Tuesday, 31 August 2021

ಪೋಷಕರು ಮತ್ತು ಮಕ್ಕಳು parents and children by Most Venerable bhikkhu Narada Maha Thera

                       ಪೋಷಕರು ಮತ್ತು ಮಕ್ಕಳು

(ಈ ಲೇಖನವನ್ನು ನನ್ನ ಮಾನಸ ಗುರುಗಳಾದ ಪರಮಪೂಜ್ಯ ನಾರದ ಮಹಾ ಥೇರರಿಂದ ರಚಿಸಲ್ಪಟ್ಟಿದೆ. ಇದನ್ನು ಅನುವಾದಿಸಲು ಅವಕಾಶ ದೊರೆತಿದ್ದು ನನ್ನ ಪುಣ್ಯ ಎಂದು ಭಾವಿಸುವೆ.)



 


ಪುಣ್ಯದ ನಾಲ್ಕು ಕ್ಷೇತ್ರಗಳಿವೆ ಎಂದು ಬುದ್ಧರು ಹೇಳುತ್ತಾರೆ. ಅವೆಂದರೆ 

1) ಬುದ್ಧ ಭಗವಾನರು 

2) ಅರಹಂತರು

  3) ತಾಯಿ ಮತ್ತು 

4) ತಂದೆ.

ಬುದ್ಧರು ಮಾನವತೆಗೆ ಅನುಪಮ ಪುಷ್ಟವಾಗಿದ್ದಾರೆ.  ಅವರು ಅಪರೂಪಕ್ಕೊಮ್ಮೆ ಈ ಜಗದಲ್ಲಿ ಹುಟ್ಟಿ ಬರುತ್ತಾರೆ.  ಅಂತಹ ಬುದ್ಧ ಯುಗದಲ್ಲಿ ಸಂತಶಿಷ್ಯರು ಅಭಿವೃದ್ಧಿ ಹೊಂದುತ್ತಾರೆ.  ಅರಹಂತರು ಸಹಾ ವಿರಳವೆ.  ಬುದ್ಧರ ಸನ್ನಿಹದಲ್ಲಿ ಬಹುಪಾಲು ಅರಹಂತರಾದರೂ ನಂತರ ಅಪರೂಪಕ್ಕೊಮ್ಮೆ ಯಾರಾದರೂ ಅತಿ ನಿಷ್ಟರು ಅರಹಂತ ರಾಗುತ್ತಾರೆ.  ಆದರೆ ದಯಾಮಯಿ ಮಾತರೆ ಮತ್ತು ವಾತ್ಸಲ್ಯ ಭರಿತ ತಂದೆ ಪ್ರತಿಯೊಬ್ಬ ಮನೆಯಲ್ಲೂ ಇರುತ್ತಾರೆ.  ಖಂಡಿತವಾಗಿಯೂ ಅವರು ಫಲವತ್ತಾದ ಪುಣ್ಯಭೂಮಿ ಆಗಿದ್ದಾರೆ.  ಯಾರಿಗೆಂದರೆ ಕೃತಜ್ಞತೆಯುಳ್ಳ ಮತ್ತು ಕರ್ತವ್ಯಶೀಲ ಮಕ್ಕಳಿಗೆ ಪುಣ್ಯನಿಧಿಯಾಗಿದ್ದಾರೆ.  ಈ ಪುಣ್ಯ ಕ್ಷೇತ್ರದಲ್ಲಿ ಸ್ವಲ್ಪವನ್ನು ಬಿತ್ತಿದರೂ ಅಪಾರ ಫಲರಾಶಿಯು ಸಿಗುವುದು.  ಯಾರ ಮನೆಯಲ್ಲಿ ತಂದೆ ತಾಯಿಯರಿಗೆ ಅಕ್ಷಯ ಭಕ್ತಿ ನೀಡುತ್ತಿರುವರೋ ಮತ್ತು ಅಪಾರ ಕೃತಜ್ಞತೆ ತೋರುತ್ತಿರುವರೋ ಅಂತಹ ಮಗ ಅಥವಾ ಮಗಳು ಧನ್ಯರೇ ಸರಿ.

ಬುದ್ಧರ ಪ್ರಕಾರ ಮಕ್ಕಳು ತಮ್ಮ ತಾಯಿಗಳಿಗೆ ಅಪಾರ ಚಿರಋಣಿ ಗಳಾಗಿರುತ್ತಾರೆ. ಅವರು ತಮ್ಮ ತಂದೆ ತಾಯಿಗಳಿಗೆ ಹೆಗಲಲ್ಲಿ ಹೊತ್ತುಕೊಂಡು ನೂರು ವರ್ಷಗಳ ಕಾಲ ಅವರ ಸೇವೆ ಮಾಡಿದರೂ ಸಹಾ ಅವರ ಋಣವನ್ನು ತಾವು ತೀರಿಸಲು ಸಾಧ್ಯವಾಗುವುದಿಲ್ಲ.  ಅಷ್ಟೇ ಅಲ್ಲ, ಅವರು ತಮ್ಮ ತಂದೆ ತಾಯಿಯರನ್ನು ರತ್ನಗಳ ರಾಶಿಯಲ್ಲಿ ಕುಳ್ಳಿರಿಸಿದರೂ ಇಡೀ ಜಗತ್ತಿನ ಸಾರ್ವಭೌಮತ್ವವನ್ನು ನೀಡಿದರೂ ಸಹಾ ಅವರಿಗೆ ಋಣಿ ಗಳಾಗಿಯೇ ಇರುತ್ತಾರೆ. 

ದರ್ಮಗೃಂಥಗಳಲ್ಲಿ ಒಂದೆಡೆ ಹೀಗೆ ಹೇಳಲ್ಪಟ್ಟಿದೆ. ಒಬ್ಬ ಧರ್ಮಗುರು, ನೂರು ಸಾಧಾರಣ ವಿದ್ಯೆಗಳ ಗುರುಗಳಿಗೆ ಸಮ, ಒಬ್ಬ ತಂದೆ ನೂರು ಧರ್ಮಗುರುಗಳಿಗೆ ಸಮ, ಆದರೆ ಒಬ್ಬ ತಾಯಿಯು ನೂರು ತಂದೆಗಳಿಗೆ ಸಮ.

ಏಕೆ ಸನಾತನ ಗುರುಗಳು ತಂದೆ ತಾಯಿಗಳಿಗೆ ಈ ರೀತಿ ಅತಿಯಾಗಿ ಹೊಗಳುತ್ತಾರೆ ಎಂದು ಆಶ್ಚರ್ಯವಾಗಬಹುದು.  ಆದರೆ ಇದಕ್ಕೆ ಕಾರಣಗಳೂ ಸಹಾ ಇವೆ.  ತರ್ಕಕ್ಕೆ ಅವು ಹೊರತಾದುದು ಅಲ್ಲ.  ತಂದೆಯು ಅಪಾರ ಕರುಣಾಭರಿತರಾಗಿ ತಮಗೆ ಸಾಧ್ಯವಾಗುವ ಮಟ್ಟಿಗೆ ತಮ್ಮದೆಲ್ಲವನ್ನು ಅಪರ್ಿಸುತ್ತಾರೆ.  ಅವರು ತಮ್ಮ ಹಿತಾಸುಖಗಳೆಲ್ಲವನ್ನು ಮರೆತು, ಮಕ್ಕಳ ಬಗ್ಗೆಯೆ ಚಿಂತಿಸುತ್ತಾರೆ ಹಾಗೂ ದುಡಿಯುತ್ತಾರೆ.  ಅವರು ತಾವು ಕಷ್ಟಪಟ್ಟು ಸಂಪಾದಿಸಿದ ಐಶ್ವರ್ಯವೆಲ್ಲಾ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧಾರಾಳವಾಗಿ ಸುರಿಯುತ್ತಾರೆ.  ಅವರ ಏಕೈಕ ಗುರಿಯೆಂದರೆ ಮಕ್ಕಳ ಉನ್ನತಿಯನ್ನು ಕಾಣುವುದು ಮತ್ತು ಮಕ್ಕಳ ಸುಖ ಶಾಂತಿಯನ್ನು ಕಾಣುವುದೇ ಆಗಿದೆ.  ಕರುಣಾಮಯಿ ಮಾತೆಯರು ತಮ್ಮ ಮುದ್ದು ಮಗುವಿಗಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.  ಅದು ಆ ಮಗುವಿನ ಮುಖ ದರ್ಶನಕ್ಕೆ ಮೊದಲೇ ಜೀವ ಬಿಟ್ಟಿರುತ್ತಾರೆ.  ಅವರು ತಮ್ಮ ಮಕ್ಕಳಿಗೆ ತಮ್ಮ ರಕ್ತವನ್ನು ನೀಡಿ ಘೋಷಿಸುತ್ತಾರೆ.  ಎಷ್ಟೋ ರಾತ್ರಿಗಳನ್ನು ನಿದ್ರೆಯಿಲ್ಲದೆ ಮಕ್ಕಳಿಗಾಗಿ ಎಚ್ಚರವಾಗಿದ್ದು ಕಾಪಾಡುತ್ತಾರೆ.  ಮಕ್ಕಳಿಗೆ ರೋಗ ಬಂದರೆ ಅವರಿಗೆ ಆರೈಕೆ ಮಾಡುತ್ತಾರೆ.  ಮಕ್ಕಳ ನೋವು ಅವರ ನೋವು ಆಗಿರುತ್ತದೆ.  ಮಕ್ಕಳ ಸುಖ ಅವರ ಸುಖ ಆಗಿರುತ್ತದೆ.  ಮಕ್ಕಳೇ ಅವರ ಪಾಲಿಗೆ ಸರ್ವಸ್ವವಾಗಿರುತ್ತಾರೆ, ಅವರ ಭಾಗವಾಗಿರುತ್ತಾರೆ. ಅವರ ಪಾಲಿಗೆ ಅನರ್ಘ ಐಶ್ವರ್ಯವಾಗಿರುತ್ತಾರೆ.  ಮಕ್ಕಳ ಹೊರತು ಅವರು ದುಃಖಿಗಳಾಗಿರುತ್ತಾರೆ, ಶೋಕದಿಂದ ಇರುತ್ತಾರೆ.  

ಪಾಲಕರ ಈ ವಾತ್ಸಲ್ಯಕ್ಕೆ ಪ್ರತಿಯಾಗಿ ನೀಡುವಂತಹದು ಏನಾದರೂ ಇದೆಯೇ? ಹೌದು ಖಂಡಿತವಾಗಿದೆ. ಏನೆಂದರೆ ತಂದೆ ತಾಯಿಯವರನ್ನು ಪಾಪದಿಂದ ಪಾರಾಗಲು ಪ್ರೋತ್ಸಾಹಿಸುವುದು ಮತ್ತು ಪುಣ್ಯ ಕಾರ್ಯಗಳನ್ನು ಮಾಡುವಂತೆ ಸ್ಫೂತರ್ಿ ನೀಡುವುದು.  ಹಾಗು ನಾವು ಸಹಾ ಪುಣ್ಯ ಮಾಡುವುದು, ಒಳ್ಳೆಯವರಾಗಿರುವುದು ಮತ್ತು ಆದರ್ಶ ಭೌತಿಕ ಸವಲತ್ತುಗಳನ್ನು ಸುಖಗಳನ್ನು ನೀಡುವುದಷ್ಟೇ ಅಲ್ಲ, ಅವರಿಗೆ ಪರಿಚಯವಿಲ್ಲದ ಧಾಮರ್ಿಕ ಐಶ್ವರ್ಯವನ್ನು ನೀಡಬೇಕಾಗಿದೆ. 

ಆದ್ದರಿಂದ ಓ ಸುಚಾರಿತ್ರ್ಯ ಮಕ್ಕಳೇ, ಸದಾ ನಿಮ್ಮ ತಂದೆ ತಾಯಿಗಳಿಗೆ ವಿಧೇಯರಾಗಿ, ಅವರೇ ನಿಮ್ಮ ಶ್ರೇಷ್ಠ ಸರ್ವಸ್ವ, ರಾಜರಿಗೆ ಗೌರವಿಸಿ ಮತ್ತು ಎಂದಿಗೂ ಅವರ ಭಾವನೆಗಳಿಗೆ ನೋವಾಗದ ಹಾಗೆ ನಡೆದುಕೊಳ್ಳಿ.  ಅವರಿಗೆ ವರವಾಗಿ ಮತ್ತು ಎಂದಿಗೂ ಶಾಪವಾಗದಿರಿ.  ನಿಮ್ಮ ಸುಚ್ಚಾರಿತ್ರ್ಯದಿಂದ ಅವರ ಘನತೆಯನ್ನು ಉಳಿಸಿ, ಬೆಳೆಸಿ, ನಿಮ್ಮ ನಡವಳಿಕೆಯಿಂದ ನೀವು ಅರ್ಹ ತಂದೆತಾಯಿಗಳಿಗೆ ಅರ್ಹ ಮಕ್ಕಳು ಎಂದು ತೋರಿಸಿ, ವಿಶೇಷವಾಗಿ ಅವರ ಅನುಪಸ್ಥಿತಿಯಲ್ಲಿ ಅಂದರೆ ಅವರ ಮರಣದ ನಂತರವೂ ಅವರ ಗೌರವಯುತ ಹೆಸರಿಗೆ ಭಂಗ ತರಬೇಡಿ.  

ವಾತ್ಸಲ್ಯಭರಿತ ತಂದೆ

ಮಕ್ಕಳು ಬಹಳಷ್ಟು ಬಾರಿ ತಮ್ಮ ಪೋಷಕರ ತ್ಯಾಗ ಮತ್ತು ವಾತ್ಸಲ್ಯದ ಹೊಳೆಯನ್ನು ಅರಿಯಲಾರರು.  ಮಕ್ಕಳ ಭಕ್ತಿಗಿಂತ ತಾಯ್ತಂದೆಯರ ವಾತ್ಸಲ್ಯವೇ ಶ್ರೇಷ್ಠವಾದದು.  ಇದು ಸಹಜವೇ, ಒಬ್ಬನು ಅಪಕ್ವ ಅನನುಭವಿ ಮಕ್ಕಳಿಂದ ಪೋಷಕರಿಂದ ಕರ್ತವ್ಯಭರಿತ ವಾತ್ಸಲ್ಯವನ್ನು ನಿರೀಕ್ಷಿಸಲಾಗವುದಿಲ್ಲ.  ಆ ಮಕ್ಕಳು ತಾವು ತಾಯಿ ಅಥವಾ ತಂದೆ ಆದಾಗ ಮಾತ್ರ ಅವರು ಪೋಷಕರ ವಾತ್ಸಲ್ಯ ಏನು ಎಂಬುದನ್ನು ಅರಿಯುತ್ತಾರೆ.  ಇದಕ್ಕೆ ಉದಾಹರಣೆಯಾಗಿ ಈ ಚಿತ್ತಾಕರ್ಷಕ ಘಟನೆಯನ್ನು ನೋಡಿ.

ರಾಜಕುಮಾರ ಅಜಾತಶತ್ರುವು ದೇವದತ್ತ ಥೇರನ ದುಬರ್ೊಧನೆಗೆ ವಶವಾಗಿ ತನ್ನ ತಂದೆಗೆ ಕೊಲ್ಲಲು ಪ್ರಯತ್ನಿಸಿ, ಸಿಂಹಾಸನ ಕಬಳಿಸಲು ಸಂಚು ಹೂಡಿದನು.  ಆದರೆ ಸಾಕ್ಷಿ ಸಮೇತ ಸಿಕ್ಕಿಹಾಕಿಕೊಂಡುಬಿಟ್ಟನು.  ಆದರೆ ವಾತ್ಸಲ್ಯಭರಿತ ತಂದೆ ಆತನ ಹೇಯಕೃತ್ಯಕ್ಕೆ ಶಿಕ್ಷಿಸುವ ಬದಲು ಆತನಿಗೆ ರಾಜ್ಯವನ್ನು ನೀಡಿ ಕಿರೀಟಧಾರಣೆ ಮಾಡಿದನು. 

ಆದರೆ ಕೃತಘ್ನ ರಾಜಕುಮಾರನು ತನ್ನ ತಂದೆಗೆ ಕೃತಜ್ಞತೆ ಅಪರ್ಿಸುವ ಬದಲು ತನ್ನ ತಂದೆಗೆ ಆಹಾರ ನೀಡದೆ ಕಾರಾಗೃಹ ಶಿಕ್ಷೆ ವಿಧಿಸಿದನು.  ಆದರೆ ತಾಯಿಗೆ ಮಾತ್ರ ಭೇಟಿ ಮಾಡಲು ಅವಕಾಶ ನೀಡಿದನು.  ಪತಿವ್ರತೆ ಸಂಪನ್ನಳಾದ ರಾಣಿಯು ತನ್ನ ವಸ್ತ್ರದಲ್ಲಿ ಆಹಾರನ್ನು ಅಡಗಿಸಿಕೊಂಡು ಹೋಗುತ್ತಾ ತನ್ನ ಪತಿಗೆ ಆಹಾರ ನೀಡುತ್ತಿದ್ದಳು.  ಇದಕ್ಕೂ ಅಜಾತಶತ್ರು ವಿರೋಧ ವ್ಯಕ್ತಪಡಿಸಿದನು.  ನಂತರ ಆಕೆ ತನ್ನ ಪತಿಗೆ ತನ್ನ ಜಡೆಯಲ್ಲಿ ಆಹಾರವನ್ನು ಅಡಗಿಸಿಕೊಂಡು ನೀಡುತ್ತಿದ್ದಳು.  ಇದಕ್ಕೂ ಭೀಕರವಾಗಿ ಅಜಾತಶತ್ರು ಪ್ರತಿಭಟಿಸಿದನು.  ನಂತರ ಆಕೆ ಸುಗಂಧಿತ ನೀರಿನಿಂದ ತನ್ನ ದೇಹವನ್ನು ಸ್ಮಾನ ಮಾಡಿಕೊಂಡು ಜೇನು, ಬೆಣ್ಣೆ, ತುಪ್ಪ, ಕಾಕಂಬಿಗಳ ಮಿಶ್ರಣವನ್ನು ತನ್ನ ಚರ್ಮಕ್ಕೆ ಲೇಪಿಸಿಕೊಂಡು ತನ್ನ ಪತಿಯ ಬಳಿ ಹೋಗುತ್ತಿದ್ದಳು.  ಆಗ ಪತಿಯು ಆಕೆಯ ಶರೀರವನ್ನು ನೆಕ್ಕಿ ತನ್ನ ಜೀವವನ್ನು ರಕ್ಷಿಸಿಕೊಳ್ಳುತ್ತಿದ್ದನು.  ಈ ವಿಷಯ ಪತ್ತೆಹಚ್ಚಿದ ಅಜಾತಶತ್ರುವು ತನ್ನ ತಾಯಿಗೆ ತನ್ನ ತಂದೆಯ ಬಳಿ ಹೋಗದಂತೆ ನಿರ್ಬಂಧ ಮಾಡಿದನು.  

ಆದರೆ ತಂದೆಯಾದ ರಾಜ ಬಿಂಬಸಾರನು ಅದಕ್ಕಾಗಿ ಯಾವ ವ್ಯಥೆಯು ಪಡದೆ ನಡೆದಾಡುವ ಧ್ಯಾನ ಮಾಡುತ್ತಾ ಧರ್ಮಸುಖದಲ್ಲಿ ತಲ್ಲೀನನಾಗಿ ಸೋತಾಪನ್ನ ಸ್ಥಿತಿ ಪ್ರಾಪ್ತಿ ಮಾಡಿದನು.  ಕೊನೆಗೆ ನೀಚನಾದ ಅಜಾತಶತ್ರು ತನ್ನ ತಂದೆಯನ್ನು ಕೊಲ್ಲಲು ನಿರ್ಧರಿಸಿದನು.  ಅತ್ಯಂತ ಕ್ರೂರಿಯಾದ ಆತನು ತನ್ನ ಕ್ಷೌರಿಕನಿಗೆ ತನ್ನ ತಂದೆಯ ಅಂಗಾಲನ್ನು ಸೀಳಿಸಿ ಅದಕ್ಕೆ ಉಪ್ಪು ಹಾಗು ಎಣ್ಣೆ ಹಾಕಿಸಿ ಕೆಂಡಗಳ ಅಗ್ನಿಯಲ್ಲಿ ನಡೆಯಲು ಆಜ್ಞೆ ಮಾಡಿಸಿದನು. 

ಬಿಂಬಸಾರನು ಕ್ಷೌರಿಕನನ್ನು ಕಂಡು ಈ ರೀತಿ ಯೋಚಿಸಿದನು, ಓ ನನ್ನ ಮಗ ತನ್ನ ಮೂರ್ಖತನವನ್ನು ಅರಿತು ನನಗೆ ಬಿಡುಗಡೆ ಮಾಡಲು ಮತ್ತು ಕ್ಷೌರ ಮಾಡಿಸಲು ಈತನಿಗೆ ಕಳುಹಿಸಿದ್ದಾನೆ ಎಂದು ಆನಂದಿಸಿದನು.  ಆದರೆ ಆತನ ಇಚ್ಛಗೆ ವಿರುದ್ಧವಾಗಿ, ರಾಜಕುಮಾರನ ಆಜ್ಞೆಯಂತೆ ಆ ಕ್ರೂರ ಕ್ಷೌರಿಕ ಸಹಾ ಆ ಹೀನ ಕೃತ್ಯವನ್ನು ಮಾಡಿದನು.  ವಾತ್ಸಲ್ಯವುಳ್ಳ ಆ ತಂದೆ ಮೃತ್ಯವಶವಾದನು.  ಅದೇ ವೇಳೆಯಲ್ಲಿ ಅಜಾತಶತ್ರುವಿಗೆ ಮಗ ಹುಟ್ಟಿದನು.  ಈ ಎರಡು ಘಟನೆಗಳ ಪತ್ರಗಳು ಏಕಕಾಲದಲ್ಲಿ ಅರಮನೆಗೆ ಮುಟ್ಟಿದವು.

ಮೊದಲು ಆತನ ಸುಖದ ವಾತರ್ೆ ಓದಿದನು, ಆಗ ಅಜಾಶತ್ರುವಿನಲ್ಲಿ ವಾತ್ಸಲ್ಯ ಹುಟ್ಟಿತು.  ತನ್ನ ಪುತ್ರನ ಮೇಲೆ ಅತಿ ಪ್ರೀತಿ ಉಂಟಾಗಿ ಆನಂದಭರಿತನಾದನು.  ಆ ಸುಖವು ಆತನ ನರನಾಡಿಗಳಲ್ಲೆಲ್ಲಾ ಹಬ್ಬಿತು. ತಕ್ಷಣ ಆತನಿಗೆ ತಂದೆಯ ಪ್ರೀತಿ ಜ್ಞಾಪಕಕ್ಕೆ ಬಂದು ಓಡಿ ಮತ್ತು ನನ್ನ ತಂದೆಯನ್ನು ಬಿಡುಗಡೆ ಮಾಡಿ ಎಂದು ಕಿರುಚಿದನು.  ಆದರೆ ತಂದೆ ಎಂದೋ ಕಣ್ಮುಚ್ಚಿದ್ದನು. ಆಗ ಆತನಿಗೆ ದುವರ್ಾತೆಯ ಪತ್ರವನ್ನು ನೀಡಲಾಯಿತು.  ತಕ್ಷಣ ಅದನ್ನು ಓದಿ ತಾಯಿ ಬಳಿಗೆ ಓಡಿಬಂದನು, ಹಾಗು ಪ್ರಶ್ನಿಸಿದನು ಅಮ್ಮ ನಾನು ಬಾಲಕನಾಗಿದ್ದಾಗ ನನ್ನ ತಂದೆ ನನಗೆ ಪ್ರೀತಿಸಿದ್ದರೆ?

ಎಂತಹ ಪ್ರಶ್ನೆಯನ್ನು ಕೇಳುತ್ತಿದ್ದೀಯಾ ಮಗು, ನೀನು ಗರ್ಭದಲ್ಲಿರುವಾಗಲೇ ನಿನ್ನ ತಂದೆಯ ಬಲಗೈಯ ರಕ್ತ ಕುಡಿಯಲು ನನಗೆ ಬಯಕೆಯಾಗುತ್ತಿತ್ತು.  ಆದರೆ ನಾನು ಕೇಳಲು ಧೈರ್ಯ ಮಾಡಲಿಲ್ಲ.  ಪರಿಣಾಮವಾಗಿ ನಾನು ಕೃಶಳಾದೆ, ಕೊನೆಗೆ ನನಗೆ ಒತ್ತಾಯಿಸಲು ನಾನು ನಿಜವನ್ನು ನುಡಿದೆ.  ಆದರೆ ನಿನ್ನ ತಂದೆ ಸಂತೋಷವಾಗಿ ಆ ಆಸೆ ಪೂರೈಸಿದರು.  ನಂತರ ಜ್ಯೋತಿಷಿಗಳು ನೀನು ನಿನ್ನ ತಂದೆಯ ಶತ್ರುವಾಗುವೆ ಎಂದು ಭವಿಷ್ಯ ನುಡಿದರು, ಆಗ ನಿನ್ನ ಹೆಸರನ್ನು ಅಜಾತಶತ್ರು ಎಂದು ನಾಮಕರಣ ಮಾಡಲಾಯಿತು. (ಜಾತ-ಹುಟ್ಟುವುದಕ್ಕೆ ಮುಂಚೆಯೇ ಶತ್ರು-ಅಜಾತಶತ್ರು) ನಾನು ಆಗ ಗರ್ಭಪಾತ ಮಾಡಿಕೊಳ್ಳಲು ಬಯಸಿದೆ.  ಆಗ ನಿನ್ನ ತಂದೆಯೇ ಅದನ್ನು ತಡೆದರು.  ನೀನು ಹುಟ್ಟಿದ ನಂತರವು ನಾನು ನಿನ್ನನ್ನು ಕೊಲ್ಲಲು ಇಷ್ಟಪಟ್ಟೆ, ಆದರೆ ನಿನ್ನ ತಂದೆಯೆ ತಡೆದರು.  ಇನ್ನೊಂದು ಘಟನೆ ಹೇಳುವೆ ಕೇಳು. ನೀನು ಬಾಲಕನಾಗಿದ್ದಾಗ ನಿನ್ನ ಬೆರಳಿಗೆ ಬೊಬ್ಬೆ ಎದ್ದು ನೀನು ಅಪಾರ ನೋವು ಅನುಭವಿಸುತ್ತಿದ್ದೆ.  ಯಾರು ನಿನಗೆ ಮಲಗಿಸಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ, ಆದರೆ ನಿನ್ನ ತಂದೆ ರಾಜಾಸ್ಥಾನದಲ್ಲಿ ನಿನ್ನನ್ನು ಮಡಿಲಲ್ಲಿ ಇಟ್ಟುಕೊಂಡು ನಿನಗೆ ಸಮಾಧಾನ ನೀಡುತ್ತಿದ್ದರು.  ಆಗ ಬಾಯಿಯಲ್ಲೆ ನಿನ್ನ ಗಾಯ ಒಡೆದು ರಕ್ತ, ಕೀವು ಬಾಯಿಯಲ್ಲೆ ಹರಿಯಿತು.  ಮಗೂ....ಆ ರಕ್ತ ಮತ್ತು ಕೀವುವನ್ನು ನಿನ್ನ ಮೇಲಿನ ಅಕ್ಕರೆಯಿಂದ ನಿನ್ನ ತಂದೆ ಆನಂದದಿಂದ ನುಂಗಿದರು ಎಂದು ತಾಯಿ ನುಡಿದಾಗ... ಅಜಾತಶತ್ರು ಕಣ್ಣೀರನ್ನು ಹಾಕಿಕೊಂಡನು.

ಪ್ರೀತಿಯ ಮಕ್ಕಳೇ, ಆತನ ಭಾವನೆಗಳನ್ನು ನೀವು ಚೆನ್ನಾಗಿ ಕಲ್ಪಸಿಕೊಳ್ಳುತ್ತೀರಿ. 

ಪೋಷಕರು ಎಲ್ಲಾ ಸನ್ನಿವೇಶಗಳಲ್ಲಿ ಮಗುವಿನ ಆಂತರಿಕ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುತ್ತಾ ಇರುತ್ತಾರೆ. ಏಕೆಂದರೆ ಅಂತಹವನ್ನೆಲ್ಲಾ ಅವರು ದಾಟಿ ಬಂದಿದ್ದಾರೆ.  ಆದ್ದರಿಂದಲೇ ಅವರು ಮಗುವಿನ ತಪ್ಪುಗಳಲ್ಲಿ ಸಹಾನುಭೂತಿ ಮತ್ತು ಕ್ಷಮೆಯನ್ನು ತೋರುತ್ತಾರೆ.  ಅವರು ಸದಾ ತಮ್ಮ ಮಕ್ಕಳ ತಪ್ಪುಗಳನ್ನು ಕ್ಷಮಿಸಿ ಸಹಿಸಿಕೊಳ್ಳುತ್ತಾರೆ.  ಅರಿತೋ ಅಥವಾ ಅರಿಯದೆಯೋ ಮಕ್ಕಳು ಅವರು ಭಾವನೆಗಳಿಗೆ ನೋಡು ತರುತ್ತಾರೆ.  ಕೆಲವು ಸಾರಿ ಅಪಾರ್ಥಕ್ಕೆ ಒಳಗಾಗಿ ಪೋಷಕರ ಮೇಲೆ ಕೃತಘ್ನರಾಗುತ್ತಾರೆ.  ತಮ್ಮ ದಡ್ಡತನದ ಅಸಹನೆಯಿಂದ ಅವರು ದುಃಖವನ್ನು ತರುತ್ತಾರೆ.  ಅವರು ಒಳಿತಿಗೆ ಹಾಕಿದ ಗೆರೆಯನ್ನು ಮೀರಿ ನಡೆಯುತ್ತಾರೆ.  ಎಲ್ಲರೀತಿಯ ಇಕ್ಕಟ್ಟಿನಲ್ಲೂ, ಲೋಪದಲ್ಲೂ, ಅಧಿಕಾರದಲ್ಲೂ, ತಪ್ಪುಗಳಲ್ಲೂ ಸಹಾನುಭೂತಿಯ ಪೋಷಕರು ಕ್ಷಮಿಸುತ್ತಾರೆ.  ಕಷ್ಟಗಳಲ್ಲಿದ್ದಾಗ ಅವರು ಕೇಳದಿದ್ದರೂ ತಾವೇ ಬಂದು ಸಹಾಯ ಮಾಡುತ್ತಾರೆ.  ಪ್ರತಿಕೂಲ ಸಂದರ್ಭವಿದ್ದಾಗ ಪರೋಕ್ಷವಾಗಿಯಾದರೂ ಸಹಾಯ ಮಾಡುತ್ತಾರೆ. 

ಅಂತಹ ಪರೋಪಕಾರ ಪ್ರವೃತ್ರಿಯು ದಯಾ ಮತ್ತು ಜ್ಞಾನಿಗಳಾದ ಪೋಷಕರಲ್ಲಿರುತ್ತದೆ.

ಆದರೆ ಮಕ್ಕಳು ತಮ್ಮ ಪೋಷಕರ ವೇದನೆಗಳನ್ನು ಅರ್ಥಮಾಡಿಕೊಂಡು ತಮ್ಮ ತಾಯ್ತಂದೆಯರಲ್ಲಿ ಕರ್ತವ್ಯಬದ್ಧರಾಗುವರೆ ?

ಅವರು ಪೋಷಕರಾಗುವವರೆಗೂ ಇದು ಅಸಾಧ್ಯ, ಕೇವಲ ಪೋಷಕರೆ ವಾತ್ಸಲ್ಯಭಾವ ಅರ್ಥಮಾಡಿಕೊಳ್ಳಲು ಸಾಧ್ಯ.  ಅಜಾತಶತ್ರುವೇ ಇದಕ್ಕೆ ಉದಾಹರಣೆ.  ಹಾಗೆಯೆ ಮಕ್ಕಳು ತಮ್ಮ ಕರ್ತವ್ಯವನ್ನು ಚೆನ್ನಾಗಿ ಮಾಡುವಂತಾಗಲಿ.

ವಾತ್ಸಲ್ಯಭರಿತ ತಾಯಿ

ಸೋಣದಂಡ ಜಾತಕದಲ್ಲಿ ಬೋದಿಸತ್ವರು ತಾಯಿಯ ಸದ್ಗುಣಗಳ ಬಗ್ಗೆ ಈ ಸುಂದರ ಗಾಥೆಗಳನ್ನು ಹಾಡಿದ್ದಾರೆ.

ಅನುಕಂಪಭರಿತಳು, ದಯಾಮಯಿ ತಾಯಿಯೇ

ನಮ್ಮ ಆಶ್ರಯವು, ನಮಗೆ ಹಾಲು ಉಣಿಸುವವಳು

ಸ್ವರ್ಗಕ್ಕೆ ದಾರಿಯು, ತಾಯಿಯೇ

ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವವಳು

ಸಲಹುವವಳು, ರಕ್ಷಣೆ ನೀಡಿದವಳು ಮತ್ತು 

ಉತ್ತಮ ಉಡುಗೊರೆಗಳನ್ನು ನೀಡಿದವಳು

ಆಕೆಯ ಸುಗತಿಗೆ ಮಾರ್ಗ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸಿದವಳು

ಮಗುವಿಗಾಗಿ ಹಂಬಲಿಸುತ್ತಾ ಪ್ರತಿ ಪವಿತ್ರ ಸ್ಥಳಗಳಲ್ಲಿ ಶಿರಬಾಗಿದವಳು

ಪ್ರತಿ ಋತುಗಳಲ್ಲೂ ಲಾಲಿ ಹಾಡಿದವಳು

ಗಭರ್ಾವಸ್ಥೆಯಲ್ಲಿ ಪ್ರತಿ ಬೆಳವಣಿಗೆಯಲ್ಲೂ ಪ್ರಿಯ ವೇದನೆ ಅನೂಭವಿಸಿದವಳು, ನಂತರ ಮುಗ್ಧ ಮಗುವಿಗೆ ತನ್ನ ಮಿತ್ರ ಯಾರೆಂದು ತಿಳಿಯುತ್ತದೆ.  ತನ್ನ ಐಶ್ವರ್ಯವನ್ನು ತಾಯಿಯು ವರ್ಷಗಳವರೆಗೆ ಗಂಭೀರವಾಗಿ ಕಾಪಾಡುತ್ತಾಳೆ.  ನಂತರ ಮಗುವನ್ನು ಹೆಡೆದು ತಾಯಿಯ ಹೆಸರು ಪಡೆಯುತ್ತಾಳೆ. 

ಹಾಲು ಉಣಿಸುತ್ತಾ, ಲಾಲಿ ಹಾಡುತ್ತಾ, ಮಗುವನ್ನು

ಬೆಚ್ಚನೆಯ ಮಡಿಲಲ್ಲಿ ಸಮಾಧಾನಪಡಿಸುತ್ತಾ

ಗಾಳಿ ಅಥವಾ ಉಷ್ಣಗಳಿಂದ ಮಗುವನ್ನು ಕಾಪಾಡುತ್ತಾ

ತನ್ನ ಆರೋಗ್ಯವನ್ನು ಕ್ಷೀಣಿಸುತ್ತಾ

ಆಶೀವರ್ಾದಗಳನ್ನು ಹಾರೈಸುವಳು ಮಗುವನ್ನು.

ಯೋಚಿಸುವಳು ಒಂದು ದಿನ ನನ್ನ ಮುದ್ದು ಮಗುವೇ

ಇದು ನಿನಗೆ ಸಿಗುವುದು

ಇದನ್ನು ಮಾಡು ಇದನ್ನು ಮಾಡಬೇಡ ಎಂದು 

ಚಿಂತಿಸುವು, ರಾತ್ರಿ ನಿಧಾನವಾದರೆ ಏನಾಯಿತು 

ಏಕಿನ್ನು ಬರಲಿಲ್ಲ ಎಂದು ವ್ಯಾಕುಲ ಪಡುವಳು

ಹೀಗಿರುವ ತಾಯಿಯನ್ನು ಅಲಕ್ಷಿಸಬೇಕೆ ?

ಆತನು ನರಕವನ್ನೇ ಅಪೇಕ್ಷಿಸುತ್ತಿದ್ದಾನೆ.

ಯಾರು ತಾಯಿರನ್ನು ಕಡೆಗಣಿಸುತ್ತಾರೋ

ಆತನ ಐಶ್ವರ್ಯವೆಲ್ಲವೂ ನಾಶವಾಗುತ್ತದೆ.

ಯಾರು ತಂದೆಯನ್ನು ಅಲಕ್ಷಿಸುತ್ತಿದ್ದಾನೊ,

ಅದಕ್ಕಾಗಿ ಆತನು ಪಶ್ಚಾತ್ತಾಪ ಪಡುತ್ತಾನೆ.

ಅವರಿಗೆ ಸದಾ ಪ್ರಿಯವಚನ, ಉಡುಗೊರೆ,

ಗೌರವ ಆದರಗಳಿಂದ ಸಲಹಲಿ

ಸರ್ವಕಾಲಕ್ಕೂ ಸರ್ವ ಅವಸ್ಥೆಯಲ್ಲೂ

ಸರ್ವ ಸ್ಥಳಗಳಲ್ಲೂ ಗೌರವ ನೀಡಿಲಿ

ಶಾಂತತೆಯಿಂದಿರಲಿ, ಸಮದರ್ಶತ್ವದಿಂದಿರಲಿ,

ರಥದ ಚಕ್ರಕ್ಕೆ ಕೀಲು ಪ್ರಮುಖವಾಗಿರುವಂತೆ

ಜಗಕ್ಕೆ ಈ ಸದ್ಗುಣಗಳು ಇವೆ

ತಾಯಿಗೆ ಚಕ್ರವತರ್ಿನಿ ಎಂತೆ ಗೌರವಿಸಲಿ

ಮಾತೃಭಕ್ತಿಯುಳ್ಳವಗೆ ಋಷಿಗಳು ಗೌರವಿಸುವರು

ಆತನೇ ಮಾನವ

ಹೀಗಾಗಿ ಪೋಷಕರು ಸದಾ ಪ್ರಶಂಸನೀಯರು.

ಸನಾತನ ಸಂತರುಗಳು ತಾಯ್ತಂದೆಯರಿಗೆ

ಬ್ರಹ್ಮ (ಶ್ರೇಷ್ಟ ಎಂದರ್ಥ)ಎಂದು ಕರೆದರು.

ಅವರ ಸ್ಥಾನ ಅಷ್ಟು ಮೆರುವಿನಂತಹುದು.

ಕರುಣಾಳು ತಾಯ್ತಂದೆಯರು

ಮಕ್ಕಳಿಂದ ಸದಾ ಗೌರವ ಪಡೆವರು

ಯಾರು ಜ್ಞಾನಿಯೋ ಆತನು ತನ್ನ

ತಾಯ್ತಂದೆಯರಿಗೆ ಸದಾ ಗೌರವ ಸೇವೆ ಸಲ್ಲಿಸಲಿ.

ಅವರಿಗೆ ಆಹಾರ, ಪಾನಿಯ, ಹಾಸಿಗೆ ಸಿದ್ಧಪಡಿಸಲಿ

ಅವರಿಗೆ ಸ್ನಾನ ಮಾಡಿಸಲಿ, ಪಾದಗಳನ್ನು ತೊಳೆಯಲಿ

ಅಂತಹ ಸೇವೆಗಳನ್ನು ಸಂತರು ಸದಾ ಪ್ರಶಂಸಿಸುವರು.

ಅಂತಹವನು ಇಹದಲ್ಲಿ ಆನಂದ ಪರದಲ್ಲಿ

ಸುಗತಿ ಪಡೆಯುವನು                (ಜಾತಕ 173, 174)

ಮನೆಯಲ್ಲಿ ಅತ್ಯುತ್ತಮ ಮಿತ್ರನ್ಯಾರು

ಎಂದು ದೇವತೆಯೊಬ್ಬಳು ಕೇಳಿದ ಪ್ರಶ್ನೆಗೆ

ಬುದ್ಧರು ಈ ರೀತಿ ಉತ್ತರಿಸುವರು

ತಾಯಿಯೆ ಮನೆಯಲ್ಲಿ ಅತ್ಯುತ್ತಮ ಮಿತ್ರ.



ಪೋಷಕರ ಕರ್ತವ್ಯಗಳು

ಮಕ್ಕಳ ಕ್ಷೇಮವೇ ಪೋಷಕರ ಕರ್ತವ್ಯವಾಗಿದೆ.  ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಕರ್ತವ್ಯಭರಿತ ಮತ್ತು ವಾತ್ಸಲ್ಯಮಯಿ ತಾಯ್ತಂದೆಯರು ತಮ್ಮ ಹೆಗಲಲ್ಲಿ ಕರ್ತವ್ಯದ ಭಾರ ಸಂತೋಷವಾಗಿ ಹೊರುವರು.  ಹಾಗಿರುವಾಗಲು ಕೆಲವು ಕೃತಘ್ನ ಮಕ್ಕಳು ಕರುಣಾಮಯಿ ಪೋಷಕರ ಅಮೂಲ್ಯ ಸೇವೆಗಳನ್ನು ಮರೆತು, ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸುತ್ತಿದ್ದಾರೆ.  ತಮ್ಮ ಕರ್ತವ್ಯಗಳನ್ನು ಅಲಕ್ಷಿಸುತ್ತಿದ್ದಾರೆ.  ಆದರೂ ತಾಯಿ ತಂದೆಯರು ಮಕ್ಕಳಿಗೆ ಅವರು ಮನೆಯಲ್ಲಿ ಇದ್ದಾಗಲು ನಂತರ ಮನೆಬಿಟ್ಟು ಕುತಂತ್ರರಾದಾಗಲು ಸಹಾ ತಮ್ಮ ಕೈಲಾದ ಸಹಾಯ ಮಾಡುವರು. 

ಗರ್ಭದಿಂದ ಜನ್ಮದವರೆಗೂ ನಂತರ ಅವರು ವಿವಾಹವಾಗುವರೆಗೂ ಮಕ್ಕಳನ್ನು ಪೋಷಕರು ಅತ್ಯಂತ ಜಾಗರೂಕತೆಯಿಂದ ಸಲಹುವರು ಮತ್ತು ಆದರ್ಶ ಪುತ್ರರನ್ನಾಗಿ ಮಾಡುವರು.  

ಪೋಷಕರು ನಿಜವಾಗಿ ತಮ್ಮ ಮಕ್ಕಳನ್ನು ಆದರ್ಶ ಮಕ್ಕಳಾಗಿ ನೋಡಲು ಇಷ್ಟಪಡುತ್ತಾರೆ.  ಮಕ್ಕಳು ಪ್ರತಿಯೊಂದು ವಿಧದಲ್ಲೂ ತಮ್ಮನ್ನು ಅನುಕರಿಸಲಿ ಅಥವಾ ಮೀರಿಸಲಿ ಎಂದು ಅವರು ಆನಂದಿಸುವರು.  ಆದರೆ ಮಕ್ಕಳು ತಮಗಿಂತ ಕಡಿಮೆ ಮಟ್ಟದವರಾದಾಗ ಅವರಿಗೆ ದುಃಖವಾಗುತ್ತದೆ.  ಮಕ್ಕಳಿಗೆ ಸರಿಯಾದ ಮಾರ್ಗದಲ್ಲಿ ತರಲಿಚ್ಛಿಸುವ ತಂದೆತಾಯಿಗಳು ಮೊದಲು ತಾವು ಆದರ್ಶಯುತವಾದ ಜೀವನ ನಡೆಸಬೇಕು.  ಅನರ್ಹ ಪೋಷಕರಿಂದ ಅರ್ಹ ಪುತ್ರರನ್ನು ಅಪೇಕ್ಷಿಸುವುದು ಅಸಾಧ್ಯವಾಗಿದೆ.  ಹಿಂದಿನ ಜನ್ಮಗಳ ಕರ್ಮದ ಪ್ರವೃತ್ತಿಗಳನ್ನು ಮಕ್ಕಳು ವಂಶವಾಹಿಯಾಗಿ ಪಡೆದಿರುತ್ತಾರೆ ಹಾಗು ತಾಯ್ತಂದೆಯರ ಗುಣಗಳನ್ನು ಪಡೆಯುತ್ತಾರೆ.  ಹೊಣೆಗಾರಿಕೆಯ ತಾಯ್ತಂದೆಯರು ಯಾವುದೇ ರೀತಿಯ ಕಲ್ಮಶಗಳು ಮಕ್ಕಳಲ್ಲಿ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು.

ಸಿಗಾಲೊವಾದ ಸುತ್ತದಲ್ಲಿ ಪೋಷಕರಿಗೆ 5 ಬಗೆಯ ಕರ್ತವ್ಯಗಳಿರುತ್ತವೆ : 


1. ಪಾಪ ಮಾಡದಂತೆ ಮಕ್ಕಳನ್ನು ತಡೆಯುವುದು


ಮನೆಯೇ ಮೊದಲ ಶಾಲೆ ಮತ್ತು ಪೋಷಕರೇ ಮೊದಲ ಗುರುಗಳಾಗಿರುವರು.  ಮಕ್ಕಳು ಸಾಮಾನ್ಯವಾಗಿ ತಮ್ಮ ಪ್ರಾಥಮಿಕ ಪಾಠಗಳನ್ನು ತಮ್ಮ ಸ್ನೇಹಮಯಿ ಪೋಷಕರಿಂದಲೇ ಪಡೆಯುವವು; ಅಲಕ್ಷ್ಯವುಳ್ಳ ಪೋಷರು ನೇರವಾಗಿಯೇ ಅಥವಾ ಪರೋಕ್ಷವಾಗಿಯೋ ಮಕ್ಕಳು ಹೇಳುವ ಸುಳ್ಳಿಗೆ, ವಂಚನೆಗೆ, ಅಪ್ರಮಾಣಿಕತೆಗೆ, ಚಾಡಿ ಹೇಳುವಿಕೆಗೆ, ಸೇಡು, ಭಯ, ಇತ್ಯಾದಿ ಗುನಗಳಿಗೆ ಕಾರಣಕರ್ತರಾಗುತ್ತಾರೆ.  ಆದ್ದರಿಂದಾಗಿ ಮಕ್ಕಳ ಮನಸ್ಸಿನಲ್ಲಿ ಅಂತಹ ಕಲ್ಮಶಗಳು ಪ್ರಭಾವ ಬೀರಬಾರದೆಂದು ಇಚ್ಛಿಸಿದರೆ ತಾವು ಮೊದಲು ಆದರ್ಶ ಗುಣಗಳನ್ನು ಉದಾಹರಣೆಯಾಗಿ ತೋರಿಸಬೇಕು, ಪಾಲಿಸಬೆಕು. 

ಪೋಷಕರು ಯಾವ ರೀತಿಯಲ್ಲಿ ವತರ್ಿಸಬೇಕೆಂದರೆ ಮಕ್ಕಳು ಅವರ ಮೇಲೆ ನಿಸ್ಸಂಶಯ ಶ್ರದ್ಧೆಯಿಡಬೇಕು.   ಅವರು ಅವರಿಗೆ ಮೋಸ ಮಾಡಬಾರದು.  ಮಕ್ಕಳು ವಸ್ತುಗಳ ಮೇಲೆ ಆಸೆಪಟ್ಟು ಅಳುವಂತೆ ಪ್ರೋತ್ಸಾಹಿಸಬಾರದು.  ಮಕ್ಕಳು ಕೇಳುವ ಮುನ್ನವೇ ಅವರಿಗೆ ಅಗತ್ಯವಾದವುಗಳನ್ನು ನೀಡಿದಾಗ ಅದು ಅವರ ಮೇಲೆ ಉತ್ತಮ ಪ್ರಭಾವ ಬೀರುತ್ತದೆ.  ಜೊತೆಗೆ ಪೋಷಕರು ತಾವು ಹೊಂದಿರುವುದನ್ನು ನಿರಾಕರಿಸುವುದರ ಮೂಲಕ ದೊಡ್ಡ ತಪ್ಪು ಮಾಡುತ್ತಾರೆ ಮತ್ತು ಬೇರೆ ಅಣ್ಣ ಅಥವಾ ತಂಗಿಗೆ ಅದನ್ನು ನೀಡಿದಾಗ ಮಕ್ಕಳು ಸುಳ್ಳು ಮತ್ತು ಮೋಸದ ಪ್ರಥಮ ಪಾಠ ಕಲಿಯುತ್ತವೆ.  ಮುಂದೆ ಈ ಬಗೆಯ ಕುಖ್ಯಾತ ಕಲೆಗಳಲ್ಲಿ ನಿಸ್ಸೀಮರಾಗಿ ತಮ್ಮ ಗುರುಗಳನ್ನು ಮೋಸ ಮಾಡಿ, ಮೀರಿಸುತ್ತಾರೆ. 

ಸೇಡಿನ ಬಗ್ಗೆ ಏನನ್ನೋಣ ? ಅದು ಬಹಳಷ್ಟು ಬಾರಿ ಮನೆಯಲ್ಲೆ ಕಲಿಯುತ್ತಾರೆ.  ಬಹಳಷ್ಟು ಬಾರಿ ತಮ್ಮ ಸಹಾನುಭೂತಿಯು ತಾಯಿಯಿಂದಲೇ ಕಲಿಯುತ್ತಾರೆ.  ಮಗುವು ನೆಲದ ಮೇಲೆ ಬಿದ್ದಾಗ ಅಳುತ್ತದೆ, ತಾಯಿಯು ಓಡಿಬಂದು ಮಗುವನ್ನು ಎತ್ತಿ, ನೆಲಕ್ಕೆ ಕಾಲಿನಿಂದ ಒದ್ದಾಗ ಮಗು ಅಳು ನಿಲ್ಲಿಸುತ್ತದೆ. ಅದು ಸೇಡಿಗೆ ಸೇಡು ಎಂಬ ಪಾಠ ಕಲಿಯುತ್ತದೆ. 

ಮಕ್ಕಳನ್ನು ಭಯದ ವಾತಾವರಣದಲ್ಲಿ ಬೆಳೆಸಬಾರದು, ಅವು ಸ್ವಲ್ಪ ಅತ್ತರೆ ತೊಂದರೆಯಿಲ್ಲ.  ಆದರೆ ಭಯದಿಂದ ಅಳುವುದನ್ನು ನಿಲ್ಲಿಸುವುದು ಮಾಡಬಾರದು.  

ವಿಧೇಯತೆ, ಗೌರವ, ನಮ್ರತೆಗಳು ಭಯದಿಂದ ರಹಿತವಾಗಿರಬೇಕು.  ಬೌದ್ಧ ಧಮ್ಮದ ಪ್ರಕಾರ ಭಯವು ಅಜ್ಞಾನದಿಂದ ಉದಯಿಸುತ್ತದೆ.  ಒಬ್ಬನು ಪಾಪಕ್ಕೆ ಹೆದರಲಿ, ವ್ಯಕ್ತಿಗಲ್ಲ.  ಅನಗತ್ಯ ಭಯದಿಂದ ಮಕ್ಕಳು ಭೀತರಾಗುತ್ತಾರೆ ಮತ್ತು ಪರೋಕ್ಷವಾಗಿ ಕೀಳರಿಮೆಯಿಂದ ವ್ಯಕ್ತಿತ್ವವುಳ್ಳವರಾಗುತ್ತಾರೆ.  ಅವರು ಕತ್ತಲಿಗೆ ಮತ್ತು ಗೊತ್ತಿಲ್ಲದಂತಹ ಪ್ರತಿಯೊಂದಕ್ಕೂ ಹೆದರುತ್ತವೆ. ಅವರು ಒಂಟಿಯಾಗಿರಲು ಮತ್ತು ಒಂಟಿ ಹೋಗಲು ಹೆದರುತ್ತಾರೆ.

ಮಕ್ಕಳಿಗೆ ಧೈರ್ಯಶಾಲಿಗಳಾದ ರಾಜಕುಮಾರ ಪಂಚಾಯುಧರಾದ ದುಟುಗೆಮುನು ಮತ್ತು ರಾಜಕುಮಾರಿ ವಿಹಾರ, ಮಹಾದೇವಿಯರ ಕಥೆಗಳನ್ನು ಓದಿಸಿರಿ.

ರಾಜಕುಮಾರ ಪಂಚಾಯುಧ ಕೇವಲ 16 ವರ್ಷದ ಯುವಕ ಆದರೂ ಸಹಾ ಭಯಾನಕ ಯಕ್ಷನೊಂದಿಗೆ ಹೋರಾಡಲು ಹೆದರಲಿಲ್ಲ.  ರಾಜಕುಮಾರ ಕಾಡಿನಲ್ಲಿ ಪ್ರವೇಶಿಸಿದಾಗ ಪ್ರತಿಯೊಬ್ಬರು ಅಲ್ಲಿಗೆ ಹೋಗಬೇಡಿ ಎಂದು ಬುದ್ಧಿವಾದ ನೀಡಿದರು.  ಆಗ ರಾಜಕುಮಾರ ಈ ರೀತಿ ಉತ್ತರಿಸುವನು, ಒಳ್ಳೆಯದು, ಹಾಗಾದರೆ ನಾನು ಕೇವಲ ಒಮ್ಮೆ ಮಾತ್ರ ಸಾಯುತ್ತೇನೆ ಅವರು ಕಾಡಿನಲ್ಲಿ ಅಭಯರಾಗಿ ಹೋಗಿದ್ದು ಅಲ್ಲದೆ ಯಕ್ಷನನ್ನು ಗೆದ್ದರು. 

ರಾಜಕುಮಾರಿ ವಿಹಾರ ಮಹಾದೇವಿ ಯುವತಿಯಾಗಿದ್ದಳು.  ತನ್ನ ತತ್ವಗಳಿಗಾಗಿ ತನ್ನ ಜೀವನ ತ್ಯಾಗ ಮಾಡಿದಳು.

ದುಟುಗೆಮುನು ಎಂಬ ವಿರೋಚಿತ ಪುತ್ರನನ್ನು ಧೈರ್ಯವಂತ ತಾಯಿಯೆ ಜನ್ಮ ನೀಡಿರುತ್ತಾಳೆ.

ಒಂದುವೇಳೆ ಮಗು ತಪ್ಪು ಮಾಡುತ್ತಿದ್ದರೆ ಅದಕ್ಕೆ ಅಲ್ಲೆ, ಆಗಲೆ ತಿದ್ದಬೇಕು.  ಹಾಗೆಯೇ ಜನರ ಮುಂದೆ ಮಗುವಿಗೆ ಧಿಕ್ಕರಿಸುವುದು ಒಳ್ಳೆಯದಲ್ಲ.  ಹಾಗೇನಾದರೂ ಮಾಡಿದರೆ ಮಕ್ಕಳು ಇನ್ನಷ್ಟು ಮೊಂಡು ಹಿಡಿದು ಮತ್ತಷ್ಟು ಹಠಮಾರಿಗಳಾಗುವ ಸಾಧ್ಯತೆ ಇರುತ್ತದೆ.  ಎಲ್ಲಾ ಮಕ್ಕಳು ಒಳ್ಳೆಯವರೇ ಆಗಿರುತ್ತಾರೆ.  ಅವರ ಸ್ವಭಾವಗಳನ್ನು ನಾವು ಮೊದಲು ಅರಿಯಬೇಕು ಮತ್ತು ಅವಕ್ಕೆ ಸೂಕ್ತವಾದ ಪರಿಹಾರಗಳನ್ನು ಅನ್ವಯಿಸಬೇಕು.  ಕೆಲವೊಮ್ಮೆ ಒಂದೇ ಒಂದು ಪದವು ಸಂಪೂರ್ಣ ಪರಿವರ್ತನೆ ಮಾಡಬಲ್ಲದು.  

ಜಾತಕ ಕಥೆಯೊಂದರಲ್ಲಿ ಒಬ್ಬ ರಾಜನಿಗೆ ಒಬ್ಬ ಹಠಮಾರಿ ಕೋಪಿಷ್ಟ ರಾಜಕುಮಾರನಿದ್ದನು.  ರಾಜ ಆತನಿಗೆ ಪರಿವರ್ತನೆಯುಂಟು ಮಾಡಲು ರಾಜೋಧ್ಯಾನದಲ್ಲಿ ನೆಲೆಸಿದ್ದ ಖುಷಿಯ ಬಳಿ ಕರೆದೊಯ್ದರು.  ನಂತರ ರಾಜಕುಮಾರರು ಖುಷಿಯೊಂದಿಗೆ ಉದ್ಯಾನವನದಲ್ಲಿ ಸುತ್ತಾಡಲು ಹೊರಟರು.  ಆಗ ಅಲ್ಲಿದ್ದ ಪುಟ್ಟ ಜೀವಿತ ಗಿಡವನ್ನು ಏನೆಂದು ರಾಜಕುಮಾರನು ಕೇಳಿದನು.  ಅದಕ್ಕೆ ಬುದ್ಧಿವಂತ ಋಷಿಯು ತಿಂದು ಪರೀಕ್ಷಿಸು ಎಂದಾಗ, ಅದರ ಎಲೆ ತಿಂದು ಕಹಿಯನ್ನು ತಾಳಲಾರದೆ ಉಗಿದು ಈ ಚಿಕ್ಕ ಗಿಡದಲ್ಲೆ ಇದ್ದು ಕಹಿಯಿದ್ದರೆ ನಂತರ ದೊಡ್ಡದಾಗಿ ಮತ್ತಷ್ಟು ಕಹಿ ನೀಡಬಲ್ಲದು.  ಆದ್ದರಿಂದ ಇದನ್ನು ಬೇರು ಸಮೇತ ಕಿತ್ತುಹಾಕಿ ಎಂದು ಆಜ್ಞೆ ಮಾಡಿದನು.  ಆಗ ಋಷಿಯು ಒಂದು ಕ್ಷಣ ಇರು ಓ ರಾಜಕುಮಾರ - ಜನರಿಗೂ ನಿನ್ನ ಬಗ್ಗೆ ಹೀಗೆಯೇ ಅಭಿಪ್ರಾಯವಿದೆ.  ಬಾಲ್ಯದಲ್ಲೆ ಹೀಗೆ ಕ್ರೂರಿಯಾಗಿರುವ ಈತ ಮುಂದೆ ರಾಜನಾದರೆ ಹೇಗೆ? ಎಂದು.  ತಕ್ಷಣ ವಿವೇಕಿ ರಾಜಕುಮಾರ ಅದರ ಅರ್ಥ ಗ್ರಹಿಸಿ ಇಡೀ ವ್ಯಕ್ತಿತ್ವ ಮಾರ್ಪಡಿಸಿಕೊಂಡನು, ಸ್ನೇಹಮಯಿಯಾದನು.

2. ಎರಡನೆಯ ಕರ್ತವ್ಯವೇನೆಂದರೆ ಒಳ್ಳೆಯದು ಮಾಡಲು ಪ್ರೋತ್ಸಾಹಿಸುವುದು

ಪಾಲಕರೇ ಮನೆಯಲ್ಲಿ ಗುರುಗಳು ಮತ್ತು ಗುರುಗಳೇ ಶಾಲೆಯಲ್ಲಿ ಪೋಷಕರು.  ಹೀಗಾಗಿ ಪೋಷಕರು ಮತ್ತು ಗುರುಗಳು ಮಕ್ಕಳ ಉತ್ತಮ ಭವಿಷ್ಯಕ್ಕೆ ಕಾರಣಕರ್ತರಾಗುತ್ತಾರೆ.  ಅವರು ಇಚ್ಛಿಸಿದಂತೆ ಅವರ ನಿಮರ್ಾಣವಾಗುತ್ತದೆ.  ಅವರು ಈಗಿರುವಂತೆ ಮುಂದೆಯೂ ಆಗಬಲ್ಲರು.  ಬಾಲ್ಯದಲ್ಲಿರುವ ಈ ಮಕ್ಕಳು ಪ್ರಭಾವಕ್ಕೆ ಒಳಗಾಗುವ ಸ್ಥಿತಿಯಲ್ಲಿರುತ್ತಾರೆ.  ನಾವು ನೀಡುವಂತೆ ಅವು ಸ್ವೀಕರಿಸುತ್ತವೆ.  ಅವರು ಕೇವಲ ನಮ್ಮ ಹೆಜ್ಜೆಗಳನ್ನು ಹಿಂಬಾಲಿಸುವವು.  ಆ ಮಕ್ಕಳು ನಮ್ಮ ಕ್ರಿಯೆ, ನುಡಿ ಮತ್ತು ಯೋಚನೆಗಳಿಂದ ಪ್ರಭಾವಕ್ಕೆ ಒಳಗಾಗುವವು.  ಆದ್ದರಿಂದ ಉತ್ತಮ ಮನೆ ವಾತಾವರಣ ಮತ್ತು ಉತ್ತಮ ಶಾಲೆಯ ವಾತಾವರಣದಲ್ಲಿ ಮಕ್ಕಳನ್ನು ಇಡುವುದು ಪಾಲಕರ ಆದ್ಯಕರ್ತವ್ಯವಾಗಿದೆ. 

ಮಕ್ಕಳನ್ನು ಅಸಂಸ್ಕೃತ ದಾದಿಯರು ಮತ್ತು ಸೇವಕರ ನಡುವೆ ಪಾಲನೆಗೆ ಬಿಡಬೇಡಿ.  ಇದರಿಂದಾಗಿ ಅವರು ತಮ್ಮ ಪೋಷಕರಿಗಿಂತ ತಮ್ಮ ದಾದಿಯರಿಗೆ ಹೆಚ್ಚಾಗಿ ಅವಲಂಬಿಸುತ್ತವೆ.  ಈ ಎಲ್ಲಾ ಕಾರಣದಿಂದ ಬದಲಾವಣೆ ಅತ್ಯವಶ್ಯಕವಾಗಿದೆ.

ಸರಳತೆ, ವಿಧೆಯತೆ, ಸಹಕಾರ, ಐಕ್ಯತೆ, ಧೈರ್ಯ, ತ್ಯಾಗ, ಪ್ರಮಾಣಿಕತೆ, ನೇರತೆ, ಸೇವೆ, ಶ್ರದ್ಧೆ, ದಯೆ, ಮಿತವ್ಯಯ, ಸಂತೃಪ್ತಿ, ಸುವರ್ತನೆ, ಧಾಮರ್ಿಕಾಸಕ್ತಿ ಮತ್ತು ಇತರ ಸದ್ಗುಣಗಳನ್ನು ಹಂತಹಂತವಾಗಿ ತುಂಬಬೇಕು.  ಕೆಟ್ಟ ಕಳೆಗಳಾದರೂ ಬೇಗನೆ ಬೆಳೆದು ಫಲ ನೀಡುವ ವೃಕ್ಷಗಳಾಗುತ್ತದೆ. 

ಅವರು ಧರ್ಮ ವರ್ತನೆಯಲ್ಲಿ ಕೊನೇ ಪಕ್ಷ ಪಂಚಶೀಲ ಪಾಲಿಸುವಂತೆ ಆಗಬೇಕು.

ಮೊದಲ ಶೀಲ ಪಾಲನೆಯಿಂದ ಅವರು ಜೀವಿಗಳನ್ನು ಕೊಲ್ಲದೆ, ಅಹಿಂಸೆ ಮತ್ತು ಕರುಣೆಯನ್ನು ಪಾಲಿಸುತ್ತಾರೆ.  ಆಗ ಅವರು ಜೀವದ ಪವಿತ್ರತೆ ಅರಿಯುತ್ತಾರೆ.

ಎರಡನೆಯ ಶೀಲವಾದ ಕಳ್ಳತನ ತ್ಯಾಗದಿಂದ ಅವರು ಋಜುವಾಗಿ, ಪ್ರಮಾಣೀಕರಾಗುತ್ತಾರೆ.  ಜೂಜು, ಪ್ಲೇಯಿಂಗ್ ಕಾಡರ್್ ಆಡುವುದು ಸಹಾ ಪ್ರೋತ್ಸಾಹಿಸಬಾರದು.  ಮಕ್ಕಳನ್ನು ರೇಸ್ಕೋಸರ್ಿಗೆ ಕರೆದೊಯ್ಯುವುದು ಸಹಾ ಕೆದಕಿ ಆಗಿದೆ.  ಅದರಿಂದಾಗಿ ಅವರು ಭವಿಷ್ಯದಲ್ಲಿ ಅನಿರೀಕ್ಷಿತ ಆಗುಹೋಗುಗಳಲ್ಲಿ ಸಿಲುಕಿ ದುಃಖಿತರು ಆಗುವರು. 

ಮೂರನೆಯ ಶೀಲವು ಉತ್ತಮ ಶೀಲಕ್ಕೆ ಸಂಬಂಧಿಸಿದೆ.  ಮಕ್ಕಳಿಗೆ ಪರಿಶುದ್ಧತೆ ಮತ್ತು ಬ್ರಹ್ಮಚಾರ್ಯ ಕಲಿಸಬೆಕು.  ಅವರು ಕೆಟ್ಟ ಸಂಗಗಳಲ್ಲಿ ಬೆರೆಯದಂತೆ ನೋಡಿಕೊಳ್ಳಬೇಕು ಮತ್ತು ರಾತ್ರಿಗೆ ಮುಂಚೆ ಮನೆಗೆ ಹಿಂತಿರುಗುವಂತೆ ನೋಡಿಕೊಳ್ಳಬೇಕು.  ಇದಕ್ಕಾಗಿ ಪೋಷಕರೆ ಆದರ್ಶಪ್ರಾಯರಾಗಿ ನಡೆದುಕೊಳ್ಳಬೇಕು.  ಇಲ್ಲದಿದ್ದರೆ ಮಕ್ಕಳು ತಂದೆ ತಾಯಿಯರಂತೆ ಆಗುವರು.  ಅನೀತಿಯುತ ತಂದೆತಾಯಿಗಳು ಮಕ್ಕಳಲ್ಲಿ ಶೀಲ ನಿರೀಕ್ಷಿಸಲಾರರು.  ಶೀಲವಂತರಾದ ಪೋಷಕರಿಂದಲೇ ಮಕ್ಕಳ ಮಂಗಳವೂ ಆಗುತ್ತದೆ.  ಹಾಗಿಲ್ಲದೆ ದುಶ್ಶೀಲತೆಯ ಪೋಷಕರಿಂದ ಅವರು ಮತ್ತು ಮಕ್ಕಳು ಎರಡು ಗುಂಪುಗಳು ಹಾಳಾಗುವುವು. 

ಮಕ್ಕಳಿಗೆ ಸದಾ ಸತ್ಯವಂತರಾಗಲು ಕಲಿಸಬೇಕು.  ಇದೇ ನಾಲ್ಕನೆಯ ಶೀಲ.  ಅವರೇನಾದರೂ ತಪ್ಪು ಮಾಡಿದರೆ ಅದನ್ನು ಮುಚ್ಚಿದರೆ ಒಪ್ಪಿಕೊಂಡು ಮತ್ತೊಂದು ತಪ್ಪು ಮಾಡದಿರಲಿ.  ಮಕ್ಕಳನ್ನು ಯಾವರೀತಿ ತರಬೇತಿ ನೀಡಬೇಕೆಂದರೆ ಅವರಿಂದ ಪೋಷಕರೇ ಹೆಮ್ಮ ತಾಳಬೇಕು.

ಓ ನಮ್ಮ ಮಕ್ಕಳು ಎಂದಿಗೂ ಸುಳ್ಳಾಡುವುದಿಲ್ಲ ಹಾಗಲ್ಲದೆ ಮಗು ಈಗ ನಿಜ ಹೇಳು, ಸುಳ್ಳು ಹೇಳಬೇಡ ಎಂಬ ಅವಹೇಳನ ಸ್ಥಿತಿ ಉಂಟಾಗದಿರಲಿ.

ಓ ಪ್ರಿಯ ಮಕ್ಕಳೇ, ಯಾರು ಸತ್ಯಸಂಧರೋ ಅವರು ಪೂಜ್ಯರು, ತಮಾಷೆಗಾಗಿಯೂ ಸಹಾ ಮಕ್ಕಳೇ ಮಿಥ್ಯವನ್ನು ಹೇಳಬೇಡಿ.

ಮಕ್ಕಳಲ್ಲಿ ಚಾಡಿ ಹೇಳುವುದು ಸಹಾ ಬಾಲ್ಯದಲ್ಲೇ ಚಿವುಟಿ ಹಾಕಬೇಕು, ಮಕ್ಕಳು ತಪ್ಪಿಗಾಗಿ ಶಿಕ್ಷೆ ಅನುಭವಿಸುವಾಗ ಚಾಡಿ ಹೇಳಿ ಪರರಿಗೂ ಸಿಲುಕಿಸುವುದು ಸಾಮಾನ್ಯ.  ಅದಕ್ಕೆಲ್ಲಾ ಪ್ರೋತ್ಸಾಹಿಸಬಾರದು. 

ಹಾಗೆಯೇ ಕಟುನುಡಿ ಮತ್ತು ಕಾಡುಹರಟೆಯನ್ನು ನಿಲ್ಲಿಸಬೇಕು.  ಸಿಹಿಯಾದ ಮಕ್ಕಳಲ್ಲಿ ಸಿಹಿಯಾದ ಮಾತುಗಳನ್ನು ಬೆಳೆಸಬೇಕು.  ಅವರು ಅವಿಧೇಯ ಮಾತುಗಳನ್ನು ಆಡುವುದು ಮತ್ತು ಮನಸ್ಸಿಗೆ ಬಂದಂತೆ ಅಲಕ್ಷ್ಯದಿಂದ ಏನು ಬೇಕಾದರೂ ಆಡುವುದನ್ನು ತಡೆಯಬೇಕು.  ಮಕ್ಕಳಿಗೆ ಸದಾ ಸತ್ಯ, ಸದಾ ಹಿತವಾದ, ಒಳ್ಳೆಯದಾದ ಮಾತುಗಳನ್ನು ನುಡಿಯಲು ಕಲಿಸಬೇಕು. ಅವರ ನಾಲಿಗೆ ಬಾಲ್ಯದಿಂದ ಸಂಯಮದಿಂದ ಕೂಡಿರಲಿ, ಅರಕ್ಷಿತ ನಾಲಿಗೆಯು ಆಟಂಬಾಂಬ್ಗಿಂತ ನಾಶಕಾರಿ, ಸಂಯಮಿತ ರಕ್ಷಿತ ನಾಲಿಗೆಯು ಮಿಲಿಯನ್ ಗಟ್ಲೆ ಜನರಿಗೆ ಒಳಿತನ್ನು ಮಾಡಬಲ್ಲದು.

ಪೋಷಕರು ಕುಡಿತದ, ಮಾದಕ ದ್ರವ್ಯದ ಹಾಗು ಧೂಮಪಾನದ ದುಷ್ಟರಿಣಾಮಗಳನ್ನು ಅರಿಯಬೇಕು, ಕೆಲವರು ಎರಡೂ ಒಂದು ಸಾರಿ ಅತ್ಯಲ್ಪ ಮದ್ಯ ಹಾನಿಯಲ್ಲ ಎಂದು ಮಿಥ್ಯಾದೃಷ್ಟಿ ಹೊಂದಿದ್ದಾರೆ.  ಗುಟುಕು ತೆಗೆದುಕೊಳ್ಳುವ ಪಾಶ್ಚಾತ್ಯರೀತಿಯ ಸಭ್ಯತೆ ಕಾಣಬಹುದು.  ಆದರೆ ನಂತರ ಮದ್ಯದಲ್ಲಿ ವ್ಯಸಿನವಾಗಿ ಅಂತ್ಯದಲ್ಲಿ ಬಿಡಲಾರದ ಚಟವಾಗಿ ಭೀಕರತೆ ಉಂಟಾಗುತ್ತದೆ.  ತಂದೆ ತಾಯಿಗಳು ಮಕ್ಕಳ ಮೇಲೆ ಒಂದು ಕಣ್ಣು ಇಟ್ಟಿರರಲೇ ಬೇಕು.  ಏಕೆಂದರೆ ಪಾಟರ್ಿ, ಮತ್ತಲ್ಲೊ ಕುತೂಹಲದಿಂದಲೊ ಒತ್ತಾಯದಿಂದಲೂ ಸರ್ವನಾಶದ ಕಡೆಗೆ ಹೋಗಬಹುದು.  ಇದಕ್ಕೆ ಸಂಬಂಧಿಸಿದಂತೆ ಪೋಷಕರೆ ಮುಂದೆ ಸಂಯಮಯುತರಾಗಿ ಅಂತಹ ಯಾವುದೇ ಚಟ ಇಲ್ಲದೆ ಬಾಳಿ, ಮಕ್ಕಳು ಬುದ್ಧಿವಾದ ನೀಡಬೇಕು.

3. ಪೋಷಕರ ಮೂರನೆಯ ಕರ್ತವ್ಯ ಏನೆಂದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು.  

ಯೋಗ್ಯವಾದ ಶಿಕ್ಷಣವೇ ಪೋಷಕರು ನೀಡುವಂತಹ ಅತ್ಯುತ್ತಮ ಆಸ್ತಿಯಾಗಿದೆ.  ಯಾವ ಐಶ್ವರ್ಯ ಇಲ್ಲದಿದ್ದರೂ ಮಕ್ಕಳಿಗೆ ಹಾರೈಕೆಯನ್ನಾದರೂ ನೀಡಲಿ, ಪುತ್ರರಿಗೆ, ಪುತ್ರಿಯರಿಗೆ ಹಾರೈಕೆ ಸದಾ ಒಳಿತುಂಟುಮಾಡುತ್ತಿದೆ. 

ವಿದ್ಯಾಭ್ಯಾಸ ಅವರಿಗೆ ನೀಡಲೇಬೇಕು.  ಪ್ರಾರಂಭದಲ್ಲಿ ಅವರಿಗೆ ಧಾಮರ್ಿಕ ವಾತಾವರಣದಲ್ಲೆ ಬೆಳೆಸಬೇಕು.  ಇದು ಮಗುವಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.  ಅವರಿಗೆ ಸುಸಂಸ್ಕೃತರಾದ, ಹೊಣೆಗಾರಿಕೆ ಬಲ್ಲ ಗುರುಗಳ ಬಳಿ ಶಿಕ್ಷಣ ನೀಡಬೇಕು.  ಆಗಾಗ ಜ್ಞಾನಯುತ ಮತ್ತು ಧಾಮರ್ಿಕ ಭಿಕ್ಷುವಿನ ಬಳಿಗೂ ಕರೆತರಬೇಕು.  ಇದರಿಂದಾಗಿ ಅವರ ಚಾರಿತ್ರ್ಯ ಶ್ರೇಷ್ಠಮಟ್ಟದ್ದಾಗುತ್ತದೆ.  ರಾಜ ಸಿರಿ ಸಂಘಬೋಧಿಯು ತನ್ನ ಚಿಕ್ಕಪ್ಪ ಆಗಿದ್ದ ಹಿರಿಯ ಭಿಕ್ಷು (ಥೇರ)ವಿನ ಬುದ್ಧಿವಾದದಿಂದಲೇ ಶ್ರೇಷ್ಠ ರಾಜ ಎನಿಸಿಕೊಂಡನು. (ಹಾಗೆಯೇ ಸಾಮ್ರಾಟ್ ಆಶೋಕ ಸಹ). 

ಮಕ್ಕಳು ಮನೆಯಿಂದ ದೂರದಲ್ಲಿ ವಿದ್ಯಾಭ್ಯಾಸ ಹೊಂದುವಾಗ ಅಲ್ಲಿನ ವಾತಾವರಣದ ಬಗ್ಗೆ ಮುನ್ನೆಚ್ಚರಿಕೆ ಹೊಂದಬೇಕು.

ಬೌದ್ಧರ ವಿದ್ಯಾಭ್ಯಾಸದಲ್ಲಿ ಶೀಲದ ಅಥವಾ ಧರ್ಮದ ಶಿಕ್ಷಣ ಕಡ್ಡಾಯವಾಗಿದೆ.  ಧಮ್ಮವು ಲೌಕಿಕ ಶಿಕ್ಷಣವನ್ನು ನಿರಾಕರಿಸಬಾರದು.  ಭೌತಿಕ ಉನ್ನತಿ ಮತ್ತು ಧಮ್ಮದ ಅಭಿರುಚಿ ಜೊತೆ ಜೊತೆಯಲ್ಲೇ ಸಾಗಬೇಕು.  ಪುಸ್ತಕದ ಜ್ಞಾನಕ್ಕಿಂತ ಆಚರಣೆ ಉತ್ತಮ.  ವಂಚನೆಗಾಗಿ ಕಲಿಯದಿರಲಿ, ಅವರು ಪೋಷಕರಿಗೆ ಮತ್ತು ಗುರುಗಳಿಗೆ ತೋರಿಸಲು ತೋರಿಕೆಯ (ಡಾಂಬಿಕ) ಭಕ್ತಿ (ಕಲಿಯುವಿಕೆ) ಮಾಡದಿರಲಿ.  ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರು ಧಮ್ಮವನ್ನು ಕಲಿಯದಿರಲಿ.  ಧಮ್ಮಜ್ಞಾನ ಪಾಲನೆಗಾಗಿ ಕಲಿಯಲಿ.  ಧಮ್ಮಪದದ ಗಾಥೆಯು ಹೀಗೆ ಹೇಳುತ್ತದೆ. 

ಯಾರು ಧಮ್ಮವನ್ನು ತಿಳಿದು ಅದಕ್ಕೆ ಅನುಗುಣವಾಗಿ ಆಚರಣೆ ಮಾಡುವುದಿಲ್ಲವೋ ಅಂತಹವರು ಪರರ ಗೋವುಗಳನ್ನು ಎಣಿಸುವ ಗೋಪಾಲಕನಂತೆ ವ್ಯರ್ಥ.

ಈಗಿನ ಕಾಲದಲ್ಲಿ ಅಸಂಬದ್ಧ ವಿಷಯಗಳನ್ನು ಕಲಿಸಲಾಗುತ್ತಿದೆ.  ಅವು ದೀರ್ಘಕಾಲದ ಓಟಕ್ಕೆ ಅನುಪಯುಕ್ತವಾಗಿದೆ.  ನಮ್ಮ ಶಕ್ತಿಯನ್ನು ಆಸಕ್ತ ಹಾಗು ಲಾಭಕಾರಿಯುಂಟು ಮಾಡುವ ವಿಷಯಗಳಲ್ಲಿ ಬಳಸುವುದು ಉತ್ತಮವಲ್ಲವೆ ? ಹೆಣ್ಣು ಮಕ್ಕಳಿಗೆ ಸಂಬಂಧಿಸಿದಂತೆ ಅವರು ವಿದ್ಯಾಭ್ಯಾಸ ಜೊತೆಗೆ ಆದರ್ಶ ಪತ್ನಿ ಹಾಗು ಆದರ್ಶ ತಾಯಿ ಆಗುವುದನ್ನು ಮರೆಯಬಾರದು. 

ಹಾಗೆಯೇ ವಿದ್ಯಾಭ್ಯಾಸದ ಗುಂಗಿನಲ್ಲಿ ಆರೋಗ್ಯವನ್ನು ನಿರ್ಲಕ್ಷಿಸಬಾರದು, ರೋಗಭರಿತ ವಿದ್ಯಾವಂತರು ಯಾವ ಸಮಾಜಕ್ಕೂ ಅಥವಾ ದೇಶಕ್ಕೂ ಮೌಲ್ಯಯುತ ಆಸ್ತಿಯಾಗುವುದಿಲ್ಲ.

4.  ನಾಲ್ಕನೆಯ ಕರ್ತವ್ಯ ಏನೆಂದರೆ ಅನುಗುಣವಾದ ಸಂಗಾತಿಯೊಂದಿಗೆ ವಿವಾಹ ಮಾಡುವುದು. 

ಸಿಂಹಳ ಭಾಷೆಯಲ್ಲಿ ವಿವಾಹದ ಬಗ್ಗೆ ದೀಗೆ ಯಾನವ ಎನ್ನುತ್ತಾರೆ.  ಅಂದರೆ ದೀರ್ಘಯಾನ ಅಂದರೆ ದೀರ್ಘ (ಉದ್ದವಾದ) ಹಾದಿಯಲ್ಲಿ ಹೋಗುವಿಕೆ.  ಏಕೆಂದರೆ ವಿವಾಹವು ಇಂತಹ ಕ್ರಿಯೆ ಎಂದರೆ ನಾವು ಇಡೀ ಜೀವನ ಬಾಳುವಂತಹುದು.  ಮಕ್ಕಳಿಂದ ನಡೆಯುವ ಕ್ರಿಯೆಯಂತು ಅನಂತವಾದುದು.  ವಿವಾಹ ಬಾಂಧವ್ಯವು ಸುಲಭವಾಗಿ ಮುರಿಯಲಾಗದಂಹುದು.  ಆದ್ದರಿಂದ ಮದುವೆಯನ್ನು ಪ್ರತಿಯೊಬ್ಬರ ದೃಷ್ಟಿಕೋನಗಳಿಂದ ವೀಕ್ಷಿಸಿ ಸರ್ವರಿಗೂ ತೃಪ್ತಿಯಾಗುವಂತಿರಬೇಕು.  ನಂತರ ಪೋಷಕರು ವೃತ್ತಿಗೆ, ಕರ್ತವ್ಯ ಪಾಲನೆಗೆ, ಒತ್ತಾಯಿಸುವರು.  ಮಕ್ಕಳು ಹಕ್ಕುಗಳಿಗಾಗಿ ಒತ್ತಾಯಿಸುವರು.  ಸಂಸ್ಕೃತಿಯಂತೆ ಕರ್ತವ್ಯದ ಸ್ಥಾನವನ್ನು ಹಕ್ಕುಗಳು ಪಡೆಯುತ್ತದೆ.  ಎರಡು ಬಣದವರು ಗಟ್ಟಿಯಾಗದೆ ಯಾವುದು ಒಂದು ಯೋಗ್ಯ ನಿಧರ್ಾರಕ್ಕೆ ಬಂದು ಪರಿಹರಿಸಿಕೊಳ್ಳಬೇಕು, ಇಲ್ಲದಿದ್ದಲ್ಲಿ ಪರಸ್ಪರ ತೆಗಳುವಿಕೆ ಎಲ್ಲಾ ಮೂಡುತ್ತದೆ.

ಪತ್ನಿಯ ಆಯ್ಕೆಯ ಬಗ್ಗೆ ಮಹಾಮಂಗಳ ಜಾತಕದಲ್ಲಿ ಈ ರೀತಿ ಬರುತ್ತದೆ. 

ಯಾರ ಪತ್ನಿಯು ಸ್ನೇಹಮಯಿಯೋ

ಮತ್ತು ಸಮಾನ ವಯಸ್ಕಳೋ

ಶ್ರದ್ಧಾವಂತಳು ಮತ್ತು ಶೀಲವಂತಳೋ

ಮತ್ತು ಸುಜಾತಳೋ ಅದೇ ಪತ್ನಿಯಿಂದ

ಉಂಟಾಗುವ ಮಂಗಳಗಳು*

(*ಮಾನವನಿಗೆ ಭೂಮಿಯ ಮೇಲೆ ಸಿಗುವ ಉತ್ತಮ ಉಡುಗೊರೆ ಎಂದರೆ ಒಳ್ಳೆಯ ಪತ್ನಿ, ಹಾಗೆಯೇ ಕಹಿಯಾದ ಶಾಪವೆಂದರೆ ಕೆಟ್ಟ ಪತ್ನಿ) ಹಾಗೆಯೇ ಕೆಟ್ಟ ಗಂಡುಗಳನ್ನು ಆಯ್ಕೆ ಮಾಡಬಾರದು ಎಂದು ವಸಲ ಸುತ್ತದಲ್ಲಿ ವಿವರಿಸಲಾಗಿದೆ.

ವ್ಯಭಿಚಾರಿ, ಕುಡುಕ, ಜೂಜುಗಾರ ಮತ್ತು ದುಂದುವೆಚ್ಚ ಮಡುವವನು ಇಂತಹವರ ಆಯ್ಕೆಯನ್ನು ತಡೆಯಬೇಕು.

ಆರೋಗ್ಯವು ವಿವಾಹಕ್ಕೆ ಅತ್ಯಂತ ಅವಶ್ಯಕ ಇಲ್ಲದಿದ್ದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಶಾಪವಾಗಿರುತ್ತಾರೆ. 


5. ತಂದೆ ತಾಯಿಗಳ ಕರ್ತವ್ಯ ಏನೆಂದರೆ ಸರಿಯಾದ ಕಾಲದಲ್ಲಿ ತಮ್ಮ ಆಸ್ತಿಯನ್ನು ಅವರಿಗೆ ನೀಡುವುದು.


  ಮಾನವರು (ಪೋಷಕರು) ತಮ್ಮ ಮಕ್ಕಳಿಗೆ ತಮ್ಮ ಅಡಿಯಲ್ಲಿರುವಾಗ ಮಾತ್ರ ಪ್ರೀತಿಸುವುದಿಲ್ಲ, ಜೊತೆಗೆ ಅವರ ಭವಿಷ್ಯದ ಸುಖ ಮತ್ತು ಕ್ಷೇಮಕ್ಕೂ ಸಿದ್ಧತೆ ನಡೆಸುತ್ತಾರೆ.  ಅವರು ತಮ್ಮ ವ್ಯಕ್ತಿಗತವಾಗಿ ಸುಖಿಸದಿದ್ದರೂ ತಾವು ಸಂಗ್ರಹಿಸಿದ ಐಶ್ವರ್ಯವೆಲ್ಲಾ ಸಂತೋಷದಿಂದ ಮಕ್ಕಳಿಗೆ ನೀಡುವರು.  ತಿಪಿಟಕದಲ್ಲಿ ವಿಶಾಖೆಗೆ ಆಕೆಯ ತಂದೆಯು ಕೆಲವು ಹಿತವಚನ ನೀಡುತ್ತಾನೆ.  ಬಹುಶಃ ಇದು ಪೋಷಕರು ತಮ್ಮ ಮಗಳಿಗೆ ನೀಡಬಹುದಾದ ಉಚ್ಛ ಉಡುಗೊರೆಯಾಗಿದೆ (ವರದಕ್ಷಿಣೆ).

1. ಒಳಗಿನ ಬೆಂಕಿಯನ್ನು ಹೊರಗಡೆ ತೆಗೆದುಕೊಂಡು ಹೋಗಬಾರದು.

2. ಹೊರಗಿನ ಬೆಂಕಿಯನ್ನು ಒಳಗಡೆ ತರಬೇಡಿ.

3. ಯಾರು ಕೊಡುತ್ತಾರೋ ಅವರಿಗೆ ನೀಡು.

4. ಯಾರು ಕೊಡುವುದಿಲ್ಲವೋ ಅವರಿಗೆ ನೀಡಬೇಡ

5. ಯಾರು ಕೊಡುತ್ತಾರೋ ಮತ್ತು ಕೊಡುವುದಿಲ್ಲವೋ ಇಬ್ಬರಿಗೂ 

ನೀಡು. 

6. ಸುಖಿಯಾಗಿ ಕುಳಿತುಕೋ.

7. ಸುಖಿಯಾಗಿ ತಿನ್ನು

8. ಸುಖಿಯಾಗಿ ನಿದ್ರಿಸು

9. ಅಗ್ನಿಯನ್ನು ನೋಡಿಕೋ

10. ಗೃಹ ದೇವತೆಗಳಿಗೆ ಗೌರವಿಸು.

ಇವುಗಳ ಅರ್ಥ ಹೀಗಿದೆ :

1. ಬೆಂಕಿ ಎಂದರೆ ಚಾಡಿ ಹೇಳುವಿಕೆ.  ಅಂದರೆ ಪತ್ನಿಯು ತನ್ನ ಪತಿಯ ಮತ್ತು ಅತ್ತೆ ಮಾವಂದಿರ ಬಗ್ಗೆ ಕೆಟ್ಟದ್ದನ್ನು ಪರರ ಬಳಿ ಹೇಳಬಾರದು. ಹಾಗೆಯೇ ಅವರ ಆದಾಯ, ನಷ್ಟ ಅಥವಾ ಅವರ ಜಗಳಗಳು ಬೇರೆಡೆ ಹೇಳಬಾರದು.

2. ಪತ್ನಿಯು ಪರಗೃಹಸ್ಥರ ಕತೆಗಳಾಗಲಿ, ಸುದ್ದಿಗಳಾಗಲಿ ಕೇಳಬಾರದು.

3. ಯಾರು ಸಾಲವನ್ನು ಹಿಂದಿರುಗಿಸುತ್ತಾರೋ ಅಂತಹವರಿಗೆ ಮಾತ್ರ ಸಾಲ ನೀಡಬೇಕು.

4. ಯಾರು ಸಾಲವನ್ನು ಹಿಂದಿರುಗಿಸುವುದಿಲ್ಲವೋ ಅಂತಹವರಿಗೆ ಏನನ್ನು ನೀಡಬಾರದು.

5. ಬಡವರು, ಬಂಧುಗಳು ಮತ್ತು ಮಿತ್ರರು ಅವರಿಗೆ ಅವರು ಹಿಂತಿರುಗಿಸದಿದ್ದರೂ ಸಹಾಯ ಮಾಡಬೇಕು.

6. ಪತ್ನಿಯು ದಾರಿಯಲ್ಲಿ ಕೂರಬಾರದು, ಏಕೆಂದರೆ ಮಧ್ಯೆ ತನ್ನ ಅತ್ತೆ, ಮಾವ ಕಾಣುತ್ತಿದ್ದರೆ ಆಕೆ ಎದ್ದು ನಿಲ್ಲುತ್ತಾ ಮತ್ತೆ ಕೂರಬೇಕಾಗುತ್ತದೆ.  ಇದು ಹಿರಿಯರ ಬಗ್ಗೆ ಇರುವ ಗೌರವ ಸೂಚಿಸುತ್ತದೆ. 

7. ಪತ್ನಿಯು ತಾನು ಉಣುವ ಮೊದಲು ತನ್ನ ಪತಿ ಮತ್ತು ಅತ್ತೆ ಮಾವಂದಿರು ಹಾಗು ಸೇವಕರು ಉಂಡಿದ್ದಾರೆಯೇ ಗಮನಿಸಬೇಕು ನಂತರ ನಿರಾತಂಕವಾಗಿ ತಿನ್ನಬೇಕು.

8. ಇದರ ಅರ್ಥ ಪತ್ನಿಯು ಇಷ್ಟಪಟ್ಟಷ್ಟು ನಿದ್ರಿಸಲಿ ಎಂದಲ್ಲ, ಆಕೆ ಮಲಗುವ ಮುನ್ನ ಎಲ್ಲಾ ಬಾಗಿಲುಗಳು ಮುಚ್ಚಿದ್ದಾರೆಯೆ, ಪೀಠೋಪಕರಣಗಳು, ಸುರಕ್ಷಿತವಾಗಿದೆಯೇ, ಸೇವಕರು ತಮ್ಮ ವೃತ್ತಿಯನ್ನು ಚೆನ್ನಾಗಿ ಮಾಡಿದ್ದಾರೆಯೇ ಹಾಗು ಅತ್ತೆ ಮಾವಂದಿರು ನಿದ್ರಿಸಲು ಹೋಗಿದ್ದಾರೆಯೆ ಎಂದು ಪರೀಕ್ಷಿಸಿ ನಿದ್ರಿಸಬೇಕು.  ಪತ್ನಿಯು ಮುಂಜಾನೆಯೇ ಏಳಬೇಕು ಮತ್ತು ಅನಾರೋಗ್ಯದ ಹೊರತು ಹಗಲು ನಿದ್ರೆ ಮಾಡಬಾರದು.

9. ಗಂಡ ಮತ್ತು ಅತ್ತೆ ಮಾವಂದಿರನ್ನು ಬೆಂಕಿಯಂತೆ ಜಾಗರೂಕತೆಯಿಂದ ನೋಡಿಕೊಳ್ಳಬೇಕು. 

10. ಪತಿ ಮತ್ತು ಅತ್ತೆ ಮಾವಂದಿರನ್ನು ಗೃಹದೇವತೆಗಳಂತೆ ಕಾಣಬೇಕು.

ಬುದ್ಧರೇ ಅತ್ತೆ ಮಾವಂದಿರನ್ನು ಸಾಸ್ಸುದೇವ ಎಂದು ಕರೆದಿದ್ದಾರೆ. 

ಪೂರ್ವತ್ವ ಸಂಪ್ರದಾಯದಂತೆ ಪತ್ನಿಯು ಪತಿಗೆ ದೇವರಂತೆ ಗೌರವಿಸಬೇಕು.  ಬುದ್ಧ ವಚನದಲ್ಲಿ ಪತ್ನಿಯು ಪತಿಗೆ ಅತ್ಯುತ್ತಮ ಹಿತಕಾರಿಯಂತೆ ವತರ್ಿಸಬೇಕು. ಹಾಗು ಆಕೆಯನ್ನು ತನ್ನ ಎರಡನೆಯ ವ್ಯಕ್ತಿತ್ವದಂತೆ ಪರಿಗಣಿಸಬೇಕು.  ನಿಷ್ಠಾವಂತ ಪತ್ನಿಯು ತನ್ನ ಪತಿಗೆ ಹಿತಕಾರಿ ರಕ್ಷಕಳಂತೆ ನೋಡಿಕೊಳ್ಳುವಳು.  ಹಾಗೆಯೇ ಪತ್ನಿಯು ತನ್ನ ಧಾಮರ್ಿಕ ಕರ್ತವ್ಯಗಳನ್ನು ಮಾಡಬೇಕು.  ಭಿಕ್ಷುಗಳು ಮತ್ತು ಸಂತರು ಮನೆಗೆ ಬಂದರೆ ಅವರನ್ನು ಗೌರವದಿಂದ ನೋಡಿಕೊಂಡು ಆತಿಥ್ಯ ನೀಡಬೇಕು. 

ಮಕ್ಕಳ ಕರ್ತವ್ಯಗಳು

ತಂದೆ-ತಾಯಿಗಳು ಮಕ್ಕಳಿಗಾಗಿ ಪ್ರತಿ ಸಾಧ್ಯವಾದ ವಿಧದಲ್ಲಿ ಸಹಾಯ ಮಾಡಿದ್ದಕ್ಕಾಗಿ, ಅವರನ್ನು ಬೆಳಕಿನೆಡೆಗೆ ಕರೆದೊಯ್ಯುವುದಕ್ಕಾಗಿ ಮಕ್ಕಳು ಸದಾ ಋಣಿಗಳಾಗಿರುತ್ತಾರೆ.  ನಿಜಕ್ಕೂ ಅವರು ತಮ್ಮ ಪ್ರಾಣವನ್ನು ಅವರಿಗೆ ಅಪರ್ಿಸಿದರೂ ಸಹಾ ಅವರ ಋಣ ತೀರಿಸಲಾಗದು. 

ಬೌದ್ಧ ಧಮ್ಮದಂತೆ ಮೂರು ವಿಧದ ಮಕ್ಕಳು ಇರುತ್ತಾರೆ, ಅವೆಂದರೆ 1. ಮಕ್ಕಳು ತಮ್ಮ ಪೋಷಕರಿಗೆ ಸರ್ವರೀತಿಯಲ್ಲಿ ಕಡಿಮೆಯಿರುತ್ತಾರೆ (ಅವಜಾತ) 2. ಮಕ್ಕಳು ತಮ್ಮ ಪೋಷಕರಿಗೆ ಸಮಾನ ಹಂತದಲ್ಲಿರುತ್ತಾರೆ (ಅನುಜಾತ) 3. ಮಕ್ಕಳು ಎಲ್ಲಾ ರೀತಿಯಲ್ಲೂ ತಮ್ಮ ತಂದೆ ತಾಯಿಗಳಿಗೆ ಮೀರಿಸಿರುತ್ತಾರೆ (ಅತಿಜಾತ).  ಪ್ರತಿ ಮಕ್ಕಳು ತಮ್ಮ ತಂದೆ ತಾಯಿಯರನ್ನು ಶೀಲದಲ್ಲಿ, ಅಂತಸ್ತಿನಲ್ಲಿ ಸೇವೆಯಲ್ಲಿ ಪ್ರತಿಯೊಂದರಲ್ಲೂ ಮೀರಿಸಬೇಕು.  ಹೀಗಾಗದಿದ್ದಲ್ಲಿ ಮಕ್ಕಳು ನಿಂದೆಗೆ ಗುರಿಯಾಗುತ್ತಾರೆ.  ಮಕ್ಕಳು ಸ್ವಾಭಾವಿಕವಾದ ಅವಕಾಶಗಳಲ್ಲಿ ಆನಂದಿಸುತ್ತದೆ.  ಒಂದುವೇಳೆ ಮಕ್ಕಳು ತಂದೆತಾಯಿಗಳಿಗೆ ಮೀರಿಸದಿದ್ದಲ್ಲಿ ಕೊನೆ ಪಕ್ಷ ಅವರಿಗೆ ಅನುಕರಿಸಿ ಸಮಾನ ಹಂತಕ್ಕಾದರೂ ಹೋಗಬೇಕು.  ಆದರೆ ಎಂದಿಗೂ ಹೀನರಾಗಬಾರದು.  

ಸಿಗಾಲೊವಾದ ಸುತ್ತದ ಪ್ರಕಾರ ಮಕ್ಕಳು ತಮ್ಮ ಪೋಷಕರಲ್ಲಿ ಈ ಐದು ಕರ್ತವ್ಯ ಪೂರೈಸಬೆಕು.

1. ತಮ್ಮ ತಂದೆ ತಾಯಿಗಳಿಗೆ ಸಹಾಯ ಮಾಡುವುದು.  ಈ ಪರಮಾತ್ಯ ಕರ್ತವ್ಯಕ್ಕೆ ಯಾವ ಟೀಕೆಯೇ ಬೇಕಾಗಿಲ್ಲ.  

ಬೌದ್ಧ ಸಂಪ್ರದಾಯಂತೆ ಮಕ್ಕಳು ಪ್ರತಿದಿನ ತಿಸರಣ ಮತ್ತು ಪಂಚಶೀಲದ ಪ್ರತಿಜ್ಞೆ ನಂತರ ಪೋಷಕರ ಪಾದಗಳಿಗೆ ವಂದಿಸಬೇಕು.

ಇದು ಸನಾತನ ವಿಧದ ಗೌರವ :

ಓ ತಾಯಿಯೇ ! ನನಗಾಗಿ ಗರ್ಭದರಿಸಿ ಅಪಾರ ದುಃಖ ಅನುಭವಿಸಿದ ಮಾತೆಯೆ ನಿನಗೆ ಕೈಗಳನ್ನು ಹಣೆಗೆ ಜೋಡಿಸಿ ನಾನು ನಮಸ್ಕರಿಸುವೆ ನನ್ನ ಎಲ್ಲಾ ತಪ್ಪುಗಳನ್ನು ಕ್ಷಮಿಸು.

ನಾನು ಅತ್ತಾಗ ನನಗೆ ಲಾಲಿ ಹಾಡಿಸಿ, ಪ್ರೀತಿಯಿಂದ ನಿದ್ದೆಗೆ ಜಾರಿಸಿದೆ.  ನನ್ಮ ಮಾಲಿನ್ಯಗಳನ್ನು ಅಮೂಲ್ಯ ವಸ್ತುಗಳಂತೆ ಸೌಗಂಧದಂತೆ ಮುಟ್ಟು ಸ್ವಚ್ಛಗೊಳಿಸಿದೆ, ನಿನ್ನ ಎಲ್ಲಾ ಅನಂತ ಸೇವೆಗಳಿಂದ ಹಾಗು ಅಪಾರ ಕರುಣೆಯಿಂದಾಗಿ ಓ ಪ್ರಿಯ ಉದಾತ್ತ ತಾಯಿಯೇ ನೀನು ಸಮ್ಮ ಸಂಬುದ್ದಳಾಗಲಿ ಹಾಗು ಜಗತ್ತನ್ನು ದುಃಖದಿಂದ ಪಾರುಮಾಡುವಂತಾಗಲಿ

(ಬೋಸತ್)

ಬಹಳಷ್ಟು ವಾಚಕರು ರಾಜ ಅಗ್ರಬೋಧಿಯ ಬಗ್ಗೆ ಕೇಳಿರಬಹುದು.  ಆತನ ವರ್ತನೆಯು ಸರ್ವ ಮ್ಕಳಿಗೂ ಆದರ್ಶಪ್ರಾಯವಾಗಿದೆ. 

ಮಳ ವಂಶದಲ್ಲಿ ತಾಯಿಯ ಪೂಜೆಯ ಬಗ್ಗೆ ಈ ರೀತಿ ಸಿಗುತ್ತದೆ. 

ರಾಜನೊಬ್ಬನು ತನ್ನ ಮಾತೆಗೆ ಸೇವೆ ಮಾಡಲು ಹಗಲು ರಾತ್ರಿ ಸಂತೋಷಿಸುತ್ತಿದ್ದನು.  ಮುಂಜಾನೆ ಆಕೆಗೆ ಸ್ನಾನ ಮಾಡಿಸಿ, ವಸ್ತ್ರ ತೊಡಿಸಿ ಪುಷ್ಪಗಳಿಂದ ಪೂಜಿಸಿ ಪಾದ ನೀರನ್ನು ತನ್ನ ತಲೆಗೆ ಸಿಂಪಡಿಸಿ, ಮೂರು ಬಾರಿ ವಂದಿಸಿ, ಮೂರು ಪ್ರದಕ್ಷಿಣೆ ಮಾಡಿ, ಉತ್ತಮ ಆಹಾರ ಉಣಿಸಿ, ಆಕೆಯ ಮಲಗುವ ಕೋಣೆಯನ್ನು ಸುಗಂಧಯುತವನ್ನಾಗಿ ಮಾಡಿ, ಆಕೆಯ ಪಾದ ತೊಳೆದು, ಮಲಗಿಸಿ, ಮಂಚಕ್ಕೆ 3 ಬಾರಿ ಪ್ರದಕ್ಷಿಣೆ ಮಾಡಿ ಸೇವಕರಿಗೆ ಕಾವಲು ಕಾಯಲು ಆಜ್ಞೆ ಮಾಡುತ್ತಿದ್ದನು.  ಯಾವ ಸ್ಥಳದಲ್ಲಿ ಆಕೆ ಕಾಣುತ್ತಿದ್ದರೂ ಅಲ್ಲಿ ಗೌರವ ಸೂಚಿಸುತ್ತಾ ಆಕೆ ಇರುವವರೆಗೂ ಇದೇ ರೀತಿಯಲ್ಲಿ ಮಾತೃಸೇವೆ ಮಾಡುತ್ತಿದ್ದನು. (ಚುಳವಂಶ)

ಸಾಮ ಜಾತಕದಲ್ಲಿ ಬೋಧಿಸತ್ವರು ಬಾಣದಿಂದ ಗಾಯಾಳು ಆಗಿ ಬೀಳುವಾಗ ತಮ್ಮ ತಲೆಯನ್ನು ತಮ್ಮ ಪೋಷಕರ ದಿಕ್ಕಿಗೆ ಗೌರದಿಂದ ತಿರುಗಿಸಿ ಮೂಛರ್ೆ ಹೋದರು.

ರಾಜಕುಮಾರ ಜಲಿ ಮತ್ತು ರಾಜಕುಮಾರಿ ಕೃಷ್ಣಜಿನರು ತಮ್ಮ ತಂದೆ ತಾಯಿಗಳಿಗೆ ಅತ್ಯಂತ ನಿಷ್ಠರಾಗಿದ್ದರು.  ಈ ಮಕ್ಕಳಿಗೆ ರಾಜ ವಸ್ಸಂತರ ಕೊಳದಲ್ಲಿ ಅಡಗಿಸಿ ಇಡುತ್ತಾನೆ. ಏಕೆಂದರೆ ವೃದ್ಧ ಮನುಷ್ಯ ಇವರಿಗಾಗಿ ಬರಬಹುದೆಂದು.  ಆದರೆ ತಂದೆಯು ಕೂಗಿದಾಗ ಸಂಕೋಚವಿಲ್ಲದೆ, ಭಯವಿಲ್ಲದೆ ಮುಂದೆ ಬಂದು ನಿಲ್ಲುತ್ತಾರೆ.

ರಾಜಕುಮಾರ ರಾಮರ ವಿಧೇಯತೆಯು ಆದರ್ಶಪ್ರಾಯವಾದುದು, ಮಲತಾಯಿಯರ ಇಚ್ಛೆಗೆ ತಂದೆಯ ವಚನ ಪೂರೈಕೆಗೆ ಅವರು 14 ವರ್ಷ ವನವಾಸ ಮಾಡುವರು.  ಕೆಲವು ವರ್ಷಗಳ ನಂತರ ರಾಜನು ಮೃತ್ಯವನ್ನಪ್ಪಿದಾಗ ಮಂತ್ರಿಗಳು ರಾಜ್ಯವಾಳಲು ಆಹ್ವಾನಿಸಿದಾಗ ಕಾಲ ಪೂತರ್ಿ ಆಗುವವರೆಗೆ ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ.

ಆದ್ದರಿಂದ ವಿಧೇಯತೆಯು ಮಕ್ಕಳ ಪ್ರಧಾನ ಲಕ್ಷಣವಾಗಬೇಕು.  ಅವರು ತಂದೆ ತಾಯಿಗಳೊಂದಿಗೆ ಯಾವುದಕ್ಕೂ ಕೆಟ್ಟದಾಗಿ ನಡೆದುಕೊಳ್ಳಬಾರದು.  ಕೆಟ್ಟ ಸ್ವಭಾವದ ಪತ್ನಿಯು ವೃದ್ಧ ತಂದೆತಾಯಿಗಳ ಬಗ್ಗೆ ವಿಷ ತುಂಬಬಾರದು.  ಅವರು ರೋಗಿಗಳಾದಾಗ ಮತ್ತು ವೃದ್ಧರು ಆದಾಗ ಅವರನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕು.  ಅವರನ್ನು ಮಹಾನ್ ಪುಣ್ಯಕ್ಷೇತ್ರವೆಂದು ಭಾವಿಸಿ ಸೇವೆ ಗೈಯಬೇಕು.  

2. ಮಕ್ಕಳ ಅಗತ್ಯದ ಎಲ್ಲಾ ಕರ್ತವ್ಯಗಳನ್ನು ಮಾಡಬೇಕು :


 ಮಕ್ಕಳು ತಂದೆತಾಯಿಗಳ ನಿರೀಕ್ಷೆ ಅರ್ಥ ಮಾಡಿಕೊಳ್ಳಬೇಕು ಮತ್ತು ಅವರಿಗೆ ತೃಪ್ತಿಯಾಗುವಂತೆ ಕರ್ತವ್ಯ ಪಾಲಿಸಬೇಕು. ಪೋಷಕರ ಹಿತ ಮತ್ತು ಸುಖವನ್ನು ಕಾಣುವುದು ಮಕ್ಕಳ ಕರ್ತವ್ಯವಾಗಿದೆ.  ಅವರು ಅದಕ್ಕಾಗಿ ತಮ್ಮ ಸುಖವನ್ನು ತ್ಯಜಿಸಲಿ.  ಜಾತಕ ಕಥೆಗಳಲ್ಲಿ ಬೋದಿಸತ್ವರು ತಮ್ಮ ಪೋಷಕರಿಗೋಸ್ಕರ ತಮ್ಮ ಪ್ರಾಣವನ್ನೇ ಅಪರ್ಿಸಿದ್ದಾರೆ.  ಅದಕ್ಕೆ ತಾವೇ ಧನ್ಯ ಎಂದು ಭಾವಿಸಿದ್ದಾರೆ.

ಯಾವ ಮಾನವರು ಧರ್ಮಪಾಲರೊ ಅವರು ಮಾತಾಪಿತರ ಸೇವೆ ಮಾಡಲಿ.  ದೇವತೆಗಳು ಅವರ ಭಕ್ತಿ ಗಮನಿಸಿ ಅವರ ರೋಗವನ್ನು ಗುಣಪಡಿಸುವರು.  ಯಾವ ಮಾನವರು ಧರ್ಮಪಾಲರೋ ಅವರು ಮಾತಾಪಿತರ ಸೇವೆ ಮಾಡಲಿ, ದೇವತೆಗಳು ಇದಕ್ಕಾಗಿ ಪ್ರಶಂಸಿಸುವರು ಮತ್ತು ಮುಂದೆ ಸುಗತಿಯಲ್ಲಿ ಅವರು ಆನಂದಿಸುವರು 

(ತಮಯ ಜಾತಕ)

ಮಕ್ಕಳ ಕರ್ತವ್ಯವು ಕೇವಲ ಭೌತಿಕ ಸುಖ ಸವಲತ್ತು ನೀಡುವುದಲ್ಲ, ಜೊತೆಗೆ ಧಾಮರ್ಿಕ ಸುಖವನ್ನು ನೀಡುವುದು.  ಅವರು ತಮ್ಮ ಶೀಲ, ದಾನ, ಭಕ್ತಿ, ಪ್ರಜ್ಞೆ ಇತ್ಯಾದಿಗಳಿಂದ ವೃದ್ಧಿಸಬೇಕು ಹಾಗು ಪೋಷಕರು ಇದನ್ನು ಪಾಲಿಸುವಂತೆ ಪ್ರೋತ್ಸಾಹಿಸಬೇಕು.  ಹೀಗಾಗಿ ಅವರು ನಿತ್ಯ ಸುಖವನ್ನು ಮತ್ತು ಪುಣ್ಯವನ್ನು ಪ್ರಾಪ್ತಿ ಮಾಡುತ್ತಾರೆ.

3. ಮೂರನೆಯ ಕರ್ತವ್ಯ ಏನೆಂದರೆ ವಂಶದ ಪರಂಪರೆ ಮುಂದುವರೆಸುವುದು : 


ಮಕ್ಕಳ ವಂಶಗತಾ ಆಸ್ತಿಯನ್ನು ದುಂದುವೆಚ್ಚದಿಂದ ಪೋಲು ಮಾಡಬಾರದು, ಬಹಳಷ್ಟು ಮಿತವ್ಯಯ ಪಾಲಕರು ಅಪಾರ ಶ್ರಮದಿಂದ ಐಶ್ವರ್ಯ ಸಂಗ್ರಹಿಸಿರುತ್ತಾರೆ.  ಯಾವುದನ್ನು ಅವರು ನಿರಂತರ ಪ್ರಯತ್ನದಿಂದ ಗಳಿಸಿದ್ದರೋ ಅದನ್ನು ಆಧುನಿಕತೆಯ ನೆನಪಲ್ಲಿ ಖಚರ್ು ಮಾಡಿ ಸ್ವಲ್ಪ ಕಾಲದಲ್ಲೆ ದುಃಖಭರಿತ ಜೀವನ ನಡೆಸುತ್ತಾರೆ. 

ಮಕ್ಕಳು ತಮ್ಮ ಪೋಷಕರ ಉತ್ತಮ ಕೆಲಸಗಳನ್ನು ಮುಂದುವರೆಸಿ ಕೊಂಡು ಹೋಗಬೇಕು.  ಕಾಲಕ್ಕೆ ತಕ್ಕಂತೆ ಆಹಾರ, ದಾನ, ಧಾಮರ್ಿಕ ಸಂಸ್ಥೆಗಳಿಗೆ ಆಥರ್ಿಕ ಸಹಾಯ, ರೋಗಿಗಳ ಮತ್ತು ಬಡವರಿಗೆ ಸಹಾಯ ಇತ್ಯಾದಿಗಳನ್ನು ಪೋಷಕರಂತೆ ತಾವು ಸಹಾ ಅಲಕ್ಷಿಸದೆ ಮುಂದುವರೆಸಬೇಕು.

4. ಮಕ್ಕಳ ನಾಲ್ಕನೆಯ ಕರ್ತವ್ಯವೇನೆಂದರೆ ತಮ್ಮ ವಂಶಕ್ಕೆ ಅರ್ಹರಾಗುವಂತೆ ವತರ್ಿಸುವುದು.  


ಪೋಷಕರ ಗೌರವಾರ್ಹ ಹೆಸರು ಅರ್ಹ ಪುತ್ರರಿಂದ ನಿಲ್ಲುತ್ತದೆ.  ಸುಸಂಸ್ಕೃತ ಮಕ್ಕಳು ಪೋಷಕರ ಹೆಸರು ಸಾರ್ಥಕ ಮಾಡುತ್ತಾರೆ.  ಯಾವುದನ್ನು ತನ್ನ ತಂದೆ ತಾಯಿಯ ಬಳಿ ಹೇಳಲು ನಾಚಿಕೆ ಆಗುತ್ತದೆಯೋ ಅದನ್ನು ಬಹಿರಂಗವಾಗಲಿ ಅಥವಾ ರಹಸ್ಯದಲ್ಲಿ ಆಗಲಿ ಮಾಡಬಾರದು.

5. ಮಕ್ಕಳು ತಮ್ಮ ಮೃತ ಪೋಷಕರ ಹೆಸರಿನಲ್ಲಿ ಆಹಾರ ದಾನ ನೀಡಬೇಕು. 


 ಬೌದ್ಧ ಸಂಪ್ರದಾಯಗಳಲ್ಲಿ ಪೋಷಕರನ್ನು ಅವರು ಸತ್ತ ಮೇಲೂ ನೆನಪಿಸಿಕೊಳ್ಳುತ್ತಾರೆ.  ಅವರು ಯಾವುದಾದರೂ ಪುಣ್ಯ ಕಾರ್ಯ ಮಾಡಿ ಅದರ ಪುಣ್ಯವನ್ನು ಪೋಷಕರಿಗೆ ಹಂಚುತ್ತಾರೆ.  ಅವರಿಗೆ ಪುಣ್ಯ ಬೇಕಿದ್ದರೆ ಅದನ್ನು ಹಂಚುತ್ತಾರೆ.  ಅವು ಹಂಚಲ್ಪಡುತ್ತದೋ ಅಥವಾ ಇಲ್ಲವೋ ಅಂತಹ ಪುಣ್ಯ ಕಾರ್ಯಗಳು ಜೀವಿಗಳಿಗೆ ಸುಖ ತರುತ್ತದೆ.  ಅವರು ಪೋಷಕರ ಬಗ್ಗೆ ಹಿತಚಿಂತನೆಯನ್ನು ಮಾಡುತ್ತಾರೆ.  ಇದರಿಂದಾಗಿ ಆನಂದ ನೀಡುತ್ತಾರೆ.  ಹಾಗೆಯೇ ಅವರು ಕೃತಜ್ಞತೆ ವ್ಯಕ್ತಪಡಿಸಿ ಮುಂದಿನ ಪೀಳಿಗೆಯವರಿಗೆ ಆದರ್ಶ ಪ್ರಾಯರಾಗಿ ನಿಲ್ಲುತ್ತಾರೆ.  

ಆಗಾಗ್ಗೆ ಅವರ ಹೆಸರಿನಲ್ಲಿ ಆಹಾರ ದಾನ ನೀಡುವುದು ಧಾಮರ್ಿಕ, ವಿದ್ಯಾಸಂಸ್ಥೆಗಳು ಮತ್ತು ದಾನ ಸಂಸ್ಥೆಗಳು ಸ್ಥಾಪಿತವಾಗಬೇಕು.  ಧಾಮರ್ಿಕ ಗ್ರಂಥಗಳನ್ನು ಮುದ್ರಿಸಿ ಹಂಚಬೇಕು.  ಪೋಷಕರ ಹೆಸರಿನಲ್ಲಿ ಸ್ಕಾಲರ್ಶಿಪ್ ನೀಡಬೇಕು.  ಈ ರೀತಿಯಲ್ಲಿ ಪೋಷಕರಿಗೆ ಗೌರವ ಸಲ್ಲಿಸಬೇಕು.  

ನಾನು ಈ ಕೃತಿಯನ್ನು ಅಶೋಕನ ಶಿಲಾಶಾಸನದೊಂದಿಗೆ ಮುಗಿಸುತ್ತೇನೆ.  ಬ್ರಹ್ಮಗಿರಿಯ ಎರಡನೆಯ ಶಿಲಾಶಾಸನದಲ್ಲಿ ಮಕ್ಕಳ ಕರ್ತವ್ಯದ ಬಗ್ಗೆ ಹೇಳಲಾಗಿದೆ.  ಇದನ್ನು ಭಗವಾನರು ಲಿಚ್ಚವಿಯವರಿಗೆ ಬೋಧಿಸಿದ್ದರು.  ಅದು ಹೀಗಿದೆ :

ಮಾತಾಪಿತೃಗಳನ್ನು ಮತ್ತು ಗುರುಗಳನ್ನು ಯೋಗ್ಯವಾಗಿ ಸಲಹಬೇಕು (ಸೇವೆ ಮಾಡಬೇಕು) ಸರ್ವಜೀವಿಗಳಿಗೆ ಅನುಕಂಪ ತೋರಬೇಕು, ಸತ್ಯವನ್ನೇ ಹೇಳಬೇಕು ಈ ಸದ್ಗುಣಗಳನ್ನು ಪಾಲಿಸಬೇಕು.

ಯಾವರೀತಿ ಗುರುವು ಶಿಷ್ಯನಿಂದ ಗೌರವ ಪಡೆಯುತ್ತಾರೆಯೋ ಹಾಗೆಯೇ ಸಂಬಂಧಗಳು ಸರಿಯಾಗಿ ಪಾಲಿಸಲ್ಪಡಬೇಕು.

ಇದು ಸನಾತನ ಧಮ್ಮವಾಗಿದೆ.  ಇದರಿಂದಾಗಿ ದೀರ್ಘ ಆಯಸ್ಸು ಲಭಿಸುತ್ತದೆ.  ಆದ್ದರಿಂದಾಗಿ ಸರ್ವರು ಇದನ್ನು ಪಾಲಿಸಬೇಕು.


 

No comments:

Post a Comment