ಸಮ್ಮಾದಿಟ್ಠಿ
(ಸಮ್ಯಕ್ ದೃಷ್ಟಿಕೋನ)
![](https://blogger.googleusercontent.com/img/b/R29vZ2xl/AVvXsEhBe7wj1mslykLlXfEFHn44-h78WzsIQOTwzSq0_JpnyyxDvmuReheaYakzZcxghgU57-do7eiIfcrjZq16e0Tz3SGD5fZcVvwvlqDseD6luJqsOx2ZIsfiPONgsxFuL5j3T6Vf18NH4rc/s1600/images+%25282%2529.jpg)
ಸಮ್ಮಾದಿಟ್ಟಿಯು ಮಹಾನಿಧಿಗೆ ಭೂಪಟವಿಚಿದ್ದಂತೆ. ಸಮ್ಮಾದಿಟ್ಟಿಯು
ನಿಬ್ಬಾಣ ಮಾರ್ಗಕ್ಕೆ ಮಹಾ ದಾರಿದೀಪವಿದ್ದಂತೆ. ಯಾವಾಗ ಸಾಧಕನು ಮತ್ತು ಆರ್ಯಸತ್ಯಗಳನ್ನು
ಯತಾರ್ಥವಾಗಿ ತನ್ನ ಪ್ರಜ್ಞಾಶೀಲತೆಯಿಂದ ಅರಿಯುತ್ತಾನೋ, ನಿಬ್ಬಾಣವನ್ನು ಗುರಿಯಾಗಿಸುತ್ತಾನೋ ಆಗ ಆತನಲ್ಲಿ ಅಜ್ಞಾನದ ಪ್ರವೃತ್ತಿ ನಾಶವಾಗುತ್ತದೆ.
ಇದೇ ಸಮ್ಮಾದೃಷ್ಟಿಯಾಗಿದೆ.
ಸಮ್ಮಾದೃಷ್ಟಿಯ ಲಕ್ಷಣವೇನೆಂದರೆ ಯತಾರ್ಥವಾಗಿ ಅಂದರೆ (ಸತ್ಯ) ಅದು
ಇರುವಂತೆಯೇ ಕಾಣುವುದು. ತೋರಿಕೆಯ ಸತ್ಯ ಮೀರಿ ಯತಾರ್ಥ ಸತ್ಯ ಅರಿಯುವುದು. ಸಮ್ಮಾದಿಟ್ಟಿಯ
ಕ್ರಿಯೆ ಏನೆಂದರೆ ಸತ್ಯವನ್ನು ಪ್ರಕಾಶಿಸುವುದು. ಇದು ಅಜ್ಞಾನದ ಅಥವಾ ಮಿಥ್ಯಾದೃಷ್ಟಿಯ ನಾಶದಿಂದ
ಸ್ಥಾಪಿತವಾಗುತ್ತದೆ.
ಯಾವಾಗ ಆತನಲ್ಲಿ ಸಮ್ಮಾದಿಟ್ಟಿಯು ಸ್ಥಾಪಿತವಾಗವುದೋ ಆಗ ಆತನ ಮನಸ್ಸು
ನಿಬ್ಬಾಣದೆಡೆಗೆ ಕೇಂದ್ರಿಕೃತವಾಗುತ್ತದೆ.
ಆಗ ಆತನು ಮಿಥ್ಯ ಸಂಕಲ್ಪ (ಯೋಚನೆ) ತೊರೆಯುತ್ತಾನೆ.
ಆಗ ಆತನು ಮಿಥ್ಯ ವಾಚಾದಿಂದ ವಿಮುಕ್ತನಾಗುತ್ತಾನೆ.
ಆಗ ಆತನು ಮಿಥ್ಯ ಕರ್ಮದಿಂದ ವಿಮುಕ್ತನಾಗುತ್ತಾನೆ.
ಆಗ ಆತನು ಮಿಥ್ಯ ಜೀವನೋಪಾಯ ವಿಮುಕ್ತನಾಗುತ್ತಾನೆ.
ಆಗ ಆತನು ಸೋಮಾರಿತನ ತ್ಯಜಿಸಿ ಮಿಥ್ಯ ಪ್ರಯತ್ನದಿಂದ ವಿಮುಕ್ತನಾಗುತ್ತಾನೆ.
ಆಗ ಆತನು ಅಲಕ್ಷ ಹಾಗು ಮಿಥ್ಯ ಎಚ್ಚರಿಕೆಯಿಂದ ವಿಮುಕ್ತನಾಗುತ್ತಾನೆ.
ಆಗ ಆತನು ಲೋಭ, ದ್ವೇಷ ಮತ್ತು ಮೋಹದ
ಮಿಥ್ಯಾ ಸಮಾಧಿಯಿಂದ ವಿಮುಕ್ತನಾಗುತ್ತಾನೆ.
ಈ ರೀತಿಯಾಗಿ ಆತನು ಸಮ್ಮಾದಿಟ್ಟಿಯಿಂದ ಉಳಿದ 7 ಅಂಗಗಳಾದ ಸಮ್ಮಾಸಂಕಲ್ಪ, ಸಮ್ಮಾವಾಚಾ, ಸಮ್ಮಾಕರ್ಮ, ಸಮ್ಮಾಅಜೀವ, ಸಮ್ಮಾ ವ್ಯಾಯಾಮ,
ಸಮ್ಮಾ ಸ್ಮೃತಿ, ಸಮ್ಮಾ
ಸಮಾಧಿಗಳನ್ನು ಅಭಿವೃದ್ಧಿಗೊಳಿಸುತ್ತಾನೆ.
ಯಾವಾಗ ಒಬ್ಬನಲ್ಲಿ ಸಮ್ಮಾದಿಟ್ಟಿ ವೃದ್ಧಿಯಾಗುವುದು, ಆಗ ಆತನಲ್ಲಿ ಪ್ರಜ್ಞಾ ಪ್ರಬಲವಾಗಿ ಅಕುಶಲಗಳ ಸಮೂಹವನ್ನೇ ಕತ್ತರಿಸಿ
ಹಾಕುವೆವು.
ಎಲ್ಲಿಯವರೆಗೆ ಮಾನವ ದುಃಖ, ಅದರ ಕಾರಣ, ಅದರ ನಿರೋಧ (ನಿಬ್ಬಾಣ)
ಮಧ್ಯಮ ಮಾರ್ಗ ಅರಿಯುವುದಿಲ್ಲವೋ ಅಲ್ಲಿಯವರೆಗೆ ಆತ ದುಃಖದಿಂದ ಮುಕ್ತನಾಗಲಾರ.
No comments:
Post a Comment