ಚಿಂತನೆಯೆಂಬ ಮಹಾಶಕ್ತಿ -ಅನೀಶ್ ಬೋಧ್
"ನಾವು ಏನಾಗಿರುವೆವೊ ಅದೆಲ್ಲಾ ನಮ್ಮ ಯೋಚನೆಗಳ ಫಲವಾಗಿದೆ. ,ಹಿಂದಿನ ಯೋಚನೆಗಳ ಪಲಿತಾಂಶವೇ ಇಂದಿನ ನಾವು, ಈಗಿನ ಯೋಚನೆಗಳಂತೆ ಮುಂದಿನ ಭವಿಷ್ಯವಿರುವುದು. ಪ್ರದುಷ್ಟ ಯೋಚನೆಗಳಿಂದ ದುಃಖವು ಸಿಕ್ಕರೆ, ಕುಶಲ ಪ್ರಸನ್ನ ಯೋಚನೆಗಳಿಂದಲೇ ಸುಖವು ಲಭಿಸುವುದು, ಈಗಿನ ಸ್ಥಿತಿಗತಿಗಳಿಗೆ ಈ ಹಿಂದಿನ ಆಯ್ಕೆಗಳೇ ಕಾರಣವಾಗಿದ್ದವು, ನಮ್ಮ ಭವಿಷ್ಯ ಉನ್ನತವಾಗಿರಲೆಂದು ಆಶಿಸಿದರೆ ಈಗಿನ ಯೋಚನೆ-ಯೋಜನೆ, ನಿಧರ್ಾರ ಹಾಗು ಕಾರ್ಯಗಳು ಉತ್ತಮವಾಗಿರಬೇಕಾಗಿದೆ, ಯೋಚನೆಗಳಿಂದಲೇ ನಮ್ಮ ಉದ್ಭವ ,ಯೋಚನೆಗಳಿಂದಲೇ ನಾವು ಜಗತ್ತನ್ನು ಸಹಾ ನಿಮರ್ಿಸುತ್ತೇವೆ." --ಬುದ್ಧ ಭಗವಾನರು.
ಚಿಂತನೆ
ಚಿಂತನೆಯು ಮಾನಸಿಕ ಪ್ರಕ್ರಿಯೆಯಾಗಿದ್ದು, ಚಿಂತನೆಯು ಯೋಚನೆಗಳ ಸಮೂಹದಿಂದಾಗುತ್ತವೆ, ಹಾಗೇಯೆ ಚಿಂತನೆಯು ಯೋಚನೆಗಳ ಮಹಾಸಮೂಹವನ್ನು ಉತ್ಪನ್ನುಗೊಳಿಸುತ್ತದೆ, ನಾವು ಪ್ರತಿ ಕ್ಷಣವೂ ಯಾಂತ್ರಿಕವಾಗಿ ಅಥವಾ ಐಚ್ಚಿಕವಾಗಿ ಯೋಚಿಸುತ್ತಲೆ ಇರುತ್ತೇವೆ, ಆಳ ನಿದ್ರೆಯ ಹೊರತು ಸ್ವಪ್ನವಸ್ಥೆಯಲ್ಲಿಯೂ ಸಹಾ ನಮ್ಮ ಯೋಚನೆಗಳು ಮನಸ್ಸಿಗೆ ತಾಕುತ್ತಲೇ ಇರುವುದು. ವಿಜ್ಞಾನಿಗಳ ಪ್ರಕಾರ ನಿಮಿಷಕ್ಕೆ ಸಾವಿರಗಳ ಸಂಖ್ಯೆಯಲ್ಲಿ ಪದಗಳು ಯೋಚನೆಗಳಲ್ಲಿ ಹರಿದಾಡುತ್ತಿರುತ್ತವೆ. ಭಾವವೇಶದ ಯೋಚನೆಗಳನ್ನು ಚಿಂತನೆ ಎನ್ನಲಾಗದು, ಹಾಗೆಯೆ ನಮ್ಮ ನಿಯಂತ್ರಣವಿಲ್ಲದೆ ಉಂಟಾಗುತ್ತಿರುವ ಯೋಚನೆಗಳನ್ನು ಚಿಂತನೆ ಎನ್ನಲಾಗದು.ಇದು ಐಚ್ಚಿಕ ಪರಿಣಾಮಾತ್ಮಕ ಕ್ರಿಯೆಯಾಗಿದೆ.
ಚಿಂತನಾ ಪ್ರಕ್ರಿಯೆ
ಮನಸ್ಸು ಹಾಗು ಮಾನಸಿಕ (ಚಿಂತನೆಯ)ವಿಷಯ ಇವಿಷ್ಟೇ ಅಲ್ಲಿ ಭಾಗವಿಸುವವು ಜೋತೆಗೆ ಅದಕ್ಕೆ ಸಂಬಂದಪಟ್ಟ ಎಲ್ಲಾ ವಿಷಯಗಳು ಅಥವಾ ದತ್ತಾಂಶಗಳು ಅಲ್ಲಿ ನೆರೆಯುತ್ತವೆ. ಜೋತೆಗೆ ನಮ್ಮ ನೆನಪು ಇದ್ದಷ್ಟು, ಇನ್ನಷ್ಟು ವಿಶಾಲವಾಗಿ ನಾವು ಹೆಚ್ಚು ಹೆಚ್ಚಾಗಿ ಚಿಂತನೆ ಮಾಡಬಹುದು.ಇಲ್ಲಿ ಭಾಷೆಯು ಪ್ರಮುಖ ಪಾತ್ರವಹಿಸುತ್ತದೆ, ಚಿಂತನೆಯು ಸ್ವ-ಭಾಷಣದಂತೆ ಶಾಬ್ದಿಕವಾಗಿ, ವಾಕ್ಯಗಳಂತೆ ೆೆ ಹಾಗೆಯೆ ಮನೋಭಾವನೆಗಳಂತೆ , ಕಲ್ಪಿತ ಚಿತ್ರಗಳಂತೆ, ಆಕಾರಗಳಂತೆ, ನಕ್ಷೆಗಳಂತೆ, ಅಂತರಿಕದಲ್ಲಿ ಹರಿದಾಡುತ್ತಲೆ ಇರುವುದು ,ಹೀಗೆ ವಿಷಯಗಳ ಸಂಕಲನ, ಸಂಬಂಧಪಡದ ವಿಷಯಗಳು ಅಲ್ಲಿಂದ ನಿರ್ಗಮಿಸಿ ತರ್ಕದ ವ್ಯವಕಲನವು ನಡೆಯುತ್ತವೆ, ವಿಷಯಗಳ ವಿಶ್ಲೇಷಣೆ ನಡೆಯುತ್ತಾ ಭಾಗಕಾರದಂತೆ ವಿಭಜಿಸುತ್ತಾ ವಗರ್ೀಕರಣವೂ ನಡೆಯುವುದು ,ಚಿಂತನೆಗೆ ವಿಷಯ ಹಾಗು ಪ್ರಶ್ನೆಗಳೆ ಪ್ರಮುಖ ಅಧಾರವಾಗಿದೆ, ಪ್ರಶ್ನೆಗಳಿಂದ ಚಿಂತನೆಯು ಗುಣಾಕಾರದಂತೆ ಅಸಂಖ್ಯಪಟ್ಟು ವೃದ್ಧಿಯಾಗುವುದು. ಚಿಂತನೆ ತಿಳಿದೊ ಅಥವಾ ತಿಳಿಯದೆಯೋ ತರ್ಕದ ಹಾದಿಯಲ್ಲಿ ಸಾಗುವುದು, ಈ ಪ್ರಕ್ರಿಯೆಯ ಹಾದಿಯು ವಿಶ್ಲೇಷಣೆಯಿಂದ ಹಿಡಿದು, ಉಪಾಯ, ನಿಧರ್ಾರ, ಮನೋಭಾವ, ಜ್ಞಾನ ,ಅಥವಾ ಸಮಸ್ಯೆಯ ಪರಿಹಾರದವರೆಗೂ ಸಾಗುವುದು. ಇನ್ನು ಅದರಾಚೆಗೂ ಸಾಗುವುದು .ಚಿಂತನೆಗೆ ತರ್ಕವೇ ಮಾರ್ಗದರ್ಶಕ , ನಮ್ಮ ಚಿಂತನೆ ತರ್ಕಬದ್ದವಾದಷ್ಟು ನಾವು ಇನ್ನು ಅತ್ಯುತ್ತಮವಾಗಿ ಚಿಂತನೆ ನಡೆಸಬಲ್ಲೆವು. ಪರಿಣಾಮವಶಾತ್ ಉತ್ತಮ ಜ್ಞಾನವು ದೊರೆಯುವುದು.
ಚಿಂತನೆಯು ಒಂದು ಕಲೆಯಾಗಿದೆ, ಯಾವುದೆ ಕಾರ್ಯದಂತೆ ವ್ವವಸ್ಥಿತವಾಗಿ ಚಿಂತನೆಮಾಡಬಹುದಾಗಿದೆ, ಚಿಂತನೆಯಿಂದಲೇ ನಿಜವಾದ ಕಲಿಕೆಯು ಆರಂಭವಾಗುವುದು, ಚಿಂತನೆಯು ನಂಬಲಾಗದಷ್ಟು ಪಲಿತಾಂಶವನ್ನು ನೀಡುವುದು, ಮಾನವನ ವಿಮುಕ್ತಿಯ ಮಾರ್ಗವು ಚಿಂತನೆಯಿಂದಲೆ ಆರಂಭವಾಗುವುದು, ಚಿಂತನೆಗೂ ಹಾಗು ನಿಧರ್ಾರಗಳಿಗೂ ಪರರನ್ನು ಅವಲಂಬಿಸುವುದು ದಾಸ್ಯತ್ವದ ಪರಮಾವಧಿಯೆ ಸರಿ. ಭಗವಾನ್ ಬುದ್ಧರು, ಸಾಕ್ರಟೀಸ್, ಜಿದ್ದು ಕೃಷ್ಣಮೂತರ್ಿ ರಂತಹ ಮಹನೀಯರು ಮಾತ್ರ ಸ್ವಯಂ ಚಿಂತನೆಮಾಡಿ ಅಭಿವೃದ್ಧಿಯಾಗಬೇಕೆಂದು ಪ್ರೇರೆಪಿಸಿದರು, ಸ್ವಯಂ ಆಗಿ ಚಿಂತಿಸುವವನೇ ಮೊದಲ ಶ್ರೇಣಿಯ ಮಾನವ ಎಂದು ಜಿದ್ದು ಕೃಷ್ಣಮೂತರ್ಿಯ ಪ್ರಧಾನ ಬೋಧನೆಯಾಗಿತ್ತು. 24 ಗಂಟೆಗಳ ನಿಂತುಕೊಂಡೇ ತಕರ್ಿಸುತ್ತ ತನ್ನ ಪ್ರಶ್ನೆಗಳಿಗೆ ತಾನೇ ಪರಿಹಾರ ಸಿಗುವವರೆವಿಗೂ ಉತ್ತರ ಪಡೆಯುತ್ತಿದ್ದ ಸಾಕ್ರಟೀಸ್ ತುಂಬ ಖ್ಯಾತಿಗಳಿಸಿದ್ದನು. ಬುದ್ಧಭಗವಾನರು 49 ದಿನಗಳ ಕಾಲ ಸ್ವಯಂ ಆಗಿಯೆ ಯಾರ ಸಹಾಯವು ಇಲ್ಲದೆ ಸಂಯಕ್ ಸಂಬೋಧಿಯ ಶ್ರೇಷ್ಟ ಜ್ಙಾನವನ್ನು ಗಳಿಸಿದರು ,ಪರರು ಸಹಾ ಇದೇ ರೀತಿ ಪ್ರಯತ್ನ ಪಟ್ಟರೆ ತನ್ನಂತೆ ಆಗಬಹುದು ಎಂದು ಹೇಳಿದರು..
ಚಿಂತನೆ ಏತಕ್ಕಾಗಿ
ಅವಶ್ಯಕತೆಯೆ ಚಿಂತನೆಗೆ ಮೂಲವಾಗಿದೆ. ಆ ಅವಶ್ಯಕತೆಯು ಕುತೂಹಲವಾಗಿರಬಹುದು, ಸಮಸ್ಯೆಯಾಗಿರಬಹುದು, ಸತ್ಯಶೋಧನಾಸಕ್ತಿಯಾಗಿರಬಹುದು. ಇನ್ನೂ ಉನ್ನತ ಸುಖದ ಹುಡುಕಾಟವಾಗಿರಬಹುದು. ಅಥವಾ ಅಕಸ್ಮಿಕ ಘಟನೆಯು ಆಗಿರಬಹುದು, ಉಧಾಹರಿಸುವುದಾದರೆ ನೂಟನ್ನನು ಆಫಲ್ ಮರದಕೆಳಗಿದ್ದಾಗ ಆಫಲ್ ಕೆಳಗೆ ಬಿದ್ದಾಗ ಆತ ನಡೆಸಿದ ಯೋಗ್ಯ ಚಿಂತನೆಯಿಂದ ಶ್ರೇಷ್ಠ ಗುರುತ್ವಾಕರ್ಷಣೆಯ ಸತ್ಯ ಹೋರಹೊಮ್ಮಲಿಲ್ಲ್ಲವೆ ? ಚಿಂತನೆಯಿಂದಲೇ ಸತ್ಯ ಹೋರಹೊಮ್ಮವುದು ಬೇರೆ ಮಾರ್ಗವೆ ಇಲ್ಲ. ಅಕರ್ಿಮಿಡಿಸ್ ನು ತೇಲುವ ತತ್ವವನ್ನು ಕಂಡುಹಿಡಿಯುವಾಗ ಸ್ನಾನದ ಕೋಠಡಿಯಿಂದ 'ಯುರೆಕಾ" ಎಂದು ಆನಂದದೋದ್ಗಾರ ಮಾಡುತ್ತಾ ಹೊರ ಬಂದಿದ್ದು ಎಲ್ಲರಿಗೂ ಗೋತ್ತೆ ಇದೆ. ಈಗಂತು ಉದ್ದೇಶಪೂರ್ವಕವಾಗಿಯು ಚಿಂತನೆ ನಡೆಸಿ ಅನೇಕನೇಕ ಸಂಶೋಧನೆಗಳನ್ನು ಈಗ ಹೂರಹಾಕುತಿದ್ದಾರೆ. ವೈಜ್ಞಾನಿಕ ಚಿಂತನೆಯಿಂದ ಮಹಾ ಸೇತುವೆಗಳು ನಿಮರ್ಾಣವಾದರೆ, ತಾತ್ವಿಕ ಚಿಂತನೆಯಿಂದ ಜೀವನದ ಮಾರ್ಗಗಳೇ ರೂಪಿತಗೊಂಡಿವೆ, ವೈಜ್ಞಾನಿಕ ಚಿಂತನೆಗಳಿಂದ ಬಲ್ಪುಗಳು ಅನ್ವéೇಷಿಸ್ಪಟ್ಟರೆ, ತಾತ್ವಿಕ ಚಿಂತನೆಯಿಂದ ಜಗತ್ತಿಗೆ ಮಹಾ ಬೆಳಕು ನೀಡಲ್ಪಟ್ಟಿದೆ, ವೈಜ್ಞಾನಿಕ ಚಿಂತನೆಯಿಂದ ನ್ಯೂಕ್ಲಿಯರ್ ಪ್ಲಾಂಟ್ ಗಳು ನಿಮರ್ಾಣಗೊಂಡರೇ ತಾತ್ವಿಕ ಚಿಂತನೆಯಿಂದಾಗಿ ಜೀವಿಸಲು , ಉನ್ನತರಾಗಲು, ಮಾನಸಿಕ ಬಲಿಷ್ಟತೆ ಪಡೆಯುವಂತಾಯಿತು, ಚಿಂತನೆಗಳು ಕೇವಲ ವಿಜ್ಞಾನಿಗಳಿಗೆ ಅಥವಾ ತಾತ್ವಿಕರಿಗೆ ಮಾತ್ರವಲ್ಲ ,ಮಾತ್ರವಲ್ಲ ಜನಸಮಾನ್ಯರು ಮಾಡಲೇ ಬೇಕಾಗಿರುವಂತಹದ್ದಾಗಿದೆ. ಎಕೆಂದರೆ ಸಮಾನ್ಯ ಜೀವನದಲ್ಲು ಸಹಾ ಯೋಗ್ಯ ದೃಷ್ಟಿಕೋನಕ್ಕೆ ವಿಮಷರ್ೆಯು, ವೃತ್ತಿಯ ಅಭಿರುದ್ಧಿಗೆ ಸೃಜನಾತ್ಮಕತೆಯು, ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಾತ್ಮಕ ಚಿಂತನೆಯು ಅತ್ಯವಶ್ಯಕವಾಗಿದೆ. ಅಸಾಧರಣ ವ್ಯಕ್ತಿಗಳು ಸಮಸ್ಯೆಗಳ ಪರಿಹಾರಕ್ಕೆ ಚಿಂತನೆಯನ್ನೆ ಅವಲಂಬಿಸುತ್ತಾರೆ, ಹಾಗು ಅದರಲ್ಲೆ ಅಪಾರ ಶಕ್ತಿ ಪಡೆಯುತ್ತಾರೆ. ಬಲಿಷ್ಟ ವ್ಯಕ್ತಿತ್ವದ ನಿಮರ್ಾಣಕ್ಕೆ ಚಿಂತನೆ ಅತ್ಯವಶ್ಯಕವಾಗಿದೆ.
ಕೆಲವೊಮ್ಮೆ ದೃಶ್ಯಗಳು ಸಹಾ ಚಿಂತನೆಗೆ ಮಹಾ ಪ್ರೇರಣೆಯಾಗಬಲ್ಲದು. ಉದಾಹರಿಸುವುದಾದರೆ ಬುದ್ಧಭಗವಾನರು ರಾಜಕುಮಾರರಾಗಿದ್ದಾಗ ಅವರು ಕಂಡಂತಹ ರೋಗಿ, ವೃದ್ಧ, ಶವ ಹಾಗು ಸಂನ್ಯಾಸಿಯ ದೃಶ್ಯವು ಅವರಲ್ಲಿ ಅಪಾರ ವೈರಾಗ್ಯವನ್ನುಂಟು ಮಾಡಿ ಮುಂದೆ ಸಂಭೋದಿಪ್ರಾಪ್ತಿಗೆ ಕಾರಣವಾಯಿತು.
"ನಿಮಿಷಮಾತ್ರದಲ್ಲಿ ಜೀವನವನ್ನು ಬಲಾಯಿಸುವುದು ಹೇಗೆ ?" ಎಂದು ಅಂಗ್ಲ ಲೇಖಕನೊಬ್ಬನು ಬರದಿದ್ದಾನೆ.ಚಿಂತನೆಯು ಜೀವನವನ್ನು ಹೇಗೆ ಮಾರ್ಪಡಿಸಬಲ್ಲದು ಎಂಬುದಕ್ಕೆ ಈ ಪುಸ್ತಕದ ಹೆಸರು ಸಹಾ ಸ್ಪೂತರ್ಿಯಾಗಬಲ್ಲದಲ್ಲವೆ ? ಯಾವುದೇ ವ್ಯಕ್ತಿಯು ಯಾವುದೆ ರಂಗದಲ್ಲಿ ಯಶಸ್ಸು ಸಾಧಿಸಿದ್ದಾನೆ ಎಂದರೆ ಅತನ ವ್ಯಕ್ತಿತ್ವವು ಅಷ್ಟರ ಮಟ್ಟಿಗೆ ವಿಕಸಿತವಾಗಿದೆ ಎಂದೆ ಅರ್ಥವಾಗುವುದು, ಎಕೆಂದರೆ ಉನ್ನತ ಮನೋಭಾವವಿಲ್ಲದೆ ಉನ್ನತ ಶಿಖರವೇರಲು ಸಾಧ್ಯವಿಲ್ಲ, ಹಾಗೆಯೇ ಉನ್ನತ ಚಿಂತನೆಯಿಲ್ಲದೆ ಉನ್ನತ ಮನೋಭಾವವು ಸಹಾ ಉಂಟಾಗಲಾರದು ಒಬ್ಬನು ಯೋಗ್ಯವಾಗಿ ನಿಸ್ಪಕ್ಷಪಾತವಾಗಿ ಚಿಂತನೆ ಮಾಡಿದಾಗ ಆತನಲ್ಲಿ ಸಂದೇಹ, ದಂದ್ವ ಹಾಗು ಮೌಡ್ಯತೆಗಳು ಅಳಿದು ಯೋಗ್ಯ ದೃಷ್ಟಿಕೋನ ಉಂಟಾಗುತ್ತದೆ, ನಂತರ ಯೋಗ್ಯ ದೃಷ್ಟಿಕೋನದಿಂದಾಗಿ ಆತನು ಯೋಗ್ಯ ನಿಧರ್ಾರ ತೆಗೆದುಕೊಳ್ಳುತ್ತಾನೆ, ಯೋಗ್ಯ ನಿಧರ್ಾರದಿಂದಾಗಿ ಆತನ ಕಾರ್ಯಗಳು ಹಾಗು ಮಾತುಗಳು ಸರಿಯಾಗಿರುತ್ತವೆ, ಅದರ ಪಲಿತಾಂಶವಾಗಿ ಎಲ್ಲವೂ ಒಳಿತೆ ಅಗುವುದು. ಹೀಗಾಗಿ ಯೋಗ್ಯ ಚಿಂತನೆಯು ಪರಮ ಪ್ರಾಧಾನ್ಯತೆಯನ್ನು ಪಡೆಯುತ್ತದೆ.
ಚಿಂತನೆಯಿಂದ ನಮಗೆ ನಿಧರ್ಾರಶಕ್ತಿ ಸಿಗುತ್ತದೆ, ಕೆಲವಮ್ಮೆ ನಾವು ನಿಧರ್ಾರ ತಗೆದುಕೊಳ್ಳಲು ಆಗದೆ ಪರರಲ್ಲು ಆಶ್ರಯ ಪಡೆಯಲು ಹೋಗುತ್ತೇವೆ, ಅಲ್ಲಿ ಯೋಗ್ಯ ಸಲಹೆ ಸಿಕ್ಕರೆ ಪರವಾಗಿಲ್ಲ ಬದಲಾಗಿ ಇನ್ನಷ್ಟು ಹಾನಿಯಾಗುವಂತಹ ಮಿಥ್ಯ ಸಲಹೆ ಸಿಕ್ಕಿದಾಗ ಅನಾಹುತ ತಪ್ಪಿದ್ದಲ್ಲ, ನಮ್ಮ ಚಿಂತನೆ ತರ್ಕಬದ್ದವಾದಷ್ಟು ನಾವು ಇನ್ನು ಅತ್ಯುತ್ತಮವಾಗಿ ಚಿಂತನೆ ನಡೆಸಬಲ್ಲೆವು. ಪರಿಣಾಮವಶಾತ್ ನಾವು ಉತ್ತಮ ನಿಧರ್ಾರ ಕೈಗೊಳ್ಳಬಹುದು, , ಅದರಿಂದಾಗಿ ಉತ್ತಮ ಜೀವನ ನಡೆಸಬಹುದಾಗಿದೆ. ಅದರೆ ಯೋಗ್ಯ ಚಿಂತನೆಯಿಂದ, ಹಾಗು ತರ್ಕಭರಿತ ಸೂತ್ರಗಳ ಆಧಾರಿತವಾಗಿ ಚಿಂತನೆ ಸಾಗಿದಾಗ ಅಗ ಖಂಡಿತವಾಗಿಯು ಯೋಗ್ಯ ನಿಧರ್ಾರದ ಉತ್ಪನ್ನವು ಸಿಕ್ಕೆಸಿಗುವುದು.
ಪ್ರತಿ ಮಾನವನು ಕಡ್ಡಾಯವಾಗಿ ಚಿಂತನೆ ಮಾಡಬೇಕಾಗಿರುವ ವಿಷಯಗಳಿವೆ. ಅದೇಂದರೆ ತನ್ನ ಆರೋಗ್ಯದ ಬಗ್ಗೆ ,ಮಾನಸಿಕ ನೆಮ್ಮದಿಯ ಬಗ್ಗೆ ,ತನ್ನ ಕುಟುಂಬದ ಬಗ್ಗೆ ,ತನ್ನ ವೃತ್ತಿಯ ವೃದ್ಧಿಯ ಬಗ್ಗೆ, ಸಮಾಜದ ಬಗ್ಗೆ, ತನ್ನ ಬೌದ್ಧಿಕ ವಿಕಾಸದ ಬಗ್ಗೆ, ಹಾಗು ತನ್ನ ಮಾನಸಿಕ ವಿಕಾಸದ ಬಗ್ಗೆ , ತನ್ನ ನಡವಳಿಕೆಯ ಬಗ್ಗೆ, ಒಟ್ಟಾರೆ ವ್ಯಕ್ತಿತ್ವದ ವಿಕಾಸದ ಬಗ್ಗೆ ಆತನು ಚಿಂತನೆ ಮಾಡಲೇಬೇಕು ಇಲ್ಲದಿದ್ದರೆ ಆತನ ಅಭಿರುದ್ಧಿಯು ಆಗಲಾರದು.
ಚಿಂತನೆಯ ವೈವಿಧ್ಯತೆಗಳು
ಚಿಂತನೆಗಳಲ್ಲಿ ಹಲವಾರು ವೈವಿಧ್ಯತೆಗಳಿವೆ, ಅದರೆ ಇಲ್ಲಿ ನಾನು ಕೇವಲ 3 ಬಗೆಯ ಚಿಂತನೆಗಳ ಬಗ್ಗೆ ಮಾತ್ರ ತಿಳಿಸಲು ಹೋಗಿದ್ದೇನೆ.
ಸೃಜನಾತ್ಮಕ ಚಿಂತನೆ:ಈ ಬಗೆಯ ಚಿಂತನೆಯಿಂದಲೇ ಮಾನವನು ಇಡೀ ಸೃಷ್ಟಿ ನಿಮರ್ಿಸಿದ್ದಾನೆ.ಅದು ಆಹಾರವಾಗಿರಬಹುದು, ಉಡುವ ಸುಂದರ ವಸ್ತ್ರವಾಗಿರಬಹುದು, ಇರುವ ಮನೆ,ಬಂಗಲೆಗಳಾಗಿರಬಹುದು, ಔಷಧಿಯಾಗಿರಬಹುದು ಅಥವಾ ಇಂದ್ರೀಯಗಳನ್ನು ತೃಪ್ತಿಗೊಳಿಸುವ ಟಿ.ವಿ., ರೇಡಿಯೊ,ಸಿನಿಮಾ,ಡಿ.ವಿ.ಡಿ., ಇತ್ಯಾದಿಗಳಾಗಿರಬಹುದು, ಯಾವುದೆ ವಾಹನವಾಗಿರಬಹುದು.ವಿಜ್ಞಾನಿಗಳಂತು ತಮ್ಮ ಸೃಜನಾತ್ಮಕ ಚಿಂತನೆಗಳಿಂದಾಗಿ ನಿತ್ಯವೂ ನವನವೀನ ಸಂಶೋದನೆಗಳು ಅಥವಾ ಆವéಿಷ್ಕಾರಗಳನ್ನು ಮಾಡುತ್ತಲೇ ಇದ್ದಾರೆ. ಸೃಜನಾತ್ಮಕ ಚಿಂತನೆಗಳಿಂದ ವಿಜ್ಞಾನಿಗಳಷ್ಟೇ ಅಲ್ಲದೆ ಸಾಹಿತಿಗಳು,ಕಲೆಕಾರರು, ಶಿಲ್ಪಿಗಳು ವೃತ್ತಿಪರರು,ನಿದರ್ೇಶಕರು ಇನ್ನಿತರರು ತಿಳಿದೊ ತಿಳಿಯದೆಯೊ ಹೊಸತನ್ನು ನೀಡುತ್ತಿದ್ದಾರೆ, ಈ ಬಗೆಯ ಚಿಂತನೆಗಳಿಗೆ ಅಪಾರ ಕಲ್ಪನಾಶಕ್ತಿ ಬೇಕಾಗುತ್ತದೆ ಅಥವಾ ವೃದ್ಧಿಸಬೇಕಾಗುತ್ತದೆ. ಎಡಿಸನ್ನನು ವಿಧ್ಯುತ್ ದೀಪವನ್ನು ಕಂಡು ಹಿಡಿದಿದ್ದುದು ಹೀಗೆಯೆ ಅಲ್ಲವೆ ? ಚಿಂತನೆಗಳಿಂದ ಕೇವಲ ಆವಿಷ್ಕಾರಗಳು ಹಾಗು ಸಂಶೋಧನೆಗಳಷ್ಟೆ ಅಲ್ಲದೆ ಕಲೆ, ಸಾಹಿತ್ಯ, ಸಂಗೀತ ಇತ್ಯಾದಿ ಕ್ಷೇತ್ರಗಳು ಸಹಾ ಅಭಿವೃದ್ಧಿಗೊಂಡಿದೆ.
ಸೃಜನಾತ್ಮಕ ಆವಿಷ್ಕಾರಗಳು ಪೂರ್ಣವಾಗಿ ನವೀನವಾಗಿರಬಹುದು, ಅಥವಾ ಹೂಸ ಬಗೆಯಲ್ಲಿ ನಿರೂಪಿಸಿರಬಹುದು. ಈ ಬಗೆಯ ಚಿಂತನೆಯಲ್ಲಿ ಹಲವಾರು ಬಗೆಯಲ್ಲಿ ಪರಿಹಾರ ಶೋಧಿಸುತ್ತಾರೆ, ಇದಕ್ಕಾಗಿ ತರ್ಕಯುತವಾಗಿ ಅಥವಾ ಅಸಂಬದ್ಧವಾದ ವಿಧದಲ್ಲಿಯು ಸಂಶೋಧನೆ ಹಾಗು ಆವಿಷ್ಕಾರ ಮಾಡಲಾಗುತ್ತದೆ. ಈ ವಿಧದ ಚಿಂತನೆಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೆ ನಿಯಮತೀತರಾಗುತ್ತಾರೆ, ಈ ಬಗೆಯ ಚಿಂತನೆಯಲ್ಲಿ ಕಲ್ಪನೆಯು ಯತೇಚ್ಚವಾಗಿ ಬಳಕೆಯಾಗುತ್ತದೆ, ಕೆಲವೋಮ್ಮೆ ಇಲ್ಲಿ ಇರುವಂತಹ 2 ಆಥವಾ 3ರನ್ನು ಸಂಯೋಜಿಸಿ ಹೂಸತನ್ನು ಸೃಷ್ಟಿಸುತ್ತಾರೆ, ಅಥವಾ ಎರ್ರಬಿರ್ರಿಯಾಗಿ ಜೋಡಿಸಿ ಹೋಸತನ್ನು ಸೃಷ್ಟಿಸುತ್ತಾರೆ, ಅಥವಾ ಇರುವುದರಲ್ಲಿ ಕೆಲವೂಂದನ್ನು ಕತ್ತರಿಸಿ ಹೋಸತು ಸೃಷ್ಟಿಸುತ್ತಾರೆ, ಅಥವಾ ಪರ್ಯಾಯ ಚಿಂತನೆಯ ಬಳಕೆಯಿಂದಲೂ ಹೋಸತನವನ್ನುಂಟು ಮಾಡುತ್ತಾರೆ ,ಅಥವಾ ತೀರ ವಿರುದ್ಧವಾಗಿ ಚಿಂತನೆ ಮಾಡಿ ಹೋಸತನ ಪ್ರದ್ರಶರ್ಿಸುತ್ತಾರೆ, ಅಥವಾ ವಿಸ್ತರಿಸಿ ,ವ್ಯಾಖ್ಯಾನಿಸಿ ಸೃಜನಾತ್ಮಕತೆಯನ್ನು ಪ್ರದಶರ್ೀಸುತ್ತಾರೆ.
2.ವಿಮಶರ್ಾತ್ಮಕ ಚಿಂತನೆ: ವಿಚಾರಶೀಲರು,ಸತ್ಯಾನ್ವೇಷೀಗಳು, ಪತ್ತೇದಾರರು, ಟೀಕಕಾರರು, ವೈಜ್ಞಾನಿಕ ಮನೋಭಾವದವರು ಇನ್ನಿತರರು ಈ ಬಗೆಯ ಚಿಂತನೆಯನ್ನು ಹೆಚ್ಚಾಗಿ ಮಾಡುವರು. ಈ ಬಗೆಯ ಚಿಂತನೆಯಿಂದಾಗಿ ಸತ್ಯ ಹೊರಹೊಮ್ಮುವುದರಿಂದಾಗಿ ಮನುಕುಲಕ್ಕೆ ಆಪಾರ ಒಳಿತಾಗುತ್ತಾ ಇದೆ. ಇಲ್ಲಿ ಸತ್ಯವನ್ನು ಮಿಥ್ಯದಿಂದ ಬೇರ್ಪಡಿಸುತ್ತಾರೆ, ನಿಜಕ್ಕೂ ಬಹಳಷ್ಟು ಜನರು ನಿಸ್ಪಕ್ಷಪಾತಿಗಳಾಗಿರುವುದಿಲ್ಲ, ಅವರು ತಾವು ನೋಡಿದ್ದನ್ನು, ಕೇಳಿದ್ದನ್ನು, ಯೋಚಿಸಿದನ್ನು , ಹಾಗು ನಂಬಿದ್ದನ್ನೇ ನಿಜವೆಂದು ಸಾಧಿಸಲು ಹೋಗುತ್ತಾರೆ, ಅಂತಹವರು ಎಂದಿಗೂ ವಿಮಶರ್ಾತ್ಮಕ ಚಿಂತಕರಾಗಲು ಸಾಧ್ಯವಿಲ್ಲ, ಎಕೆಂದರೆ ಅವರು ತೆರೆದ ಮನಸ್ಕರಾಗಿರುವುದಿಲ್ಲ, ಅವರು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ, ಅಷ್ಟೇ ಏಕೆ ಪರರ ಚಿಂತನೆಗೆ ಗೌರವವೂ ನೀಡುವುದಿಲ್ಲ, ತಾವು ಕಲ್ಪಿಸಿದ್ದೇ ಅಥವಾ ನಂಬಿರುವುದೆ ಸತ್ಯ ಹೊರತು ಅನ್ಯಥಾ ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ, ಅದರೆ ಸತ್ಯವು ಸುಂದರವಾಗಿರಬೇಕೇಂದೇನೂ ಇಲ್ಲ, ಅದು ಕುರೂಪವೂ ಅಗಿರುತ್ತದೆ, ಸತ್ಯವೂ ಶುಭವಾಗಿರಬೇಕೆಂದೇನೂ ಇಲ್ಲ, ಅದು ಅಶುಭವೂ ಅಗಿರಬಲ್ಲದು, ಸತ್ಯವೂ ಸಿಹಿಯಾಗಿರ ಬೇಕೆಂದೇನೂ ಇಲ್ಲ, ಅದು ಕಹಿಯಾಗಿರಬಹುದು, ಹೀಗೆ ಸರಿಯಾಗಿ ಪರೀಕ್ಷೀಸಿತ್ತಾ, ಸಂಶೋಧಿಸುತ್ತಾ, ವಿಮಶರ್ಾವಾದಿಗಳು ಮಿಥ್ಯದಿಂದ ಸತ್ಯವನ್ನು ಬೇರ್ಪಡಿಸುತ್ತಾರೆ.ಹೀಗಾಗಿ ಸತ್ಯವೆಂದರೆ ತೋರಿಕೆಗೆ ಕಾಣಿಸುವದಷ್ಟೇ ಅಲ್ಲ ,ಅದರಾಚೇಗೂ ಅ(ನಾ)ವರಣ ಜ್ಞಾನವಿದೆ, ಎಂದು ವಿಮರ್ಶಕರು ಪರೀಕ್ಷೀಸಿ ,ವಗರ್ೀಕರಿಸಿ, ವಿಭಾಜಿಸಿ ಸತ್ಯವನ್ನು ನೀಡುತ್ತಾರೆ.
ವಿಮಷಾತ್ಮಕ ಚಿಂತಕರು ತೆರೆದ ಮನಸ್ಕರಾಗಿರ ಬೇಕಾಗುತ್ತದೆ, ಅವರು ಬೌದ್ಧಿಕವಾಗಿ ಸ್ವತಂತ್ರರಾಗಿರ ಬೇಕಾಗುತ್ತದೆ, ಅವರಲ್ಲಿ ಪ್ರಶ್ನಿಸುವ ಸಾಮರ್ಥವಿರಬೇಕಾಗುತ್ತದೆ, ಸಾಕ್ಷೀಯನ್ನು ಪರಿಗಣಿಸಿ ನಿರ್ಣಯಗಳನ್ನು ತಗೆದುಕೊಳ್ಳ ಬೇಕಾಗುತ್ತದೆ, ಅವರು ವಿಷಯಗಳಲ್ಲಿ ಸಂಪರ್ಕವನ್ನು ಅಥವಾ ಸಂಪರ್ಕರಹಿತತೆಯನ್ನು ಸ್ಪಷ್ಟವಾಗಿ ತಿಳಿಯ ಬೇಕಾಗುತ್ತದೆ, ಅವರು ಬಹುಷಃ ಇದೇ ಹಾಗು ನಿಖರವಾಗಿ ಇದೇ ಎಂಬಂತಹದರಲ್ಲಿ ವ್ಯತ್ಯಾಸ ತಿಳಿಯುವ ಸಾಮಾರ್ಥವಂತರಾಗಬೇಕಾಗುತ್ತದೆ, ಅವರು ವಾಸ್ತವಗಳಿಂದ ಅಭಿಪ್ರಾಯಗಳನ್ನು ನಿದರ್ಾಕ್ಷೀಣ್ಯವಾಗಿ ತೆಗೆಯುವಂತಹವರಾಗಿರಬೇಕು, ಅವರಲ್ಲಿ ಹೇರಳವಾದ ಶಬ್ದಭಂಡಾರವಿದ್ದರೆ ಒಳಿತು, ಅವರು ವಾಗ್ಮಿಗಳಾಗಿದ್ದರೆ ಚೆನ್ನ. ಈ ಬಗೆಯ ಗುಣಗಳಿದ್ದವರು ವಿಮಷಾತ್ಮಕ ಚಿಂತಕರಾಗುತ್ತಾರೆ.
3. ಪರಿಣಾಮಾತ್ಮಕ ಚಿಂತನೆ: ಈ ಬಗೆಯ ಚಿಂತನೆಯನ್ನು ಸಮಸ್ಯೆಗಳ ಪರಿಹರಿಸಲು ಬಳಸುತ್ತಾರೆ, ಈ ಬಗೆಯ ಚಿಂತನೆಯನ್ನು ಹೆಚ್ಚಾಗಿ ವೈದ್ಯಕೀಯದಲ್ಲಿ, ತರ್ಕನೈಪುಣ್ಯತೆಯಲ್ಲಿ,ಗಣಿತದಲ್ಲಿ,ಹಾಗು ವೈಜ್ಞಾನಿಕ ಸಂಶೋಧನೆಯಲ್ಲಿ ಬಳಸುತ್ತಾರೆ. ಈ ಚಿಂತನೆಯು ನಿಖರಿತ ತರ್ಕ ಆಧಾರಿತವಾಗಿರುತ್ತದೆ, ಉದಾಹರಿಸುವುದಾದರೆ ಚೀನಾದ ಲೆಖ್ಖಿಗನೊಬ್ಬನು ಸೂರ್ಯನಿಂದಾಗುವ ನೆರಳನ್ನು ಗಮನಿಸಿ ಆ ಆಧಾರದಿಂದಲೇ ರೇಖಗಣಿತದ ಸೂತ್ರಗಳ ಮೂಲಕವೇ ಆತನು ಸೂರ್ಯ ಹಾಗು ಭೂಮಿಯ ಅಂತರವನ್ನು ತಿಳಿಸಿದ್ದನು. ವೈದ್ಯ ವಿಜ್ಞಾನಿಗಳು ರೋಗ ಲಕ್ಷಣ, ರೋಗಕ್ಕೆ ಕಾರಣ, ಆರೋಗ್ಯ, ಹಾಗು ಔಷಧಿಗಳ ಬಗ್ಗೆ ಪ್ರಯೋಗಿಕ ಚಿಂತನೆಯನ್ನು ತರ್ಕಬದ್ಧವಾಗಿ ನಡೆಸಿ ರೋಗವನ್ನು ಪರಿಣಾಮಾತ್ಮಕವಾಗಿ ಹೋಗಲಾಡಿಸುತ್ತಿರುವರು. ಪರಿಣಾಮಾತ್ಮಕ ಚಿಂತನೆಯಲ್ಲಿ ಒಂದು ಸಮಸ್ಯೆಗೆ ಹಲವಾರು ರೀತಿಯಲ್ಲಿ ಪರಿಹಾರಗಳನ್ನು ನೀಡಿ ಅದರಲ್ಲಿ ಅತ್ಯುತ್ತಮವಾದುದ್ದನ್ನೆ ಆಯ್ಕೆ ಮಾಡುತ್ತಾರೆ. ಈ ಬಗೆಯ ಚಿಂತನೆಯಲ್ಲಿ ಸಮಸ್ಯೆಗೆ ಹಲವಾರು ಕಾರಣಗಳನ್ನು ಕಂಡುಹಿಡಿಯಬೇಕಾಗುತ್ತದೆ, ಹಾಗೆಯೆ ಸಮಸ್ಯೆಗೆ ಹಲವಾರು ವಿಧದ ಪರಿಹಾರ ಮಾರ್ಗಗಳನ್ನು ಕಂಡಿಹಿಡಿಯಬೇಕಾಗುತ್ತದೆ.
ಒಂದೇ ವಿಷಯವಸ್ತು , ಅದರೆ ಚಿಂತನೆಯ ವೈವಿಧ್ಯತೆ ಅನೇಕ
ಒಂದೇ ಚಿಂತನೆಯ ವಿಷಯವು ವಿವಿದ ಬಗೆಯ ಚಿಂತಕರಲ್ಲಿ ವೈವಿಧ್ಯಮಯ ಚಿಂತನೆಗೆ ದಾರಿ ಮಾಡಿಕೊಡುತ್ತದೆ, ಉದಾಹರಿಸುವುದಾದರೆ
1. ಒಬ್ಬ ಪಾಪಿಗೆ ದೀಪವೂ ದ್ವಂಸಕಾರಿ ಯೋಚನೆಗಳನ್ನು ತರಿಸಬಹುದು
2. ಅದೇ ಸಮಾನ್ಯ ದೀಪವು ಎಡಿಸನ್ನನಿಗೆ ವಿದ್ಯುತ್ ದೀಪ ಕಂಡು ಹಿಡಿಯಲು ಸಹಕಾರಿಯಾದರೆ,
3. ಐನ್ ಸ್ಟೈನ್ ನಂತಹ ವಿಜ್ಞಾನಿಗೆ ದೀಪವು ಬೆಳಕಿನ ಸ್ವರೂಪದ ಬಗ್ಗೆ ಚಿಂತಿಸಲು ಪ್ರೇರೆಪಣೆ ನೀಡಿ ಬೆಳಕು 'ಕಣ' ಮಾತ್ರವಲ್ಲ ಅದು 'ಅಲ ೆಯು' ಸಹಾ ಎಂದು ಪ್ರತಿಪಾದಿಸಿದನು
,4. ಒಬ್ಬ ಯೋಗಿಗೆ ದೀಪವು ಧ್ಯಾನದ ವಸ್ತುವಾಗಿ ಕೇವಲ ಎಕಾಗ್ರತೆಯನ್ನು ವೃದ್ಧ್ಧಿಸಿ ದಿವ್ಯ ದೃಷ್ಟಿಗೆ ಸಹಾಯಕಾರಿಯಾಯಿತು,
5. ಮಗುವನ್ನು ಕಳೆದುಕೊಂಡತಹ ಕಿಸಗೋತಮಿಯು ಬುದ್ದರ ಬಳಿಗೆ ಬಂದಾಗ ಬುದ್ಧರು ಆಕೆಗೆ ಸಾಸುವೆಯನ್ನು ಕೇಳಿ ಆಕೆಯ ಮನವನ್ನು ಶಾಂತಗೊಳಿಸಿದ್ದು ಎಲ್ಲರಿಗೂ ತಿಳಿದೆ ಇದೆ, ಅದರೆ ಇದೇ ಕಿಸಾಗೋತಮಿಯು ಒಮ್ಮೆ ದೀಪಗಳನ್ನು ನೋಡುತ್ತಾ ಹೀಗೆ ಧ್ಯಾನಿಸಿದಳು "ಈ ದೀಪಗಳಂತೆ ಲೋಕದಲ್ಲಿರುವ ಜೀವಿಗಳು ಸಹಾ; ಹೇಗೆಂದರೆ ಕೇಲವೊಂದು ಪ್ರಜ್ವಲಿಸಿ ಉರಿಯುತ್ತಿರುತ್ತವೆ, ಕೆಲವು ಮಿಣಕುಮಿಣೆನ್ನುತ್ತಾ ಉರಿಯುತ್ತವೆ, ಅದರೆ ನಿಬ್ಬಾಣವನ್ನು ಸಾಧಿಸಿರುವವರು ಎಂದಿಗೂ ಕಾಣಲಾರರು. ಅಂತಹ ಅಮರತ್ವವನ್ನು ಅರಿಯುವ ಏಕ ದಿನವೂ ಪರರ ನೂರು ವರ್ಷದ ಜೀವನಕ್ಕಿಂತ ಉತ್ತಮವಾದದು..." ಎಂದು ಚಿಂತನೆ ಮಾಡುತ್ತಾ ಆಕೆಯು ಜ್ಞಾನೋದಯ ಪ್ರಾಪ್ತಿಗಳಿಸಿ ಪರಮಾರ್ಥವನ್ನು ಸಾಧಿಸಿದಳು.
6.ಮಹಾನ್ ಭವಿಷ್ಯಕಾರ ನಾಷ್ಟ್ರೋಡಮಸ್ ದೀಪವನ್ನು ವೀಕ್ಷಿಸುತ್ತಲೇ ಅಪಾರ ಭವಿಷ್ಯವಾಣಿಗಳನ್ನು ಕಂಡು ಅದನ್ನು ರಚಿಸಿ ಸುಖ್ಯಾತನಾದನು.
7.ಚಿತ್ರಕಾರನಿಗೆ ದೀಪವು ರಚಿಸುವುದಕ್ಕಾಗಿ ಉತ್ತಮ ಕಲಾಕೃತಿಯ ವಸ್ತುವಾಗಿರುತ್ತದೆ.
8.ವ್ಯಾಪಾರಿಗೆ ದೀಪವು ವಿಕ್ರಯದ ಸಾಮಾಗ್ರಿಯಾಗಿ ಕಂಡು ಅದರ ಕುರಿತು ಲಾಭ ನಷ್ಟಗಳನ್ನು ಚಿಂತಿಸಬಹುದು.
9. ವಿಮರ್ಷಕರು ಬೆಳಕು ಅಥವಾ ಅಗ್ನಿಯನ್ನು ದೇವರಲ್ಲ ಎಂದು ಚಿಂತಿಸಬಹುದು.
10. ಸೃಜನಾತ್ಮಕ ವೈಜ್ಙಾನಿಕರು ಹೂಸ ಹೂಸ ರೀತಿಯಲ್ಲಿ ಬೆಳಕನ್ನು ಉತ್ಪಾದಿಸುವುದು ಹೇಗೆ ಎಂದು ಚಿಂತನೆ ನಡೆಸಬಹುದು. ಹೀಗೆಯೇ ಇನ್ನು ಅನೇಕ ರೀತಿಯ ಚಿಂತಕರು ತಮ್ಮ ಶೈಲಿಯಲ್ಲಿ ವೈವಿದ್ಯಮಯವಾಗಿ ಚಿಂತನೆಮಾಡಬಹುದು.
ಚಿಂತನೆ ಹೇಗೆ ?
ಚಿಂತನೆಯನ್ನು ಸ್ವ-ಅವಲೋಕನದಿಂದ ಆರಂಭಿಸೋಣ.
ಸ್ವ-ಅವಲೋಕನ:ಅಂದರೆ ವಿಮರ್ಷತ್ಮಾಕವಾಗಿ ಸ್ವ-ಕಾರ್ಯಗಳನ್ನು , ಸ್ವ-ವಾಚವನ್ನು ಮತ್ತು ವಿಶೇಷವಾಗಿ ಸ್ವ-ಯೋಚನೆಗಳನ್ನು ವೀಕ್ಷಿಸಿವುದು. ಸ್ವ-ಅವಲೋಕನವು ಸುಲಭವಾದುದು, ಅದರೆ ಅನುಷ್ಠಾನವೇ ಕಠಿಣವಾದುದು, ಇದರ ಬಗ್ಗೆ ಬುದ್ಧ ಭಗವಾನರು ರಾಹುಲನಿಗೆ ಹೇಳಿದ ಸುತ್ತದಲ್ಲಿ ಹೀಗಿದೆ:
ಬುದ್ಧಭಗವಾನರು: ರಾಹುಲ ದರ್ಪಣವು ಏತಕ್ಕಾಗಿ ?
ರಾಹುಲ: ಭಗವಾನ್ ಪ್ರತಿಬಿಂಬಿಸಿವುದಕ್ಕಾಗಿ ..
ಭಗವಾನರು: ಅದೇ ರೀತಿ ರಾಹುಲ ದೇಹದಿಂದಾಗುವ ಕಾರ್ಯಗಳ ಬಗ್ಗೆ, ಮಾತಿನ ಚಟುವಟಿಕೆಯ ಬಗ್ಗೆ, ಹಾಗು ಮನಸ್ಸಿನ ಪ್ರಕ್ರಿಯೆಯ ಬಗ್ಗೆ ಪುನರಾವತರ್ಿತವಾಗಿ ಪ್ರತಿಬಿಂಬಿಸಬೇಕು. ಹೇಗೆಂದರೇ ಯಾವುದಾದರೂ ಕಾರ್ಯ ಮಾಡುವ/ಮಾತನಾಡುವ/ಯೋಚಿಸುವ ಮುನ್ನ ಹೀಗೆ ಯೋಚಿಸಬೇಕು: "ಈ ನನ್ನ ಶಾರೀರಿಕ ಕಾರ್ಯ ದಿಂದ/ಮಾತಿನಿಂದ /ಯೋಚನೆಯಿಂದ ನನಗೆ ಅಹಿತವಾಗುವುದೇ ಅಥವಾ ಪರರಿಗೆ ನೋವಾಗುವುದೇ ? ಹಾಗೇನಾದರೂ ಕಂಡು ಬಂದರೆ ಆ ಕೃತ್ಯವಾಗಲಿ, ಮಾತಾಗಲಿ ಅಥವಾ ಯೋಚನೆಯಾಗಲಿ ವಜರ್ಿಸಬೇಕು...ಹಾಗಲ್ಲದೆ ಒಳಿತಾಗುತ್ತಿದ್ದರೆ ಮುಂದುವರೆಸಬಹುದು."
ಹಾಗೇಯೆ ಯಾವುದಾದರೂ ಕಾರ್ಯ ಮಾಡುತ್ತಿರುವಾಗ/ಮಾತನಾಡುತ್ತಿರುವಾಗ/ಯೋಚಿಸುತ್ತಿರುವಾಗ ಹೀಗೆಯೆ ಯೋಚಿಸಬೇಕು: "ಈ ನನ್ನ ಶಾರೀರಿಕ ಕಾರ್ಯ ದಿಂದ/ಮಾತಿನಿಂದ /ಯೋಚನೆಯಿಂದ ನನಗೆ ಅಹಿತವಾಗುತ್ತಿದೆಯೆ ಅಥವಾ ಪರರಿಗೆ ನೋವಾಗುತ್ತಿದೆಯೆ ? ಹಾಗೇನಾದರೂ ಕಂಡು ಬಂದರೆ ಆ ಕೃತ್ಯವಾಗಲಿ, ಮಾತಾಗಲಿ ಅಥವಾ ಯೋಚನೆಯಾಗಲಿ ವಜರ್ಿಸಬೇಕು... ಹಾಗಲ್ಲದೆ ಒಳಿತಾಗುತ್ತಿದ್ದರೆ ಮುಂದುವರೆಸಬಹುದು."
ಹಾಗೇಯೆ ಯಾವುದಾದರೂ ಕಾರ್ಯ ಮಾಡಿದ ನಂತರ ್ನ ಹೀಗೆ ಯೋಚಿಸಬೇಕು: "ಈ ನನ್ನ ಶಾರೀರಿಕ ಕಾರ್ಯ ದಿಂದ/ಮಾತಿನಿಂದ /ಯೋಚನೆಯಿಂದ ನನಗೆ ಅಹಿತವಾಯಿತೆ ಅಥವಾ ಪರರಿಗೆ ನೋವಾಯಿತೆ ? ಹಾಗೇನಾದರೂ ಕಂಡು ಬಂದರೆ ಆ ಕೃತ್ಯವಾಗಲಿ, ಮಾತಾಗಲಿ ಅಥವಾ ಯೋಚನೆಯಾಗಲಿ ವಜರ್ಿಸಬೇಕು... ಹಾಗಲ್ಲದೆ ಒಳಿತಾಗುತ್ತಿದ್ದರೆ ಮುಂದುವರೆಸಬಹುದು."
"ರಾಹುಲ ಹೀಗೆ ನೀನು ಸುಶಿಕ್ಷೀತನಾಗಿ ಸಂಕಲ್ಪಿಸಿಕೊಳ್ಳಬೇಕು 'ನಾನು ನಿರಂತರ ಶಾರೀರಿಕವಾಗಿ , ವಾಚಿಕವಾಗಿ ಹಾಗು ಯೋಚನೆಗಳಲ್ಲು ಪುನರಾವತರ್ಿತ ಪ್ರತಿಬಿಂಬಿಸುವಿಕೆಯಿಂದ ಪರಿಶುದ್ಧಿ ಮಾಡಿಕೋಳ್ಳುತ್ತಿರುವೆನು.' ಹೀಗೆ ನೀನು ಸುಶಿಕ್ಷಿತನಾಗಬೇಕು.".
ಅದನ್ನು ಅಲಿಸಿದಂತಹ ರಾಹುಲ ಆನಂದಯುತ ಧನ್ಯತೆಯ ಭಾವ ವ್ಯಕ್ತಪಡಿಸಿದನು.
ವ್ಯಕ್ತಿತ್ವ ವಿಕಾಸದ ಚಿಂತನೆಗಳನ್ನು ಹೀಗೂ ಮಾಡಬಹುದು:
"ಸಮಾನ್ಯವಾಗಿ ನನ್ನ ಬಗ್ಗೆ ನನಗೆ ಏನು ತಿಳಿದಿದೆ ?"
"ಯಾವುದಕ್ಕಾಗಿ ನಾನು ಪ್ರಾಧಾನ್ಯತೆ ನೀಡುತ್ತಿದ್ದೇನೆ ?ಅವು ಬೆಲೆಬಾಳುವಂತಹುದೇ ? ಮೌಲ್ಯಯುತವಾದುದೆ ಅಥವಾ ಮೌಲ್ಯರಹಿತವಾದುದುರಲ್ಲಿ ತಲ್ಲಿನನಾಗಿರುವನೇ ?"
"ನಾನು ಎಷ್ಟರಮಟ್ಟಿಗೆ ಬುದ್ದಿವಂತ ? ನಾನು ಯಾವ ಯಾವ ರಂಗಗಳಲ್ಲಿ ಅಜ್ಞಾನಿಯಾಗಿರುವೆನು ?"
"ನನ್ನ ಸಮಸ್ಯೆಗಳಿಗೆ ಕಾರಣಗಳೇನು ?"
"ಸಮಸ್ಯೆಗಳನ್ನು ಎಷ್ಟು ವಿಧಗಳಿಂದ ದೂರಿಕರಿಸಬಹುದು ?"
"ನನಗಿರುವ ದೌರ್ಬಲ್ಯಗಳೇನು ?"
"ನನ್ನಲ್ಲಿರುವ ಶಕ್ತಿ ಸಮಾಥ್ರ್ಯಗಳಾವುವು ?"
"ನನಗೆ ನಾನೇ ಶತ್ರುವಾಗಿರುವೇನೆ ?ಹೇಗೆ ?"
"ನನ್ನ ಅವನತಿಗೆ ಪರರಿಗಿಂತ ನಾನೇ ಹೇಗೆ ಅಡ್ಡಿ ಯಾಗಿರುವೆನು ?"
"ನನ್ನ ಬಗ್ಗೆ ನನಗೆ ಎಷ್ಟು ನಂಬಿಕೆಯಿದೆ ?"
"ನನ್ನಲ್ಲಿ ಪ್ರಯತ್ನಶೀಲತೆಯ ಗರಿಷ್ಠತೆ ಎಷ್ಟೀದೆ ?"
"ನನ್ನಲ್ಲಿ ಅಲಕ್ಷತೆಗೆ ಮೀರಿದ ಜಾಗೂರಕತೆ ಇದೆಯೆ ?"
"ನಾನು ಯಾವ ಯಾವ ವಿಷಯಗಳಲ್ಲಿ ಎಕಾಗ್ರತೆ ಸಹಜವಾಗಿ ಹೊಂದುತ್ತೇನೆ ? ಹಾಗು ಒಂದೇ ವಿಷಯದಲ್ಲಿ ಎಷ್ಟು ಕಾಲ ಎಕಾಗ್ರತೆಯಲ್ಲಿ ಇರುತ್ತೇನೆ ?ಎಷ್ಟು ವೇಗವಾಗಿ ಏಕಾಗ್ರತೆ ಹೂಂದುತ್ತೇನೆ ?"
"ನಾನು ಎಷ್ಟು ಸರಿಯಾಗಿ ಸತ್ಯಗಳನ್ನು ಅರ್ಥಮಾಡಿಕೋಳ್ಳುತ್ತೇನೆ ? ನನ್ನಲ್ಲಿ ವಿಮಶರ್ೆಮಾಡಿಕೊಳ್ಳುವ ಮನಸ್ಥಿತಿಯು ಉತ್ತಮವಾಗಿದೆಯೆ ?"
ಹೀಗೆಯೆ ಹಲವಾರು ವಿಧಗಳಿಂದ ಚಿಂತನೆ ಮಾಡುತ್ತಾ ಚಿಂತನಾ ಶಕ್ತಿಯನ್ನು ವೃದ್ಧಿಗೋಳಿಸ ಬೇಕು. ಅದೇ ರೀತಿ ಅರೋಗ್ಯದ ಬಗ್ಗೆ, ಐಶ್ವರ್ಯದ ಬಗ ್ಗೆ , ಮನಶ್ಶಾಂತಿಯ ಬಗ್ಗೆ ,ಸಮಾಜದ ಬಗ್ಗೆಯು ಚಿಂತಿಸ ಬೇಕು.ಹೀಗೆ ಚಿಂತಿಸಿದಾಗ , ನಮ್ಮ ಯಶಸ್ಸಿನ ಶಕ್ತಿ ಹಾಗು ಸೋಲಿಗೆ ಇರುವ ದೌರ್ಬಲ್ಯಗಳು ಗೋತ್ತಾಗುವವು. ಹಾಗೆಯೆ ನಮ್ಮ ಲಾಭ-ನಷ್ಟಗಳಿಗೇ ಕಾರಣ ಮತ್ತು ಪರಿಹಾರ ದೊರೆಯುವುದು. ಆಗ ನಿಂದಾತೀತವಾದ ಜೀವನ ಆಚರಿಸಿ ಸುಖಯುತ ಜೀವನ ನಡೆಸುವೆವು. ವೃತ್ತಿಪರರು ತಮ್ಮ ವೃತ್ತಿಯಲ್ಲಿ ಹಾಗು ಸಂಶೋಧನೆಯಲ್ಲಿ ಚಿಂತನೆ ತೀವ್ರಗೊಳಿಸಿದಾಗ ಬಹಳಷ್ಟು ಫಲವನ್ನು ಪಡೆಯಬಹುದು.
ಚಿಂತನೆಗೆ ಸಹಾಯ ಮಾಡುವಂತಹುವು ಯಾವುವು ?
ಗಮನ ಹರಿಸುವಿಕೆ, ನೆನಪು, ನಿರಂತರ ಎಕಾಗ್ರತೆ, ವಿಷ್ಲೇಶಿತವಾಗಿ,ವಿಶಾಲವಾಗಿ ಹೋಗುವಿಕೆ, ಹಲವು ಬಗೆಯಲ್ಲಿ ಪ್ರಶ್ನಿಸುವಿಕೆ, ಸಂಬಂಧಪಡುವ ಪ್ರತಿ ಮಾಹಿತಿಯ ಬಗ್ಗೆ ಯೋಚಿಸುವಿಕೆ, ಹೊಸತನ, ಕಲ್ಪನಶಕ್ತಿಯ ಬಳಕೆ ಅಂದರೆ ಚಿತ್ರಗಳ, ಚಲನಚಿತ್ರಗಳ, ರೇಖಾಚಿತ್ರಗಳ, ನಕ್ಷೇಯ ,ವರ್ಣಗಳ ಸಮ್ಮಿಲನ ಇತ್ಯಾದಿಗಳು ಚಿಂತನೆಗೆ ಸಹಾಯ ಮಾಡುವವು.
ಪರಿಣಾಮಾತ್ಮಕ ಚಿಂತನೆೆಯಲ್ಲಿ ಸಮಸ್ಯೇಯ ಮೂಲಕ್ಕೆ ಹೋಗುವುದು ಹಾಗು ಕಾರಣಗಳನ್ನು ಕಂಡುಹಿಡಿದು , ಚಿಂತನೆಯಲ್ಲಿ ಹೇಗೆ ಸಮಸ್ಯೆ ಪರಿಹರಿಸಬಹುದು ಎಂದು ಅನೇಕ ರೀತಿಯಲ್ಲಿ ಯೋಚಿಸಬೇಕು ತರ್ಕಬದ್ದವಾಗಿ ಯೋಚಿಸದಂತೆಲ್ಲಾ ಹಾಗು ಪರಿಸ್ಥಿತಿಯ ಪಲಿತಾಂಶವನ್ನು ಲೆಕ್ಕಚಾರ ಹಾಕಿದಂತೆಲ್ಲಾ ಯೋಗ್ಯ ನಿಧರ್ಾರ ಸಿಗುವುದು,ಹಾಗೇಯೇ ಯಾರು ? ಯಾರಿಗೆ ? ಯಾರದ್ದು ? ಏನು ? ಏಕೆ? ಏಕಿಲ್ಲ ? ಯಾವಾಗ ?ಎಲ್ಲಿ ? ಹೇಗೆ ?ಎಷ್ಟು ? ಇತ್ಯಾದಿ ಪ್ರಶ್ನೆಗಳಿಂದ ಚಿಂತನೆಯು ವಿಕಾಸವಾಗುವುದು.ಇಡೀ ಮಾಹಿತಿ ವ್ಯವಸ್ಥಿತವಾಗಿ ಕಲೆಹಾಕಿದಾಗ ಹಾಗು ಹೊಸ ,ಹೊಸ ಐಡಿಯಾಗಳಿಂದಾಗಿ ಪ್ರಕ್ರಿಯೆಯು ಇನ್ನು ಚೆನ್ನಾಗಿ ಮೂಡಿಬರುವುದು.
ಯಾವ ಯೋಚನೆಗಳನ್ನು ಮಾಡಬೇಕು ಹಾಗು ಯಾವ ಯೋಚನೆಗಳನ್ನು ಮಾಡಬಾರದು ?
ಸ್ವಾರ್ಥಯುತ, ಕೋಪದ, ಅಸೂಯೆಯ, ಕ್ರೌರ್ಯದ, ಸಂಶಯದ,ಸೋಮಾರಿತನದ,ಚಿಂತೆಯ, ಭಯದ, ಮೌಡ್ಯಭರಿತ ,ಈ ರೀತಿಯ ಯೋಚನೆಗಳನ್ನು ಮಾಡಲೇಬಾರದು. ಎಕೆಂದರೇ ಈ ರೀತಿಯ ಯೋಚನೆಗಳು ಮಾನಸಿಕ ಕಲ್ಮಶಗಳನ್ನು ಹೆಚ್ಚಿಸಿ ಮಾನಸಿಕ ಒತ್ತಡಕ್ಕೆ ಗುರಿ ಮಾಡುವುದಷ್ಟೇ ಅಲ್ಲದೆ, ಸಾಮಾಜಿಕವಾಗಿ ದುಃಖದ ಸನ್ನಿವೇಶವನ್ನು ತರಿಸುತ್ತದೆ, ಒಟ್ಟಾರೆ ಮಾನಸಿಕವಾಗಿಯು ದುರ್ಬಲನನ್ನಾಗಿ ಮಾಡಿ ಪರರಿಗೂ ಹಾಗು ತನಗೂ ಹಾನಿ ಮಾಡುತ್ತದೆ ಹೀಗಾಗಿ ಅವನ್ನು ಮಿಥ್ಯ ಚಿಂತನೆ ಎನ್ನುವರು.
ಈ ರೀತಿಯಲ್ಲದ, ಸಕಾರಾತ್ಮಕ ಯೋಚನೆಗಳಾದ ನಿಸ್ವಾರ್ಥಯುತ ಪರಿಶುದ್ಧ ಪ್ರೀತಿ, ಕೋಪವಿಲ್ಲದ ಸ್ನೇಹದ, ಅಭಿನಂದತ್ಮಾಕ ಪ್ರೀತಿಯ, ದಯೆಯ, ನಂಬಿಕೆಯ, ಪ್ರಯತ್ನಶೀಲತೆಗೆ ಪ್ರಚೋದಾತ್ಮಾಕ ಯೋಚನೆ, ಚಿಂತಾರಹಿತ ಶಾಂತತೆಯ ಯೋಚನೆ, ಭಯರಹಿತ ಧೈರ್ಯದ, ಜ್ಞಾನಭರಿತ ಯೋಚನೆಗಳನ್ನು ಮಾಡಿದಾಗ ಅವುಗಳಿದಾಗಿ ನಮಗೂ ಹಾಗು ಪರರಿಗೂ ಎಲ್ಲಾ ರೀತಿಯ ಮಂಗಳವಾಗುತ್ತದೆ.ಹೀಗಾಗಿ ಇವನ್ನು ಸಂಯಕ್ ಚಿಂತನೆ ಎನ್ನುತ್ತಾರೆ.
ಹೇಗೆ ಯೋಚಿಸುವರೊ ಹಾಗೆಯೇ ಆಗುವಿರಿ
ನಮ್ಮ ಯೋಚನೆಗಳಿಗೆ ಅದ್ಬುತವಾದ ಶಕ್ತಿಯಿದೆ, ನಮ್ಮ ಹಿಂದಿನ ಯೋಚನೆಗಳ ಪಲಿತಾಂಶವೇ ಇಂದಿನ ನಾವಿಗಿದ್ದೇವೆ, ಇಂದಿನ ಯೋಚನೆಗಳ ಪರಿಣಾಮವೇ ಮುಂದಿನ ನಾವು ಹಾಗು ನಮ್ಮ ಭವಿಷ್ಯವು ರಚಿತವಾಗುವುದು. ಅದ್ದರಿಂದ ನಮ್ಮ ಯೋಚನೆಗಳ ಬಗ್ಗೆ ಅಸಡ್ಡೆ ಬೇಡ, ಅಲಕ್ಷ ಬೇಡವೆ ಬೇಡ.ನಮ್ಮ ಯೋಚನೆಗಳಿಂದಾಗಿ ಮನೋಭಾವವು ನಿಮರ್ಾಣವಾಗುತ್ತದೆ, ಮನೋಬಾವದ ಆಧಾರದ ಮೇಲೆಯೇ ಸರ್ವ ಕಾರ್ಯವೂ ನಿಂತಿರುತ್ತದೆ. ನೀವು ಸೋಲುತ್ತಿರಿ ಎಂದು ಭಾವಿಸಿದರೆ ಖಂಡಿತವಾಗಿ ಸೋಲುವಿರಿ, ಜಯಿಸುತ್ತೇವೆ ಎಂಬ ಮನೋಭಾವವಿದ್ದರೆ ಖಂಡಿತವಾಗಿ ಜಯಕ್ಕೆ ಸಹಕಾರಿಯಾಗಬಲ್ಲದು, ಹಾಗೆಯೇ ಮನೋಬಾವದಿಂದಲೇ ಜಗತ್ತು ಸುಂದರವಾಗಿಯು ಅಥವಾ ಕುರೂಪವಾಗಿಯು ಕಾಣುವುದು, ಇಡೀ ಜಗತ್ತೇ ನಮ್ಮ ಮನಸ್ಸಿನಲ್ಲಿದೆ.ಯಾರು ಸದಾ ತನ್ನನ್ನು ಬಲಹೀನ ಎಂದು ಭಾವಿಸುತ್ತಾನೋ ಆತನು ಎಂದಿಗೂ ಬಲಿಷ್ಟನಾಗಲಾರ, ಅದರೆ ಯಾರಿಗೆ ತಾನು ಬಲಿಷ್ಟನೇಂದು ತಿಳಿದಿದೆಯೋ ಆತನು ಬಂಧನಗಳನ್ನು ಕತ್ತರಿಸಿ ಹಾಕುತ್ತಾನೆ, ಸ್ವತಂತ್ರನಾಗಿರುತ್ತಾನೆ. ಶಕ್ತಿಯೇ ಜೀವನದ ,ಭರವಸೆಯ, ಆರೋಗ್ಯದ ಹಾಗು ಬಿಡುಗಡೆಯ ಚಿನ್ಹೆಯಾಗಿದೆ, ಅದ್ದರಿಂದ ಶಕ್ತಿಯುತ ಯೋಚನೆಗಳಿಂದ ತುಂಬಿರೋಣ.ನಕಾರಾತ್ಮಕ ಯೋಚನೆಗಳನ್ನು ಉಂಟು ಮಾಡದೆ ಇರೋಣ .ನಾವು ನಮ್ಮ ಆದರ್ಶ ವ್ಯಕ್ತಿಗಳಂತೆಯೇ ಯೋಚಿಸಿದರೆ, ಅವರಂತೆಯೇ ಮನೋಭಾವವನ್ನು ವೃದ್ಧಿಸಿದರೆ, ಅವರಂತೆಯೇ ಕಾರ್ಯ ಮಾಡಿದರೆ ಖಂಡಿತವಾಗಿ ಅವರಂತೆಯೇೆ ಆಗುವೆವು. ಇದಕ್ಕೆ ಸಂಬಂದಿಸಿದಂತೆ ಒಂದು ಘಟನೆಯು ಹೀಗೆ ಇದೆ:
ಶ್ರ್ರಾವಸ್ಥಿಯಲ್ಲಿ ಪಂಡಿತನೆಂಬ ಬಾಲಕನೊಬ್ಬನು ಬಿಕ್ಷುವಾಗಿದ್ದನು, ಅತನು ದೀಕ್ಷೆ ತೆಗೆದುಕೊಂಡ 8ನೇ ದಿನದಂದು ಹಿರಿಯ ಭಿಕ್ಷುಗಳೊಂದಿಗೆ ದಾರಿಯಲ್ಲಿ ಹೋಗುತ್ತಿರುವಾಗ , ದಾರಿಯಲ್ಲಿ ಕೃಷಿಕರು ನೀರಿಗೆ ಹಾದಿಗಳನ್ನು ನಿಮರ್ಿಸುತ್ತಿದ್ದುದನ್ನು ನೋಡಿದನು, ನಂತರ ಸ್ವಲ್ಪ ದೂರದಲ್ಲಿ ಕೆಲವು ಬಡಗಿಗಳು ಮರದತುಂಡುಗಳಿಂದ ತಮಗೆ ಬೇಕಾದ ರೀತಿಯಲ್ಲಿ ಆಕಾರ ನೀಡಿ ರಚಿಸುತ್ತಿದ್ದುದನ್ನು ಕಂಡನು, ಹಾಗೇಯೆ ಬಾಣ ನಿಮರ್ಿತಕಾರರು ಲೋಹದಿಂದ ಬಾಣಗಳನ್ನು ನೇರವಾಗಿ ನಿಮರ್ಿಸುತ್ತಿದ್ದುದ್ದನ್ನು ವೀಕ್ಷಿಸಿದನು. ನಂತರ ಆತನು ಈ ರೀತಿಯಾಗಿ ಚಿಂತನೆ ಮಾಡತೋಡಗಿದನು: " ಈ ನೀರನ್ನು ನಮ್ಮ ಇಚ್ಚೆಯ ದಾರಿಗೆ ಅನುಗುಣವಾಗಿ ಹಾಯಿಸಬಹುದಾಗಿದೆ, ಅದೇ ರೀತಿ ಮರದ ತುಂಡುಗಳನ್ನು ನಮ್ಮ ಇಚ್ಚೆಗೆ ಅನುಗುಣವಾಗಿ ,ಬೇಕಾದ ರೀತಿಯಲ್ಲಿ ರಚನೆ ಮಾಡಬಹುದಾಗಿದೆ, ಹಾಗೆಯೇ ಲೋಹದಿಂದಲೂ ನಮಗೆ ಬೇಕಾದ ಆಕಾರ ಪಡೆಯಬಹುದಾಗಿದೆ, ಇವೆಲ್ಲಾ ನಿಜರ್ೀವ ವಸ್ತುಗಳಾಗಿದ್ದರೂ ಸಹಾ ಅವನ್ನು ದಮಿಸಬಹುದಾಗಿದೆ, ಅದರೆ ಚೈತನ್ಯಮಯವಾಗಿರುವ ನನ್ನ ಮನಸ್ಸನ್ನು ಏಕೆ ನಾನು ಇಚ್ಚಿಸಿದಂತೆ ಪಳಗಿಸಬಾರದು ?" ಎಂದು ಆತನು ಯೋಚಿಸಲಾರಂಬಿಸಿದನು.. ಆಗ ಬುದ್ಧ ಭಗವಾನರು ಆತನ ಮನಸ್ಸನ್ನು ಅರಿತು ಹೀಗೆ ಅತನಿಗೆ ಸ್ಫೂತರ್ಿಯುತವಾಗಿ ಈ ಗಾಥೆಯನ್ನು ನುಡಿದರು:
" ನೀರು ಹಾಯಿಸುವವರು ನೀರಿಗೆ ಮಾರ್ಗದರ್ಶನ ನೀಡುವರು,
ಬಾಣನಿಮರ್ಾತಕಾರರು ಬಾಣಗಳನ್ನು ನೇರ ಮಾಡುವರು,
ಬಡಗಿಗಾರರು ಮರದತುಂಡುಗಳನ್ನು ಬಾಗಿಸುವರು,
ಅದೇ ರೀತಿಯಲ್ಲಿ ಜ್ಞಾನಿಗಳು ತಮ್ಮನ್ನು ದಮಿಸಿಕೋಳ್ಳುತ್ತಾರೆ."
ಅದನ್ನು ಆಲಿಸಿದ ಬಾಲಕನಿಗೆ ಜ್ಞಾನೋದಯವಾಗಿ ಅತನು ಅಹೋ ರಾತ್ರಿ ಶ್ರಮಿಸಿ ತನ್ನ ಮನಸ್ಸನ್ನು ಗೆದ್ದನು, ಹಾಗು
ಶೋಕರಹಿತರಾಗಿರುವವರಲ್ಲಿ ಒಬ್ಬನಾದನು.
ಹೀಗೆ ಚಿಂತನೆಯಲ್ಲಿನ ಮಹಾಶಕ್ತಿಯನ್ನು ಕಂಡು ವಿವೇಕಿಗಳು ಹೇಗೆ ವ್ಯಾಯಾಮಶಾಲೆಯಲ್ಲಿ ತಮ್ಮ ಶರೀರವನ್ನು ಬೇಕಾದ ರೀತಿಯಲ್ಲಿ ರೂಪಿಸುವರೋ ಹಾಗೆಯೇ ತಮ್ಮ ಯೋಚನೆಗಳನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸುತ್ತಾರೆ, ತಮ್ಮ ವ್ಯಕ್ತಿತ್ವ ವನ್ನು ಬಲಿಷ್ಠವನ್ನಾಗಿ ರೂಪಿಸಿ, ತಮ್ಮ ಬೌದ್ಧಿಕತೆಯನ್ನು ಹರಿತಗೊಳಿಸಿಕೊಳ್ಳುತ್ತಾರೆ. ತಮಗೂ ಹಾಗು ಪರರಿಗೂ ಸುಖ-ಹಿತಗಳನ್ನುಂಟು ಮಾಡಿಕೊಳ್ಳುತ್ತಾರೆ.