ಮೊಗ್ಗಲ್ಲಾನರವರ ದುರಂತ ಹಾಗೂ ಪರಿನಿಬ್ಬಾಣ
ವರ್ಧಮಾನ ಮಹಾವೀರರ ಮರಣದ ನಂತರ ಅವರ ಶಿಷ್ಯರಲ್ಲಿ ಅತಿ ಹಿಂಸಾತ್ಮಕ ಜಗಳವುಂಟಾಯಿತು. ಅವರ ಶಿಷ್ಯರಲ್ಲೇ ಗುರುವಿನ ಬೋಧನೆಯ ಬಗ್ಗೆ ವಾದವಿವಾದಗಳಾದವು. ಹೀಗಾಗಿ ಜನರು ಸಹಾ ಅವರ ಮೇಲೆ ಶ್ರದ್ಧೆ ಕಳೆದುಕೊಂಡರು.
ಇತ್ತ ಬುದ್ಧ ಧಮ್ಮ ಅತ್ಯಂತ ಉನ್ನತ ಶಿಖರವೇರಿತ್ತು. ಅದಕ್ಕೆ ಕಾರಣ ಬುದ್ಧ ಭಗವಾನರು ಮಾತ್ರವಲ್ಲದೆ ಸಾರಿಪುತ್ತರ ಪ್ರಜ್ಞಾಶೀಲತೆ ಹಾಗೂ ಮೊಗ್ಗಲಾನರ ಇದ್ಧಿ ಶಕ್ತಿ. ಮೊಗ್ಗಲ್ಲಾನರಿಗೆ ಮಹಾಮೊಗ್ಗಲ್ಲಾನ ಎಂದೇ ಕರೆಯುತ್ತಿದ್ದರು. ಏಕೆಂದರೆ ಅಂತಹ ಶ್ರೇಷ್ಠತೆ ಅವರಲ್ಲಿತ್ತು. ಅವರು ವಿವಿಧ ಮನಸ್ಶಕ್ತಿಗಳನ್ನು ಸಂಪಾದಿಸಿದ್ದರು. ಅವರು ಮಾಡದ ಪವಾಡವೇ ಇರಲಿಲ್ಲ. ಸಮಾಧಿ, ಇದ್ದಿಪಾದ ಮತ್ತು ಅಭಿಜ್ಞಗಳಲ್ಲಿ ಅವರು ಪರಿಪೂರ್ಣತೆ ಸಾಧಿಸಿ ಅತ್ಯಂತ ಪರಿಣಿತ ಮಾನಸಶಕ್ತಿ ಸಂಪನ್ನರಾಗಿದ್ದರು. ಹೀಗಾಗಿ ಅವರು ಪಾಪ ಮಾಡಿದವರ ಮುಂದಿನ ಗತಿ ತಿಳಿದುಕೊಂಡು ಜನರಿಗೆ ತಿಳಿಸಿ ಜನರು ಪಾಪ ಮಾಡದಂತೆ ತಡೆಯುತ್ತಿದ್ದರು. ಹಾಗೆಯೇ ದಾನ, ಶೀಲ ಆಚರಿಸಿದವರ ಸುಗತಿ ತಿಳಿದುಕೊಂಡು ಅವರ ಸುಗತಿಯ ಬಗ್ಗೆ ಜನರಿಗೆ ತಿಳಿಸಿ ಅವರನ್ನು ದಾನಿಗಳನ್ನಾಗಿ, ಶೀಲವಂತರನ್ನಾಗಿಸುತ್ತಿದ್ದರು. ಹಾಗೆಯೇ ಸಮಾಧಿವಂತರ ಬ್ರಹ್ಮಲೋಕ, ದಾನಿಗಳ, ಸ್ವರ್ಗಲೋಕ, ಪ್ರಜ್ಞಾರ ಲೋಕೋತ್ತರ ಫಲಗಳನ್ನು ತಿಳಿಸಿ ಅವರಲ್ಲಿ ಸ್ಫೂತರ್ಿ ತುಂಬಿಸುತ್ತಿದ್ದರು. ಇದರಿಂದಾಗಿ ಸರ್ವರು ಬುದ್ಧರ ಶರಣು ಪಡೆಯುತ್ತಿದ್ದರು, ಬೌದ್ಧ ಭಿಕ್ಷುಗಳಿಗೆ ಅತಿಯಾಗಿ ಸತ್ಕಾರ ಮಾಡುತ್ತಿದ್ದರು. ಹೀಗಾಗಿ ಅನ್ಯ ಮತಾವಲಂಬಿಗಳಿಗೆ ತೊಂದರೆಯಾಯಿತು.
ಆಗ ನಗ್ನ ಸನ್ಯಾಸಿಗಳಾದ ನಿಗಂಠರಿಗೂ ತೊಂದರೆಯಾಯಿತು. ಆಗ ನಿಗಂಠ ಸನ್ಯಾಸಿಗಳು ಸಭೆ ಸೇರಿ ಹೀಗೆ ಚಚರ್ಿಸಿಕೊಂಡರು. ಸೋದರರೇ, ನಮಗೆ ಸತ್ಕಾರ ಕ್ಷೀಣವಾಗಿದೆ, ಕೇವಲ ಬೌದ್ಧ ಭಿಕ್ಷುಗಳಿಗೆ ಆದರ ಸತ್ಕಾರ ಗೌರವಗಳು ಹೇರಳವಾಗಿ ಸಿಗುತ್ತಿವೆ. ಇದಕ್ಕೆಲ್ಲಾ ಕಾರಣ ಯಾರೆಂದರೆ ಮೊಗ್ಗಲ್ಲಾನರವರೇ. ಏಕೆಂದರೆ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದ ನರಕಗಳಲ್ಲಿ, ಸ್ವರ್ಗಗಳಲ್ಲಿ, ಬ್ರಹ್ಮಲೋಕಗಳಲ್ಲಿ ಸಂಚರಿಸುವವರಾಗಿದ್ದಾರೆ. ಹೀಗಾಗಿ ಇಲ್ಲಿ ಬಂದು, ಇಂತಹ ವ್ಯಕ್ತಿ ಅಲ್ಲಿ ಹೇಗೆ ಜನಿಸಿದ್ದಾನೆ. ಇಂತಹ ಸುಖವನ್ನು ಅನುಭವಿಸುತ್ತಿದ್ದಾನೆ ಎಂದು ತಿಳಿಸುವವರಾಗಿದ್ದಾರೆ. ಆದ್ದರಿಂದಾಗಿ ಬೌದ್ಧ ಭಿಕ್ಷುಗಳಿಗೆ ಅಧಿಕ ಸತ್ಕಾರಗಳು ಸಿಗುತ್ತಿವೆ. ನಮಗೆ ನೋಡುವವರೇ ಇಲ್ಲವಾಗಿದ್ದಾರೆ. ನಮ್ಮ ದಾರಿಗೆ ಮುಳ್ಳಾಗಿರುವ ಈ ಮೊಗ್ಗಲ್ಲಾನರನ್ನು ಯಾವುದೇ ರೀತಿಯಲ್ಲಾಗಲೀ ಕೊಲ್ಲೋಣ ಅಥವಾ ಕೊಲ್ಲಿಸೋಣ. ಆಗ ಮಾತ್ರ ನಾವು ಸುಖವಾಗಿರಬಲ್ಲೆವು, ಏನೆನ್ನುವಿರಿ? ಎಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.
ನಂತರ ಅವರು ಅಲೆದಾಡುವ ಶ್ರಮಣಗುಪ್ತನೆಂಬ ಕಳ್ಳರಿಗೆ ಸಾವಿರ ಚಿನ್ನದ ನಾಣ್ಯಗಳನ್ನು ನೀಡಿ, ಮೊಗ್ಗಲ್ಲಾನರಿಗೆ ಮುಗಿಸಲು ಯೋಜನೆ ಮಾಡಿದರು. ಹೋಗಿ, ಮೊಗ್ಗಲ್ಲಾನರು ಕರಿಬಂಡೆಯ ಬಳಿ ವಾಸವಾಗಿದ್ದಾರೆ, ಅಲ್ಲಿಗೆ ಹೋಗಿ ಮುಗಿಸಿಬಿಡಿ ಎಂದು ಆಜ್ಞಾಪಿಸಿ ಕಳುಹಿಸಿದರು.
ಆಗ ಮೊಗ್ಗಲ್ಲಾನರು ಕರಿಬಂಡೆ(ಕಾಲಾ ಶಿಲ)ಯ ಬಳಿಯಲ್ಲಿನ ವಾಸಸ್ಥಳದಲ್ಲಿ ಧ್ಯಾನಿಸುತ್ತಿದ್ದರು. ಕಳ್ಳರೆಲ್ಲರೂ ಸುತ್ತುವರೆದರು. ಆದರೆ ಮೊಗ್ಗಲ್ಲಾನರು ಬೀಗದ ಕೈ ಹಾಕುವ ಕಿಂಡಿಯಿಂದ ಸೂಕ್ಷ್ಮರೂಪ ಪಡೆದು ಅಲ್ಲಿಂದ ತಪ್ಪಿಸಿಕೊಂಡರು. ಮತ್ತೊಂದು ದಿನ ವಾಸಸ್ಥಳವನ್ನು ಸುತ್ತುವರೆದಾಗ, ಮೊಗ್ಗಲ್ಲಾನರು ಛಾವಣಿಯ ರಂಧ್ರದಿಂದ ಸೂಕ್ಷ್ಮ ರೂಪ ಪಡೆದು ಅಗೋಚರವಾಗಿ ಹಾರಿ ತಪ್ಪಿಸಿಕೊಂಡರು. ಇದೇರೀತಿಯಾಗಿ ಆರು ದಿನಗಳು ಅವರ ಕೈಗೆ ಸಿಗದೆ ಮೊಗ್ಗಲ್ಲಾನರು ಯಶಸ್ವಿಯಾದರು. ಅರಹಂತರಾದ ಅವರಿಗೆ ದೇಹವನ್ನು ರಕ್ಷಿಸಿಕೊಳ್ಳಬೇಕೆಂಬ ಆಸೆ ಏನೂ ಇರಲಿಲ್ಲ. ಅದರೆ ಅವರನ್ನು ಕೊಂದವರಿಗೆ ಭೀಕರ ದುರ್ಗತಿ ಸಿಗುವುದೆಂಬ ಕಾರಣಕ್ಕಾಗಿ , ಕೊಲೆಗಾರರ ಮೇಲಿನ ಕರುಣೆಯು ಅವರನ್ನು ಹೀಗೆ ತಪ್ಪಿಸಿಕೊಳ್ಳಲು ಮುಖ್ಯ ಕಾರಣವಾಗಿತ್ತು.
ಆದರೆ ಯಾವಾಗ 7ನೆಯ ದಿನ ಬಂದಿತೋ, ಆಗ ಪೂಜ್ಯ ಮೊಗ್ಗಲ್ಲಾನರಿಗೆ ತಾವು ಕಲ್ಪಗಳ ಹಿಂದೆ ಮಾಡಿದ ಪಾಪದ ಕರ್ಮವು ನೆನಪಿಗೆ ಬಂದಿತು. ಅದು ಹೀಗಿತ್ತು.
******* ********* ********* ***********
ಅತೀತ ಕಾಲದಲ್ಲಿ ಬಹು ಜನ್ಮಗಳ ಹಿಂದೆ, ಈ ಮೊಗ್ಗಲ್ಲಾನರು ಉತ್ತಮ ಕುಟುಂಬದಲ್ಲಿ ಜನಿಸಿದ್ದರು. ತಂದೆ ತಾಯಿಗಳ ಸೇವೆ ಮಾಡಿಕೊಂಡು ಚೆನ್ನಾಗಿಯೇ ಇದ್ದರು. ಆಗ ತಂದೆ ತಾಯಿಗಳು ಆತನಿಗೆ ವಿವಾಹಕ್ಕೆ ಬಲವಂತ ಮಾಡಿದಾಗ ಮೊದಮೊದಲು ವಿವಾಹಕ್ಕೆ ಆ ಯುವಕನು ನಿರಾಕರಿಸಿದನು: ಅದರ ಅವಶ್ಯಕತೆ ಏಕೆ, ನಾನೇ ನಿಮಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ, ಮುಂದೆ ಹಾಗೆಯೇ ಚೆನ್ನಾಗಿ ನೋಡಿಕೊಳ್ಳುವೆನು ಎನ್ನುತ್ತಿದ್ದರು. ಆದರೂ ತಾಯ್ತಂದೆಯರು ಆತನಿಗೆ ಚೆಂದದ ಸ್ತ್ರೀಯೊಂದಿಗೆ ವಿವಾಹ ಮಾಡಿಸಿದ್ದರು.
ಮೊದಮೊದಲು ಆ ಸೊಸೆಯು ಅತ್ತೆ-ಮಾವಂದಿರನ್ನು ಚೆನ್ನಾಗಿಯೇ ನೋಡಿಕೊಂಡಳು. ನಂತರ ಆಕೆಗೆ ಅವರನ್ನು ಕಂಡರೆ ಅಸಹ್ಯವಾಗತೊಡಗಿತು. ನಾನು ನಿಮ್ಮ ಅಂಧರಾಗಿರುವ ಮುದಿ ತಂದೆ-ತಾಯಿಗಳೊಂದಿಗೆ ಇರಲು ಸಾಧ್ಯವಿಲ್ಲ, ಹೀಗೆಯೇ ಒಂದೇ ಮನೆಯಲ್ಲಿ ಇರಲು ಸಾಧ್ಯವೇ ಇಲ್ಲ ಎಂದಳು. ಆದರೆ ಆ ಯುವಕನು ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳಲಿಲ್ಲ. ಇದರಿಂದ ಆಕೆಯು ಉಪಾಯವೊಂದನ್ನು ಮಾಡಿದಳು. ಅಕ್ಕಿಯ ಗಂಜಿಯನ್ನು ಅಲ್ಲಲ್ಲಿ ಸಿಂಪಡಿಸಿ, ಗಂಡನು ಮನೆಗೆ ಬಂದಾಗ ನೋಡಿ, ನಿಮ್ಮ ತಂದೆ-ತಾಯಿ ಮಾಡಿರುವುದನ್ನು, ಅವರು ಮನೆಯೆಲ್ಲಾ ಹೀಗೆ ಗಲೀಜು ಮಾಡುತ್ತಾರೆ, ದಿನಾ ನಾನೇ ಇದನ್ನೆಲ್ಲಾ ಶುಚಿಗೊಳಿಸಬೇಕು. ಅಬ್ಬಾ, ಇವರೊಂದಿಗೆ ನಾನು ಇನ್ನೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಎಂದಳು. ಹೀಗೆ ಆಕೆ ಪದೇ ಪದೇ ಅಸಹ್ಯ ತೋಡಿಕೊಂಡಾಗ, ಆತನಂತಹ ಶುದ್ಧ ಜೀವಿಯಲ್ಲೂ ಕಲುಶತೆ ಮೂಡಿತು. ಸರಿ ಅವರಿಗೆ ಏನಾದರೂ ವ್ಯವಸ್ಥೆ ಮಾಡುವೆನು ಎಂದನು.
ಮಾರನೆಯದಿನ ಆ ಯುವಕನು ತನ್ನ ತಂದೆ ತಾಯಿಗಳೊಂದಿಗೆ ಅಪ್ಪ-ಅಮ್ಮ, ಇಂತಹ ಊರಿನಲ್ಲಿ ನಿಮ್ಮ ಸಂಬಂಧಿಕರು ನಿಮಗೆ ನೋಡಲು ಹಾತೊರೆಯುತ್ತಿದ್ದಾರೆ, ನಿಮ್ಮನ್ನು ಕರೆತರಲು ಕೇಳಿಕೊಂಡಿದ್ದಾನೆ ಎಂದು ಹೇಳಿ ಬಂಡಿ ಸಿದ್ಧಪಡಿಸಿ ದಟ್ಟ ಅರಣ್ಯದೊಳಗೆ ಕರೆದೊಯ್ದನು. ನಂತರ ಒಂದೆಡೆ ನಿಲ್ಲಿಸಿ, ತನ್ನ ತಂದೆಗೆ ಬಂಡಿಯ ಎತ್ತುಗಳ ಹಗ್ಗವನ್ನು ನೀಡಿ, ಇಲ್ಲಿ ಕಳ್ಳರ ಕಾಟವೆಂದು ಹೇಳಿ ಅವರೇ ಮುಂದುವರೆಯುವಂತೆ ಹೇಳಿದನು. ನಂತರ ಕಳ್ಳರು ಆಕ್ರಮಣ ಮಾಡಿರುವ ಹಾಗೆ ಶಬ್ದಗಳನ್ನು ಮಾಡಿದನು. ಆ ಶಬ್ದಗಳನ್ನು ಕೇಳಿದ ತಾಯಿ-ತಂದೆಯರು ಮಗು, ನೀನು ಊರಿಗೆ ಸೇರಿಬಿಡು, ನೀನಿನ್ನೂ ಯುವಕ, ನಮಗೆ ವಯಸ್ಸಾಗಿದೆ, ನೀನು ಜೀವ ಉಳಿಸಿಕೋ ಹೋಗು ಎಂದರು. ಆದರೆ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದ ಆತನಿಗೆ ಅದರಿಂದ ಯಾವ ಪರಿಣಾಮವೂ ಆಗಲಿಲ್ಲ. ಆತನು ಕಳ್ಳರಂತೆ ಶಬ್ದಗಳನ್ನು ಮಾಡುತ್ತ ಅವರನ್ನು ಹಿಂಸಿಸಿ, ಕೊಂದು ಅರಣ್ಯದಲ್ಲಿ ಎಸೆದು ಊರಿಗೆ ಹಿಂತಿರುಗಿದನು.
********* ********** ********* **********
ಇದರ ಪರಿಣಾಮವಾಗಿ ಆತನು ನರಕದಲ್ಲಿ ಸಾವಿರಾರು ವರ್ಷ ನೋವು ಅನುಭವಿಸಿದನು. ನಂತರ ನೂರಾರು ಜನ್ಮಗಳಲ್ಲಿ ಹೀಗೆಯೇ ಹಿಂಸೆಗೆ ಒಳಗಾಗಿ ಮರಣವನ್ನಪ್ಪಿದನು. ಆದ್ದರಿಂದಲೇ ಈ ಅಂತಿಮ ಜನ್ಮದಲ್ಲೂ ಹೀಗೆ ಭೀಕರವಾಗಿ ಚಿತ್ರಹಿಂಸೆಯುತ ನೋವನ್ನು ಅನುಭವಿಸಿದನು.
ಆ ಕರ್ಮಫಲದ ಪ್ರಬಲ ಶಕ್ತಿಯಿಂದಾಗಿ ಅವರ ಪವಾಡ ಶಕ್ತಿಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ನಂದೋಪನಂದರನ್ನು ದಮನ ಮಾಡಿದಂತಹ, ಅನೇಕ ನಾಗರನ್ನು ದಮನ ಮಾಡಿದ , ಇಂದ್ರನ ವೈಜಯಂತವನ್ನು ಅಲುಗಾಡಿಸಿದಂತಹ, ಇದ್ದಿ ಹಾಗೂ ಅಭಿಜ್ಞಾಗಳಲ್ಲಿ ಬುದ್ಧರ ನಂತರ ಇಡೀ ಲೋಕಗಳಿಗೆ ದ್ವಿತೀಯರಾದಂತಹ ಮೊಗ್ಗಲಾನರು ಕಮ್ಮಫಲದ ಮುಂದೆ ಏನೂ ಇಲ್ಲದೆ ಹೋದರು. ಏಳಲು ಅಸಮರ್ಥರಾದರು, ತಪ್ಪಿಸಿಕೊಳ್ಳಲು ಅಸಮರ್ಥರಾದರು. ಅದೇ ಸಮಯಕ್ಕೆ ಕಳ್ಳರು ಅವರನ್ನು ಹಿಡಿದುಕೊಂಡರು. ಅಂಗಗಳನ್ನೆಲ್ಲಾ ಕತ್ತರಿಸಿ ಹಾಕಿದರು, ಮೂಳೆಗಳನ್ನೆಲ್ಲ ಪುಡಿ ಪುಡಿ ಮಾಡಿದರು. ಇವರು ಸತ್ತಿದ್ದಾರೆ ಎಂದು ಭಾವಿಸಿ ಅವರು ಮೊಗ್ಗಲ್ಲಾನರ ಅವಶೇಷಗಳನ್ನು ಪೊದೆಯಲ್ಲಿ ಬಿಸಾಡಿ ಹೊರಟರು.
ಅವರು ಹೊರಟ ನಂತರ ಮೊಗ್ಗಲ್ಲಾನರಿಗೆ ತಮ್ಮ ಅತೀಂದ್ರಿಯ ಶಕ್ತಿಯ ಚಾಲನಶಕ್ತಿ ಪುನಃ ಪೂರ್ಣವಾಗಿ ವಶಕ್ಕೆ ಬಂದಿತು. ಆಗ ಅವರು ಹೀಗೆ ಯೋಚಿಸಿದರು. ನನ್ನ ನಿಬ್ಬಾಣದ ಸಮಯ ಸನ್ನಿಹಿತವಾಯಿತು. ಪರಿನಿಬ್ಬಾಣಕ್ಕೆ ಮುನ್ನ ಭಗವಾನರಿಗೆ ಗೌರವಿಸುವುದು ಒಳ್ಳೆಯದು ಎಂದು ತಕ್ಷಣ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದಾಗಿ ಇಡೀ ದೇಹವನ್ನು ಪುನಃ ಒಂದಾಗಿಸಿ ಸರಿಪಡಿಸಿಕೊಂಡು ಗಾಳಿಯಲ್ಲಿ ಹಾರಿಕೊಂಡು ಭಗವಾನರ ಬಳಿಗೆ ಬಂದರು. ಅವರನ್ನು ಪೂಜಿಸಿ ಹೀಗೆ ಹೇಳಿದರು: ಭಗವಾನ್, ನನ್ನ ಆಯು ಸಂಖಾರ ಕ್ಷೀಣವಾಗಿದೆ. .ನಾನು ಪರಿನಿಬ್ಬಾಣ ಪಡೆಯಲು ನಿರ್ಧರಿಸಿದ್ದೇನೆ.
ಹೌದೆ? ಯಾವ ಸ್ಥಳವನ್ನು ಆಯ್ಕೆಮಾಡಿರುವೆ ?
ಕರಿಬಂಡೆಯ ಬಳಿ.
ಸರಿ ಮೊಗ್ಗಲ್ಲಾನ, ಅದಕ್ಕೆ ಮುನ್ನ ಧಮ್ಮ ಬೋಧನೆಯನ್ನು ಭಿಕ್ಷುಗಳಿಗೆ ಮಾಡುವವನಾಗು, ನಿನ್ನಂತಹ ಶ್ರೇಷ್ಠ ಶಿಷ್ಯ ಮುಂದೆ ಗೋಚರಿಸಲಾರ.
ಹಾಗೇ ಆಗಲಿ ಭಂತೆ ಎಂದು ನುಡಿದು ಗೌರವಿಸಿ, ಪ್ರದಕ್ಷಿಣೆ ಮಾಡಿದರು. ನಂತರ ಗಾಳಿಯಲ್ಲಿ ತೇಲಿಕೊಂಡು, ಎಲ್ಲಾ ಬಗೆಯ ಇದ್ಧಿಶಕ್ತಿಯ, ಅತೀಂದ್ರಿಯ ಪವಾಡಗಳನ್ನು ಪ್ರದಶರ್ಿಸಿದರು. ಅದು ಅತ್ಯದ್ಭುತ ದೃಶ್ಯವಾಗಿತ್ತು. ಏಕೆಂದರೆ ಬುದ್ಧರ ನಂತರ ಅಂತಹ ಶ್ರೇಷ್ಠತೆಯ ಮಾನಸಶಕ್ತಿಯಿಂದ ಮಾಡುವ ಅಚ್ಚರಿಗಳನ್ನು ಅವರು ಮಾತ್ರ ಮಾಡುವಂತಹದಾಗಿತ್ತು. ನಂತರ ಧಮ್ಮ ಬೋಧಿಸಿ ಕರಿಬಂಡೆಯ ಬಳಿ ಪರಿನಿಬ್ಬಾಣ ಪ್ರಾಪ್ತಿ ಮಾಡಿದರು.
ಕೂಡಲೇ ಎಲ್ಲಾ ಲೋಕಗಳಲ್ಲಿ ಏಕಕಾಲದಲ್ಲಿ ನಮ್ಮ ಆಚಾರ್ಯರ ಪರಿನಿಬ್ಬಾಣವಾಯಿತು ಎಂದು ಆಕ್ರಂದನ ಉಂಟಾಯಿತು. ಬ್ರಹ್ಮರು ,ದೇವದೇವತೆಗಳು, ಮಾನವರು ದಿವ್ಯ ಸುಗಂಧಗಳಿಂದ, ವಿವಿಧ ಪುಷ್ಪಗಳ ಮಾಲೆಗಳಿಂದ, ಸುಗಂಧಿತ ಧೂಪಗಳಿಂದ, ಇತ್ಯಾದಿಗಳಿಂದ ಅವರ ಚಿತಾ ಸ್ಥಳವೂ ಸಿದ್ಧವಾಯಿತು. 99ರತ್ನಗಳಷ್ಟು ಎತ್ತರದ ಚಿತೆಯು ಸಿದ್ಧವಾಯಿತು. ಸ್ವತಃ ಭಗವಾನರೇ ಅವರ ಶರೀರವನ್ನು ಚಿತೆಯ ಮೇಲೆ ಇಟ್ಟರು. ಚಿತೆಯ ಸುತ್ತಲೂ ಒಂದು ಯೋಜನದಷ್ಟು ವಿಸ್ತಾರದಲ್ಲಿ ಅಂತರಿಕ್ಷದಿಂದ ಪುಷ್ಪವೃಷ್ಟಿಯಾಯಿತು. ದೇವತೆಗಳ ಮಧ್ಯೆ ಮಾನವರು, ಮಾನವರ ಮಧ್ಯೆ ದೇವತೆಗಳು ನಿಂತಿದ್ದರು. ಏಳು ದಿನಗಳವರೆಗೆ ಎಲ್ಲರೂ ಬಂದು ಪೂಜಿಸಿ ಸಾಧು ಕ್ರಿಯೆಗಳನ್ನು ಮಾಡುತ್ತಿದ್ದರು. ನಂತರ ವೇಲೂವನದ ದ್ವಾರದಲ್ಲಿ ಭಗವಾನರ ಸಮ್ಮುಖದಲ್ಲಿ ಅವರ ಚೈತ್ಯ ನಿಮರ್ಾಣವಾಯಿತು.
ಅವರ ಮೇಲೆ ಮಾರಣಾಂತಿಕ ಹಲ್ಲೆ ಆದ ಸುದ್ದಿ ತಕ್ಷಣ ಬೆಂಕಿಯಂತೆ ಹಬ್ಬಿತು. ರಾಜ ಅಜಾತಶತ್ರುವು ಎಲ್ಲೆಡೆ ಗೂಢಾಚಾರರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಹಚ್ಚಲು ತಕ್ಷಣ ನೇಮಿಸಿದನು. ಆಗ ಕೊಲೆಗಾರರು ಕುಡಿದ ಅಮಲಿನಲ್ಲಿ ಈ ವಿಷಯವನ್ನು ತಾವೆ ಮಾಡಿದ್ದು ಎಂದು ಬೀಗುವಾಗ, ಪತ್ತೆದಾರರು ತಕ್ಷಣ ಅವರನ್ನು ಬಂಧಿಸಿ ರಾಜನ ಮುಂದೆ ನಿಲ್ಲಿಸಿದರು. ರಾಜನು ಪ್ರಶ್ನಿಸಿದಾಗ, ತಾವೇ ಮಾಡಿರುವುದಾಗಿ ತಿಳಿಸಿದರು. ನಿಮಗೆ ಹೀಗೆ ಮಾಡಲು ಪ್ರೇರೇಪಣೆ ನೀಡಿದ್ದು ಯಾರು? ಎಂದು ರಾಜನು ಪ್ರಶ್ನಿಸಿದಾಗ, ನಿಗಂಠ ನಗ್ನ ಸನ್ಯಾಸಿಗಳು ಎಂದು ಉತ್ತರಿಸಿದರು. ಆಗ ರಾಜನಿಗೆ ಕೋಪವುಂಟಾಗಿ ಆ ಕಳ್ಳರಿಗೂ ಮತ್ತು ಕಾರಣಕರ್ತರಾದ 500 ನಗ್ನ ನಿಗಂಠರಿಗೂ ಬಂಧಿಸಿ ಅವರನ್ನೆಲ್ಲಾ ಸೊಂಟದವರೆಗೂ ಹೂತ ನಂತರ ಮೇಲ್ಭಾಗಕ್ಕೆ ಹುಲ್ಲುಗಳನ್ನು ಜೋಡಿಸಿ, ಅಗ್ನಿಗೆ ಆಹುತಿ ಮಾಡಿಸಿದನು. ನಂತರ ಉಳಿದ ಶವದ ಅವಶೇಷಗಳನ್ನು ಭೂಮಿಯಲ್ಲಿ ನೇಗಿಲಿನಿಂದ ಹೂಳಿಸಿದನು.
ಆ ಸಮಯದಲ್ಲಿ ಭಿಕ್ಷುಗಳು ಮೊಗ್ಗಲ್ಲಾನರವರ ಬಗ್ಗೆಯೇ ಚಚರ್ಿಸತೊಡಗಿದ್ದರು. ಆಗ ಅಲ್ಲಿಗೆ ಬಂದ ಭಗವಾನರು ಹೀಗೆ ಅವರನ್ನು ಕೇಳಿದರು: ಭಿಕ್ಷುಗಳೇ, ನೀವು ಮೊಗ್ಗಲ್ಲಾನರವರ ವರ್ತಮಾನದ ಬದುಕಿನ ಬಗ್ಗೆಯೇ ಪರಿಗಣನೆ ತೆಗೆದುಕೊಳ್ಳುವುದಾದರೆ, ಖಂಡಿತವಾಗಿ ಅವರು ಹಿಂಸೆಗೆ ಅರ್ಹರಾಗುತ್ತಿರಲಿಲ್ಲ. ಆದರೆ ವಾಸ್ತವವಾಗಿ ಹೇಳುವುದಾದರೆ ಅವರ ಇಂದಿನ ಅನಾಹುತಕ್ಕೆ ಅವರ ಹಿಂದಿನ ಜನ್ಮವೊಂದರ ಕೃತ್ಯವೇ ಕಾರಣವಾಗಿತ್ತು.
ಆಗ ಭಿಕ್ಷುಗಳು ಭಗವಾನ್ ದಯವಿಟ್ಟು ಈ ವಿವರವನ್ನೆಲ್ಲಾ ಭಗವಾನರು ಹೇಳುವಂತಾಗಲಿ.
ಆಗ ಭಗವಾನರು ಆ ಹಿಂದಿನ ಜನ್ಮದ ಘಟನೆಯನ್ನು ತಿಳಿಸಿದರು. ಹಾಗೂ ಹೀಗೆ ನುಡಿದರು. ಇದರ ಪರಿಣಾಮವಾಗಿ ಆತನು ನರಕದಲ್ಲಿ ಸಾವಿರಾರು ವರ್ಷ ನೋವು ಅನುಭವಿಸಿದನು. ನಂತರ ನೂರಾರು ಜನ್ಮಗಳಲ್ಲಿ ಹೀಗೆಯೇ ಹಿಂಸೆಗೆ ಒಳಗಾಗಿ ಮರಣವನ್ನಪ್ಪಿದನು. ಆದ್ದರಿಂದಲೇ ಈ ಅಂತಿಮ ಜನ್ಮದಲ್ಲೂ ಹೀಗೆ ಭೀಕರವಾಗಿ ಚಿತ್ರಹಿಂಸೆಯುತ ನೋವನ್ನು ಅನುಭವಿಸಿದನು. ಆದರೆ ಪರಿನಿಬ್ಬಾಣ ಸಾಧಿಸಿದ್ದರಿಂದಾಗಿ ದುಃಖಪೂರಿತ ಸಂಸಾರದಿಂದ ಪೂರ್ಣವಿಮುಕ್ತಿ ಸಾಧಿಸಿದ್ದಾನೆ. ಆದ್ದರಿಂದಾಗಿ ಮಾತೃಹತ್ಯೆ ಮತ್ತು ಪಿತೃಹತ್ಯೆ ಯಾರೂ ಮಾಡಬಾರದು. ಅದು ಅತ್ಯಂತ ಭೀಕರ ಕರ್ಮಫಲ ನೀಡುತ್ತದೆ. ಹಾಗೆಯೇ ನಿರಪರಾಧಿಗಳ ಮೇಲೆ ಹಿಂಸೆ ಮಾಡುವವರು ಮುಂದೆ ವಿಕೋಪ ಸ್ಥಿತಿಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿ ಈ ಗಾಥೆಗಳನ್ನು ನುಡಿದರು.
"ಯಾರು ಮುಗ್ಧರಾದ, ದಂಡಿಸಬಾರದವರನ್ನು ದಂಡಶಸ್ತ್ರಗಳಿಂದ ಹಿಂಸಿಸುವನೋ, ತಪ್ಪು ಮಾಡದವರನ್ನು ನೋಯಿಸುವನೋ, ಅಂತಹವನು ಶೀಘ್ರದಲ್ಲೇ ಈ ಹತ್ತು ಸ್ಥಿತಿಗಳಲ್ಲಿ ಒಂದನ್ನು ಪಡೆಯುತ್ತಾನೆ. (137)
ಆತನು ತೀಕ್ಷ್ಣವಾದ ನೋವು, ಮಹಾದುರಂತ, ಶಾರೀರಿಕ ತೀವ್ರಗಾಯ ಅಥವಾ ಕಡುಕಾಯಿಲೆ ಅಥವಾ ಚಿತ್ತ ನಿಯಂತ್ರಣ ತಪ್ಪಿ ಹುಚ್ಚನಾಗುವಿಕೆ, ಅಥವಾ ಸಕರ್ಾರದಿಂದ ರಾಜನಿಂದ ದಂಡನೆ ಅಥವಾ ಘೋರ ಆಪಾದನೆ ಅಥವಾ ಬಂಧು ಬಳಗದವರ ಸಾವು, ಐಶ್ವರ್ಯವೆಲ್ಲಾ ನಾಶವಾಗುವಿಕೆ ಅಥವಾ ಮಹಾ ಅಗ್ನಿಯ ಆಹುತತೆ ಹಾಗು ಸಾವಿನ ನಂತರ ಅಂತಹ ದುಪ್ರಜ್ಞನು ನಿರಯದಲ್ಲಿ ಹುಟ್ಟುತ್ತಾನೆ." (138, 139, 140)