Thursday, 24 September 2020

*ಪರಮ ಪೂಜ್ಯ ಆಚಾರ್ಯ ಬುದ್ಧರಕ್ಖೀತ ಥೇರ ಬಡಾ ಭಂತೆಜೀ*

 

*ಪರಮ ಪೂಜ್ಯ ಆಚಾರ್ಯ ಬುದ್ಧರಕ್ಖೀತ ಥೇರ ಬಡಾ ಭಂತೆಜೀ*




 

ಆಚಾರ್ಯ ಬುದ್ಧರಕ್ಖೀತ ಥೇರರವರು(1922-2013) ಖ್ಯಾತ ಬೌದ್ಧಭಿಕ್ಖುವು ಹಾಗೂ ಗಮನಾರ್ಹ ಲೇಖಕರು ಆಗಿದ್ದರು. ಅವರು ಬೆಂಗಳೂರಿನ ಮಹಾಬೋಧಿ ಸೊಸೈಟಿಯ ಸಂಸ್ಥಾಪಕರು ಹಾಗೂ ಅದರ ಸೋದರ ಸಂಸ್ಥೆಗಳ ಸಂಸ್ಥಾಪಕರು ಹೌದು.

 

ಅವರು ಹುಟ್ಟಿದ್ದು ಮಣಿಪುರದ ಇಂಫಾಲ್ ನಲ್ಲಿ.

 

1942 ರಿಂದ 1942 ರವರೆಗಿನ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಹಾ ಅವರು ಭಾಗವಹಿಸಿದ್ದರು.

 

*ಜನ್ಮ*

12ನೇ ಮಾರ್ಚ್ 1922

ಮಣಿಪುರದ ಇಂಫಾಲ್,ಭಾರತ.

 

*ಮರಣ*

23ನೇ ಸೆಪ್ಟೆಂಬರ್ 2013(೯೧ನೇ ವಯಸ್ಸಿನಲ್ಲಿ) ಬೆಂಗಳೂರು,.ಭಾರತ.

 

*ಆಲ್ಮ ಮಾಸ್ಟರ್*

ಕಲ್ಕತ್ತಾದ ಇಂಜಿನೀಯರಿಂಗ್ ಟೆಕ್ನಾಲಜಿ ಇಸ್ಟಿಟ್ಯೂಟ್ನಲ್ಲಿ.

 

*ಗಮನಾರ್ಹ ಕೃತಿ*

ಧಮ್ಮಪದ(ಆಂಗ್ಲಭಾಷೆಯಲ್ಲಿ)

 

*ಗಮನಾರ್ಹ ಪುರಸ್ಕಾರಗಳು*

ಆಚಾರ್ಯ,ಡಾಕ್ಟರೇಟ್,

ಅಭಿಧಜ ಅಗ್ಗಮಹಾ ಸಧಮ್ಮಜೋತಿಕಾ

 

*ವೆಬ್ ಸೈಟ್*

mahabodhi.info/about_us.html

 

ಅವರು ಕಲ್ಕತ್ತಾದ ವಿಧ್ಯಾಭ್ಯಾಸದ ನಂತರ ಭಾರತೀಯ ರಕ್ಷಣಾ ಸೇವೆಗಳಲ್ಲಿ ಸೇರಿದರು. ಅವರು ದ್ವಿತೀಯ ಮಹಾಯುದ್ಧದಲ್ಲಿಯೂ ಭಾಗವಹಿಸಿದ್ದರು. ನಂತರ ಸತ್ಯ ಹಾಗೂ ವಿಮುಕ್ತಿಗಾಗಿ ಸೇವಾ ವೃತ್ತಿಯನ್ನು ತೊರೆದರು.

 

ಅವರು 15-8-1947ರಂದೇ  ಗೃಹತ್ಯಾಗ ಮಾಡಿ ಸಂನ್ಯಾಸ ಸ್ವೀಕರಿಸಿದ್ದರು.

 

 ಅವರು ಸತ್ಯದ ಅನ್ವೇಷಣೆಯಲ್ಲಿ ಅವರು ಮಾತೆ ಆನಂದಮಯಿ ಮಾ, ರಮಣ ಮಹರ್ಷಿ,ರಂತಹ ದಿಗ್ಗಜರ,   ರಾಮಕೃಷ್ಣ ಮಠ ಇತ್ಯಾದಿಗಳ ಮೂಲಕ ಹಾದು ಹೋದರು. ಅವರು ಕನ್ಹೆರಿ ಗು಼ಹೆಗಳತ್ತ ಬಂದಾಗ ಅವರಿಗೆ ಪೂರ್ವ ಜನ್ಮದ ಸ್ಮರಣೆಯುಂಟಾಗಿ ತಾವು ಹಿಂದಿನ ಜನ್ಮದಲ್ಲಿ ಬೌದ್ಧ ಭಿಕ್ಖುವಾಗಿದ್ಧನ್ನು ನೆನಪಿಸಿಕೊಂಡು ನಂತರ ಬೌದ್ಧ ಭಿಕ್ಖುಗಳಾಗಲು ಧೃಡಸಂಕಲ್ಷ ತಾಳಿದರು.

 

ಅವರು 1949ರಲ್ಲಿ ಬೌದ್ಧಭಿಕ್ಖುಗಳಾದರು.

 

 12-5-1949 ಬುದ್ಧಪುರ್ಣಮಿಯಂದು ಕುಸಿನಾರದಲ್ಲಿ ಪರಮಪೂಜ್ಯ ಚಂಡಮಣಿ ಥೇರರಿಂದ ಭಿಕ್ಖುದೀಕ್ಷೆ ಸ್ವೀಕರಿಸಿದರು.

 

 ನಂತರ ಶ್ರೀಲಂಕದಲ್ಲಿ 1948ರಿಂದ 1951ರವರಿಗೆ ಹಾಗೂ ಬರ್ಮದಲ್ಲಿ 1951 ರಿಂದ 1954 ರವರಿಗೆ  ಧಮ್ಮ ಅನ್ವೇಷಣೆ ಹಾಗೂ ಅಧ್ಯಯನ ಮಾಡಿದರು.

 

ನಂತರ 1952ರಿಂದ 1954 ರವರಿಗೆ ನಡೆದ ಛಟ್ಠಸಂಘಯನ ಬೌದ್ಧ ಮಹಾ ಸಮ್ಮೇಳನದಲ್ಲಿ ಪಟಿವಿಸೋಧಕ ಅಂದರೆ ಸಂಪಾದಕರಾಗಿ ಕಾರ್ಯವಹಿಸಿದ್ದರು.

 

ನಂತರ ದೇಶ ವಿದೇಶಗಳಲ್ಲಿ ಧಮ್ಮಬೋಧಕರಾಗಿ ಕಾರ್ಯನಿರ್ವಹಣೆ ಮಾಡಿದರು.

 

ಅವರಿಗೆ ಶ್ರೀಲಂಕದಲ್ಲಿ 1951ರಲ್ಲಿ *ಆಚಾರ್ಯ* ಪದವಿ ನೀಡಿದರು‌‌

 

ಹಾಗೂ ಬರ್ಮದೇಶದಲ್ಲಿ ಅವರ ಧಮ್ಮಸೇವೆ ಗಮನಿಸಿ ಅವರಿಗೆ *ಅಭಿದಜ ಅಗ್ಗಮಹಾ ಸಧಮ್ಮಜೋತಿಕಾ*

ಪದವಿ ನೀಡಲಾಯಿತು.

 

ಹಾಗೂ ತುಮಕೂರು ವಿಶ್ವವಿದ್ಯಾಲಯದಲ್ಲಿ ಹಾಗೂ ಥಾಯ್ಲೆಂಡ್ನ ಸರ್ಕಾರವೇ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ.

 

1952 ರಲ್ಲಿ. ಪರಮಪೂಜ್ಯ ಬೌದ್ಧ ಪುನರ್ಜೀವಕರಾದ ಅನಗಾರಿಕ ಧಮ್ಮಪಾಲರ ಸೋದರಿಯ ಮಗಳಾದ ಮೂನಸಿಂಗೆಗೆ ಮೈಸೂರಿನ ಮಹಾರಾಜರು ಆಗ ಬೆಂಗಳೂರುನಲ್ಲಿ ಮಹಾಬೋಧಿಯ ಸ್ಥಾಪನೆಗೆ ನೆಲವನ್ನು ಉಡುಗೊರೆಯಾಗಿ ನೀಡಿದ್ದರು. ಅವರು ಅದನ್ನು ಬುದ್ಧರಕ್ಖೀತ ಥೇರರಿಗೆ ವಹಿಸಿ ಅದನ್ನು ಮುಂದುವರಿಸುವಂತೆ ಕೋರಿಕೊಂಡರು.

 

ಹೀಗೆ 5-6-1956 ರಲ್ಲಿ ಮಹಾಬೋಧಿ ಸೊಸೈಟಿ ಸ್ಥಾಪನೆ ಮಾಡಿದರು.

 

ನಂತರ ಅವರು 150ಕ್ಕಿಂತ ಹೆಚ್ಚು ಬೌದ್ಧ ಗೃಂಥಗಳನ್ನು ಬರೆದರು.ಬುದ್ಧವಚನ ಪ್ರಕಾಶನವನ್ನು,  *Dhamma* magazine , *ಕನ್ನಡ ಧಮ್ಮ* ಮ್ಯಾಗಜಿನ್ ನ್ನು ಹೋರತಂದರು. ತಿಪಿಟಕದ ಕನ್ನಡದ ಅನುವಾದದ ಗೃಂಥಗಳನ್ನು ಹಾಗೆ ತೆಲುಗಿನ ತಿಪಿಟಕದ ಅನುವಾದದ ಸರಣಿ ಹೊರತಂದರು.

 

ಅನೇಕ ಚೈತ್ಯ, ಸ್ತೂಪ, ವಿಹಾರಗಳನ್ನು ನಿರ್ಮಿಸಿದರು.

 

ಆಧುನಿಕ ಭಾರತದಲ್ಲಿ ಭಿಕ್ಖುಸಂಘವನ್ನು ಸ್ಥಾಪಿಸಿದರು. ಭಿಕ್ಖುಗಳ ಅಧ್ಯಯನ ಕೇಂದ್ರಗಳನ್ನು ಸ್ದಾಪಿಸಿದರು

 

ಧ್ಯಾನಕೇಂದ್ರಗಳನ್ನು ಸ್ಥಾಪಿಸಿದರು.

 

ಆಸ್ಪತ್ರೆಗಳನ್ನು, ಸ್ಕೂಲ್ಗಳನ್ನು, ಹಾಸ್ಟೆಲ್ ಗಳನ್ನು ಮತ್ತು ಕೃತಕ ಅಂಗಾಂಗಗಳ ಕೇಂದ್ರಗಳನ್ನು ಸ್ಥಾಪಿಸಿದರು.

 

ಹೀಗೆ ನೂರಾರು ಸೇವಕಾರ್ಯಗಳನ್ನು ಮುಂದುವರೆಸಿದರು.

 

ನಂತರ ಈಗಿನ ಧಮ್ಮಸೂರ್ಯವು 2013 ಸೆಪ್ಟೆಂಬರ್ 23ರಂದು ಅಸ್ತಂಗತವಾಯಿತು.

 

ಅವರ ಅಂತ್ಯಕ್ರಿಯೆಯನ್ನು ಬುದ್ಧರ  ಅಂತ್ಯಕ್ರಿಯೆಯ ರೀತಿ ಮಾಡಿದರು. ಅಂದು ಅಗಸದಲ್ಲಿ ದಿವ್ಯವಾದ ಫ್ರಭಾವಳಿಯು ಅಧ್ಬುತವಾಗಿ ಏರ್ಪಟ್ಟಿತ್ತು.

*ಸೆಪ್ಟೆಂಬರ್ ತಿಂಗಳ ಹುಣ್ಣಿಮೆಯ ಪ್ರಾಶಸ್ತ್ಯತೆ*

 

*ಸೆಪ್ಟೆಂಬರ್ ತಿಂಗಳ ಹುಣ್ಣಿಮೆಯ ಪ್ರಾಶಸ್ತ್ಯತೆ*






ತಿಂಗಳ ಹುಣ್ಣಿಮೆಯಂದು ಬೌದ್ಧರ 2 ಪ್ರಮುಖ ಘಟನೆಗಳು ನಡೆದಿವೆ.

1. ಭಿಕ್ಖುಣಿ ಸಂಘದ ಸ್ಥಾಪನೆ.

2. ಪಾರಿಲೆಯ್ಯಕ ಆನೆ ಹಾಗೂ ಕೋತಿಯು ಭಗವಾನರಿಗೆ ಮಧುವನ್ನು ದಾನವಾಗಿ ನೀಡಿದ್ದು.

.2 ಘಟನೆಗಳ ವಿವರಣೆ ಹೀಗಿದೆ.

 

*ಭಿಕ್ಖುಣಿ ಸಂಘದಲ್ಲಿ ಪ್ರಜಾಪತಿ ಗೋತಮಿಯ ಪ್ರಧಾನ ಪಾತ್ರ*

 

   ಮಹಾ ಪ್ರಜಾಪತಿ ಗೋತಮಿಯು ಸಿದ್ಧಾರ್ಥ ಗೋತಮ ಬುದ್ಧರಿಗೆ ಮಲತಾಯಿ ಆಗಿದ್ದಳು. ಭಗವಾನರ ತಾಯಿಯಾದ ಮಹಾಮಯಾದೇವಿಯು ಬೋಧಿಸತ್ವರ ಜನನದ ಏಳನೆಯ ದಿನದ ನತರ ಮೃತ್ಯುವಶವಾದಾಗ, ಮಹಾ ಪ್ರಜಾಪತಿ ಗೋತಮಿಯೇ ಪಟ್ಟದ ರಾಣಿಯಾದಳು. ಆಕೆಯ ಮಹಾ ತ್ಯಾಗವನ್ನು ಪ್ರಶಂಸಿಸಬೇಕಾಗಿದೆ. ಏಕೆಂದರೆ ಆಕೆಯ ಐದು ದಿನಗಳ ಪುತ್ರನಾದ ನಂದನನ್ನು ಆಕೆ ದಾದಿಯ ಕೈಗೆ ಒಪ್ಪಿಸಿ, ತಾನು ಬೋಧಿಸತ್ವರನ್ನು ಸ್ವತಃ ತಾಯಿಯ ನೆನಪು ಬಾರದಂತೆ ಬೆಳೆಸಿದ್ದಳು. ಹೀಗಾಗಿ ಆಕೆಯು ಭಗವಾನರ ಮಹಾ ಹಿತೈಷಿಯಾಗಿದ್ದಳು.

                ಯುವರಾಜ ಸಿದ್ಧಾರ್ಥ ಗೋತಮರು ಬುದ್ಧತ್ವ ಪ್ರಾಪ್ತಿಮಾಡಿಕೊಂಡು ಬುದ್ಧರಾಗಿ ಹಿಂತಿರುಗಿದರು. ಆಗ ಅವರ ಬೋಧನೆ ಆಲಿಸಿ ಗೋತಮಿಯು ಸೋತಪನ್ನಳಾದಳು, ಮುಂದೆ ಸಕದಾಗಾಮಿಯೂ ಆದಳು. ಆದರೆ ಪತಿಯ ಪರಿನಿಬ್ಬಾಣದ ನಂತರ ಅವಳು ಭಿಕ್ಷುಣಿಯಾಗಲು ನಿರ್ಧರಿಸಿದಳು. ಆದರೆ ಅದರಿಂದಾಗುವ ಅನಾನುಕೂಲ ಗಮನಿಸಿ ಭಗವಾನರು ಅದಕ್ಕೆ ಸಮ್ಮತಿಸುವುದಿಲ್ಲ.

 

ಆಗ ಭಗವಾನರು ವೇಸಾಲಿಯ ಮಹಾವನವೆಂಬ ಅರಣ್ಯದಲ್ಲಿದ್ದರು. ಆಗ ಪ್ರಜಾಪತಿ ಗೋತಮಿಯು ತನ್ನಂತೆ ಭಿಕ್ಷುಣಿಯಾಗುವ ಆಸೆಯಿಂದಿದ್ದ 500 ಸ್ತ್ರೀಯರನ್ನು ಕರೆದುಕೊಂಡು ಕಪಿಲವಸ್ತುವಿನಿಂದ ವೈಶಾಲಿಗೆ ಬಂದಳು. ಆದರೆ ಅವರೆಲ್ಲಾ ಸ್ವಯಂ ಆಗಿ ತಾವೇ ಕೇಶಮುಂಡನ ಮಾಡಿಕೊಂಡು ಸ್ವಯಂ ಕಾಷಾಯ ವಸ್ತ್ರ ಧರಿಸಿ ಭಗವಾನರನ್ನು ಭಿಕ್ಷುಣಿ ಸಂಘದ ಸ್ಥಾಪನೆಗೆ ಅನುಮತಿ ಕೋರಿದರು. ಹೀಗೆ ಮೂರುಬಾರಿ ಕೋರಿದಾಗಲೂ ಭಗವಾನರು ನಿರಾಕರಿಸಿದರು. ಆಗ ಪೂಜ್ಯ ಆನಂದರ ಸಂಧಾನದೊಂದಿಗೆ ಹಾಗು ಭಗವಾನರು ಭವಿಷ್ಯದಲ್ಲಿ ಅನಾಹುತಗಳಿಗೆ ಎಡೆಯಾಗಬಾರದೆಂದು ಎಂಟು ವಿಶೇಷ ನಿಯಮಗಳೊಂದಿಗೆ ಭಿಕ್ಷುಣಿ ಸಂಘದ ಸ್ಥಾಪನೆ ಆಗುತ್ತದೆ. ಹಾಗು ಸ್ತ್ರೀಯರು ಭಿಕ್ಷುಣಿಯರಾಗಲು ಅನುಮತಿ ದೊರೆಯುತ್ತದೆ.

 

 

ಸಮಯದಲ್ಲಿ ಕೆಲವು ಭಿಕ್ಷುಣಿಯರ ಮನಸ್ಸಿನಲ್ಲಿ ರೀತಿಯ ಆಲೋಚನೆ ಉಂಟಾಗುತ್ತದೆ. ಅದು ಏನೆಂದರೆ ಪ್ರಜಾಪತಿ ಗೋತಮಿಯು ಸರಿಯಾದ ಕ್ರಮದಲ್ಲಿ ಸಂಘವನ್ನು ಸೇರಿಲ್ಲ. ತಾನೇ ಸ್ವಯಂ ಕೇಶಮುಂಡನ ಮತ್ತು ಕಾಷಾಯವಸ್ತ್ರಧಾರಣೆ ಮಾಡಿಕೊಂಡಿದ್ದರಿಂದಾಗಿ ಆಕೆಗೆ ಗುರುವಿಲ್ಲ, ಹೀಗಾಗಿ ಆಕೆಯು ನಿಜ ಭಿಕ್ಷುಣಿಯಲ್ಲ. ಯೋಚನೆಯು ಮುಂದೆ ಹಲವಾರು ಭಿಕ್ಷುಣಿಯರಲ್ಲಿಯೂ ಹರಡಿ ಆಕೆಯೊಂದಿಗೆ ಉಪಾಸೋತ ಮುಂತಾದವುಗಳಲ್ಲಿ ಬೆರೆಯುತ್ತಿರಲಿಲ್ಲ.

                ನಂತರ ವಿಷಯವು ಭಗವಾನರ ಬಳಿಗೆ ಹೋಯಿತು. ಆಗ ಭಗವಾನರು ಹೀಗೆ ಹೇಳಿ ಅವರೆಲ್ಲರ ಮಿಥ್ಯಾ ಚಿಂತನೆಗೆ ತೆರೆ ಎಳೆದರು.

 

                ಏತಕ್ಕಾಗಿ ಹಾಗೆ ನುಡಿಯುವಿರಿ. ನಾನು ಆಕೆಗೆ ಎಂಟು ಗುರು ಧಮ್ಮಗಳನ್ನು ನೀಡಿದ್ದೇನೆ. ಆಕೆ ನನ್ನಿಂದಲೇ ಕಲಿತು ಅಭ್ಯಸಿಸುತ್ತಿದ್ದಾಳೆ. ನಾನೇ ಆಕೆಗೆ ಗುರುವಾಗಿರುವೆನು. ಬದಲಾಗಿ ಆಕೆಯು ಭಿಕ್ಷುಣಿ ಸಂಘಕ್ಕೆ ಮಹಾ ಕಾರಣಕರ್ತಳು. ಎಲ್ಲಕ್ಕಿಂತ ಮಿಗಿಲಾಗಿ ಆಕೆಯು ಅರಹಂತಳಾಗಿರುವುದು. ಆಕೆಯ ಬಗ್ಗೆ ಹೀಗೆಲ್ಲಾ ಸಂಶಯ ತಾಳದಿರಿ ಎಂದು ನುಡಿದು   ಗಾಥೆ ನುಡಿದರು.:

"ಯಾರು ಕಾಯದಿಂದಾಗಲಿ, ವಾಚಾದಿಂದಾಗಲಿ,

ಅಥವಾ ಮನಸ್ಸಿನಿಂದಾಗಲಿ, ದುಷ್ಕೃತ್ಯ ಮಾಡುವುದಿಲ್ಲವೋ

ರೀತಿಯಲ್ಲಿ ಸಂಯಮಿತರಾದವರನ್ನು

ನಾನು ಬ್ರಾಹ್ಮಣ ಎನ್ನುವೆನು."       (391)

 

2 ನೇಯ ಪ್ರಾಶಸ್ತ್ಯತೆ -ಪಾರಿಲೆಯ್ಯಕ ಆನೆಯ ಸ್ನೇಹ

 

 

            ಕೋಸಂಬಿಯ ಭಿಕ್ಷುಗಳಲ್ಲಿ ಕಲಹವೇರ್ಪಟ್ಟು, ಅವರು ಭಗವಾನರ ಬುದ್ಧಿವಾದವನ್ನು ಕೇಳಲಿಲ್ಲ. ಅವರನ್ನು ಸರಿಹಾದಿಗೆ ತರಲು ಹಾಗು ಅವರೆಲ್ಲರಿಂದ ದೂರವಿದ್ದು ಏಕಾಂಗಿತನದಲ್ಲಿ ನೆಲೆಸಲು ಭಗವಾನರು ದಟ್ಟವಾದ ಅರಣ್ಯದಲ್ಲಿ ಪ್ರವೇಶಿಸಿದರು. ( ಘಟನೆಯ ಪೂರ್ಣ ವಿವರವು ಒಂದನೆಯ ಅಧ್ಯಾಯದ 5ನೆಯ ಪ್ರಸಂಗದಲ್ಲಿ ಗಾಥಾ ಸಂಖ್ಯೆ 6ರಲ್ಲಿ ಬರುವುದು). ಅಲ್ಲಿ ಪಾರಿಲೆಯ್ಯಕವೆಂಬ ಆನೆಯು ಭಗವಾನರ ಹಿರಿತನ ಗಮನಿಸಿ, ಅವರಿಗೆ ಅಪಾರ ಸತ್ಕಾರ ಮಾಡಿತು. ಇಡೀ ಮೂರು ಅಥವಾ ನಾಲ್ಕು ತಿಂಗಳು ಅದು ಭಗವಾನರಿಗೆ ಸೇವೆ ಮಾಡಿತು. ಅಲ್ಲಿ ಅವರಿಗೆ ಆನೆ ಮತ್ತು ಕಪಿಯೊಂದು ಸೇವೆಮಾಡಿತು. ಆನೆಯೊಂದು ಬಂದು ಭಗವಾನರಿಗೆ ಸೇವೆ ಸಲ್ಲಿಸುತ್ತಿರುವುದನ್ನು ಕಪಿಯು ಕಂಡಿತು. ಅದೂ ಸಹಾ ಭಗವಾನರಿಗೆ ದಾನ ನೀಡಲು ಇಚ್ಛಿಸಿತು. ಅದು ಮರದಿಂದ ಮರಕ್ಕೆ ಹಾರಿ ಜೇನನ್ನು ಕಿತ್ತು ಬುದ್ಧರಿಗೆ ನೀಡಿತು. ಹಾಗು ಬುದ್ಧರು ಜೇನನ್ನು ತಿಂದರೋ ಅಥವಾ ಇಲ್ಲವೋ ಎಂದು ಪರೀಕ್ಷಿಸಿತು. ಅವರು ಸೇವಿಸದೆ ಇದ್ದಾಗ ಅದು ಹತ್ತಿರ ಬಂದು ಜೇನನ್ನು ಪರೀಕ್ಷಿಸಿ ಅದರಲ್ಲಿದ್ದ ಜೇನಿನ ಎಲ್ಲಾ ಮೊಟ್ಟೆಗಳನ್ನು ನಯವಾಗಿ ತೆಗೆದು ಮತ್ತೆ ಬುದ್ಧರಿಗೆ ಸಮಪರ್ಿಸಿತು. ಸಾರಿ ಬುದ್ಧರು ಸೇವಿಸಿದಾಗ ಅದು ಸಂತೋಷಿಸಿತು.

 

 

            ಭಗವಾನರು ನಾಡಿನಲ್ಲಿ ಇರದೆ, ಅರಣ್ಯದಲ್ಲಿ ವಾಸಿಸುತ್ತಿರುವುದು ಎಲ್ಲಾ ಉಪಾಸಕರಿಗೆ ತಿಳಿದುಹೋಯಿತು. ಆಗ ಉಪಾಸಕರಿಗೆಲ್ಲಾ ಅತೀವ ನೋವು ಕಾಡಿತು .

                ಗೃಹಸ್ಥರಿಗೆ ಬುದ್ಧರು ನಾಡಿನಲ್ಲಿ ಇಲ್ಲದಿರುವ ಕಾರಣ ತಿಳಿಯಿತು. ಅವರು ಭಿಕ್ಷುಗಳಿಗೆ ಆಹಾರ ದಾನ ನೀಡಲು ನಿರಾಕರಿಸಿದರು. ಆಗ ಭಿಕ್ಷುಗಳಿಗೆ ತಮ್ಮ ತಪ್ಪಿನ ಅರಿವಾಯಿತು. ಅವರು ಪಶ್ಚಾತ್ತಾಪಪಟ್ಟರು ಮತ್ತೆ ಒಂದಾದರು. ಆದರೂ ಸಹಾ ಕೋಸಂಬಿಯ ಉಪಾಸಕರು ಭಿಕ್ಷುಗಳಿಗೆ ಆಹಾರವನ್ನು ನೀಡಲಿಲ್ಲ, ಸತ್ಕರಿಸಲಿಲ್ಲ. ಏಕೆಂದರೆ ಅವರಿಗೆ ಬುದ್ಧರು ಬೇಕಾಗಿತ್ತು. ಬುದ್ಧರ ಬಳಿ ಭಿಕ್ಷುಗಳು ಕ್ಷಮೆಯಾಚಿಸಬೇಕಾಗಿತ್ತು. ಹೀಗೆ ವರ್ಷವಾಸವನ್ನು ಭಿಕ್ಷುಗಳು ಅತಿ ದುದರ್ೆಸೆಯಿಂದ ಕಳೆದರು.

. ಇತ್ತ ಕೋಸಂಬಿಯ ಭಿಕ್ಷುಗಳಿಗೆ ಜನರು ಆದರ, ಸತ್ಕಾರ ಮಾಡುವುದನ್ನೇ ಬಿಟ್ಟುಬಿಟ್ಟರು. ಆಗ ಮಹಾ ಉಪಾಸಕರಾದ ಅನಾಥಪಿಂಡಿಕ ಮತ್ತು ಉಪಾಸಿಕೆ ವಿಶಾಖೆ ಆನಂದರನ್ನು ಭೇಟಿ ಮಾಡಿದರು. "ಭಗವಾನರ ದರ್ಶನ ನಮಗೆ ಸಿಗುವಂತೆ ಮಾಡಿ" ಎಂದು ಕೇಳಿಕೊಂಡರು. ಹಾಗೆಯೇ 500 ಭಿಕ್ಷುಗಳು ಹೀಗೆ ಕೋರಿಕೊಂಡರು. "ಭಗವಾನರ ಅಧರಗಳಿಂದಲೇ ಧಮ್ಮವನ್ನು ನಾವು ಕೇಳುವಂತಾಗಲಿ" ಎಂದು ಭಿಕ್ಷುಗಳು ಮತ್ತು ಉಪಾಸಕರು ಪಟ್ಟುಹಿಡಿದರು. ಹೀಗಾಗಿ ಪೂಜ್ಯರಿಗೆ ಆನಂದರಿಗೆ ರೀತಿಯ ಯೋಚನೆ ಉಂಟಾಯಿತು: 'ಭಗವಾನರು ಮೂರು ತಿಂಗಳಿನಿಂದ ಏಕಾಂಗಿಯಾಗಿಯೇ ವಾಸಿಸುತ್ತಿದ್ದಾರೆ. ಆದ್ದರಿಂದ ಇಷ್ಟು ಭಿಕ್ಷುಗಳೊಂದಿಗೆ ಅವರನ್ನು ಭೇಟಿ ಮಾಡುವುದು ಸರಿಯಲ್ಲ'. ಆಗ ಅವರು ಭಿಕ್ಷುಗಳಿಗೆ ಅಲ್ಲೇ ಇರುವಂತೆ ತಿಳಿಸಿ, ತಾವೊಬ್ಬರೇ ದಟ್ಟ ಕಾನನದಲ್ಲಿ ಮುಂದುವರೆದರು. ಆಗ ಅವರಿಗೆ ಭಗವಾನರು ದೂರದಲ್ಲಿ ಕಾಣಿಸಿಕೊಂಡರು. ಆಗ ಪೂಜ್ಯ ಆನಂದರು ಅವರನ್ನು ಸಮೀಪಿಸತೊಡಗಿದರು. ಇದನ್ನು ಗಮನಿಸಿದ ಪಾರಿಲೆಯ್ಯಕ ದೊಡ್ಡ ದೊಣ್ಣೆಯನ್ನು ಎತ್ತಿಕೊಂಡು ಆನಂದರತ್ತ ಧಾವಿಸಿತು. ತಕ್ಷಣ ಇದನ್ನು ಗಮನಿಸಿದ ಭಗವಾನರು ಹೀಗೆ ಕೂಗಿ ಹೇಳಿದರು.

 

 

            "ನಿಲ್ಲು ಪಾರಿವೆಯ್ಯಕ, ಹಿಂದಕ್ಕೆ ಬಾ, ಆತನನ್ನು ಓಡಿಸಬೇಡ, ಆತನು ಬುದ್ಧರ ಸೇವಕನಾಗಿದ್ದಾನೆ". ತಕ್ಷಣ ಆನೆಯು ತನ್ನ ದೊಣ್ಣೆಯನ್ನು ದೂರಕ್ಕೆ ಎಸೆಯಿತು. ನಂತರ ಆನೆಯು ಪೂಜ್ಯ ಆನಂದರವರ ಪಿಂಡಪಾತ್ರೆ ಹಾಗೂ ಚೀವರ ಸ್ವೀಕರಿಸಲು ಸನ್ನೆಯಿಂದ ಕೋರಿಕೊಂಡಿತು. ಆದರೆ ಆನಂದರು ನಿರಾಕರಿಸಿದರು.

            ಆಗ ಆನೆಯು ರೀತಿ ಯೋಚಿಸಿತು: "ಈತ ನಿಜಕ್ಕೂ ವಿನಯಧರನಾಗಿದ್ದರೆ, ಭಗವಾನರು ಕುಳಿತುಕೊಳ್ಳುತ್ತಿದ್ದ ಶಿಲೆಯ ಮೇಲೆ ತನ್ನ ವಸ್ತುಗಳಾದ ಚೀವರ ಇತ್ಯಾದಿ ಇಡುವುದಿಲ್ಲ". ಆದರೆ ವಿನಯಧರರಾಗಿದ್ದಂತಹ ಆನಂದರವರು ತಮ್ಮ ಚೀವರ ಮತ್ತು ಪಿಂಡಪಾತ್ರೆ ನೆಲದ ಮೇಲೆ ಇಟ್ಟರು. ನಂತರ ಭಗವಾನರಿಗೆ ಗೌರವದಿಂದ ವಂದಿಸಿ ಒಂದೆಡೆ ಕುಳಿತರು.

            ಆಗ ಭಗವಾನರು ಹೀಗೆ ಪ್ರಶ್ನಿಸಿದರು: "ಆನಂದ, ಏಕಾಂಗಿಯಾಗಿಯೇ ಬಂದೆಯಾ?"

            "ಭಗವಾನ್, ನನ್ನೊಡನೆ 500 ಭಿಕ್ಷುಗಳಿದ್ದರು."

 

            "ಹಾಗಾದರೆ ಅವರೆಲ್ಲಾ ಎಲ್ಲಿ? ಅವರನ್ನು ಬರಹೇಳು". ನಂತರ ಭಿಕ್ಷುಗಳೆಲ್ಲಾ ಬಂದು ಸೇರಿದರು, ಗೌರವಿಸಿ ಒಂದೆಡೆ ಕುಳಿತರು, ಕುಶಲ ವಿಚಾರಿಸಿದರು.

 

 ನಂತರ ಭಿಕ್ಷುಗಳು ಹೀಗೆ ನುಡಿದರು: "ಭಗವಾನ್, ತಾವು ಸುಕುಮಾರ ಶರೀರವನ್ನು ಹೊಂದಿದ್ದು, ರೀತಿ ಕಾಡಿನಲ್ಲಿ ಕಷ್ಟಪಡುವುದು ಸರಿಯಲ್ಲ. ತಾವು ಮೂರು ತಿಂಗಳು ಹೇಗೆ ಕಳೆದಿರೋ? ಕನಿಷ್ಠ ತಮಗೆ ಬಾಯಿ ಮುಕ್ಕಳಿಸಲು ಸಹಾ ನೀರು ನೀಡಲು ಇತ್ಯಾದಿ ಸೇವೆ ಮಾಡಲು ಯಾರು ಇಲ್ಲದೆ ಹೋದರಲ್ಲ." ಆಗ ಭಗವಾನರು ಅವರಿಗೆ ಹೀಗೆ ಪ್ರತಿ ನುಡಿದರು: "ಭಿಕ್ಷುಗಳೇ, ಮಹಾ ಆನೆಯಾದ ಪಾರಿಲೆಯ್ಯಕವೇ ಇವೆಲ್ಲಾ ರೀತಿಯ ಸೇವೆಯನ್ನು ನನಗೆ ಮಾಡಿದೆ, ಅಂತಹ ಸಹಚರ ಯಾರಿಗೆ ತಾನೇ ಲಭಿಸುತ್ತಾನೆ. ಯಾರಿಗೆ ಇಂತಹ ಸಂಗಾತಿ ದೊರೆಯುತ್ತದೋ ಆತನು ಅಂತಹವರೊಡನೆ ಸುಖಿಯಾಗಿ ಜೀವಿಸಲಿ, ಇಲ್ಲದಿದ್ದರೆ ಏಕಾಂಗಿಯಾಗಿ ಜೀವಿಸಲಿ" ಎಂದು ನುಡಿದು, ಗಾಥೆಗಳನ್ನು ನುಡಿದರು.

"ಜ್ಞಾನಿಯು, ಶೀಲವಂತನೂ, ದೃಢಪ್ರಾಜ್ಞನು

ಸಾಧನೆಗೆ ಗೆಳೆಯನಾಗಿ ಲಭಿಸುವುದಾದರೆ

ಸರ್ವ ಆತಂಕಗಳನ್ನು ದಾಟಿ,

ಆತನೊಂದಿಗೆ ಆನಂದಯುತ ಮನಸ್ಸಿನಿಂದ

ಸ್ಮೃತಿವಂತನಾಗಿ ಜೀವಿಸು."        (328)

 

"ಆದರೆ ಜ್ಞಾನಿಯು ಶೀಲವಂತನು, ದೃಢಪ್ರಾಜ್ಞನು

ಸಾಧನೆಗೆ ಗೆಳೆಯನಾಗಿ ಲಭಿಸದಿದ್ದರೆ, ಹೇಗೆ

ರಾಜನೋರ್ವನು ಜಯಿಸಿದ ರಾಜ್ಯವನ್ನು

ಹಿಂದೆ ಬಿಟ್ಟು ನಡೆಯುವಂತೆ ಅಥವಾ

ಮಾತಂಗ ಆನೆಯ ರೀತಿಯಲ್ಲಿ ಕಾಡಿನಲ್ಲಿ

ಏಕಾಂಗಿಯಾಗಿ ಜೀವಿಸು."           (329)

 

"ಏಕಾಂಗಿಯಾಗಿ ಜೀವಿಸುವುದು ಉತ್ತಮ,

ಹೊರತು ಮೂರ್ಖರ ಸಹವಾಸ ಬೇಡ,

ಏಕಾಂಗಿಯಾಗಿಯೇ ಅಲ್ಪ ಅವಶ್ಯಕತೆಗಳಿಂದಲೇ ಜೀವಿಸು,

ಆದರೆ ಪಾಪವನ್ನು ಮಾಡಬೇಡ, ಮಾತಂಗ ಆನೆಯ ರೀತಿಯಲ್ಲಿ

ಕಾಡಿನಲ್ಲಿ ಏಕಾಂಗಿಯಾಗಿ ಜೀವಿಸು."            (330)

 

ವರ್ಷವಾಸದ ಕೊನೆಯಲ್ಲಿ ಹೀಗೆ ಆನಂದ ಮತ್ತಿತರ ಹಿರಿಯ ಭಿಕ್ಷುಗಳು ಕೋಸಂಬಿಯ ಭಿಕ್ಷುಗಳು ಬದಲಾಗಿರುವುದನ್ನು, ಕ್ಷಮೆ ಯಾಚಿಸಿರುವುದನ್ನು ತಿಳಿಸಿದರು. ನಂತರ ಭಗವಾನರು ಶ್ರಾವಸ್ಥಿಗೆ ಹಿಂತಿರುಗಿದರು. ಅಲ್ಲಿ ಭಿಕ್ಷುಗಳು ಬಂದು ಕ್ಷಮೆ ಯಾಚಿಸಿದರು. ಆಗ ಭಗವಾನರು ಗಾಥೆಯನ್ನು ತಿಳಿಸಿದರು.

"ಪರರು ತಾವು ಸಾವಿನ ವಶವಾಗುತ್ತೇವೆ ಎಂದು ಅರಿತಿಲ್ಲ. ಯಾರು ಇದನ್ನು ಅರಿತಿರುವರೋ ಅವರ ಜಗಳಗಳು ಶಮನಗೊಳ್ಳುತ್ತವೆ    (6)