೆ ಎಲ್ಲರಿಗೂ ದಾನ ನೀಡುವಂತೆ ಈತನು ಪೀಡಿಸುತ್ತಿರುವನು ಎಂದು. ಆದರೂ ಆ ಬಿಲಾಲಪದಾಕನು ಅತಿಸ್ವಲ್ಪ ಅಕ್ಕಿ, ಅತ್ಯಲ್ಪ ಬೆಣ್ಣೆ ಮತ್ತು ಸ್ವಲ್ಪ ಬೆಲ್ಲವನ್ನು ದಾನ ನೀಡಿದನು. ಅವನು ಅದನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಹೋದನು, ಅದರಲ್ಲಿ ಸೇರಿಸಲಿಲ್ಲ. ಆಗ ಆ ಶ್ರೀಮಂತನಿಗೆ ತನ್ನನ್ನು ಅವಮಾನಗೊಳಿಸುವುದಕ್ಕಾಗಿಯೇ ಪ್ರತ್ಯೇಕವಾಗಿ ತೆಗೆದುಕೊಂಡು ಹೋಗುತ್ತಿರುವನು ಎಂದು ಸಂಶಯಿಸಿದನು. ಇದನ್ನು ಅರಿಯುವುದಕ್ಕಾಗಿ ಆತನು ತನ್ನ ಸೇವಕನನ್ನು ಹಿಂಬಾಲಿಸಲು ಕಳುಹಿಸಿದನು.
ಆ ದಾನಿಯು ಶ್ರೀಮಂತನಿಗೂ ಮಹಾ ಲಾಭ ದೊರೆಯುವಂತಾಗಲು ಆ ಅಕ್ಕಿ, ಬೆಲ್ಲ ಮತ್ತು ಬೆಣ್ಣೆಯನ್ನು ವಿವಿಧ ಪಾತ್ರೆಗಳಲ್ಲಿ ಸ್ವಲ್ಪ ಸ್ವಲ್ಪ ಸುರಿದನು. ಇದನ್ನು ಕಂಡ ಸೇವಕನು ಬಿಲಾಲಪದಾಕನಿಗೆ ವಿಷಯ ತಿಳಿಸಿದನು. ಇದನ್ನು ಅರ್ಥಮಾಡಿಕೊಳ್ಳಲಾಗದ ಆ ಶ್ರೀಮಂತನು ಆ ದಾನಿಯ ಬಗ್ಗೆ ಸಂಶಯ ಪಟ್ಟು ಇಂದು ಆ ದಾನಿಯು ನಾನು ನೀಡಿರುವುದು ಅತಿ ಅಲ್ಪವೆಂದು ಅಪಮಾನಗೊಳಿಸಿದರೆ ನಾನು ಈ ಚೂರಿಯಿಂದ ಆತನ ಹತ್ಯೆಗೈಯ್ಯುವೆನು ಎಂದು ನಿರ್ಧರಿಸಿದ್ದನು.
ಆದರೆ ಆ ದಾನಿಯು ಭಗವಾನರೊಂದಿಗೆ ಹೀಗೆ ಹೇಳಿದನು: ಭಗವಾನ್ ಈ ದಾನವು ಎಲ್ಲರಿಂದಲೂ ಕೂಡಿ ಸಮಪರ್ಿಸಲ್ಪಟ್ಟಿದೆ. ಅದು ಅಲ್ಪವಾಗಿರಲಿ ಅಥವಾ ಅಧಿಕವಾಗಿರಲಿ, ಪ್ರತಿಯೊಂದು ಶ್ರದ್ಧೆಯಿಂದ ದಾನ ಮಾಡಿದ್ದಾರೆ. ಹೀಗಾಗಿ ಎಲ್ಲರಿಗೂ ಸಮಾನದ ಪುಣ್ಯ ಸಿಗುವಂತಾಗಲಿ ಎಂದು ಕೋರಿಕೊಂಡನು. ಭಗವಾನರು ಒಪ್ಪಿಗೆ ಸೂಚಿಸಿದರು. ಆ ದಾನಿಯಿಂದ ಈ ಮಾತುಗಳನ್ನು ಕೇಳಿದ ನಂತರ ಆ ಶ್ರೀಮಂತನಿಗೆ ಪಶ್ಚಾತ್ತಾಪ ಉಂಟಾಯಿತು. ಆತನು ದಾನಿಯಿಂದ ಹೀಗೆ ಕ್ಷಮೆಯಾಚಿಸಿದನು: ಮಿತ್ರನೇ, ನಿನ್ನ ಬಗ್ಗೆ ಕೆಟ್ಟದಾಗಿ ಚಿಂತಿಸಿ ತಪ್ಪು ಮಾಡಿದ್ದೇನೆ, ಪಾಪ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸು.
ದಾನಿಗೆ ವಿಷಯ ಅರ್ಥವಾಗದೆ ಗಲಿಬಿಲಿಗೊಂಡನು. ವಿಷಯ ತಿಳಿದನಂತರ ಆತನು ಕ್ಷಮಿಸಿದನು. ಆಗ ಭಗವಾನರು ಆ ಶ್ರೀಮಂತನಿಗೆ ಹೀಗೆ ಹೇಳಿದರು: ಓ ಶಿಷ್ಯನೇ, ಪುಣ್ಯವನ್ನು ಅಥವಾ ದಾನವನ್ನು ಎಂದಿಗೂ ಅಲ್ಪವೆಂದೆಣಿಸಬೇಡ, ಅದು ಎಷ್ಟೇ ಚಿಕ್ಕದಿರಲಿ, ನಿರಂತರವಿದ್ದರೆ ಅದು ದೊಡ್ಡದಾಗುವುದು ಎಂದು ಸಮಾಧಾನಿಸಿದರು. ನಂತರ ಈ ಗಾಥೆ ನುಡಿದರು:
ಪುಣ್ಯವನು ಕುರಿತು ಹಗುರವಾಗಿ ಎಣಿಸಬೇಡಿ
ನನಗೆ ಸಿಗುವುದಿಲ್ಲ ಎಂದು ಯೋಚಿಸಬೇಡಿ.
ಹೇಗೆ ಮಡಿಕೆಯು ಹನಿ ಹನಿ ನೀರಿನಿಂದ ತುಂಬುವುದೋ
ಹಾಗೆಯೇ ಜ್ಞಾನಿಯು ಸಹಾ ಸ್ವಲ್ಪ ಸ್ವಲ್ಪವಾಗಿಯೇ
ಪುಣ್ಯವನ್ನು ಸಂಗ್ರಹಿಸುತ್ತಾನೆ.

3.16 ದಾನಿಯಲ್ಲಿ ಇರಬೇಕಾದ ಮೂರು ಗುಣಗಳು

1. ದಾನಕ್ಕೆ ಮುಂಚೆ ಆನಂದ
2. ದಾನ ನೀಡುವಾಗ ಸಂತೃಪ್ತಿ ಮತ್ತು ಪರಿಶುದ್ಧತೆ
3. ದಾನದ ನಂತರ (ಪಶ್ಚಾತ್ತಾಪವಿಲ್ಲದ) ಆನಂದ

3.17 ಅತಿಥಿಯಲ್ಲಿ ಇರಬೇಕಾದ ಮೂರು ಗುಣಗಳು

1. ದ್ವೇಷರಹಿತನಾಗಿರಬೇಕು
2. ರಾಗರಹಿತನಾಗಿರಬೇಕು
3. ಮೋಹರಹಿತನಾಗಿರಬೇಕು
ಈ ರೀತಿ ದಾನಿಯ ಮೂರು ಗುಣಗಳು ಮತ್ತು ಅತಿಥಿಯ ಮೂರು ಗುಣಗಳು ಸೇರಿದಾಗ ಆ ದಾನಕ್ಕೆ ಮಹತ್ಫಲ ಸಿಗುವುದು.

3.18 ಯಾವುದನ್ನು ದಾನ ಮಾಡಬಾರದು


  • ಶಸ್ತ್ರಾಸ್ತ್ರಗಳನ್ನು ದಾನ ಮಾಡಬಾರದು.
  • ವಿಷವನ್ನು ಮತ್ತು ವಿಷ ವಸ್ತುಗಳನ್ನು ದಾನ ಮಾಡಬಾರದು.
  • ಮಾದಕ ವಸ್ತುಗಳನ್ನು, ಮದ್ಯಪಾನವನ್ನು ದಾನ ಮಾಡಬಾರದು.
  • ಜೂಜಿನ ಸಲಕರಣೆಗಳನ್ನು ದಾನ ಮಾಡಬಾರದು.
  • ಮೋಜನ್ನು ನೀಡಿ, ನಿರ್ಲಕ್ಷತೆ ಹೆಚ್ಚಿಸುವಂತಹುಗಳನ್ನು ದಾನ ನೀಡಬಾರದು.
  • ಹಾನಿಯುಂಟುಮಾಡುವ ಯಾವುದನ್ನೂ ದಾನ ಮಾಡಬಾರದು.
  • ವ್ಯಭಿಚಾರ ದಾನವನ್ನು ಮಾಡಬಾರದು.
  • ದುಶ್ಚಟಗಳಿಗೆ ದಾರಿ ನೀಡುವಂತಹವುಗಳನ್ನು ದಾನ ಮಾಡಬಾರದು.
  • ನಿಷ್ಟ್ರಯೋಜಕವಾದುದನ್ನು ದಾನ ಮಾಡಬಾರದು.
  • ಮೂಢನಂಬಿಕೆಯನ್ನು ದಾನ ಮಾಡಬಾರದು.

3.19 ಯಾರಿಗೆ ದಾನ ನೀಡಬಾರದು


  • ಹಾನಿ ಮಾಡುವವರಿಗೆ, ದುಷ್ಚಟಗಳಿಗೆ ಬಲಿಯಾದವರಿಗೆ ದಾನ ಮಾಡಬಾರದು.
  • ದಾನದಿಂದ ಹಾನಿಯಾಗುವವರಿಗೆ, ದಾನದಿಂದ ಪರರಿಗೆ ಹಾನಿಯಾಗುವುದಿದ್ದರೆ ಅಂತಹವರಿಗೆ ದಾನ ಮಾಡಬಾರದು.
  • ದಾನದಿಂದ ಯಾಚಕನಿಗೆ ಲಾಭವಾಗಬೇಕು ಹಾಗು ಪರರಿಗೆ ಅದರಿಂದ ಹಾನಿಯಾಗದಿದ್ದರೆ ಮಾತ್ರ ದಾನ ಮಾಡಬೇಕು.

3.20 ಸತ್ಪುರುಷರು ಯಾಚಿಸಲಾರರು
ಬಹುಕಾಲದ ಹಿಂದೆ ಬೋಧಿಸತ್ವರು ಪಂಚಾಲ ರಾಜ್ಯದಲ್ಲಿ ಬ್ರಾಹ್ಮಣ ವಂಶದಲ್ಲಿ ಹುಟ್ಟಿದ್ದರು. ಅವರು ಸಕಲ ವಿದ್ಯೆಗಳನ್ನು ಕಲಿತು ನಂತರ ತಪಸ್ವಿ ಜೀವನವನ್ನು ಇಷ್ಟಪಟ್ಟು ಹಿಮಾಲಯದಲ್ಲಿ ಧ್ಯಾನಿಯಾಗಿ ಜೀವಿಸುತ್ತಿದ್ದರು.
ರಾಜನಿಗೆ ಅವರ ಚಾರಿತ್ರ್ಯ ಇಷ್ಟವಾಗಿ ಅವರೊಂದಿಗೆ ಸಖ್ಯ ಬೆಳೆಸಿದನು. ನಿತ್ಯವೂ ಅರಮನೆಯಲ್ಲಿ ಭೋಜನ ವ್ಯವಸ್ಥೆಯನ್ನು ಮಾಡಿಸಿದನು. ಮಳೆಗಾಲದಲ್ಲಿ ಆಶ್ರಯವೂ ನೀಡಿದನು. ಮಳೆಗಾಲ ಕಳೆದಮೇಲೆ ಹಿಮಾಲಯಕ್ಕೆ ಹೋಗಲು ನಿಶ್ಚಯಿಸಿದರು. ಆಗ ಅವರಿಗೆ ರಾಜನ ಮಿತ್ರತ್ವ ಇಷ್ಟವಾಗಿ ತಮಗೆ ಪಾದರಕ್ಷೆ ಮತ್ತು ಎಲೆಯ ಛತ್ರಿಯನ್ನು ಕೇಳಲು ನಿರ್ಧರಿಸಿದರು. ಆದರೂ ರಾಜನ ಮುಂದೆ ಅವರು ಕೇಳದಾದರು. ಅದಕ್ಕೆ ಅವರಲ್ಲಿದ್ದ ಪಾಪಲಜ್ಜೆಯೇ ಕಾರಣವಾಗಿತ್ತು. ಆದರೂ ಕೆಲವೊಮ್ಮೆ ಅವಶ್ಯಕತೆ ಕಂಡುಬಂದು ರಾಜ ಏಕಾಂತದಲ್ಲಿ ಮಾತನಾಡುವುದಿದೆ ಎಂದುಬಿಟ್ಟರು. ಏಕಾಂತದಲ್ಲಿಯೂ ಅದನ್ನು ಯಾಚಿಸದೆ ರಾಜನನ್ನು ಮರೆಸುಬಿಡುತ್ತಿದ್ದರು. ಹೀಗೆ 12 ವರ್ಷಗಳಾದರೂ ಅವರು ಯಾಚಿಸದೆ ಹೋದರು. ಆಗ ರಾಜನಿಗೆ ಹೀಗೆ ಸಂದೇಹವಾಯಿತು. ಈ ಆರ್ಯರು ನನ್ನೊಂದಿಗೆ ಏನನ್ನೋ ಕೇಳಲು ಬಯಸುತ್ತಿದ್ದಾರೆ ಆದರೆ ಯಾಚಿಸಲಾರದೆ ಹೋಗುತ್ತಿದ್ದಾರೆ. ಇಂದು ಇವರು ರಾಜ್ಯವನ್ನೇ ಕೇಳಿದರೂ ಕೊಟ್ಟುಬಿಡುವೆನು ಎಂದು ನಿಶ್ಚಯಿಸಿದನು. ಹಾಗೂ ಹೀಗೆ ಅವರೊಂದಿಗೆ ಮಾತನಾಡಿದನು. ಆರ್ಯರೇ, ನೀವು ಏನನ್ನೋ ಯಾಚಿಸಲು 12 ವರ್ಷದಿಂದ ಪ್ರಯತ್ನಿಸುತ್ತಿದ್ದೀರಿ, ಆದರೆ ಯಾಚಿಸಲಾರದೆ ಹೋಗಿದ್ದೀರಿ. ಬಯಕೆ ಏನೇ ಇರಲಿ, ನಿರ್ಭಯದಿಂದ ಕೇಳಿಕೊಳ್ಳಿ. ಎಂದನು.
ಆಗ ಬೋಧಿಸತ್ವರು ಹೀಗೆಂದರು: ಓ ಬ್ರಹ್ಮದತ್ತ ಮಹಾರಾಜ, ಯಾಚಿಸುವವನು ಅಪ್ರಿಯನಾಗುತ್ತಾನೆ, ಕೇಳಿದ ಮೇಲೆ ನೀಡದಿರುವವನು ಅಪ್ರಿಯವಾಗಿ ಕಾಣುತ್ತಾನೆ. ಆದ್ದರಿಂದ ನನ್ನೊಂದಿಗೆ ಬೇಸರ ಉಂಟಾಗದಿರಲಿ ಎಂದು ನಾನು ಯಾಚಿಸುವುದಿಲ್ಲ. ಯಾಚಕನಿಗೆ ಎರಡು ಗತಿಗಳಿರುತ್ತದೆ. ಫಲಪ್ರಾಪ್ತಿ ಅಥವಾ ಅಪ್ರಾಪ್ತಿ. ಬೇಡುವುದನ್ನು ರೋಧನ ಎನ್ನುತ್ತಾನೆ ಮತ್ತು ಕೇಳಿದಮೇಲೆ ನೀಡಲಾರದೆ ನುಡಿಯುವುದನ್ನು ಪ್ರತಿರೋಧನ ಎನ್ನುತ್ತಾರೆ. ಈ ರೋಧನ, ಪ್ರತಿರೋಧನ ಪರರು ನೋಡದಿರಲಿ ಎಂದು ನಾನು ಏಕಾಂತ ಬಯಸುತ್ತಿದ್ದೆನು ಎಂದರು.
ಆಗ ರಾಜನು ಉಚಿತ ಸಮಯದಲ್ಲಿ ದಾನ ಕೇಳುವವನು ಪರರಿಗೂ ಪುಣ್ಯ ನೀಡಿದವನಾಗುತ್ತಾನೆ, ಪ್ರಜ್ಞಾವಂತರು ಯಾಚಿಸುವವನನ್ನು ದ್ವೇಷಿಸಲಾರರು. ಹೇಳಿ ತಾಪಸಿಯೇ, ನೀವು ನನಗೆ ಪ್ರಿಯ, ಬಯಸಿದ್ದೆಲ್ಲವನ್ನೂ ಕೇಳಿ.
ಬೋಧಿಸತ್ವರು ಪ್ರಜ್ಞಾವಂತರು ಯಾಚಿಸುವುದಿಲ್ಲ, ಅವರು ಭಿಕ್ಷೆಗೂ ಮೌನವಾಗಿ ನಿಲ್ಲುತ್ತಾರೆ. ಇದೇ ಆರ್ಯರ ಯಾಚನೆಯಾಗಿದೆ.
ಓ ಋಷಿಯೆ, ನೀವು ದಯವಿಟ್ಟು ನಿರ್ಭಯರಾಗಿ ಕೇಳಿ, ನಿಮಗಾಗಿ ಇಡೀ ರಾಜ್ಯದ ಸಮೇತ ಎಲ್ಲವನ್ನೂ ನೀಡಲು ಸಿದ್ಧನಿದ್ದೇನೆ.
ಹಾಗಾದರೆ ಮಹಾರಾಜ! ನನಗೆ ದಾರಿಯಲ್ಲಿ ನಡೆಯಲು ಅನುಕೂಲವಾಗಿರಲು ಒಂದು ಜೊತೆ ಚಪ್ಪಲಿ ಮತ್ತು ಎಲೆಗಳಿಂದಾದ ಒಂದು ಕೊಡೆ ಬೇಕು.
ಭಂತೆ ಇದನ್ನೇ ನೀವು 12 ವರ್ಷಗಳಿಂದಲೂ ಕೇಳದೆ ಸಂಕೋಚಪಡುತ್ತಿದ್ದುದು.
ಹೌದು ಮಹಾರಾಜ.
ಆಗ ರಾಜನು ಅವರ ಚಾರಿತ್ರ್ಯದಿಂದ ಆಶ್ಚರ್ಯಚಕಿತನಾಗಿ ಅವುಗಳ ಜೊತೆಗೆ ಸಾವಿರ ಹಸುಗಳನ್ನು ನೀಡಲು ಮುಂದಾದನು. ಆದರೆ ಬೋಧಿಸತ್ವರು ಚಪ್ಪಲಿ ಮತ್ತು ಛತ್ರಿಯನ್ನು ಮಾತ್ರ ಪಡೆದರು. ಉಳಿದುದನ್ನು ಸ್ವೀಕರಿಸಲು ನಿರಾಕರಿಸಿದರು. ನಂತರ ಬೋಧಿಸತ್ವರು ಹಿಮಾಲಯಕ್ಕೆ ಹಿಂತಿರುಗಿ ಅಲ್ಲಿ ಧ್ಯಾನ ಅಭಿಜ್ಞಾಗಳನ್ನು ಗಳಿಸಿದರು.
3.21 ಅತಿಯಾಚನೆ ಕೂಡದು
ಬಹುಕಾಲದ ಹಿಂದೆ ಬೋಧಿಸತ್ವರು ವಾರಾಣಸಿಯಲ್ಲಿ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದರು. ಕೆಲವರ್ಷಗಳ ನಂತರ ಅವರಿಗೆ ಒಬ್ಬ ತಮ್ಮನು ಹುಟ್ಟಿದನು. ಈ ಅಣ್ಣ-ತಮ್ಮಂದಿರು ಹಿರಿಯರಾದ ಮೇಲೆ ತಂದೆ-ತಾಯಿಯರು ಮೃತರಾಗಿದ್ದರಿಂದಲೇ ಅವರು ಪಬ್ಬಜ್ಜ ಪಡೆದು ಗಂಗಾ ತೀರದಲ್ಲಿ ಒಂದೊಂದು ದಡದಲ್ಲಿ ಪ್ರತ್ಯೇಕವಾಗಿ ವಾಸಿಸಲಾರಂಭಿಸಿದರು.
ಅವರ ತಮ್ಮ ವಾಸಿಸುತ್ತಿದ್ದ ದಡದಲ್ಲಿ ಒಮ್ಮೆ ಮಣಿಕಂಠನೆಂಬ ದಿವ್ಯ ನಾಗರಾಜನು ಬ್ರಹ್ಮಚಾರಿಯ ವೇಷದಲ್ಲಿ ಬಂದು ಅವರ ತಮ್ಮನ (ಕಿರಿಯ ತಪಸ್ವಿ) ಬಳಿಗೆ ಬಂದು ಸ್ನೇಹ ಬೆಳೆಸಿದನು. ಕಾಲನಂತರ ಸ್ನೇಹವು ಗಾಢವಾದ ಮೇಲೆ ನಾಗರಾಜ ತನ್ನ ನಿಜಸ್ಥಿತಿ ತಿಳಿಸಿ ನಾಗರೂಪವನ್ನು ತೋರಿಸಿದನು. ಅಷ್ಟೇ ಅಲ್ಲ, ಸಖ್ಯಭಾವದಿಂದ ಕಿರಿಯ ತಪಸ್ವಿಯ ದೇಹಕ್ಕೆ ಸುತ್ತಿಕೊಂಡು ವಿರಮಿಸುತ್ತಿದ್ದನು. ಕಿರಿಯ ತಪಸ್ವಿಗೆ ಮೊದಲಿನಿಂದಲೂ ನಾಗಗಳು ಕಂಡರೆ ಭಯವಿತ್ತು. ಈಗ ಮಣಿಕಂಠನು ನಾಗರೂಪದಲ್ಲಿ ಬಂದು ಈ ರೀತಿ ದೇಹ ಸುತ್ತುವುದರಿಂದ ಆತನು ಭಯದಿಂದ ಕೂಡಿಕೊಂಡನು. ಇದು ಪುನರಾವರ್ತನೆಯಾಗಿ ಅತನು ದುರ್ಬಲನಾಗಿ, ಒಣಗಿಕೊಂಡು, ರೋಗಿಯಾದನು.
ಆ ಸಮಯದಲ್ಲಿ ಅಣ್ಣನು ತಮ್ಮನ ಈ ಸ್ಥಿತಿಯನ್ನು ಕಂಡು ವಿಚಾರಿಸಿದಾಗ ವಿಷಯವೆಲ್ಲ ತಿಳಿದನು. ನಂತರ ತಮ್ಮನಿಗೆ ಹೀಗೆ ಕೇಳಿದನು: ನಾಗರಾಜನು ಆಭರಣಗಳನ್ನು ಧರಿಸಿ ಬರುವನೇ?
ಹೌದು, ಮಣಿರತ್ನ ಧರಿಸಿ ಬರುವನು.
ಈಗ ಹಿರಿಯ ತಪಸ್ವಿಗಳಾದ ಬೋಧಿಸತ್ವರು ಪ್ರಜ್ಞಾಶೀಲತೆಯಿಂದ ಯೋಚಿಸಿ ಈಗ ಪಾರಾಗಲು ಉಪಾಯವೊಂದನ್ನು ತಿಳಿಸಿದರು. ಮಾರನೆಯದಿನ ನಾಗರಾಜ ಎಂದಿನಂತೆ ಪರ್ಣಕುಟೀರಕ್ಕೆ ಬಂದು ನಿಲ್ಲುತ್ತಲೇ ಕಿರಿಯ ತಪಸ್ವಿಯು ನಾಗರಾಜನಲ್ಲಿ ಹೀಗೆ ಯಾಚಿಸಿದನು: ಓ ನಾಗರಾಜ, ನಿನ್ನ ಮಣಿರತ್ನ ನನಗೆ ಚೆನ್ನಾಗಿ ಹಿಡಿಸಿದೆ, ನನಗೆ ಅದನ್ನು ನೀಡು. ಇದನ್ನು ಆಲಿಸುತ್ತಲೇ ನಾಗರಾಜ ಅಲ್ಲಿರಲಾರದೆ ಕೆಲಸವಿದೆ ಎಂದು ಹೇಳಿ ಹೊರಟುಹೋದನು. ಮಾರನೆಯ ದಿನ ಆಶ್ರಮವನ್ನು ನಾಗರಾಜ ಇನ್ನೇನು ಪ್ರವೇಶಿಸಬೇಕು, ತಕ್ಷಣ ಕಿರಿಯ ತಪಸ್ವಿಯು ನೆನ್ನೆ ನೀವು ಆಭರಣ ನೀಡಲಿಲ್ಲ, ಇಂದಾದರೂ ಮಣಿರತ್ನವನ್ನು ನೀಡಿ ಎಂದು ಯಾಚಿಸಿದನು. ಆಗಲೂ ನಾಗರಾಜ, ಒಳಬರಲಾರದೆ ಹಾಗೆಯೇ ಹೊರಟುಹೋದನು. ಮಾರನೆಯ ದಿನ ನಾಗರಾಜನು ನೀರಿನಿಂದ ಹೊರಬರುತ್ತಿದ್ದಂತೆ ಕಿರಿಯ ತಪಸ್ವಿಯು ಆ ಮಣಿರತ್ನ ಎಂದು ಕೇಳುತ್ತಿದ್ದಂತೆ ನೀರಿನಲ್ಲಿ ನಾಗರಾಜ ಮುಳುಗುತ್ತ ಹೀಗೆ ಹೇಳಿದನು:
ಇನ್ನೊಬ್ಬರಿಗೆ ಪ್ರಿಯವಾಗಿರುವ ವಸ್ತುವನ್ನು ಎಂದಿಗೂ ಯಾಚಿಸಬಾರದು, ಅತಿಯಾಗಿ ಯಾಚಿಸುವುದರಿಂದ ಅವರು ಪ್ರಿಯರಾಗಲಾರರು. ಈ ಮಣಿಯು ನನ್ನ ಸರ್ವಸ್ವ, ನೀನು ಅತಿ ಯಾಚಕನಾಗಿರುವೆ, ಇದನ್ನು ನಾನು ನಿನಗೆ ನೀಡಲಾರೆ, ನಿನ್ನ ಬಳಿಗೂ ಬರಲಾರೆ, ಇದನ್ನೇ ಯಾಚಿಸುತ್ತ ತೊಂದರೆ ನೀಡಿ, ಹೆದರಿಸುತ್ತಿದ್ದೀಯೆ, ನಿನ್ನಲ್ಲಿಗೆ ಬರಲಾರೆ ಎಂದು ಹೇಳಿ ನಾಗರಾಜನು ಮುಳುಗಿಹೋದನು.
ಆದರೆ ನಾಗರಾಜನ ಸ್ನೇಹಹೀನತೆಯಿಂದ ಕಿರಿಯ ತಪಸ್ವಿ ಚಿಂತಿತನಾದನು. ಆದರೆ ಹಿರಿಯ ತಪಸ್ವಿಯ ಬೋಧನೆಯಿಂದ ಅವನು ಸರಿಹೋದನು. ಮುಂದೆ ಇಬ್ಬರೂ ಸಹಾ ಧ್ಯಾನ ಲಾಭ ಪಡೆದರು.

3.22 ದಾನದಲ್ಲಿ ಬೇಧಭಾವ ಇರಬಾರದು

ಮಾನವನಲ್ಲಿ ಎಲ್ಲಿಯವರೆಗೆ ಮಿಥ್ಯಾದೃಷ್ಟಿ ಮತ್ತು ಸ್ವಾರ್ಥಗಳು ಇರುತ್ತವೋ ಅಲ್ಲಿಯವರೆಗೆ ಆತನಲ್ಲಿ ಬೇಧಭಾವವೂ ಇರುತ್ತವೆ. ಆಗ ಆತನು ವ್ಯಕ್ತಿಯಿಂದ ವ್ಯಕ್ತಿಗೆ ಭೇದಭಾವ ಮಾಡುತ್ತಾನೆ, ಪಕ್ಷಪಾತ ಮಾಡುತ್ತಾನೆ. ಆತನಿಗೆ ಇವರು ನನ್ನವರು ಎಂಬ ಮಿಥ್ಯಾದೃಷ್ಟಿ ಉದಯಿಸಿದಾಗ ಪ್ರಿಯಭಾವನೆ ಉಂಟಾಗಿ ಪಕ್ಷಪಾತದಿಂದ ಅವರಿಗೆ ಸಹಾಯ ಮಾಡುತ್ತಾನೆ. ಹಾಗೆಯೇ ಮಿಥ್ಯಾದೃಷ್ಟಿಯಿಂದ ಇವರು ಪರರು ಎಂಬ ಮಿಥ್ಯಾದೃಷ್ಟಿ ಉದಯಿಸಿದಾಗ ಅಪ್ರಿಯ ಭಾವನೆ ಉಂಟಾಗಿ ಪಕ್ಷಪಾತದಿಂದ ಅವರಿಗೆ ಸಹಾಯ ಮಾಡಲಾರ. ಬದಲಾಗಿ ದ್ವೇಷಿಸುತ್ತಾನೆ, ಹಾಗು ತೊಂದರೆಯನ್ನುಂಟು ಮಾಡಬಹುದು.
ಆದ್ದರಿಂದಾಗಿ ದಾನಿಯು ಮೈತ್ರಿಯ ಭಾವ ತಾಳಬೇಕು. ಆತನಿಂದ ಎಲ್ಲರಿಗೂ ಪ್ರಯೋಜನವಾಗಬೇಕು. ಆತನು ಮಳೆಯಂತೆ ಸರ್ವರಿಗೂ ಲಾಭ ನೀಡಬೇಕು, ಪೃಥ್ವಿಯಂತೆ ಎಲ್ಲರಿಗೂ ಆಧಾರವಾಗಬೇಕು, ನೀರಿನಂತೆ ಸರ್ವರಿಗೂ ಚೈತನ್ಯ ನೀಡಬೇಕು, ಗಾಳಿಯಂತೆ ಸರ್ವರಿಗೂ ಜೀವ ನೀಡಬೇಕು. ಅಗ್ನಿಯಂತೆ ಸರ್ವರಿಗೂ ಪ್ರಯೋಜನಕಾರಿಯಾಗಬೇಕು.

  • ಜನಾಂಗೀಯ ಬೇಧವಿರಕೂಡದು. 
  • ಉಚ್ಚ-ನೀಚ ಬೇಧಭಾವವಿರಕೂಡದು.
  • ಈ ದೇಶ - ಆ ದೇಶವೆಂದು ಬೇಧಭಾವವಿರಕೂಡದು.
  • ರಾಜ್ಯಗಳ ನಡುವೆ ಬೇಧಭಾವವಿರಕೂಡದು.
  • ಭಾಷೆಗಳ ಆಧಾರಿತ ಬೇಧಭಾವವಿರಕೂಡದು.
  • ಧರ್ಮಗಳ ಆಧಾರಿತ ಬೇಧಭಾವವಿರಕೂಡದು.
  • ಜಾತಿಗಳ ಆಧಾರಿತ ಬೇಧಭಾವವಿರಕೂಡದು.
  • ಬಡವ-ಶ್ರೀಮಂತ ಎಂಬ ಯಾವುದೇ ಬೇಧಭಾವವಿರಕೂಡದು.
  • ಪಾಪಿ-ಪುಣ್ಯಶಾಲಿಯೆಂಬ ಬೇಧಭಾವವಿರಕೂಡದು.
  • ಒಟ್ಟಾರೆ ಯಾವುದೇ ಬೇಧಭಾವವಿರಕೂಡದು.