ಪುಣ್ಯಾನುಮೋದನ
ಪುಣ್ಯ ಅನುಮೋದನೆಯು ನಮ್ಮ ಪುಣ್ಯವನ್ನು ನಮ್ಮ ಗತಿಸಿದ ಪೂರ್ವಿಕರಿಗೆ ಅಥವಾ ಸರ್ವ ಜೀವಿಗಳಿಗೆ ಹಂಚುವುದಾಗಿದೆ.
ಅದಕ್ಕಾಗಿ ಆತನು ಧ್ಯಾನ ಹಾಗೂ ದಾನವನ್ನು ಮಾಡಿ ನಂತರ ನೀರನ್ನು ಪಾತ್ರೆಗೆ ಸಾಂಕೇತಿಕವಾಗಿ ಹಾಕುತ್ತ ಹೀಗೆ ನುಡಿಯುವರು :
"ನನ್ನ ಪುಣ್ಯ ಭಾಗವು ನನ್ನ ಜ್ಞಾತಿಗಳಿಗೆ ಅಥವಾ ಬಂಧುಗಳಿಗೆ ಸೇರಲಿ.
ಅವರಿಗೆ ಭಾಗ ಸಿಗಲಿ ಪುಣ್ಯ ಲಭಿಸಲಿ."
ಸರ್ವ ಜೀವಿಗಳಿಗೆ ಪುಣ್ಯ ಹಂಚುವುದಿದ್ದರೇ ಹೀಗೆ ನುಡಿಯಬೇಕು:
ಮಮ ಪುಣ್ಯ ಭಾಗಂ ಸಬ್ಬೆ ಸತ್ತಾನಂ ಭಾಜೇಮಿ.
ತೆ ಸಬ್ಬೆ ಮೆ ಸಮಂ ಪುಣ್ಯ ಭಾಗಂ ಲಭಂತು
ಭವತು ಸಬ್ಬ ಮಂಗಳಂ
ಎಂದು ನುಡಿಯಬೇಕಾಗುತ್ತದೆ. ನಂತರ ಆ ಪಾತ್ರೆಯ ನೀರನ್ನು ಬೋಧಿ ವೃಕ್ಷಕ್ಕೆ ಸುರಿಯಬೇಕು.
No comments:
Post a Comment