Thursday, 14 June 2018

ಕಾಲದ ಬಗ್ಗೆ ಪ್ರತಿಯೊಬ್ಬರಿಗೂ ಕಾಡುವಂತಹ ಪ್ರಶ್ನೆಗಳು:The Questions On Time

ಕಾಲದ ಬಗ್ಗೆ ಪ್ರತಿಯೊಬ್ಬರಿಗೂ ಕಾಡುವಂತಹ ಪ್ರಶ್ನೆಗಳು:



 ಅವೆಂದರೆ

1. ಭೂತಕಾಲದ ಬಗ್ಗೆ :

 ನಾನು ಹಿಂದೆ (ಭೂತಕಾಲದಲ್ಲಿ) ಇದ್ದೇನೆ? ನಾನು ಈ ಹಿಂದೆ ಇರಲಿಲ್ಲವೇ? ನಾನು ಹಿಂದೆ ಏನಾಗಿದ್ದೆ? ಹೇಗಿದ್ದೆ? ಏನಾಗಿದ್ದೆ? ನಂತರ ಏನಾದೆ?

2. ಭವಿಷ್ಯ ಕಾಲದ ಬಗ್ಗೆ : 

ನಾನು ಭವಿಷ್ಯದಲ್ಲಿ (ಮುಂದೆ) ಇರುವೆನೆ? ನಾನು ಭವಿಷ್ಯದಲ್ಲಿ ಇರುವುದಿಲ್ಲವೇ? ನಾನು ಭವಿಷ್ಯದಲ್ಲಿ ಏನು ಆಗಿರುತ್ತೇನೆ? ನಾನು ಭವಿಷ್ಯದಲ್ಲಿ ಹೇಗಿರುತ್ತೇನೆ? ಭವಿಷ್ಯದಲ್ಲಿ ಏನಾಗಿದ್ದು ನಾನು ಏನಾಗುತ್ತೇನೆ?

3. ವರ್ತಮಾನದ ಬಗ್ಗೆ :

 ನಾನು ಇರುವೆನೇ? ನಾನು ಇಲ್ಲವೇ? ನಾನು ಏನು ಆಗಿದ್ದೇನೆ? ನಾನು ಹೇಗಿದ್ದೇನೆ? ನಾನು ಎಲ್ಲಿಂದ ಬಂದೆ? ನಾನು ಎಲ್ಲಿಗೆ ಹೋಗುವೆನು?

ಭಗವಾನರು ದಿವ್ಯಚಕ್ಷುವಿನಿಂದ ತಮ್ಮ ಮತ್ತು ಪರರ ಭೂತಕಾಲದ ಬಗ್ಗೆ ಹಾಗೆಯೇ ಭವಿಷ್ಯದ ಬಗ್ಗೆ ಹಾಗೆಯೇ ವರ್ತಮಾನದ ಬಗ್ಗೆ ಪೂರ್ಣ ವಿಶ್ಲೇಷಣೆಯಿಂದ ಅರಿತು ವಿವರಿಸಿದ್ದಾರೆ. ನಾವು ಸಹ ಸಾಧನೆಯಿಂದ ದಿವ್ಯಚಕ್ಷು ಪಡೆದು ನೋಡಬಹುದು ಅಥವಾ ತರ್ಕಶಕ್ತಿಯಿಂದಲೇ ಭೂತ, ವರ್ತಮಾನ ಮತ್ತು ಭವಿಷ್ಯ ಅರಿಯಬಹುದು.
ನಮ್ಮ ಶರೀರ ಮನಸ್ಸಿಗೆ ಮೂಲ, ನಮ್ಮ ಹಿಂದಿನ ಜನ್ಮದ ಚಿತ್ತ (ವಿನ್ಯಾನ) ಆಗಿದೆ. ಆ ಹಿಂದಿನ ಜನ್ಮದ ಚಿತ್ತಕ್ಕೆ ಕಾರಣ ಸಂಖಾರಗಳಾಗಿವೆ. ಸಂಖಾರಗಳಿಗೆ ಕಾರಣ ಅಜ್ಞಾನವಾಗಿದೆ. ಹೀಗೆ ಅಜ್ಞಾನದಿಂದ ಸಂಖಾರಗಳು ಉದಯಿಸುತ್ತದೆ. ಸಂಖಾರಗಳಿಂದ ವಿನ್ಯಾನ ಉಂಟಾಗುತ್ತದೆ. ವಿನ್ಯಾನದಿಂದ ನಾಮರೂಪಗಳು (ಶರೀರ ಮತ್ತು ಮನಸ್ಸು) ಉಂಟಾಗುತ್ತದೆ.
ಇದನ್ನು ಸ್ಪಷ್ಟವಾಗಿ ಅರಿತಾಗ ಆತನು ಆಕಸ್ಮಿಕವಾಗಿ ಜನ್ಮಿಸಿರುವೆ ಎಂದು ಹೇಳುವುದಿಲ್ಲ. ಬದಲಾಗಿ ಕಾರಣದಿಂದ ಜನಿಸಿದ್ದೇನೆ ಎನ್ನುವನು. ಹಾಗೆಯೇ ಹೀಗೆ ಸ್ಪಷ್ಟವಾಗಿ ಅರಿತಾಗ ಆತನು ದೇವರಿಂದ ಜನ್ಮಿಸಿರುವೆ ಅಥವಾ ವಿಧಿಯಿಂದ ಜನ್ಮಿಸಿರುವೆ ಎಂದು ಹೇಳುವುದಿಲ್ಲ. ಬದಲಾಗಿ ಹಿಂದಿನ ಜನ್ಮ ಆಸಕ್ತಿ ಮತ್ತು ಕರ್ಮಫಲಗಳಿಂದ ಜನ್ಮಿಸಿದ್ದೇನೆ ಎಂದು ಹೇಳುತ್ತಾನೆ.
ಈಗಿನ ಶರೀರ ಮನಸ್ಸಿನಿಂದ ಸಳಯಾತನಗಳು (ಇಂದ್ರೀಯಗಳು) ಉಂಟಾಗುತ್ತದೆ.
ಇಂದ್ರೀಯಗಳಿಂದ (ವಿಷಯಗಳೊಂದಿಗೆ) ಸ್ಪರ್ಶ ಉದಯಿಸುತ್ತವೆ.
ಸ್ಪರ್ಶದಿಂದ ವೇದನೆಗಳು ಉದಯಿಸುತ್ತವೆ.
ವೇದನೆಗಳಿಂದ ತೀವ್ರ ಬಯಕೆಗಳು ಉದಯಿಸುತ್ತವೆ.
ತೀವ್ರ ಬಯಕೆಗಳಿಂದ ಅಂಟುಕೊಳ್ಳುವಿಕೆ ಉದಯಿಸುತ್ತದೆ.

 ನಾಲ್ಕು ರೀತಿಯಲ್ಲಿ ಕರ್ಮವಿಪಾಕ ವಗರ್ಿಕರಣ 


ಹೀಗಾದಾಗ ಆತನು ಅನೇಕ ಕರ್ಮಗಳನ್ನು ಮಾಡುತ್ತಾನೆ. ಅದರಂತೆಯೇ ಫಲಗಳನ್ನು ಪಡೆಯುತ್ತಾನೆ. ಯಾವ ಯಾವ ಕರ್ಮ ವಿಪಾಕಗಳಿವೆ? ಅದು ಹೀಗಿದೆ: ಅದನ್ನು ನಾಲ್ಕು ರೀತಿಯಲ್ಲಿ ಕರ್ಮವಿಪಾಕ ವಗರ್ಿಕರಣ ಮಾಡಲಾಗಿದೆ.

ಕಾಲದ ಪರಿಗಣನೆಯಿಂದಾದ ವಗರ್ಿಕರಣ

1. ತಕ್ಷಣ ಪರಿಣಾಮ ಬೀರುವ ಕಮ್ಮ : ಈಗಲೇ ಫಲ ನೀಡುವ ಕರ್ಮ
2. ಅನಂತರ ಪರಿಣಾಮ ಬೀರುವ ಕರ್ಮ : ಮುಂದಿನ ಜನ್ಮದಲ್ಲಿ ಫಲ
3. ಅನಿಶ್ಚಿತ ಕಾಲದವರೆಗೆ ಪರಿಣಾಮ ಬೀರುವ ಕರ್ಮ : ಎಷ್ಟೋ ಕಲ್ಪಗಳ ನಂತರ
ಫಲ ನೀಡುವ ಕರ್ಮ
4. ಅಪರಿಣಾಮಕಾರಿ ಕಮ್ಮ : ಫಲ ನೀಡದ ಕರ್ಮ.

ಪರಿಣಾಮದ ಪರಿಗಣನೆಯಿಂದಾದ ವಗರ್ಿಕರಣ

1. ಭಾರವಾದ ಕರ್ಮ - ತಂದೆ-ತಾಯಿಯರ ಹತ್ಯೆಯಿಂದ ನೇರವಾಗಿ ನರಕ ಅಥವಾ ಧ್ಯಾನದಿಂದ ಮುಂದಿನ ಸುಜನ್ಮ.
2. ಮರಣದ ಸಮೀಪದ ಗ್ರಹಿಕೆಯಿಂದಾದ ಕರ್ಮ : ಮರಣದ ವೇಳೆಯಲ್ಲಿರುವ ಮನಸ್ಥಿತಿಗೆ ಅವಲಂಬನೆ ಸಿಗುವಂತಹ ಜನ್ಮ.
3. ಅಭ್ಯಾಸದ ಕರ್ಮ : ನಿರಂತರ ಅಭ್ಯಾಸದಿಂದ ಏರ್ಪಟ್ಟ ವ್ಯಕ್ತಿತ್ವದಿಂದ ಲಭಿಸುವ ಮುಂದಿನ ಜನ್ಮ.
4. ರಾಶಿ ಕರ್ಮ : ಮುಂದೆ ಕಾದಿಟ್ಟ ಕರ್ಮ ಫಲ.

ಕ್ರಿಯೆಯ ಪರಿಗಣನೆಯಿಂದ ವಗರ್ಿಕರಣ :

1. ಉತ್ಪನ್ನಕಾರಿ ಕರ್ಮ : ಹಿಂದಿನ ಜನ್ಮದ ಪ್ರಚನ್ನತೆಯಿಂದಾದ ಉತ್ಪನ್ನ
2. ಬೆಂಬಲಕಾರಿ ಕರ್ಮ : ಹಿಂದಿನ ಮತ್ತು ಈಗಿನ ಪ್ರಯತ್ನ
3. ಪ್ರತಿಕ್ರಿಯಾಕಾರಿ ಕರ್ಮ : ಈಗಿನ ಪಾಪ ಅಥವಾ ಪುಣ್ಯದ ಪ್ರತಿಕ್ರಿಯೆ.
4. ನಾಶಕಾರಿ ಕರ್ಮ : ಕೆಟ್ಟ ಪಾಪದ ಫಲ.

ಮುಂದಿನ ಗತಿಯ ಪರಿಗಣನೆಯಿಂದಾದ ವಗರ್ಿಕರಣ

1. ಅಕುಶಲ ಕರ್ಮಗಳಿಂದಾಗಿ ಕಾಮಲೋಕದಲ್ಲಿ ಅಂದರೆ ಮಾನವ ಲೋಕದಲ್ಲಿ ಅಥವಾ ದುರ್ಗತಿಗಳಾದ, ಅಸುರ, ಪ್ರೇತ, ಪ್ರಾಣಿ, ಈ ನರಕಗಳಲ್ಲಿ ಜನನ ಮತ್ತು ದುಃಖ ಅನುಭವಿಸುವಿಕೆ.
2. ಕುಶಲ ಕರ್ಮಗಳಿಂದಾಗಿ ಸುಗತಿಯಲ್ಲಿ ಅಂದರೆ ದೇವಲೋಕದಲ್ಲಿ ಅಥವಾ ಮಾನವ ಲೋಕದಲ್ಲಿ ಜನನ ಮತ್ತು ಸುಖಪ್ರಾಪ್ತಿ.
3. ಧ್ಯಾನಗಳಿಂದ ಸಿಗುವ ರೂಪಲೋಕ.
4. ಧ್ಯಾನಗಳಿಂದ ಸಿಗುವ ಅರೂಪಲೋಕ.
ಹೀಗೆ ಆತನು ಕರ್ಮ ಪರಿಣಾಮಗಳನ್ನು ಅರಿತಾಗ ಕರ್ಮಗಳಿಂದಾಗಿ ಸಿಗುವ ಅಪಾಯ ಅಥವಾ ಸುಗತಿ ಸ್ಪಷ್ಟವಾಗಿ ಅರಿತಾಗ ಆತನು ವರ್ತಮಾನ ಕಾಲದ ಮಹತ್ವತೆ ಅರಿತು ಕುಶಲ ಕರ್ಮಗಳಲ್ಲಿ ತಲ್ಲೀನನಾಗಿ ಧ್ಯಾನಗಳಲ್ಲಿ, ಪ್ರಜ್ಞಾಭಾವನಾದಲ್ಲಿ ತಲ್ಲೀನನಾಗುತ್ತಾನೆ. ಧ್ಯಾನದಲ್ಲಿ ಎಲ್ಲವನ್ನು ಅರಿಯುವ ಸಾಧಕನಿಗೆ ಮುಂದಿನ ಜನ್ಮವಿಲ್ಲ ಎಂಬು ಮಿಥ್ಯಾದೃಷ್ಟಿಯು ನಾಶವಾಗುತ್ತದೆ. ಹಾಗೆಯೇ ಎಲ್ಲದಕ್ಕೂ ಹಿಂದಿನ ಜನ್ಮವೇ ಕಾರಣ ವರ್ತಮಾನದ ಮಹತ್ವವಿಲ್ಲ ಎಂಬ ಮಿಥ್ಯಾದೃಷ್ಟಿಯು ನಾಶವಾಗುತ್ತದೆ. ಹಾಗೆಯೇ ಕರ್ಮಫಲವಿಲ್ಲ ಎಂಬ ಮಿಥ್ಯಾದೃಷ್ಟಿಯು ನಾಶವಾಗುತ್ತದೆ.
ಹೀಗೆ ಆತನು ಅಂಟಿಕೊಳ್ಳುವಿಕೆ ಭವ ಉದಯಿಸುತ್ತದೆ. ಭವದಿಂದ ಜನ್ಮ ಉದಯಿಸುತ್ತದೆ. ಜನ್ಮದಿಂದ ದುಃಖವು ಉದಯಿಸುತ್ತದೆ ಎಂದು ಸ್ಪಷ್ಟವಾಗಿ ಅರಿಯುತ್ತಾನೆ.
ಆಗ ಆತನಿಗೆ ಇದ್ದ ಮೂರು ಕಾಲಗಳ ಬಗೆಗಿನ ಸಂದೇಹಗಳೆಲ್ಲವೂ ಪರಿಹಾರವಾಗುತ್ತದೆ. ಆತನಿಗೆ ಬುದ್ಧರ ಬಗ್ಗೆ, ಧಮ್ಮದ ಬಗ್ಗೆ, ಸಂಘದ ಬಗ್ಗೆ (ವಿನಯ/ಶಿಸ್ತು), ಭೂತಕಾಲದ ಬಗ್ಗೆ, ಭವಿಷ್ಯಕಾಲದ ಬಗ್ಗೆ ಮತ್ತು ವರ್ತಮಾನದ ಬಗ್ಗೆ ಮತ್ತು ಪಟಚ್ಛ ಸಮುಪ್ಪಾದದ ಬಗ್ಗೆ ಎಲ್ಲಾರೀತಿಯ ಸಂದೇಹಗಳು ಪರಿಹಾರವಾಗುತ್ತದೆ.


ಕರ್ಮ ಮತ್ತು ಅದರ ಪರಿಣಾಮವಿದೆ, ಆದರೆ ಕತರ್ೃವಿಲ್ಲ :

ಯಾವುದೇ ರೀತಿಯ ಪಕ್ಷಪಾತವಿಲ್ಲದೆ ವೀಕ್ಷಿಸುತ್ತಿರುವ ಆತನಿಗೆ ಎಲ್ಲಾ ಬಗೆಯ ಸಂಭವಿಸುವಿಕೆಗಳು, ಎಲ್ಲಾ ಹಂತಗಳು ಕೇವಲ ಶಾರೀರಿಕ, ಮಾನಸಿಕಾ (ನಾಮರೂಪ) ಗಳಾಗಿಯೇ ಕಾಣುತ್ತದೆ. ಅವೆಲ್ಲವೂ ಕಾರಣ ಮತ್ತು ಫಲ (ಪರಿಣಾಮ)ದ ಕೊಂಡಿಗಳಾಗಿ ಕಾಣುತ್ತದೆ. ಆತನು ಯಾವುದೇ ಕತರ್ೃವನ್ನು (ಕರ್ಮ ಮಾಡುವವನನ್ನು) ಕಾಣಲಾರ. ಹಾಗೆಯೇ ಆತನಿಗೆ ಕಮರ್ಾನುಭವಿಯನ್ನು (ಕರ್ಮ ಪರಿಣಾಮವನ್ನು ಅನುಭವಿಸುವವನು) ಕಾಣಲಾರ. ಇದನ್ನು ಆತನು ಸ್ಪಷ್ಟವಾಗಿ, ಸಮ್ಮಾದೃಷ್ಟಿಯಿಂದ ಕಾಣುತ್ತಾನೆ.

 ಅಲ್ಲಿ ಕೇವಲ ಮಾಡುವಿಕೆ ಇರುತ್ತದೆ 
ಆದರೆ ಮಾಡುವವನು ಇರಲಾರ. 
ಅಲ್ಲಿ ಕೇವಲ ಅನುಭವ ಇರುತ್ತದೆ. 
ಆದರೆ ಅನುಭವಿಸುವವನು ಇರಲಾರ.

ಅದು ಕೇವಲ ವ್ಯವಹಾರ ಭಾಷೆಯಷ್ಟೇ. ಆದ್ದರಿಂದಲೇ ಸನಾತನಿ ಬೌದ್ಧರು ಹೇಳಿರುವುದು:

ಕರ್ಮ ಮಾಡುವವನು (ಕತರ್ೃ) ಇಲ್ಲ 
ಅಥವಾ ಕರ್ಮ ಪರಿಣಾಮವನ್ನು ಅನುಭವಿಸುವವನೂ ಇಲ್ಲ.
 ಕೇವಲ ಆಗುಹೋಗುವಿಕೆಗಳು ಹರಿಯುತ್ತಿವೆ. 
ಇದರ ಹೊರತು ಬೇರೆ ಯಾವುದೂ ಸಮ್ಮಾದೃಷ್ಟಿಯಿಲ್ಲ.

ಮತ್ತು ಹೀಗೆ ಕರ್ಮ ಮತ್ತು ಪರಿಣಾಮಗಳು ಕಾರಣಬದ್ಧವಾಗಿ ತಮ್ಮ ಸುತ್ತುಗಳನ್ನು ನಡೆಸುತ್ತಿರುತ್ತವೆ. ಹೇಗೆಂದರೆ ಬೀಜ ಮತ್ತು ವೃಕ್ಷಗಳು ಬದಲಾಗುವ ರೀತಿ ಪ್ರಥಮ ಆದಿಯನ್ನು ತೋರಿಸಲು ಆಗುವುದಿಲ್ಲ. ಹಾಗೆಯೇ ಜನ್ಮಗಳ ಚಕ್ರಗಳ ಭವಿಷ್ಯವನ್ನು ಸಹಾ ಅವು ಸಂಭವಿಸಬಾರದೆಂದು ತೋರಿಸಲು ಅಗುವುದೇ? ಅನ್ಯ ಪಂಥಿಯರು ಇದನ್ನು ಅರಿಯಲಾಗದೆ ಪೂರ್ಣ ಸ್ವ-ಪ್ರಭುತ್ವವನ್ನು ಪಡೆಯಲು ವಿಫಲರಾಗಿರುವರು.

ಅವರು ಜೀವಿಯನ್ನು (ಆತ್ಮ) ಕಲ್ಪಿಸುವರು.
ಅದನ್ನು ನಿತ್ಯವೆಂದು ಅಥವಾ ನಶ್ವರವೆಂದು ಕಾಣುವರು.
 64 ಮಿಥ್ಯಾದೃಷ್ಟಿಗಳನ್ನು ಅವರು ಹೊಂದಿದ್ದು,
 ಅವೆಲ್ಲಾ ಒಂದು ಇನ್ನೊಂದಕ್ಕೆ ವಿರೋಧವಾಗಿರುವುವು.

ತನ್ಹಾದ ಪ್ರವಾಹವು ಅವರನ್ನು ಸದೆಬಡಿದಿದೆ.
ಅವರು ತಮ್ಮದೇ ಆದ ದೃಷ್ಟಿಗಳ ಬಲೆಯಲ್ಲಿ ಸಿಕ್ಕಿಕೊಂಡಿದ್ದಾರೆ
ಮತ್ತು ಹೀಗೆ ಪ್ರವಾಹವು ಅವರನ್ನು ಸದೆಬಡಿಯುವಾಗ
ಅವರು ದುಃಖದಿಂದ ಮುಕ್ತರಾಗುವುದಿಲ್ಲ.

ಬುದ್ಧರ ಶಿಷ್ಯನಾದ ಭಿಕ್ಖುವು ತನ್ನ ಅಭಿಜ್ಞಾ ಮತ್ತು ಪ್ರಜ್ಞಾದಿಂದ ಈ ವಾಸ್ತವವನ್ನು ಅರಿಯುತ್ತಾನೆ
 ಮತ್ತು ಶೂನ್ಯ ಸ್ಥಿತಿಯನ್ನು ಆಳವಾಗಿ ಮತ್ತು ಸೂಕ್ಷ್ಮವಾಗಿ ಅರಿಯುತ್ತಿರುತ್ತಾರೆ.

ಪರಿಣಾಮದಲ್ಲಿ ಯಾವ ಕರ್ಮವೂ ಇಲ್ಲ. 
ಹಾಗೆಯೇ ಕರ್ಮದಲ್ಲಿ ಯಾವ ಪರಿಣಾಮವೂ ಇಲ್ಲ.
 ಅವು ಒಂದಕ್ಕೆ ಇನ್ನೊಂದು ಶೂನ್ಯವಾಗಿದ್ದರೂ ಕರ್ಮದ ವಿನಃ ಫಲವಿಲ್ಲ.

ಹೇಗೆ ಅಗ್ನಿಯು ರತ್ನದ ಹರಳಿನಲ್ಲಿಯಾಗಲಿ, ಭರಣಿಯಲ್ಲಾಗಲಿ, ಕಟ್ಟಿಗೆಯಲ್ಲಾಗಲಿ ಇರುವುದಿಲ್ಲವೋ ಹಾಗೆಯೇ ಅವುಗಳ ಹೊರಗೂ ಇರುವುದಿಲ್ಲವೋ, ಆದರೆ ಅದರ ಅಂಗಗಳ ಯೊಗ್ಯರೀತಿಯಲ್ಲಿನ ಕ್ರಿಯೆ ಮಾಡಿದಾಗ ಅಗ್ನಿಯನ್ನು ಉತ್ಪಾದಿಸಬಹುದು.
ಹೀಗೆ ಎರಡು ರೀತಿಯಲ್ಲಿಯೂ ಪರಿಣಾಮಗಳನ್ನು ನಾವು ಕಾಣಲಾರೆವು.
ಕರ್ಮ ಒಳಗೂ ಅಥವಾ ಕರ್ಮದ ಹೊರಗೂ ಅಥವಾ ಅದರ ಫಲಿತಾಂಶದಲ್ಲೂ ಸಹಾ.

ಕರ್ಮಕ್ಕೆ ಅದರ ಫಲವೂ ಶೂನ್ಯ, ಫಲಕ್ಕೆ ಕರ್ಮವೂ ಶೂನ್ಯ. 
ಆದರೆ ಫಲವಂತು ಅದರಿಂದಲೇ ಬರುತ್ತದೆ. 
ಕರ್ಮವನ್ನು ಅವಲಂಬಿಸಿಯೇ ಹುಟ್ಟುತ್ತದೆ ಮತ್ತು
 ಇಲ್ಲಿ ಯಾವ ಸೃಷ್ಟಿಕರ್ತ ಬ್ರಹ್ಮ ಇಲ್ಲ. 
ಜನ್ಮಗಳಲ್ಲಿ ಸುತ್ತಾಡಿಸುವಂತಹ ಸೃಷ್ಟಿಕರ್ತನಿಲ್ಲ. 
ಕೇವಲ ಕಾರಣ ಮತ್ತು ಅದರ ಅಂಗಗಳ ಆಗುಹೋಗುವಿಕೆಗಳೇ ಹರಿಯುತ್ತಿವೆ.

ಹೀಗೆ ಆತನು ನಾಮರೂಪಗಳನ್ನು ಮತ್ತು ಕರ್ಮ ಹಾಗು ಕರ್ಮದ ಪರಿಣಾಮಗಳನ್ನು ಈ ರೀತಿಯಾಗಿ ಅರಿಯುತ್ತಿರುವಾಗ ಆತನಲ್ಲಿ ಕಾಲದ ಮೂರು ಹಂತಗಳಾದ ಭೂತ, ಭವಿಷ್ಯತ್ ಮತ್ತು ವರ್ತಮಾನದ ಎಲ್ಲಾ ಸಂಶಯಗಳು ನಿವಾರಣೆಯಾಗುತ್ತದೆ. ಆತನಿಗೆ ಮರಣ ಮತ್ತು ಪುನರ್ಜನ್ಮದ ಕೊಂಡಿಗಳು ಸ್ಪಷ್ಟವಾಗಿ ಅರ್ಥವಾಗುತ್ತದೆ. ಭೂತಕಾಲದಿಂದ ವರ್ತಮಾನದ ಕೊಂಡಿ, ಹಾಗೆಯೇ ವರ್ತಮಾನದಿಂದ ಭವಿಷ್ಯದ ಕೊಂಡಿಗಳನ್ನು ಸ್ಪಷ್ಟವಾಗಿ ಅರಿಯತ್ತಾನೆ.
ಹೇಗೆ ಕಣ್ಣಿನ ವಿನ್ಯಾನವನ್ನು ಮನೋವಿನ್ಯಾನವು (ಚಿತ್ತದ ವಿಷಯಗಳು) ಹಿಂಬಾಲಿಸುವುದೋ, ಅದು ಅದರಿಂದಲೇ ಬಂದಿರುವಂತಹದ್ದಾಗಿದೆ. ಹಾಗೆಯೇ ಪುನರ್ ಜನ್ಮದ ಕೊಂಡಿಯು ಸಹಾ ನಿರಂತರ ನಡೆಯುತ್ತಲೇ ಇರುತ್ತದೆ. ಹಿಂದಿನ ಚಿತ್ತವು ಮುರಿಯುತ್ತದೆ. ನಂತರದ ಚಿತ್ತವು ಅದರಿಂದಲೇ ಹುಟ್ಟುತ್ತದೆ. ಇವುಗಳ ನಡುವಿನ ಅಂತರವಿಲ್ಲ. ನಿಲ್ಲುವಿಕೆಯಿಲ್ಲ, ವಿಶ್ರಾಂತಿಯೂ ಇಲ್ಲ. ಅಲ್ಲಿ ಏನೊಂದು ಹಾದು ಹೋಗದಿದ್ದರೂ ಪುನರ್ಜನ್ಮದ ಕೊಂಡಿಯು ಅಸ್ತಿತ್ವಕ್ಕೆ ಬಂದಿದೆ.
ಹೀಗೆ ಅತನು ಅನಿತ್ಯವನ್ನು ಗಮನಿಸುತ್ತಿರುವಾಗ ಎಲ್ಲಾ ಖಂಧಗಳ ಅನಿತ್ಯವನ್ನು ಸ್ಪಷ್ಟವಾಗಿ ನೋಡುತ್ತಾನೆ. ಆಗ ಆತನ ಸಂದೇಹಗಳೆಲ್ಲವೂ ಪರಿಹಾರವಾಗುತ್ತದೆ.
ಸರಿಯಾದ ಜ್ಞಾನ, ಯೋಗ್ಯವಾದ ರೀತಿಯಲ್ಲಿ ನೋಡುವಿಕೆ ಮತ್ತು ಸಂದೇಹವನ್ನು ಹಾದುಹೋಗುವಿಕೆ ಇವೆಲ್ಲವೂ ಒಂದೇ ಅರ್ಥವನ್ನು ನೀಡುತ್ತದೆ. ಕೇವಲ ಪದಗಳು ಬೇರೆಯಷ್ಟೇ. ಈ ರೀತಿಯಲ್ಲಿ ಭಿಕ್ಷುವು ನಾಮರೂಪಗಳನ್ನು ಸದಾ ಜಾಗ್ರತೆಯಲ್ಲಿ ಗಮನಿಸಿ ಸಂದೇಹಾತೀತನಾಗುತ್ತಾನೆ. ಆತನು ಸೋತಪನ್ನ ಸ್ಥಿತಿಗಿಂತ ಸ್ವಲ್ಪ ಕೆಳಗೆ ಇರುತ್ತಾನೆ.
ಆತನಿಗೆ ಬುದ್ಧರಲ್ಲಿ, ಧಮ್ಮದಲ್ಲಿ ಮತ್ತು ಸಂಘಗಳಲ್ಲಿ ಸಂಶಯ ನಾಶವಾಗಿ ತ್ರಿರತ್ನಗಳಲ್ಲಿ ಪ್ರಬಲ ಶ್ರದ್ಧೆಯುಳ್ಳವನಾಗುತ್ತಾನೆ.
ಇಲ್ಲಿಯದನ್ನು ಕುರಿತ, ಮುಂದಿನದನ್ನು ಕುರಿತ ಯಾವ ಸಂಶಯಗಳಿವೆಯೋ, ತಾನೇ ಅರಿತಿರುವುದಾಗಲಿ ಅಥವಾ ಪರರಿಗೆ ತಿಳಿದವುಗಳಾಗಲಿ, ಅವೆಲ್ಲವನ್ನು ಧ್ಯಾನಿಗಳಾದವರು ಪರಿಹರಿಸಿ ತೊರೆಯುತ್ತಾರೆ. ಶ್ರದ್ಧೆಯಿಂದ ಬ್ರಹ್ಮಚರ್ಯ ಜೀವನ ಪಾಲಿಸುತ್ತಾರೆ.
ಯಾರಿಗೆ ಬಂಧನವಿಲ್ಲವೋ ಯಾರು ಪೂರ್ಣ ಪ್ರಜ್ಞೆಯಿಂದಾಗಿ ಸರ್ವ ಸಂಶಯಗಳನ್ನು ಇಲ್ಲವಾಗಿಸಿಕೊಂಡಿರುವನೋ ಮತ್ತು ಅಮರತ್ವ ಸಿದ್ಧಿಸಲು ಸಿದ್ಧನೋ ಆತನನ್ನು ನಾನು ಬ್ರಾಹ್ಮಣ (ಶ್ರೇಷ್ಠ/ಪರಿಶುದ್ಧ) ಎನ್ನುತ್ತೇನೆ. (ಧಮ್ಮಪದ 411