Tuesday, 7 April 2020

ಏಪ್ರಿಲ್ ತಿಂಗಳ ಹುಣ್ಣಿಮೆಯ ಪ್ರಾಶಸ್ತ್ಯತೆ

ಏಪ್ರಿಲ್ ತಿಂಗಳ ಹುಣ್ಣಿಮೆಯ ಪ್ರಾಶಸ್ತ್ಯತೆ



ಈ ದಿನದಂದೆ ಭಗವಾನರು ಅಂದರೆ ಸಮ್ಮಸಂಬೋಧಿಯ ಹಿಂದಿನ ತಿಂಗಳಾದ ಚೈತ್ರ ಹುಣ್ಣಿಮೆಯಂದು ಅವರು ದೇಹದಂಡನೆಯ ಮಾರ್ಗವನ್ನು ತೊರೆಯಲು ನಿರ್ಧರಿಸಿದರು. ಸವರ್ೋನ್ನತ ಜ್ಞಾನವನ್ನು ಪಡೆಯಲು ದೇಹದಂಡನೆ ಮಾರ್ಗವಲ್ಲ ಎಂದು ಸ್ಪಷ್ಟವಾಗಿ ಅರಿತರು. ದೇಹದಂಡನೆಯ ಮಾರ್ಗದಲ್ಲಿ ಅವರು ಸಾವಿನ ಅತ್ಯಂತ ಸಮೀಪಕ್ಕೆ ಹೋಗಿದ್ದರು. ಇನ್ನು ಹಾಗೆ ಮುಂದುವರೆದರೆ ಸವರ್ೊನ್ನತ ಜ್ಞಾನದ ಬದಲು ಸಾವು ಸಿಗುವುದು ಎಂದು ಸ್ಪಷ್ಟವಾಗಿ ಅರಿತರು. ಹೀಗಾಗಿ ಅವರು ಈ ದಿನದಂದು ದೇಹದಂಡನೆಯ ಮಾರ್ಗವನ್ನು ತೊರೆದರು.

ಹಾಗೇಯೆ ಈ ದಿನವು ಭಗವಾನರ ಮಹಾಪರಿನಿಬ್ಬಾಣದ ಹಿಂದಿನ ತಿಂಗಳ ದಿನವಾಗಿದೆ. ಅದರೆ ಆದಿನದ ವಿಶೇಷವು ತಿಳಿಯದಿದ್ದಕ್ಕಾಗಿ ವಿಶಾದಿಸುತ್ತಿದ್ದೇನೆ. ಹುಡುಕಿದೆ ಸಿಗಲಿಲ್ಲ.

ನಂತರ ಈ ದಿನವು ಶ್ರೀಲಂಕ ಬೌದ್ಧರಿಗೆ ಅತ್ಯಂತ ಪ್ರಾಶಸ್ತ್ಯದಿನವಾಗಿದೆ. ಏಕೆಂದರೆ ಬುದ್ಧಭಗವಾನರು ಈ ದಿನದಂದು ಎರಡನೇಯ ಬಾರಿ ಶ್ರೀಲಂಕಕ್ಕೆ ಭೇಟಿ ನೀಡಿದ್ದರು. ಅದರ ವಿವರ ಹೀಗಿದೆ.

ಆಗ ಭಗವಾನರು ಬೋಧಿ ಪ್ರಾಪ್ತಿಮಾಡಿ 15 ವರ್ಷಗಳು ಕಳೆದಿದ್ದರು. ಈ ದಿನ ಮುಂಜಾನೆ ಅವರಿಗೆ ಮಹಾಕರುಣಾ ಸಮಾಪತ್ತಿಯಲ್ಲಿ ನಾಗ ವಂಶಿಯ ರಾಜರುಗಳಾದ ಚುಲೋದರ ಹಾಗೂ ಮಹೋದರ ಹಾಗೂ ಅವರ ಪಂಗಡಗಳ ನಡುವೆ ಮಹಾಯುದ್ಧವು ನಡೆಯುವ ಸ್ಪಷ್ಟ ಸಂಭವನೀಯವಿತ್ತು. ಆಗ ಭಗವಾನರು ಅವರೀರ್ವರಿಗೂ ಧಮ್ಮ ಬೋಧನೆ ಮಾಡಿ ಅವರಲ್ಲಿ ಮೈತ್ರಿ ಹಾಗೂ ಶಾಂತಿಯನ್ನು ಸ್ಥಾಪನೆಯನ್ನುಂಟು ಮಾಡಿದರು. ಅದರ ವಿವರ ಮಹಾವಂಶದಲ್ಲಿ ಹೀಗಿದೆ.
ಮಹೋದರನು ನಾಗದ್ವೀಪವನ್ನು ಆಳ್ವಿಕೆ ಮಾಡುತ್ತಿದ್ದನು. ಆತನು ತನ್ನ ತಂಗಿಯನ್ನು ಕಣ್ಣವದ್ಧಮನೆ ಪರ್ವತದ ಆಡಳಿತಗಾರನಿಗೆ ಕೊಟ್ಟು ವಿವಾಹ ಮಾಡಿದ್ದನು. ಅವರಿಗೆ ಹುಟ್ಟಿದ ಮಗನೇ ಚುಲೋದರ. ಅದರೆ ಮಹೋದರನ ತಂದೆಯು ಮಗಳಿಗೆ ರತ್ನಖಚಿತವಾದ ಸಿಂಹಾಸನವನ್ನು ನೀಡಿಬಿಟ್ಟನು. ಆ ಅಮೂಲ್ಯವಾದ ರತ್ನಕ್ಕಾಗಿ ತಂಗಿಯ ಮಗನ ಜೋತೆ ಜಗಳವಾಗಿ ಅದು ಯುದ್ಧಕ್ಕೆ ತಿರುಗಿತು.

ಯುದ್ಧಕ್ಕೆ ಎರಡು ಪಂಗಡದವರು ಸಿದ್ಧರಾಗಿ ಇನ್ನೇನೂ ಯುದ್ಧ ಆರಂಭವಾಗಬೇಕುನ್ನುವಷ್ಟರಲ್ಲಿ ಅಲ್ಲಿಗೆ ಅತೀಂದ್ರೀಯ ಶಕ್ತಿಯ ಮೂಲಕ ಬಂದಂತಹ ಭಗವಾನರು ತಮ್ಮ ಜೋತೆಯಲ್ಲಿ ಸಮಿದ್ಧಿಸುಮನ ಎಂಬ ದೇವ ಸಹಾ ಜೋತೆಗಿದ್ದರು. ಭಗವಾನರು ತಮ್ಮ ಇದ್ದಿಶಕ್ತಿಯಿಂದ ಭಯನಕ ಕತ್ತಲೆಯನ್ನು ಸೃಷ್ಟಿಸಿದರು. ಆಗ ಎಲ್ಲರೂ ಹಗಲಲ್ಲಿ ಹೀಗಾಗಿದ್ದಕ್ಕಾಗಿ ಭಯಬೀತರಾದರು. ಆಗ ಭಗವಾನರು ಪರಮ ತೇಜಸ್ಸಿನಿಂದ ಪ್ರತ್ಯಕ್ಷ್ಯರಾದರು. ಆಗ ಅವರೆಲ್ಲ ಭಗವಾನರಿಗೆ ಭಕ್ತಿಪೂರ್ವಕವಾಗಿ ವಂದಿಸಿದರು. ಆಗ ಭಗವಾನರು ಅವರಿಗೆ ಹೀಗೆ ಬೋದನೆ ಮಾಡಿದರು :

"ಜಯವು ವೈರ್ಯವನ್ನು ಹುಟ್ಟುಹಾಕುವುದು
ಪರಾಜಿತನು ದುಃಖದಿಂದ ಮಲಗುವನು
ಉಪಶಾಂತನು ಸುಖವಾಗಿ ವಿಶ್ರಮಿಸುವನು
ಜಯಾಪರಾಜಯಗಳನ್ನು ತೊರೆದು"

"ತೃಷ್ಣೆಯು ನಾಶದೆಡೆಗೆ ಕರೆದೊಯ್ಯವುದು
ಐಶ್ವರ್ಯವು ಮೂರ್ಖನಿಗೆ ನಾಶಗೊಳಿಸುತ್ತದೆ
ಹೊರತು ಉನ್ನತ ಗುರಿಯ ಅರಸುವವನಿಗಲ್ಲ
ಐಶ್ವರ್ಯದ ತೃಷ್ಣೆಯು ತನಗಾಗಿ ಮಾತ್ರವಲ್ಲ 
ಪರರಿಗೂ ದುಃಖಕ್ಕೆ ಕರೆದೊಯ್ಯುವುದು."

'ಕೆಲವರು ಅಜ್ಞಾನದಿಂದಾಗಿಯೇ ಜಗಳವಾಡುವರು
ಅವರು ಹೀಗೆ ತಮ್ಮ ನಾಶದ ಹೊರತಾಗಿ ಏನನ್ನು ಗಳಿಸಲಾರರು"

"ವೈರ್ಯದಿಂದ ವೈರ್ಯವು ನಾಶವಾಗುವುದಿಲ್ಲ
ಅವೈರ್ಯದಿಂದಲೇ ನಾಶವಾಗುವುದು.
ಇದೇ ಸನಾತನ ಧಮ್ಮವಾಗಿದೆ."

ಎಂದು ನುಡಿದು ಭಗವಾನರು ಅವರಿಗೆ ಕಾಕೋಲಿಕ, ಫಂದನ, ವಟ್ಟಕ, ಹಾಗೂ ಲಟುಕ ಜಾತಕ ಕಥೆಗಳನ್ನು ಹೇಳಿದರು. ಹೀಗೆ ಅವರಲ್ಲಿ ವೈರಶಮನ ಮಾಡಿದರು. ಶಾಂತಿ ಹಾಗೂ ಮೈತ್ರಿಯ ಸ್ಥಾಪನೆ ಮಾಡಿದರು. ಆಗ ಆ ನಾಗರುಗಳು ಧಮ್ಮ ಶ್ರದ್ಧೆಯುಳ್ಳವರಾಗಿ ರತ್ನದ ಮೇಲಿನ ಲೋಭವನ್ನು ವಜರ್ಿಸಿದರು, ಪರಸ್ಪರರ ಮೇಲಿನ ದ್ವೇಷವನ್ನು ತ್ಯೇಜಿಸಿದರು. ಮೋಹದಿಂದ ಹೊರ ಬಂದರು. ಹಾಗು ಅವರು ಭಗವಾನರಿಗೆ ಆ ರತ್ನಖಚಿತ ಸಿಂಹಾಸನವನ್ನು ದಾನ ಮಾಡಿದರು. ಭಗವಾನರು ಆಗ ಸಿಂಹಾಸನದಲ್ಲಿ ಕುಳಿತು ಅವರಿಗೆ ಧಮ್ಮವನ್ನು ಮುಂದುವರೆಸಿದರು. ಆಗ ಅವರು ಭಗವಾನರಲ್ಲಿ ಪೂಜಿಸಲು ವಸ್ತುವೆನಾದರೂ ನೀಡಿ ಎಂದು ಕೇಳಿದಾಗ  ಅವರಿಗೆ ಪುನಃ ಆ ರತ್ನಸಿಂಹಾಸನವನ್ನು ನೀಡಿದರು. ಹೀಗಾಗಿ ಅದು ಭಗವಾನರು ಬಳಸಿದಂತಹ "ಪಾರಿಭೋಗಿಕ ವಸ್ತು" ಆಗಿ ಅದನ್ನು ಇಟ್ಟು ಸ್ತೂಪವನ್ನು ನಿಮರ್ಿಸಿದರು. ಅದು ಇಂದಿಗೂ ಇದೆ. ಅದಕ್ಕೆ ರಜಯಾತನ ಸ್ತೂಪವೆಂದು ಹೇಳುವರು. ಕಾಲಾ ನಂತರ ಅಲ್ಲಿ ರಜಯಾತನ ವಿಹಾರವೂ ನಿಮರ್ಾಣವಾಗುವುದು. ಇಂದಿಗೂ ಸಿಂಹಳ ದ್ವೀಪದಲ್ಲಿ ಒಂದಾದ ಜಾಫ್ನದ ಸಮೀಪ ನಾಗ ದ್ವೀಪದಲ್ಲಿ ಇವೆಲ್ಲಾ ಕಾಣಬಹುದು.